![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Apr 15, 2022, 4:05 PM IST
ಬಾರಾಮತಿ: ಜೈನ ಸಮಾಜದ ವತಿಯಿಂದ ಗುರುವಾರ ಬಾರಾಮತಿಯಲ್ಲಿ ಶ್ರೀ ಮಹಾವೀರ ಜಯಂತಿಯನ್ನು ಆಚರಿಸಲಾಯಿತು. ಮುಂಜಾನೆ ಶ್ರೀ ಮುನಿಸುವರತ್ನ ದಿಗಂಬರ ಜೈನ ದೇವಸ್ಥಾನದಿಂದ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ದಿಗಂಬರ, ಶ್ವೇತಾಂಬರ ಹಾಗೂ ಸ್ಥಳೀಯ ಜೈನ ಸಮಾಜದ ಬಂಧು-ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯು ಮಹಾ ವೀರ ಪಥ, ಮಾರ್ವಾಡ್ ಪೇಠ, ಬುರುಡಗಲ್ಲಿ, ಭಿಗ್ವಾನ್ ಚೌಕ್, ಇಂದಾಪುರ ಚೌಕ್ ಮತ್ತು ಗುನ್ವಾಡಿ ಚೌಕ್ ಮೂಲಕ ಸಾಗಿತು. ಭಿಗ್ವಾನ್ ಚೌಕದಲ್ಲಿ ಡಿಸಿಎಂ ಅಜಿತ್ ಪವಾರ್, ಉಪವಿಭಾಗಾಧಿಕಾರಿ ದಾದಾಸಾಹೇಬ ಕಾಂಬಳೆ, ತಹಶೀಲ್ದಾರ್ ವಿಜಯ್ ಪಾಟೀಲ, ವಿಶೇಷ ಕಾರ್ಯನಿರ್ವಹಣಾಧಿಕಾರಿ ಹನುಮಂತ ಪಾಟೀಲ, ಮುಖ್ಯಾಧಿಕಾರಿ ಮಹೇಶ ರೋಕಡೆ, ಪೊಲೀಸ್ ನಿರೀಕ್ಷಕ ಸುನೀಲ್ ಮಹಾದಿಕ್, ಬಾರಾಮತಿ ಬ್ಯಾಂಕ್ ಅಧ್ಯಕ್ಷ ಸಚಿನ್, ಯೋಗೇಶ್ ಜಗತಾಪ್, ಪ್ರಶಾಂತ್, ಸುನೀಲ್ ಸಾಸ್ತೆ, ವಿಷ್ಣುಪಂತ್ ಚೌರ್ಧ ಮತ್ತಿತರರು ಭಾಗವಹಿಸಿದರು. ಜೈನ ಸಮಾಜದವರಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು
You seem to have an Ad Blocker on.
To continue reading, please turn it off or whitelist Udayavani.