ಬಿಲ್ಲವ ಭವನದಲ್ಲಿ ಬಿಎಎಂ-ಬಿಸಿಸಿಐನಿಂದ ಜೀವನೋತ್ಸವ-2018 ಕಾರ್ಯಕ್ರಮ

Team Udayavani, May 27, 2018, 3:42 PM IST

100.jpg

ಮುಂಬಯಿ: ಜೀವನ ದಲ್ಲಿ ಮಾರ್ಪಾಟುಗಳಿಂದ ಬದಲಾವಣೆ ಸಾಧ್ಯ. ಬ್ರಹ್ಮಶ್ರೀ ನಾರಾಯಣ ಗುರುಗಳೂ ಕ್ರಾಂತಿಯಿಂದಲೇ ಸಮಾಜದಲ್ಲಿ ಅನನ್ಯ ಬದಲಾವ ಣೆಯನ್ನು ತಂದಿದ್ದರು. ಯುವಜನತೆ ಯೂ ಜೀವನ ಶೈಲಿಯನ್ನು ಪರಿವರ್ತಿ ಸಿಕೊಂಡಾಗ ತಮ್ಮ ಜೀವನದ ಜೊತೆಗೆ ಅಖಂಡ ಸಮಾಜವನ್ನೇ ಮಾರ್ಪಾಡಿಸಬಹುದು. ಬಿಲ್ಲವ ಸಮಾಜದ ಬದಲಾವಣೆಗೆ ಇಂತಹ ಜೀವನ ಪ್ರೇರಣಾ ಉತ್ಸಾಹಗಳು ಅತ್ಯವಶ್ಯಕವಾಗಿದೆ. ಇದಕ್ಕಾಗಿ ಬಿಸಿಸಿಐ ನಿರಂತರವಾಗಿ ಶ್ರಮಿಸಲಿದೆ. ಸಮಾಜದ ಮುತ್ಸದ್ಧಿಗಳ ಪ್ರೇರಣೆ ಪಡೆಯುವ ಬಿಲ್ಲವರು ಬಿಲ್‌ಗೇಟ್‌ರಂಥವರ ಚಿಂತನೆಯನ್ನು  ಮೂಡಿಸಿಕೊಳ್ಳಬೇಕು. ಮೇರುವ್ಯಕ್ತಿತ್ವದ ದೂರದೃಷ್ಟಿಯಿಂದ ಎಲ್ಲವೂ ಸಾಧ್ಯವಾಗಲಿದೆ. ಆಗ ಮಾತ್ರ ಯುವ ಜನಾಂಗ ಉದ್ಯಮಶೀಲರಾಗಿ ಶಕ್ತಿ, ಸಾಮರ್ಥ್ಯ ಮತ್ತು ಫಲತ್ವವುಳ್ಳ ಪ್ರಜೆಗಳಾಗಿ ನೆಮ್ಮದಿಯ ಬದುಕು ಅನುಭವಿಸಬಹುದು ಎಂದು ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ (ಬಿಸಿಸಿಐ) ಸಂಸ್ಥೆಯ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ ತಿಳಿಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಂಸ್ಥೆಯು ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ (ಬಿಸಿಸಿಐ) ಸಂಸ್ಥೆ ಯನ್ನೊಳ ಗೊಂಡು ಶನಿವಾರ ಪೂರ್ವಾಹ್ನ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದ ಸಭಾಗೃಹದಲ್ಲಿ ಆಯೋಜಿ ಸಿದ್ದ “ಜೀವನೋತ್ಸವ- 2018′ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಗೈದು ಮಾತನಾಡಿ ಸಮಾಜದ ಯುವ ಪೀಳಿಗೆಗೆ ಶುಭಹಾರೈಸಿದರು.

ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅಧ್ಯಕ್ಷತೆ ಯಲ್ಲಿ ನೆರವೇರಿದ ಕಾರ್ಯಕ್ರಮಕ್ಕೆ ಅಸೋಸಿಯೇಶನ್‌ ಮಾಜಿ ಗೌರವ ಪ್ರಧಾನ ಕೋಶಾಧಿಕಾರಿ, ಹಿರಿಯ ಧುರೀಣ ಎನ್‌. ಎಂ. ಸನಿಲ್‌ ಮತ್ತು ನಿಕಟಪೂರ್ವ ಅಧ್ಯಕ್ಷ ಎಲ್‌. ವಿ. ಅಮೀನ್‌ ಅವರು  ದೀಪ ಬೆಳಗಿಸಿ ಚಾಲನೆ ನೀಡಿದರು.

ನಾಡಿನ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಾದ ಲೈಫ್‌ ಸ್ಕಿಲ್‌ ಕೋಚ್‌ ಸುಧಾಕರ್‌ ಕಾರ್ಕಳ ಅವರು ಉಪನ್ಯಾಸ ಮಾತನಾಡಿ, ಮಾನವನ ದೈಹಿಕ ಮತ್ತು ಮಾನಸಿಕ ವಿಕಾಸವಾದಾ ಗಲೇ ಜೀವನ ಯಶಸ್ಸು ಸಾಧ್ಯ. ಅದಕ್ಕಾಗಿ ಬದುಕು ಬದಲಾವಣೆ ಅಗತ್ಯವಾಗಿದೆ. ಬಹು ಜನಸಂಖ್ಯೆವುಳ್ಳ ಭಾರತದಲ್ಲಿ ನಿರುದ್ಯೋಗವು ಬಹುದೊಡ್ಡ ಸಮಸ್ಯೆಯಾಗಿದ್ದು, ಯುವ ಜನಾಂಗವು ನಿರುದ್ಯೋಗ ನಿವಾರಣಾ ಮುಕ್ತರಾದಗಲೇ ರಾಷ್ಟ್ರದ ಮತ್ತು ಸ್ವಂತಿಕೆಯ ಭವಿಷ್ಯ ನಿರ್ಮಾಣವಾಗುವುದು. ನೀವೂ ಮತ್ತೂಬ್ಬರನ್ನು ಹೊಂದಿ ಕೊಂಡು ಬಾಳುವುದಕ್ಕಿಂತ ಸ್ವ ಉದ್ಯಮಿ ಗಳಾಗುವತ್ತ ಚಿತ್ತ ಹಿರಿಸಿ ಎಂದರು.

ಹೊಟೇಲ್‌ ಓನರ್ ಅಸೋಸಿ ಯೇಶನ್‌ ಬೆಳಗಾವಿ ಕಾರ್ಯಾಧ್ಯಕ್ಷ ವಿಜಯ ಸಾಲ್ಯಾನ್‌, ಪ್ರಸೈಂಟ್‌ ಸಮೂಹ ಪುಣೆ ಇದರ ಆಡಳಿತ ನಿರ್ದೇಶಕ ಸಂದೇಶ್‌ ಜಯರಾಮ ಪೂಜಾರಿ, ಕ್ಲಸ್‌ಪ್ಯಾಕ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಶಾಂತ್‌ ಜಿ. ಅಮೀನ್‌, ಪುಣೆ ರೆಸ್ಟೋರೆಂಟ್‌ ಆ್ಯಂಡ್‌ ಹೊಟೇಲಿಯರ್ ಅಸೋಸಿಯೇಶನ್‌ ಉಪಾಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ಯಾಮ ಸುವರ್ಣ ಪುಣೆ, ನೂತನ ಎಸ್‌. ಸುವರ್ಣ, ಯಶೋದಾ ಎನ್‌.ಪೂಜಾರಿ, ರತನ್‌ ಯು. ಸನಿಲ್‌, ಡಾ| ಮೋಹನ್‌ ಬೊಳ್ಳಾರು, ಭವನದ ವ್ಯವಸ್ಥಾಪಕ ಭಾಸ್ಕರ್‌ ಟಿ. ಪೂಜಾರಿ ಸೇರಿದಂತೆ ಅನೇಕ ಗಣ್ಯರು, ಅಸೋಸಿಯೇಶನ್‌ ಮತ್ತು ಬಿಸಿಸಿಐ ಸಂಸ್ಥೆಯ ಇತರ ಪದಾಧಿಕಾರಿಗಳು  ಉಪಸ್ಥಿತರಿದ್ದರು. ಸ್ವಾತಿ ಮೂಲ್ಯ ಮತ್ತು ಸುಷ್ಮಾ ಪೂಜಾರಿ ಪ್ರಾರ್ಥನೆಗೈದರು.

ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್‌ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 

ಅಸೋಸಿಯೇಶನ್‌ನ ಜೊತೆ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌, ವಿಶ್ವನಾಥ್‌ ತೋನ್ಸೆ, ಬಿಸಿಸಿಐ ಕಾರ್ಯದರ್ಶಿ ನ್ಯಾಯವಾದಿ ಆನಂದ್‌ ಎಂ. ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ನ್ಯಾಯವಾದಿ  ರಾಜ  ವಿ. ಸಾಲ್ಯಾನ್‌, ಡಾ| ಯು. ಧನಂಜಯ ಕುಮಾರ್‌, ಶಂಕರ ಡಿ. ಪೂಜಾರಿ, ಗೌರವ ಪ್ರಧಾನ  ಕೋಶಾಧಿಕಾರಿ ಮಹೇಶ್‌ ಸಿ. ಕಾರ್ಕಳ, ಮಹಿಳಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ ಅತಿಥಿಗಳನ್ನು  ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಅಶೋಕ್‌ ಸಸಿಹಿತ್ಲು ವಂದಿಸಿದರು.

ಬದುಕಿನ ಉತ್ಸಾಹವು ಉತ್ಸವ ವಾಗಿ ಪರಿಣಮಿಸಿದಾಗಲೇ ಜೀವ ನೋದ್ಧಾರ ಸಾಧ್ಯ. ರಾಷ್ಟ್ರವನ್ನು ಮುನ್ನಡೆಸುವಲ್ಲಿ ರಾಜಕೀಯ ಕ್ಷೇತ್ರವು ಪ್ರಬಲಶಕ್ತಿ ಆಗಿದ್ದು ವಿಶೇ ಷವಾಗಿ ಬಿಲ್ಲವ ಯುವಜನತೆ ರಾಜಕಾರಣದತ್ತ ಹೆಚ್ಚಿನ ಒಲವು ತೋರುವ ಅವಶ್ಯಕತೆಯಿದೆ. ಅಂತೆಯೇ ಎಲ್ಲ ವಲಯಗಳಲ್ಲೂ ಬಿಲ್ಲವರು ಸಂಘಟನೆಯನ್ನು ಬಲ ಪಡಿಸುತ್ತಾ ತಮ್ಮ ಅಸ್ತಿತ್ವವನ್ನು ಮತ್ತುಜೀವನೋಪಾಯವನ್ನು ಭದ್ರಪಡಿಸಬೇಕು.
– ನಿತ್ಯಾನಂದ  ಕೋಟ್ಯಾನ್‌, ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

Mangaluru ಲಂಚ: ಬಂಧಿತ ಮೂಲ್ಕಿ ಆರ್‌ಐ ಜಾಮೀನು ಅರ್ಜಿ ತಿರಸ್ಕೃತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ

Mangaluru: MCC ಬ್ಯಾಂಕ್‌ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.