ಎನ್‌ಸಿಸಿ ಏರ್‌ವಿಂಗ್ ಕ್ಯಾಡೆಟ್: ಅನನ್ಯಾ ಶೆಟ್ಟಿ ಅವರಿಗೆ ಪ್ರಶಸ್ತಿ
Team Udayavani, Feb 16, 2017, 4:50 PM IST
ಮುಂಬಯಿ: ತುಳು-ಕನ್ನಡತಿ ಕು| ಅನನ್ಯಾ ಶೆಟ್ಟಿ ಅವರು ಎನ್‌ಸಿಸಿ ಏರ್‌ವಿಂಗ್ ಕ್ಯಾಡೆಟ್ ಆರ್‌ಡಿ ಕ್ಯಾಂಪ್‌ನ್ನು ಸಂಪೂರ್ಣಗೊಳಿಸಿ ಪ್ರಸ್ತುತ ಮುಂಬಯಿಯ ಆರ್‌ಸಿ ಕ್ಯಾಂಪ್‌ನಲ್ಲಿ ಭಾಗಿಯಾಗಿದ್ದಾರೆ.
2017 ರಾಷ್ಟ್ರೀಯ ಮಟ್ಟದ 17 ಮಂದಿ ಡೈರೆಕ್ಟೊರೇಟ್ಸ್‌ಗಳಲ್ಲಿ ಮಹಾರಾಷ್ಟÅಕ್ಕೆ ಡೈರೆಕ್ಟೋರೇಟ್ ಆರ್‌ಡಿ ಬ್ಯಾನರ್‌ನಡಿಯಲ್ಲಿ ದ್ವಿತೀಯ ಸ್ಥಾನಗಳಿಸಿದ ಅವರು, ಜೂನಿಯರ್ ಏರ್‌ವಿಂಗ್‌ನಲ್ಲಿಯೂ ವಿಶೇಷ ಸಾಧನೆಗೈದು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹೊಸದಿಲ್ಲಿಯಲ್ಲಿ 2017 ರ ಜ. 26 ರಂದು ನಡೆದ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ಎನ್‌ಸಿಸಿ ಏರ್‌ವಿಂಗ್ ಬಾಲಕಿಯರ ಜ್ಯೂನಿಯರ್ ವಿಭಾಗದಲ್ಲಿ ಮಹಾರಾಷ್ಟÅದ ಬೆಸ್ಟ್ ಕ್ಯಾಡೆಟ್ ಆಗಿ ಆಯ್ಕೆಗೊಂಡು ಉಪರಾಷ್ಟ್ರಪತಿ ಮೊಹಮ್ಮದ್ ಅನ್ಸಾರಿ ಅವರಿಂದ ಗೌರವಿಸಲ್ಪಟ್ಟಿದ್ದಾರೆ.
ಮಹಾರಾಷ್ಟ್ರದಿಂದ ಪ್ರತಿನಿಧಿಸಿರುವ ಅನನ್ಯಾ ಶೆಟ್ಟಿ ಅವರು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಹಿರಿಯ ಹಾಗೂ ಕಿರಿಯರ ಕ್ಯಾಡೆಟ್ಸ್‌ನ ಶೂಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ಬಹುಮುಖ ಪ್ರತಿಭೆ ಹೊಂದಿರುವ ಅನನ್ಯಾ ಗ್ರೂಪ್ ಸಂಗೀತ ಮತ್ತು ಮಹಾರಾಷ್ಟÅ ಬ್ಯಾಲೆಟ್‌ನಲ್ಲಿಯೂ ಭಾಗವಹಿಸಿದ್ದು, ಮುಂಬಯಿಯಲ್ಲಿ ನಡೆದ ಆರ್‌ಡಿ ಕ್ಯಾಂಪ್‌ನಲ್ಲಿ ಮಹಾರಾಷ್ಟ್ರ ಡಿಟಿಇಯ ಎಡಿಜಿಯಿಂದ ಪ್ರಶಸ್ತಿಯನ್ನು ಗಳಿಸಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಶಿಕ್ಷಣ ಸಚಿವ ವಿನೋದ್ ತಾಬ್ಡೆ ಅವರಿಂದಲೂ ಪ್ರಶಂಸೆಯನ್ನು ಪಡೆದಿದ್ದಾರೆ.
ಅಡ್ಮಿರಲ್ ಜನರಲ್ ಆಫ್ ವೆಸ್ಟರ್ನ್ ನಾವಲ್ ಕಮಾಂಡರ್ ಮೆನ್ಸ್ ಮತ್ತು ಜನರಲ್ ಆಫೀಸರ್ ವೆಸ್ಟರ್ನ್ ನಾವಲ್ ಕಮಾಂಡಿಂಗ್ ಆಫ್ ಮಹಾರಾಷ್ಟ್ರ ಡಿಟಿಇಗೂ ಕಾರ್ಯಕ್ರಮ ವಿವರಣೆ ನೀಡುವ ಅವಕಾಶವನ್ನು ಪಡೆದಿದ್ದಾರೆ. ಎಳೆಯ ವಯಸ್ಸಿನಲ್ಲಿ ಎನ್‌ಸಿಸಿಯ ಕ್ಯಾಡೆಟ್‌ನಲ್ಲಿ ಹಲವಾರು ಸಾಧನೆಯನ್ನು ಗೈದ ಅವರು ಬೋಂಬೇ ಬಂಟ್ಸ್ ಅಸೋಸಿಯೇಶನ್ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಮತ್ತು ಸರಿತಾ ಶೆಟ್ಟಿ ದಂಪತಿಯ ಪುತ್ರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.