ಲಸಿಕೆ ವಿತರಣೆಗೆ ಕನಿಷ್ಠ 48 ವಿತರಣೆ ಕೇಂದ್ರಗಳು: ಬಿಎಂಸಿ
Team Udayavani, Dec 13, 2020, 7:53 PM IST
ಮುಂಬಯಿ, ಡಿ. 12: ನಗರದ 1.24 ಕೋಟಿ ಜನಸಂಖ್ಯೆಗೆ ಕೋವಿಡ್ ಲಸಿಕೆ ನೀಡಲು ಬೃಹ ನ್ಮುಂಬಯಿ ಮಹಾನಗರ ಪಾಲಿ ಕೆಯು ಮುಂಬಯಿ ಯಾದ್ಯಂತ ಕನಿಷ್ಠ 48 ವಿತರಣೆ ಕೇಂದ್ರಗಳನ್ನು ಸ್ಥಾಪಿ ಸಲಿದೆ. ನಗರದ 24 ಆಡಳಿ ತಾತ್ಮಕ ವಾರ್ಡ್‌ಗಳಲ್ಲಿ ಎರಡರಿಂದ ಮೂರು ವ್ಯಾಕ್ಸಿನೇಶನ್ ಕೇಂದ್ರಗಳು ಇರಲಿವೆ ಎಂದು ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಾಕ್ಸಿನೇಶನ್ ಪ್ರಾರಂಭವಾದ ಬಳಿಕ ನಗರದ ಪ್ರತಿಯೊಂದು ಮೂಲೆಯಲ್ಲೂ ಏಕಕಾ ಲದಲ್ಲಿ ವಿತರಣೆಯನ್ನು ಪ್ರಾರಂಭಿ ಸುತ್ತೇವೆ. ಪುರಸಭೆ ಔಷಧಾಲ ಯಗಳು, ನಾಗರಿಕ ಆಸ್ಪತ್ರೆಗಳು ಮತ್ತು ಶಾಲೆ ಗಳಲ್ಲಿ ಲಸಿಕೆ ವಿತರಣೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಎಲ್ಲ ವಾರ್ಡ್ ಗಳು ಈಗಾಗಲೇ ಇಂತಹ ತಾಣಗಳನ್ನು ಗುರುತಿಸಿವೆ. ಲಸಿಕೆ ಪ್ರಮಾಣವನ್ನು ಪರಿ ಗಣಿಸಿ ನಿರ್ದಿಷ್ಟ ತಾಪಮಾನವನ್ನು ಕಾಪಾಡಿ ಕೊಳ್ಳುವ ಅಗತ್ಯವಿರುತ್ತದೆ. ಇದಕ್ಕಾಗಿ ವ್ಯಾಕ್ಸಿ ನೇಶನ್ ಪ್ರಕ್ರಿಯೆಯು ನಡೆ ಯುತ್ತಿ ರುವಾಗ ಕೋಲ್ಡ್ ಸ್ಟೋರೇಜ್ ಅಗತ್ಯವಿರುತ್ತದೆ ಎಂದು ಬಿಎಂಸಿ ಹೆಚ್ಚುವರಿ ಮುನ್ಸಿ ಪಲ್ ಕಮಿಷನರ್ ಸುರೇಶ್ ಕಾಕಾನಿ ಹೇಳಿದ್ದಾರೆ.
ಕೇಂದ್ರಗಳ ಸಂಖ್ಯೆಹೆಚ್ಚಳ : ಕೇಂದ್ರವು ಇದಕ್ಕಾಗಿ ಮಾರ್ಗಸೂಚಿಗಳನ್ನು ನೀಡಿದ ಬಳಿಕ ಅಂತಿಮ ವಿತರಣೆ ಯೋಜನ ಯನ್ನು ನಿರ್ಧರಿಸಲಾಗುತ್ತದೆ. ಲಸಿಕೆ ವಿತರಣೆಗೆ ಖಾಸಗಿ ಸಂಸ್ಥೆಗಳಿಗೆ ಅನು ಮತಿ ನೀಡಿದ ಬಳಿಕ ವಿತ ರಣೆ ಕೇಂದ್ರಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಆರಂಭದಲ್ಲಿ, ಗುರುತಿಸಲ್ಪಟ್ಟ 1,25,000 ಮುಂಚೂಣಿ ಕಾರ್ಮಿಕರಿಗೆ ಲಸಿಕೆ ನೀಡಲಾಗುವುದು ಎಂದು ಕಾಕಾನಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.