ಭಾರತ್ ಬ್ಯಾಂಕಿಗೆ ಬ್ಯಾಂಕೊ ಪುರಸ್ಕಾರ-2018 ಪ್ರದಾನ
Team Udayavani, Jan 19, 2019, 3:38 PM IST
ಮುಂಬಯಿ: ಬ್ಯಾಂಕೊ ಗ್ಯಾಲಕ್ಸಿ ಇನ್ಮ ಸಂಸ್ಥೆಯು ಮುಂಬಯಿ ಹೊರ ವಲಯದ ಕರ್ಜತ್‌ನ ರಾಡಿಸನ್ ಬುÉ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಮೂರು ದಿನಗಳ ಆಲ್ ಇಂಡಿಯಾ ಕೋ ಆಪರೇಟಿವ್ ಬ್ಯಾಂಕಿಂಗ್ ಕಾನ್ಫರೆನ್ಸ್ ಮತ್ತು ಬ್ಯಾಂಕೊ ಬ್ಲೂ ರಿಬನ್ ಆರ್ಥಿಕ ಸಮಾವೇಶದಲ್ಲಿ ಜ. 17ರಂದು ನಡೆದ ಸಮಾರಂ ಭದಲ್ಲಿ ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್ ಕೋ. ಆಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್‌ನ ಗತ ಸಾಲಿನ 5, 000 ರೂ. ಗಳಿಗಿಂತ ಅಧಿಕ ಗ್ರಾಹಕ ಸ್ನೇಹಿ ವ್ಯವಹಾರಕ್ಕಾಗಿ “ಬ್ಯಾಂಕೊ ಪುರಸ್ಕಾರ 2018′ ಪ್ರದಾನಿಸಿ ಗೌರವಿಸಿ ಅಭಿನಂದಿಸಿತು.
ರಾಡಿಸನ್ ಬುÉ ಲಾವ್°ನಲ್ಲಿ ನಡೆಸಲ್ಪಟ್ಟ ಅಖೀಲ ಭಾರತ ಸಹಕಾರಿ ಪಥಸಂಸ್ಥೆಗಳ ಎಡ್ವಾಂಟೇಜ್ ಆ್ಯನ್ಯುವಲ್ ಸಮಿಟ್ ಆ್ಯಂಡ್ ಬ್ಯಾಂಕೊ ಬ್ಲೂ ರಿಬನ್ ಸೆರೆಮನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿದ್ದ ಉಪಸ್ಥಿತ ಕೊಟಾಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್‌ನ ಅನುಸರಣಾ ವಿಭಾಗದ ಮುಖ್ಯಸ್ಥ ಟಿ. ವಿ. ಸುಧಾಕರ ಅವರು ಗ್ಯಾಲಕ್ಸಿ ಇನ್ಮ ಸಂಸ್ಥೆಯ ನಿರ್ದೇಶಕ ಅಶೋಕ್ ನಾಯ್ಕ ಮತ್ತು ಬ್ಯಾಂಕೋ ಸಂಪಾದಕ ಅವಿನಾಶ್ ಶಿಂತ್ರೆ ಉಪಸ್ಥಿತಿಯಲ್ಲಿ ಭಾರತ್ ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ, ಪ್ರಧಾನ ಪ್ರಬಂಧಕ ದಿನೇಶ್ ಬಿ. ಸಾಲ್ಯಾನ್ ಅವರಿಗೆ ಪುರಸ್ಕಾರ ಫಲಕ, ಗೌರವಪತ್ರ ಪ್ರದಾನಿಸಿ ಶುಭಹಾರೈಸಿದರು.
ಪುರಸ್ಕಾರ ತೀರ್ಪುಗಾರರಾದ ಅತುಲ್ ಖೇದಡ್ಕರ್, ಅವಿನಾಶ್ ಜೋಶಿ, ವಿವೇಕ್ ಮಹರ್ಶಿ, ಉದ್ಯಮಿ ಪ್ರದೀಪ್ ದೇಸಾಯಿ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು. ಕರ್ನಾಟಕ, ಮಹಾರಾಷ್ಟ್ರ ಹಾಗೂ ದೇಶದ ನಾನಾ ರಾಜ್ಯ, ಜಿಲ್ಲೆಗಳ ಆಯ್ದ ವಿವಿಧ ಬ್ಯಾಂಕ್‌ಗಳು ಪುರಸ್ಕಾರಕ್ಕೆ ಪಾತ್ರವಾಗಿದ್ದು, ಆಯಾ ಬ್ಯಾಂಕ್‌ನ ಮುಖ್ಯಸ್ಥರು ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.