ಜಂಗಮವಾಡಿ ಮಠದಿಂದ ಪ್ರಶಸ್ತಿ ಪ್ರದಾನ
Team Udayavani, Jun 25, 2019, 2:46 PM IST
ಸೊಲ್ಲಾಪುರ: ತಪಸ್ಸು ಮಾಡದೇ ಯಾವುದೇ ಸಿದ್ಧಿ ಪ್ರಾಪ್ತಿವಾಗುವುದಿಲ್ಲ. ಪ್ರತಿಯೊಬ್ಬರೂ ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ತಮ್ಮ ಜತೆಗೆ ದೇಶವು ಅಭಿವೃದ್ಧಿ ಹೊಂದಲಿದೆ ಎಂದು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಡಾ| ನಿರ್ಮಲ್ ಕುಮಾರ ಫಡಕುಲೆ ಸಭಾಗೃಹದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜ್ಞಾನಸಿಂಹಾಸನ ಜಂಗಮವಾಡಿ ಮಠ ವಾರಣಾಸಿ ಕಾಶಿಪೀಠದ ವತಿಯಿಂದ ಹಮ್ಮಿಕೊಂಡಿದ್ದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಕಾರ್ಯ ನಿರ್ವಹಿಸಿದಾಗ ಮಾತ್ರ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ. ಜೀವನದ ನಿಯಮಗಳು ಗೊತ್ತಿಲ್ಲದಿರುವುದರಿಂದ ಅನೇಕ ಜನರು ಸರಿಯಾದ ಮಾರ್ಗದಿಂದ ದೇಹ ಬಿಡುವುದಕ್ಕಿಂತಲೂ ರೋಗದ ಮಾರ್ಗದ ಮೂಲಕ ದೇಹ ಬಿಡುತ್ತಿದ್ದಾರೆ. ಅಲ್ಲದೆ ಅನೇಕ ಜನರು ಅನಾರೋಗ್ಯದಿಂದ ಬದುಕುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಮನಸ್ಸು ಶುದ್ಧಿಗಾಗಿ ತಪಸ್ಸು ಮಾಡುವ ಮೂಲಕ ತಮ್ಮ ಜೀವನದಲ್ಲಿ ರಾಷ್ಟ್ರ ಮತ್ತು ಸಮಾಜಕ್ಕಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಜಗದ್ಗುರು ವಿಶ್ವಾರಾಧ್ಯ ಜ್ಞಾನಸಿಂಹಾಸನ ಜಂಗಮವಾಡಿ ಮಠ ವಾರಣಾಸಿ ಕಾಶಿಪೀಠದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವೇಕ್ ಘಳಸಾಸಿ ಅವರಿಗೆ ಪರಂಡಕರ್ ಮಹಾರಾಜ ಪತ್ರಿಕೋದ್ಯಮ ಪಶಸ್ತಿ, ಫೈಯ್ನಾಜ್ ಶೇಖ್ ಅವರಿಗೆ ಸಿದ್ರಾಮಪ್ಪಾ ಭೋಗಡೆ ರಂಗಭೂಮಿ ಪ್ರಶಸ್ತಿ, ವಿಠuಲ್ ರಾವ್ ವಾಸಕರ ಗವರಿಗೆ ಶಾಂತಾಬಾಯಿ ಹಾಗೂ ನಿವೃತ್ತಿ ಗಾಯಕ್ವಾಡ್ ಅವರಿಗೆ ಕಿರ್ತನಕಾರ ಪ್ರಶಸ್ತಿ, ಡಾ| ಸಂಧ್ಯಾ ತೋಡಕರ್ ಅವರಿಗೆ ಡಾ| ಚಂದ್ರಶೇಖರ್ ಕಪಾಳೆ ಸಾಹಿತ್ಯ ಪ್ರಶಸ್ತಿ, ಪರಮೇಶ್ವರ ಕಾಳೆ ಅವರಿಗೆ ಬಂಡಯ್ನಾ ಮಠಪತಿ ಸಮಾಜ ಸೇವಾ ಪ್ರಶಸ್ತಿ, ಡಾ| ನಾಗನಾಥ ಯೆವಲೆ ಅವರಿಗೆ ವೀರಸಂಗಯ್ನಾ ಸ್ವಾಮಿ ಆದರ್ಶ ಶಿಕ್ಷಕ ಪ್ರಶಸ್ತಿ, ಪ್ರಭಾಕರ ಝಳಕೆ ಅವರಿಗೆ ವಿಠಾಬಾಯಿ ದೆವಪ್ಪಾ ಪಸಾರಕರ ಕೃತಜ್ಞತಾ ಪ್ರಶಸ್ತಿ ಹಾಗೂ ಸ್ವಾತಿ ಪವಾರ್ ಅವರಿಗೆ ಸದಾಶೀವ ಸ್ವಾಮಿ ಪ್ರಜ್ಞಾ ಪ್ರಶಸ್ತಿಯನ್ನು ಪ್ರದಾನಿಸಿ ಗಣ್ಯರು ಗೌರವಿಸಿದರು.
ಸ್ವಾತಿ ಸಾಖರಕರ್ ರಚಿಸಿದ ಕಥಾ ಶ್ರೀ ರಮತೆರಾಮಾಂಚಿ (ಸಂತಚರಿತ್ರ) ಹಾಗೂ ದೀವೆಲಾಗಣ ಮರಾಠಿ ಕವನ ಸಂಕಲನ ಕಾಶೀ ಜಗದ್ಗುರುಗಳು ಲೋಕಾರ್ಪಣೆಗೊಳಿಸಿದರು. ಅಲ್ಲದೆ ಶ್ರೀ ಕಾಶೀ ಜಗದ್ಗುರುಗಳು ರಚಿಸಿದ ಶ್ರೀ ಸಿದ್ಧಾಂತ ಶಿಖಾಮಣಿ ಸಮೀûಾ ಹಾಗೂ ವೀರಶೈವ ತತ್ವದರ್ಶನ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು. ಅಲ್ಲದೆ ಇತ್ತೀಚೆಗೆ ಪಿಎಚ್‌ಡಿ ಪದವಿ ಪಡೆದ ಜಿತೇಂದ್ರ ಬಿರಾಜದಾರ ಅವರನ್ನು ಗೌರವಿಸಲಾಯಿತು. ಡಾ| ಅನೀಲ್ ಸಜೇì ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ ಬುರಕುಲೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.