ಶ್ರೀ  ಬಪ್ಪನಾಡು ಕ್ಷೇತ್ರ ಬ್ರಹ್ಮಕಲಶೋತ್ಸವ ಮುಂಬಯಿ: ವಿಶೇಷ ಸಭೆ


Team Udayavani, Feb 5, 2018, 4:46 PM IST

0202mum11.jpg

ಮುಂಬಯಿ: ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ಸರ್ವ ಧರ್ಮಗಳಿಂದ ಮಾನ್ಯತೆ ಪಡೆಯುವ ಹಾಗೂ ಸರ್ವ ಜಾತಿ ವರ್ಗಗಳಿಂದ ಸಮಾನವಾಗಿ ಆರಾಧಿಸಲ್ಪಡುವ ದೇವಸ್ಥಾನಗಳಲ್ಲಿ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಮಹತ್ವವನ್ನು ಹೊಂದಿರುವ ಕ್ಷೇತ್ರವಾಗಿದೆ ಎಂದು ಬಪ್ಪನಾಡು ದೇವಸ್ಥಾನದ ಅನುವಂಶಿಕ ಮತ್ತು ಆಡಳಿತ ಮೊಕ್ತೇಸರ ಎನ್‌. ಎಸ್‌. ಮನೋಹರ ಶೆಟ್ಟಿ ತಿಳಿಸಿದರು.

ಇತ್ತೀಚೆಗೆ ನಗರದ ಗೋರೆಗಾಂವ್‌ ಪಶ್ಚಿಮದಲ್ಲಿನ ಲಲಿತ್‌ ಹೊಟೇಲ್‌ನ ಕ್ರಿಸ್ಟಲ್‌ ಸಭಾಗೃಹದಲ್ಲಿ ನೇರವೇರಿದ ಮೂಲ್ಕಿ 9 ಮಾಗಣೆಯ ಜನತೆಯ ಸಭೆಯನ್ನುದ್ದೇಶಿಸಿ ಮಾತನಾಡಿದ ಇವರು, ಬಪ್ಪನಾಡು ಕ್ಷೇತ್ರವು ಸುಮಾರು ಸಹಸ್ರ ವರ್ಷಗಳ ಭವ್ಯ ಪರಂಪರೆ ಹೊಂದಿದ್ದು, ಇಲ್ಲಿ ಆರಾಧಿಸಲ್ಪಡುವ ಮಾತೃ  ದೇವತೆ ಲಿಂಗ ಸ್ವರೂಪಿಣಿಯಾದ ಪಂಚದುರ್ಗಾ ನಂದಿನಿಯನ್ನಿತ್ತು ಶಾಂಭವಿ ನದಿಗಳ ನಡುವಣ ಒಂಭತ್ತು ಮಾಗಣೆಯ ಜನರಿಂದ ಪೂಜಿಸಿಕೊಂಡು ಬರುತ್ತಿರುವ ಈ ದೇವಿಯ ಮಹಿಮೆ ಅಪಾರವಾದುದು.  2006ರಲ್ಲಿ ಜೀರ್ಣೋದ್ಧಾರಗೊಂಡ ಈ ದೇವಸ್ಥಾನದಲ್ಲಿ ಬರುವ ಮಾ. 14 ರಿಂದ ಪ್ರಾರಂಭವಾಗಿ 23ರ ತನಕ ನಡೆಯುವ ವಿಜೃಂಭಣೆಯ ಬ್ರಹ್ಮಕಲಶೋತ್ಸವಕ್ಕೆ ಸರ್ವರೂ ಸಹಕರಿಸ ಬೇಕು ಎಂದು ನುಡಿದರು.

ಪ್ರಾರಂಭದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಬಗ್ಗೆ ಸಮಿತಿಯ ಪ್ರಧಾನ  ಕಾರ್ಯದರ್ಶಿ ಸುನೀಲ್‌ ಆಳ್ವ ದೇವಸ್ಥಾನದಲ್ಲಿ ಪ್ರಸಕ್ತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಬಗ್ಗೆ ವಿವರಿಸಿ, ಸುಮಾರು 4 ಕೋ. ರೂ. ಗಳ ಅಂದಾಜು ವೆಚ್ಚದ ಅಗತ್ಯ ಕಾಮಗಾರಿಗಳು ಶ್ರೀ ದೇವಿಯ ಇಚ್ಛೆಯಂತೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಮುಂಬಯಿಯ ದಾನಿಗಳು ಎಂದಿನಂತೆ ಶ್ರೀ ದೇವಿಯ ಈ ಪುಣ್ಯ ಸೇವೆಗೆ ಬೆಂಬಲವಾಗಿ ನಿಂತಿರುವುದು ಸಂತಸದ ಸಂಗತಿ ಎಂದು ನುಡಿದರು.

ದೇವಸ್ಥಾನದ ಮಹತ್ವ ಮತ್ತು ಸೇವೆಯ ಬಗ್ಗೆ ಸಮಿತಿಯ ಸದಸ್ಯ ಎಳತ್ತೂರು ಸಂತೋಷ್‌ ಕುಮಾರ್‌ ಹೆಗ್ಡೆ ವಿವರಿಸಿದರು. ರೇಷ್ಮಾ ಪೂಜಾರಿ, ಸಮಿತಿಯ ಕಾಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ ಶೆಟ್ಟಿ, ಅಶೋಕ್‌ ಸುವರ್ಣ  ದೇವಸ್ಥಾನದ ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವದ ಬಗ್ಗೆ ಮಾತನಾಡಿದರು. ದಾನಿಗಳಲ್ಲೋರ್ವರಾದ ಕರ್ನಿರೆ ವಿಶ್ವನಾಥ ಶೆಟ್ಟಿ ಧ‌Ìಜಸ್ತಂಭಕ್ಕೆ ಬೆಳ್ಳಿಯ ಹೊದಿಕೆ ತನ್ನ ಸೇವಾರ್ಥವಾಗಿರಿಸಿ ಸಹಕರಿಸಲಿದ್ದೇನೆ ಎಂದು ತಿಳಿಸಿದರು.

ಚಿತ್ರಾಪು ಲಕ್ಷ¾ಣ ಪೂಜಾರಿ, ಧನಂಜಯ ಮಟ್ಟು, ಶಿಮಂತೂರು ಉದಯ ಶೆಟ್ಟಿ, ಗಂಗಾಧರ ಅಮೀನ್‌, ರತ್ನಾಕರ ಶೆಟ್ಟಿ, ಉದಯಕುಮಾರ್‌ ಶೆಟ್ಟಿ, ಸುನೀಲ್‌ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಯಮಿ ಪುರುಷೋತ್ತಮ ಎಸ್‌. ಕೋಟ್ಯಾನ್‌ ಬ್ರಹ್ಮ ಕಲಶೋತ್ಸವು ನಮ್ಮ ಬದುಕಿನಲ್ಲಿ ಬರುವ ವಿಶೇಷ ಸೌಭಾಗ್ಯವಾಗಿದೆ. ನಾವೆಲ್ಲರೂ ಸೇರಿ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸಬೇಕು ಎಂದರು.

ಬ್ರಹ್ಮ ಕಲಶೋತ್ಸವಕ್ಕೆ ದಾನ ನೀಡುವ ಭಕ್ತಾದಿಗಳು ಗೋರೆಗಾಂವ್‌ ಲಲಿತ್‌ ಹೊಟೇಲ್‌ನಲ್ಲಿ ತಮ್ಮ ದೇಣಿಗೆಯನ್ನು ತಲುಪಿಸಿದ್ದಲ್ಲಿ ಅದನ್ನು ಜೀರ್ಣೋದ್ಧಾರ ಸಮಿತಿಗೆ ವರ್ಗಾಯಿಸಲಾಗುವುದು. ಹೆಚ್ಚಿನ ವಿವಗಳಿಗಾಗಿ ಪುರುಷೋತ್ತಮ ಎಸ್‌. ಕೋಟ್ಯಾನ್‌ (9819800685), ವಾಸುದೇವ ಎಂ. ಕೋಟ್ಯಾನ್‌ (9867726940), ಅಶೋಕ್‌ ಸುವರ್ಣ (9769333860) ಅವರನ್ನು ಸಂಪರ್ಕಿಸುವಂತೆ ಇದೇ ಸಂದರ್ಭದಲ್ಲಿ ತಿಳಿಸಲಾಯಿತು. 

ಚಿತ್ರ-ವರದಿ : ರೊನಿಡಾ ಮುಂಬಯಿ

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.