ಬಂಟವಾಳದ ಬಂಟರ ಸಂಘ ಆಲ್‌ಕಾರ್ಗೊ :ಶೈಕ್ಷಣಿಕ ನೆರವು ವಿತರಣೆ


Team Udayavani, Aug 7, 2018, 2:51 PM IST

0508mum01a.jpg

ಮುಂಬಯಿ: ಬಂಟತ್ವದ ಸ್ವಾರ್ಥದೊಂದಿಗೆ ಇಡೀ ಸಮಾಜವನ್ನು ಪ್ರೋತ್ಸಾಹಿಸುವಲ್ಲಿ ಬಂಟರು ಶ್ರೇಷ್ಠರು. ಬಂಟರು ಬದುಕನ್ನು ಪ್ರೇರೇಪಿಸುವ ಬಂಧುಗಳಾಗಿದ್ದಾರೆ. ಆದ್ದರಿಂದಲೇ ಎಲ್ಲ ಕ್ಷೇತ್ರಗಳಲ್ಲೂ ಬಂಟರ ಅಬ್ಬರ ಇಂದಿಗೂ ಕಾಣಿಸುತ್ತಿದೆ. ನಾವೆಲ್ಲ ಇಷ್ಟೊಂದು ಸಾಧಕರಾಗಿದ್ದೇವೆ ಎಂದರೆ ಆದು ನಮ್ಮ ಸ್ವಸಮಾಜ ಪ್ರೇರಣೆಯಿಂದ. ಇಂತಹ ಕಾರ್ಯಕ್ರಮಗಳಿಂದ ಸಮಾಜದ ಋಣ ತೀರಿಸಲು  ಸಾಧ್ಯ. ಈ ಮೂಲಕ ಸಮಗ್ರ ಸಮಾಜ ಬೆಳಗುವುದು. ಬಂಟ್ವಾಳದ ಬಂಟರು ಎಲ್ಲರಿಗಿಂತ ಭಿನ್ನರು ಮತ್ತು ಸರ್ವ ಸಾಧಕರು. ಭವಿಷ್ಯದ ಜನತೆಗೆ ಆದರಣೀಯರೂ ಹೌದು. ಸಮಗ್ರ ಬಂಟ್ವಾಳದ ಜನತೆಯ ಸೇವೆ ಎಲ್ಲರಲ್ಲೂ ಚೈತನ್ಯ ಮೂಡಿಸುವಂತಿದೆ ಎಂದು ನಿಟ್ಟೆ  ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಂ. ಶಾಂತಾರಾಮ ಶೆಟ್ಟಿ ತಿಳಿಸಿದರು.

ಆ. 5ರಂದು  ತುಂಬೆ ವಳವೂರು ಇಲ್ಲಿನ ಬೋಳಂತೂರುಗುತ್ತು ಗಂಗಾಧರ ರೈ ಕಾಂಪ್ಲೆಕ್ಸ್‌ನ ಬಂಟ್ವಾಳದ ಬಂಟರ ಭವನದ ಬೆಳ್ಳೂರು ಪರಾರಿ ಆರ್‌. ಎನ್‌. ಶೆಟ್ಟಿ  ಸಭಾಗೃಹದಲ್ಲಿ ಮುಂಬಯಿಯ ಪ್ರತಿಷ್ಠಿತ ಆಲ್‌ಕಾರ್ಗೊ ಲಾಜಿಸ್ಟಿಕ್‌ ಲಿಮಿಟೆಡ್‌ ಸಂಸ್ಥೆಯ ಸಹಯೋಗದೊಂದಿಗೆ ಬಂಟರ ಸಂಘ ಬಂಟವಾಳ ತಾಲೂಕು ಇದರ ಶೈಕ್ಷಣಿಕ ಮತ್ತು ಸಮಾಜ ಕಲ್ಯಾಣ ಸಮಿತಿಯಿಂದ ನಡೆದ   2018 ನೇ ವಾರ್ಷಿಕ  ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವನ್ನು  ಉದ್ಘಾಟಿಸಿ ಮಾತನಾಡಿದ ಅವರು, ಆಲ್‌ಕಾರ್ಗೋ ಇಡೀ ಸಮಾಜಕ್ಕೆ ವಿದ್ಯಾರ್ಥಿವೇತನ ವಿತರಿಸುತ್ತಿರುವುದು ಸ್ತುತ್ಯರ್ಹ. ಜಾಗತಿಕವಾಗಿ ಭವ್ಯತೆ ಸಾರುವ ಅವರ ಕನಸಿನ ಈ ಕಾರ್ಯಕ್ರಮ ಎಲ್ಲರಿಗೂ ಮಾದರಿ. ಸಮಾಜದಲ್ಲಿ ಎಲ್ಲರೂ ಸುಶಿಕ್ಷಿತರಾಗಿ ಬಾಳುವಂತಾಗಲಿ ಎನ್ನುವುದೇ ನಮ್ಮೆಲ್ಲರ  ಆಶಯವಾಗಿದೆ ಎಂದು ಶಾಂತಾರಾಮ ಶೆಟ್ಟಿ  ತಿಳಿಸಿ ಲಾಲ್‌ಬಹುದ್ದೂರು ಶಾಸ್ತ್ರೀ ಅವರು ಮುಖತಃ  ಕಂಡ ಆಕರ್ಷಣೀಯ ಸ್ಥಾನವಾದ ಬಂಟ್ವಾಳವನ್ನು ಉಲ್ಲೇಖೀಸಿ ಬಂಟ್ವಾಳದ ಸಾಧಕರನ್ನು ಪ್ರಶಂಸಿದರು. 

ಬಂಟರ ಸಂಘ ಬಂಟವಾಳ ಅಧ್ಯಕ್ಷ ನಗ್ರಿಗುತ್ತು ವಿವೇಕ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಮೈಟ್‌ ಶಿಕ್ಷಣ ಸಂಸ್ಥೆ ಮೂಡಬಿದಿರೆಯ ಅಧ್ಯಕ್ಷ ರಾಜೇಶ್‌ ಚೌಟ, ನವಿಮುಂಬಯಿ ನಿವೃತ್ತ ಪೊಲೀಸ್‌ ಅಧಿಕಾರಿ ಮತ್ತು  ಆಲ್‌ಕಾರ್ಗೋ ಸಂಸ್ಥೆಯ ಸಿಎಸ್‌ಆರ್‌ ಸಲಹೆಗಾರ ಕೆ. ಎಲ್‌. ಪ್ರಸಾದ್‌ ಹಾಗೂ ಆಲ್‌ಕಾರ್ಗೊ ಸಿಎಸ್‌ಆರ್‌ ಮುಖ್ಯಸ್ಥ ಡಾ| ನೀಲ್‌ರತ್ನ ಆರ್‌. ಶೆಂಡೆ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸ್ಥಳಿಯ ಬಹುತೇಕ ಸಮುದಾಯ, ಜಾತಿಗಳ ಸುಮಾರು 1,500 ವಿದ್ಯಾರ್ಥಿಗಳಿಗೆ 40 ಲಕ್ಷ ರೂ.ಮೊತ್ತಕ್ಕೂ ಅಧಿಕ ಶೈಕ್ಷಣಿಕ ದೇಣಿಗೆ ವಿತರಿಸಿದರು.

ಸಮಾಜಮುಖೀ ಕಾರ್ಯಕ್ರಮಕ್ಕೆ ಈ ಸಂಸ್ಥೆ ಮಾದರಿ. ಸಮಾಜದಲ್ಲಿನ ಸಂಪನ್ಮೂಲ  ಬಳಸಿ ಸಮಾಜದ ಉನ್ನತಿಗೆ ಶ್ರಮಿಸಬೇಕು.  ಕೇವಲ  ಭವನಗಳನ್ನು ರಚಿಸುವುದಕ್ಕಿಂತ ಆ ಭವನದ ಮೂಲಕ ಸಮಾಜದ ಜನತೆಯ ಭವಿಷ್ಯ ರೂಪಿಸಲು ಪ್ರೇರಕರಾದಾಗ ಸಂಸ್ಥೆಗಳ ಅಸ್ತಿತ್ವ ಫಲಪ್ರದವಾಗುವುದು. ವಿದ್ಯಾರ್ಥಿಗಳೇ ತಾವು ಸರ್ವೋತ್ಕೃಷ್ಟ  ಶಿಕ್ಷಣ ಪಡೆದು  ಶಶಿಕಿರಣ್‌ ಅವರಂತಹ ಕನಸುಕಂಡು ಜೀವನ ಪಾವನವಾಗಿಸಿರಿ. ಶಿಕ್ಷಣ ಕೇವಲ ಸ್ವಂತಿಕೆಗೆ ಮಾತ್ರವಲ್ಲ ಅದರೊಂದಿಗೆ ಜೀವನ ರೂಪಿಸುವ ಜತೆಗೆ ಸಮಾಜಕ್ಕೂ ಪೂರಕವಾಗಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪ್ರೀತಿಗೆ ಭಾಜನರಾಗಿ ಸಾಂಘಿಕವಾಗಿ ಮುನ್ನಡೆಯಲು ಇಂತಹ ಕಾರ್ಯಕ್ರಮ ಮಾದರಿ ಎಂದು ರಾಜೇಶ್‌ ಚೌಟ ಅವರು ಅಭಿಪ್ರಾಯಪಟ್ಟರು.

ಬಂಟರ ಸಂಘದ ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ, ಡಾ| ಪ್ರಶಾಂತ್‌ ಮಾರ್ಲ, ಸಂಘದ ಉಪಾಧ್ಯಕ್ಷ ಕಿರಣ್‌ ಹೆಗ್ಡೆ ಅನಂತಾಡಿ, ಜತೆ ಕಾರ್ಯದರ್ಶಿ ನವೀನ್‌ಚಂದ್ರ ಶೆಟ್ಟಿ ಮುಂಡಜೆಗುತ್ತು, ಮಹಿಳಾ ವಿಭಾಗಧ್ಯಕ್ಷೆ ಆಶಾ ಪ್ರಸಾದ್‌ ರೈ ಅತಿಥಿಗಳನ್ನು ಪರಿಚಯಿಸಿದರು. ಅಧ್ಯಕ್ಷರು ಮತ್ತಿತರ‌ ಪದಾಧಿಕಾರಿಗಳು ಉಪಸ್ಥಿತರಿದ್ದು ಅತಿಥಿಗಳನ್ನು  ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಗೌರವಿಸಿದರು. 

ಕಾರ್ಯಕ್ರಮದಲ್ಲಿ ಶಾಸಕ ಉಳೆಪಾಡಿಗುತ್ತು ರಾಜೇಶ್‌ ನಾೖಕ್‌,  ಸಂಧ್ಯಾ ವಿವೇಕ್‌ ಶೆಟ್ಟಿ, ನಕ್ರೆ ಸುರೇಂದ್ರ ಶೆಟ್ಟಿ, ಸವಿಸ್ತಾರ್‌ ಶೆಟ್ಟಿ ಉಪಸ್ಥಿತರಿದ್ದರು.  ಕು| ತೃಪ್ತಿ ರೈ,  ಖುಷಿ ಶೆಟ್ಟಿ, ರಿಷಾ ಎಲ್‌. ಶೆಟ್ಟಿ ಮತ್ತು ಶ್ರೀûಾ ಶೆಟ್ಟಿ ಪ್ರಾರ್ಥನೆಗೈದರು. ಶೈಕ್ಷಣಿಕ, ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಎಚ್‌. ಸಂಕಪ್ಪ ಶೆಟ್ಟಿ ಫಲಾನುಭವಿಗಳ ಪಟ್ಟಿ ವಾಚಿಸಿದರು.  ಕೋಶಾಧಿಕಾರಿ ಜಗದೀಶ್‌ ಶೆಟ್ಟಿ ಇರಾಗುತ್ತು  ಫಲಾನುಭವಿಗಳ ಯಾದಿ ವಾಚಿಸಿದರು. ಬಾಲಕೃಷ್ಣ ಆಳ್ವ ಕೋಡಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚಂದ್ರÅಹಾಸ ಡಿ. ಶೆಟ್ಟಿ ವಂದಿಸಿದರು. 

ಭಾರತೀಯರಾಗಿ ಬಾಳಿದಾಗ ಶ್ರೇಯಸ್ಸು
ಸಮಾಜ ಸೇವೆ ನನ್ನ ಅತಿ ಪ್ರಿಯ  ವಿಚಾರವಾಗಿದೆ. ಸಮಾಜ ಸೇವೆಗೆ ಹೃದಯಶೀಲತ ಮನೋಭಾವ‌ ಅಗತ್ಯವಿದೆ. ಇದು ಶಶಿಕಿರಣ್‌ ಮತ್ತು ಆರತಿ ಶೆಟ್ಟಿ  ದಂಪತಿಯ ರಕ್ತದಲ್ಲೇ ಅಡಗಿದೆ.  ನಾವೆಲ್ಲರೂ ಜಾತಿ ಧರ್ಮದ ಸ್ವಾರ್ಥ ಕಾಣದೆ ಮೊದಲಾಗಿ ಭಾರತೀಯರಾಗಿ ಬಾಳಿದಾಗ ಎಲ್ಲರ ಶ್ರೇಯಸ್ಸು ಸಾಧ್ಯವಾಗುವುದು. ಎಲ್ಲರೂ ಸುಖೀಯಾಗಿ ಬಾಳಬೇಕು. ನಾವೆಲ್ಲ ಮಾನವತಾ ಮನೋಭಾವ ಬೆಳೆಸಿಕೊಳ್ಳಬೇಕು. ಮಾತಾ ಪಿತರಿಗೆ ಆದರಣೀಯರಾಗಿ ಬದುಕು ಬಂಗಾರವಾಗಿಸಬೇಕು  ಎಂದು  ಕೆ. ಎಲ್‌. ಪ್ರಸಾದ್‌ (ಸಲಹೆಗಾರರು : ಸಿಎಸ್‌ಆರ್‌ ಆಲ್‌ಕಾರ್ಗೋ) ಹೇಳಿದರು.

ಇದು ಕಲ್ಲು ಸಿಮೆಂಟಿನ ಭವನವಲ್ಲ. ಸಮಾಜದ ಜನತೆಯ ಪ್ರೀತಿಯ ದ್ಯೋತಕವಾಗಿದ್ದು, ಸಾಮಾಜಿಕ ಶ್ರೇಯೋಭಿವೃದ್ಧಿಯ ಹಣತೆ ಇದಾಗಿದೆ. ಜಾತಿ ಮತ ಧರ್ಮದ ಅಂತರವಿಲ್ಲದೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎನ್ನುವ ಶಶಿಕಿರಣ್‌ ಶೆಟ್ಟಿ ಆಶಯದಂತೆ ಈ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ.  ವಿದ್ಯಾರ್ಥಿ ವೇತನ ಕೊಂಡುಕೊಳ್ಳುವುದರ ಬಗ್ಗೆ ಮಾಹಿತಿ ಮತ್ತು ಅದರ ಬಗ್ಗೆ ಜವಾಬ್ದಾರಿ ಇರುವುದು ತಮ್ಮ ತಮ್ಮ ಕರ್ತವ್ಯ. ಮುಂದಿನ ದಿನಗಳಲ್ಲಿ ಸಮಾಜದ ಮಕ್ಕಳಿಗೆ ಬಡ್ಡಿ ರಹಿತ ಸಾಲವನ್ನು ನೀಡಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮತ್ತು ಸಂಪೂರ್ಣ ಶಿಕ್ಷಣಕ್ಕಾಗಿ ಕನಿಷ್ಠ 100 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸುವ ಉದ್ದೇಶ ಈ ಸಂಸ್ಥೆಗಿದೆ. ಸರ್ವ ಬಂಧುಗಳನ್ನು ಬಂಟ ಸಂಘ ಗೌರವಿಸುತ್ತಿದೆ. ಅದನ್ನೆ ಮಕ್ಕಳು ಮತ್ತು ಪಾಲಕರು ಸಮಾಜದಲ್ಲಿ ಪ್ರದರ್ಶಿಸಿ ರಾಷ್ಟ್ರೀಯ ಭಾವೈಕ್ಯತೆಗೆ ಪ್ರೇರಕರಾಗಬೇಕು
-ನಗ್ರಿಗುತ್ತು ವಿವೇಕ್‌ ಶೆಟ್ಟಿ
(ಅಧ್ಯಕ್ಷರು : ಬಂಟವಾಳ ಬಂಟರ ಸಂಘ)

ಆಲ್‌ಕಾರ್ಗೊ ಸಂಸ್ಥೆಯ ಉದ್ದೇಶವೇ ಸದೃಢ ರಾಷ್ಟ್ರ ನಿರ್ಮಾಣ. ಸ್ವಾರ್ಥದಿಂದ ಹೊರಬಂದು ಪರಿಶ್ರಮಿಗಳಾಗಿ ಮುನ್ನಡೆದಾಗ ಜೀವನ ಸಫಲಾಗುವುದು. ಮಕ್ಕಳಲ್ಲಿ ಕನಸುಗಳೇ ಬದುಕಿಗೆ ಮಾರ್ಗದರ್ಶನ ಆಗಬೇಕು. ಇದನ್ನು ತಾವೆಲ್ಲರೂ ಪೂರ್ಣ ಗೊಳಿಸಬೇಕು. ತಮ್ಮಲ್ಲಿನ ಪ್ರತಿಭೆಗಳನ್ನು ಪ್ರಾಮಾಣಿಕವಾಗಿ ಪ್ರದರ್ಶಿಸಿ ಮುನ್ನಡೆದಾಗ ತಾವೆಲ್ಲರೂ ಸಾಧಕರಾಗುತ್ತೀರಿ
-ಡಾ| ನೀಲ್‌ರತ್ನ ಆರ್‌. ಶೆಂಡೆ (ಸಲಹೆಗಾರರು : ಸಿಎಸ್‌ಆರ್‌ ಆಲ್‌ಕಾರ್ಗೋ)

ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Exam-Authotiy

Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫ‌ಲಿತಾಂಶ ಪ್ರಕಟಿಸಿದ ಕೆಇಎ

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.