ಅದ್ದೂರಿಯಾಗಿ ನಡೆದ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ
Team Udayavani, Jan 6, 2021, 6:27 PM IST
ನವಿಮುಂಬಯಿ, ಜ. 5: ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್ ನೆರೂಲ್ ಇದರ 28ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯು ಡಿ. 27ರಂದು ಶ್ರೀ ಶನೀಶ್ವರ ಮಂದಿರದ ಸಭಾಗೃಹದಲ್ಲಿ ಮಂದಿರದ ಪ್ರಧಾನ ಅರ್ಚಕರಾದ ಸೂರಜ್ ಭಟ್ ಅವರ ಪೌರೋಹಿತ್ಯದಲ್ಲಿ ಬಹು ವಿಜೃಂಭಣೆಯಿಂದ ಜರಗಿತು.
ಬೆಳಗ್ಗೆ 10.30ರಿಂದ ಕಲಶ ಪ್ರತಿಷ್ಠೆ, ಸ್ವಾಮಿಯ ಅಷ್ಟೋತ್ತರ ವಿಧಿವಿಧಾನಗಳು ನಡೆದವು. ಬಳಿಕ ಶ್ರೀ ಶನೀಶ್ವರ ಮಂದಿರದ ಭಜನ ಮಂಡಳಿ ಮತ್ತು ನೆರೆದ ಭಕ್ತರಿಂದ ಭಜನೆ, ಶ್ಲೋಕ ಪಠಣ ನಡೆಯಿತು. ಅನಂತರ ಸೂರಜ್ ಭಟ್, ಬಾಲಕೃಷ್ಣ ಭಟ್, ಗಣೇಶ್ ಭಟ್ ಮತ್ತು ಸುಮುಖ್ ಭಟ್ ಇವರುಗಳು ವಿಧಿವತ್ತಾಗಿ ಮಧಾಹ್ನ 12 ಗಂಟೆಗೆ ಪಲ್ಲ ಪೂಜೆ ಮಾಡಿ, ಮಹಾ ಮಂಗಳಾರತಿ ಬೆಳಗಿದರು.
ಕೋವಿಡ್ ಸಾಂಕ್ರಾಮಿಕ ಕಾರಣ ಸಂಸ್ಥೆಯವತಿಯಿಂದ ಮಾಲಾಧಾರಣೆ ಹಾಗೂ ವೃತ ಕಾರ್ಯಕ್ರಮಗಳನ್ನು ಈ ವರ್ಷ ಸ್ಥಗಿತಗೊಳಿಸಲಾಗಿತ್ತು. ಪ್ರತೀ ವರ್ಷದ ಪರಂಪರೆಯನ್ನು ಉಳಿಸುವ ಸಲುವಾಗಿ ಮಹಾಪೂಜೆ ನಡೆಸಲಾಗುವುದು ಎಂದು ವಿಶ್ವಸ್ಥ ಮಂಡಳಿಯವರು ನಿರ್ಣಯ ಮಾಡಿದ್ದರು. ಕೋವಿಡ್ ಕಾಲದಲ್ಲಿ ಮಂದಿರದಲ್ಲಿ ಯಾವುದೇ ಸಾರ್ವಜನಿಕ ಪೂಜೆ ನಡೆದಿರಲಿಲ್ಲ. ಕಳೆದ ವರ್ಷದ ಅಂತ್ಯದ ಸಮಯದಲ್ಲಿ ನಡೆದ ಪೂಜೆಯಲ್ಲಿ ಸುಮಾರು 800ಕ್ಕೂ ಅಧಿಕ ಮಂದಿ ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಂಡು ಭಗವಂತನ ಅನುಗ್ರಹ ಪಡೆಯಲು ಬಂದಿದ್ದರು. ನವಿಮುಂಬಯಿಯ ಹೊಟೇಲ್ ಉದ್ಯಮಿಗಳು ಅನೇಕರು ಸೇರಿದ್ದರು.
ಮಾಜಿ ನಗರ ಸೇವಕರಾದ ಸಂತೋಷ್ ಡಿ. ಶೆಟ್ಟಿ, ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಶ್ರೀ ಶನೀಶ್ವರ ಮಂದಿರ ನೆರೂಲ್ ಇದರ ಅಧ್ಯಕ್ಷ, ಧರ್ಮದರ್ಶಿರಮೇಶ್ ಎಂ. ಪೂಜಾರಿ, ಪನ್ವೇಲ್ ಮಹಾನಗರ ಪಾಲಿಕೆ ಸಭಾಪತಿ ಸಂತೋಷ್ ಜಿ. ಶೆಟ್ಟಿ, ಬಾಲಾಜಿ ಮಂದಿರ ನೆರೂಲ್ ಅಧ್ಯಕ್ಷ ಗೋಪಾಲ ವೈ ಶೆಟ್ಟಿ, ಮಣಿಕಂಠ ಸೇವಾ ಸಂಘ ನೇರೂಲ್‌ನ ಅಧ್ಯಕರಾದ ಸಂಜೀವ ಶೆಟ್ಟಿ, ರಂಗಭೂಮಿ ಫೈನ್ ಆರ್ಟ್ಸ್ನ ಅಧ್ಯಕ್ಷ ತಾರಾನಾಥ್ ಶೆಟ್ಟಿ , ಭಜನ ಮಂಡಳಿಯ ಅಧ್ಯಕ್ಷ ಪುತ್ತೂರು ಜಯರಾಮ್ ಪೂಜಾರಿ, ನಗರಸೇವಕಿ ಮೀರಾ ಪಾಟೀಲ್, ನಗರಸೇವಕಿ ಶಿಲ್ಪಾ ಕಾಂಬ್ಳಿ, ಸುರೇಶ್ ಕೋಟ್ಯಾನ್, ಜಗದೀಶ್ ಶೆಟ್ಟಿ ನಂದಿಕೂರು, ಸದಾನಂದ ಶೆಟ್ಟಿ, ರವಿ ಆರ್. ಶೆಟ್ಟಿ, ಸುರೇಶ್ ಶೆಟ್ಟಿ ಮಣಿಕಂಠ ಭಜನ ಮಂಡಳಿ, ಆಶಾ ಅಂಚನ್, ಸದಾನಂದ್ ಶೆಟ್ಟಿ ಪನ್ವೇಲ್, ಬಾಲಚಂದ್ರ ರೈ, ರವೀಂದ್ರ ಶೆಟ್ಟಿ ಸಿಂದೂರ್, ಥಾಣೆ ಉದ್ಯಮಿ ಕುಶಲ್ ಭಂಡಾರಿ, ಮಾದವ ಕಯ್ಯ, ಉದಯ ಶೆಟ್ಟಿ, ಸಂಜೀವ ಶೆಟ್ಟಿ, ಶೈಲಾ ಹಲ್ದಂಕರ್ ಅವರನ್ನು ಒಳಗೊಂಡಂತೆ ಅನೇಕ ಭಕ್ತರು ದೇವರ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ಸಂತೋಷ್ ಶೆಟ್ಟಿ ರಂಗೋಲಿ, ಲಕ್ಷ್ಮಿನಾರಾಯಣ ಬಂಗೇರ, ಹರೀಶ್ ಶೆಟ್ಟಿ ಕಾವೂರು, ಸಚಿನ್ ಶೆಟ್ಟಿ, ದಿನೇಶ್ ಶೆಟ್ಟಿ, ಸುಕೇಶ್ ಶೆಟ್ಟಿ, ಹರೀಶ್ ಶೆಟ್ಟಿ ತೆಲ್ಲಾರ್, ರಾಜೇಶ್ ಗೌಡ, ನವೀನ್ ಪೂಜಾರಿ, ರಾಜೇಶ್ ರೈ,ಸಂದೀಪ್ ಪೂಜಾರಿ, ಬೇಬಿ ಅಣ್ಣ ಶೆಟ್ಟಿ, ಪ್ರವೀಣ್ ಶೆಟ್ಟಿ,ಜಗನ್ನಾಥ ಶೆಟ್ಟಿ, ಶೇಕರ್ ದೇವಾಡಿಗ, ದೇವಸ್ಥಾನದಪ್ರಭಂದಕ ದಯಾನಂದ್ ಶೆಟ್ಟಿಗಾರ್, ನೌಕರವೃಂದ ಮತ್ತಿತರ ಸದಸ್ಯರು ಪೂಜೆ ಮತ್ತು ಊಟದ ವ್ಯವಸ್ಥೆಯಲ್ಲಿ ಸಹಕರಿಸಿದರು.
ಸಂಜೆ ಗಂಟೆ 5.30ಕ್ಕೆ ಭಜನೆ, 7.30ರಿಂದ ದೀಪಾರಾಧನೆ ನಡೆಯಿತು. 8.15ಕ್ಕೆ ಮಹಾ ಆರತಿಬಳಿಕ ಸುಮಾರು 250ಕ್ಕೂ ಅಧಿಕ ಭಕ್ತರು ಅನ್ನ ಪ್ರಸಾದಸ್ವೀಕರಿಸಿ ಭಗವಂತನ ಅನುಗ್ರಹ ಪಡೆದರು.ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಎಸ್ ಹೆಗ್ಡೆ,ಉಪ ಕಾರ್ಯಾಧ್ಯಕ್ಷ ವಿಶ್ವನಾಥ ಕೆ ಪೂಜಾರಿ, ಗೌರವಪ್ರಧಾನ ಕಾರ್ಯದರ್ಶಿ ಗಿರೀಶ್ ಸಿ. ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ವಿ.ಕೆ ಸುವರ್ಣ, ನಿಕಟಪೂರ್ವ ಕಾರ್ಯದ್ಯಕ್ಷ ಅನಿಲ್ ಕುಮಾರ್ ಹೆಗ್ಡೆ ಪೆರ್ಡೂರು, ಅದ್ಯಪಾಡಿ ಗುತ್ತು ಕರುಣಾಕರ್ ಎಸ್. ಆಳ್ವ, ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಎನ್. ಕೆ. ಪೂಜಾರಿ, ಕೃಷ್ಣ ಎಂ. ಪೂಜಾರಿ, ವಿಜಯ ಶೆಟ್ಟಿ,ವಿನೋದ್ ರಾವ್, ಉಪಸಮಿತಿ ಅಧ್ಯಕ್ಷ ಸತೀಶ್ ಶ್ರೀಯಾನ್, ಮಹಿಳಾ ಮಂಡಳಿ ಅಧ್ಯಕ್ಷೆ ಸುಪ್ರಿಯಾಹೆಗ್ಡೆ ಮತ್ತು ಉಪಾಧ್ಯಕ್ಷೆ ತಾರಾ ಆರ್. ಬಂಗೇರ ಪೂಜೆಯ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.