ಅಯ್ಯಪ್ಪ ಭಕ್ತ ಉಪೇಂದ್ರ ಪೂಜಾರಿ ಅವರ 19ನೇ ವರ್ಷದ ಪಾದಯಾತ್ರೆ
Team Udayavani, Dec 18, 2018, 5:05 PM IST
ಮುಂಬಯಿ: ಅಯ್ಯಪ್ಪ ಸ್ವಾಮಿಯ ಪರಮ ಭಕ್ತ, ಸಾಧನೆಯನ್ನೇ ಬದುಕಾಗಿ ಮಾಡಿಕೊಂಡಿರುವ ಉಪೇಂದ್ರ ಪೂಜಾರಿ ಅವರು ಪ್ರಸ್ತುತ 19 ನೇ ವರ್ಷದ ಪಾದಯಾತ್ರೆ ಮಾಡಿ ಶಬರಿಗಿರಿವಾಸ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಮುಂದಾಗಿದ್ದಾರೆ.
ಪಾದಯಾತ್ರೆಯು ಡಿ. 17 ರಂದು ಬೆಳಗ್ಗೆ ಮುಂಬಯಿ ದಹಿಸರ್ನಲ್ಲಿರುವ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಮಾಲಾಧಾರಣೆ ಮಾಡಿ, ಮಧ್ಯಾಹ್ನ ದಹಿಸರ್ನಲ್ಲಿರುವ ಅಯ್ಯಪ್ಪ ಚಾರಿಟೇಬಲ್ ಟ್ರಸ್ಟ್ ನ ಗುರುಸ್ವಾಮಿ ಶ್ರೀ ವಿನಯ್ರವರ ನೇತೃತ್ವದಲ್ಲಿ ಅಯ್ಯಪ್ಪ ಪೂಜೆ ಮಾಡಿ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಈ ವರ್ಷದ ಪಾದಯಾತ್ರೆಯು ಅಷ್ಟ ವಿನಾಯಕ, ಪಂಡರಾಪುರ, ಮಂತ್ರಾಲಯದ ದರ್ಶನ ಮಾಡಿ, ತಿರುಪತಿ ಬಾಲಾಜಿಯ ದರ್ಶನಗೈಯಲಿದ್ದಾರೆ.
ತಿರುಪತಿ ಬಾಲಾಜಿಯ ದರ್ಶನದ ಬಳಿಕ, ತಮಿಳುನಾಡಿನ ಪಳನಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ನಂತರ ಶಬರಿ ಮಲೆಗೆ ಪಾದಯಾತ್ರೆಗೈಯಲಿದ್ದಾರೆ.
ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಮುಖಾಂತರ ಪಾದಯಾತ್ರೆ ಮಾಡುವ ಉಪೇಂದ್ರ ಪೂಜಾರಿ ಅವರು ಈ ಹಿಂದಿನ 18 ವರ್ಷದ ಪಾದಯಾತ್ರೆಯಲ್ಲಿ ಒಟ್ಟು ಶಬರಿಮಲೆಗೆ 14 ಬಾರಿ, ತಿರುಪತಿ ಬಾಲಾಜಿಗೆ 9 ಬಾರಿ, ಮಂತ್ರಾಲಯ ರಾಘವೇಂದ್ರ ಸ್ವಾಮಿಯ ದರ್ಶನ 8 ಬಾರಿ, ಪಂಡರಾಪುರ ಪಾಂಡುರಂಗ ಸ್ವಾಮಿಯ ದರ್ಶನ 9 ಬಾರಿ, ಶಿರ್ಡಿ ಸಾಯಿಬಾಬಾ ಮಂದಿರಕ್ಕೆ 3 ಬಾರಿ, ಅಷ್ಟ ವಿನಾಯಕ ಒಂದು ಬಾರಿ, ಆಲಂದಿ ಜ್ಞಾನದೇವರ ದರ್ಶನ 3 ಸಲ, ಶನಿಸಿಂಗ್ನಾಪುರಕ್ಕೆ ಒಂದು ಬಾರಿ, ಅಕಲ್ಸ್ವಾಮಿ ಸಮರ್ಥ ದೇವರ ದರ್ಶನ ಎರಡು ಬಾರಿ, ಗಾಣಗಪುರ ದತ್ತದೇವರ ದರ್ಶನ 2 ಬಾರಿ ಪಾದಯಾತ್ರೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.