ವಿಶ್ವಕಪ್ ವಿಜೇತ ನೃತ್ಯಗಾರ ಅವಿನಾಶ್ ಪೂಜಾರಿ ಅಭಿನಂದನ ಕಾರ್ಯಕ್ರಮ
Team Udayavani, Jul 12, 2017, 3:36 PM IST
ಮುಂಬಯಿ: ಕೆನಡಾದಲ್ಲಿ ಜು.6ರಂದು ನಡೆದ ಹಿಪ್-ಹಾಪ್ ಡಾನ್ಸ್ ವಿಶ್ವಕಪ್ ಸ್ಪರ್ಧೆಯಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡ ಮುಂಬಯಿ ತುಳು-ಕನ್ನಡಿಗ ಅವಿನಾಶ್ ಪೂಜಾರಿ ಅವರ ಅಭಿನಂದನ ಕಾರ್ಯಕ್ರಮವು ಜು. 9ರಂದು ಚೆಂಬೂರಿನಲ್ಲಿ ನಡೆಯಿತು.
ಶ್ರೀ ಅಯ್ಯಪ್ಪ ಭಕ್ತವೃಂದ ಆರ್‌ಸಿಎಫ್ ಚೆಂಬೂರು ಮತ್ತು ವಾಸುದೇವ ಗುರುಸ್ವಾಮಿ ಚೆಂಬೂರು ಶೇಲ್‌ಕಾಲನಿ ಹಾಗೂ ಸಂಜೀವಿನಿ ಲಂಚ್ ಹೋಮ್ ಚೆಂಬೂರ್ ನಾಕಾ ಅಲ್ಲದೆ ಬೇಲಾಪುರದ ಮೂನ್‌ವಾಕರ್ ಡಾನ್ಸ್ ಅಕಾಡೆಮಿ, ಕೊರಿಯೋಗ್ರಾಫರ್ ಕು| ಕಾಜಲ್ ಕುಂದರ್ ಅವರು ಜಂಟಿಯಾಗಿ ಚೆಂಬೂರ್ ನಾಕಾದ ಸಂಜೀವಿನಿ ಹೊಟೇಲ್ ಸಭಾಂಗಣದಲ್ಲಿ ಅನಿನಾಶ್ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಜೀವ ಶೆಟ್ಟಿ, ಸಂತೋಷ್ ಪೂಜಾರಿ, ಜಗದೀಶ್ ಶೆಟ್ಟಿ , ವಾಸುದೇವ ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಈ ಬಾರಿ ಅವಿನಾಶ್ ಪೂಜಾರಿ ಅವರ ನಾಯಕತ್ವದ ಭಾರತ ತಂಡವು ಹಿಪ್‌ಹಾಪ್ ಡಾನ್ಸ್ ವಿಶ್ವಕಪ್ ಅನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಸ್ಪರ್ಧೆಗೆ ಭಾರತದ 20 ಮಂದಿಯ ತಂಡದಲ್ಲಿ ಮಹಾರಾಷ್ಟ್ರದಿಂದ ನಾಲ್ವರು ಆಯ್ಕೆಯಾಗಿದ್ದರು. ಅವರಲ್ಲಿ ಅವಿನಾಶ್ ಪೂಜಾರಿ ಏಕೈಕ ತುಳು-ಕನ್ನಡಿಗರಾಗಿದ್ದಾರೆ. ಮೂಲತಃ ಮಂಗಳೂರಿನ ಬಜ್ಪೆಯ ಪೆರ್ರಾ ಗ್ರಾಮದ ವಾಸುದೇವ ಪೂಜಾರಿ ಮತ್ತು ಮೂಡಬಿದ್ರೆಯ ಅನುಷಾ ಪೂಜಾರಿ ದಂಪತಿಯ ಪುತ್ರನಾಗಿರುವ ಇವರು ನವಿಮುಂಬಯಿ, ನೆರೂಲ್ ಎಸ್‌ಐಇಎಸ್ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದು, ನವಿಮುಂಬಯಿ ಸೀವುಡ್ಸ್ ಸೆಕ್ಟರ್ 44ರಲ್ಲಿ ವಾಸ್ತವ್ಯವನ್ನು ಹೊಂದಿದ್ದಾರೆ. ಅವರ ಪ್ರತಿಭೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.