ಬಸವಣ್ಣನ ವಚನಗಳು ಮಾನವ ಕಲ್ಯಾಣಕ್ಕೆ ಪೂರಕ: ಹರೇಶ್ವರಾನಂದ ಶ್ರೀಗಳು
Team Udayavani, Feb 1, 2020, 6:14 PM IST
ಮುಂಬಯಿ, ಜ. 31: ಚೆಂಬೂರ ಬಸವೇಶ್ವರ ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮವು ಜ. 26 ರಂದು ಸಂಜೆ 5.30 ರಿಂದ ಪೂಜ್ಯ ಶ್ರೀ ಪರಮಹಂಸ ಹರೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ ಘನ ಅಧ್ಯಕ್ಷತೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಸ್ವಾಮೀಜಿಯವರು ಮತ್ತು ಸಂಸ್ಥೆಯ ಅಧ್ಯಕ್ಷರಾದ ಬಿ. ಜಿ. ಬಿರಾದಾರ, ವಿಶ್ವಸ್ತ ಮಂಡಳಿಯ ಎಂ. ಎಂ. ಕೋರಿ ಮತ್ತು ಗೌ. ಕಾರ್ಯದರ್ಶಿ ಎನ್. ಬಿ. ಸಾವಳಸಂಗ ಅವರು ಮಹಾತ್ಮಾ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮತ್ತು ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಸಿದ್ಧ ವಚನ ಸಂಗೀತಕಾರ ಗಿರೀಶ ಸಾರವಾಡ ಅವರಿಂದ ವಚನ ಸಂಗೀತ ಕಾರ್ಯಕ್ರಮ ಜರಗಿತು. ಬಳಿಕ ದಿ| ವೀರಪ್ಪ ಬಳಿಗಾರ, ಶರಣಬಸಪ್ಪ ಕೊಲ್ಲೂರ, ಸದಾಶಿವ ಪಾಟೀಲ, ಶಂಕರ ಗೋಕಾವಿ, ಕೊಟ್ರಬಸಯ್ನಾಹಮ್ಮಿಗಿಮಠ, ಸಾತಮ್ಮಾ ಎ. ಸಿದ್ನಾಳ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಲಾಯಿತು.
ತಂದೆ, ತಾಯಿ ಗುರು ಅಥವಾ ನಮ್ಮ ಪ್ರಿಯ ವ್ಯಕ್ತಿಗಳು ದಿವಂಗತರಾದಾಗ ಅವರ ಸ್ಮರಣಾರ್ಥ ನಡೆಸುವ ಈ ದತ್ತಿ ಉಪನ್ಯಾಸ ಒಂದು ಸಾಹಿತ್ಯದ ದಾಸೋಹ ಇದ್ದಂತೆ. ತಂದೆ ತಾಯಿಗಳಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೂ ಆ ನಿಟ್ಟಿನಲ್ಲಿಮಾಡುವ ಈ ಎಲ್ಲ ದಿವಂಗತರ ಮಕ್ಕಳು ಸಮಾಜಕ್ಕೆ ಮಾರ್ಗದರ್ಶಕರೆಂದರೆ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಮನೋಹರ ಕೋರಿ ಅವರು ಪ್ರಾಯೋಜಕರನ್ನು ಗೌರವಿಸಿದರು. ಆರ್. ಭೀ. ಗೌಡರ್ ಕಾರ್ಯಕ್ರಮ ನಿರ್ವಹಿಸಿದರು. ಎಂ. ಎ. ಸಿದ್ನಾಳ, ವಿ. ವಿ. ಬಳಿಗಾರ, ಎಂ. ಬಿ. ಬಿರಾದಾರ, ಅಮರೇಶ ಪಾಟೀಲ, ಆಶೋಕ ಕರಜಗಿ , ಎಂ. ಬಿ. ಕೂಪ್ಪ, ಎಂ. ಎಸ್. ಗಾಣಿಗಿ ಶ್ರೀಧರ ಕೋರಿ, ವಿದ್ಯಾ ಕಾಗೆ, ಅರುಂಧತಿ ಕೋರಿ, ಲಲಿತಾಅಂಗಡಿ, ಶಾರದಾ ಅಂಬೆಸಂಗೆ, ಜಯಾ ಅಮರಖೇಡ, ಸಂಗಮೇಶ ಉಣಕಿ ಉಪಸ್ಥಿತರಿದ್ದರು. ತಪ್ಪಾಗಲಾರದು ಎಂದು ಸ್ವಾಮಿಗಳನ್ನು ಫಲ ಪುಷ್ಪದೊಂದಿಗೆ ಮನೋಹರ ಕೋರಿ ಅವರು ಗೌರವಿಸಿ ನುಡಿದು ಶುಭ ಹಾರೈಸಿದರು.
ವಚನ ಸಂಗೀತಕಾರ ಗಿರೀಶ ಸಾರವಾಡರನ್ನು ಸ್ವಾಮಿಗಳು ಮತ್ತು ಗೌರವ ಕಾರ್ಯದರ್ಶಿ ಎನ್. ಬಿ. ಸಾವಳ ಸಂಗ ಅವರು ಮಾಡಿದರು. ಪೂಜ್ಯ ಸ್ವಾಮೀಜಿಗಳು ತಮ್ಮ ಪ್ರವಚನದಲ್ಲಿ ಮಹಾತ್ಮಾ ಬಸವೇಶ್ವರರು ಶಂಕರ ಭಗವಾನರ ವಾಹನ ನಂದಿ ಅವತಾರಿಗಳು. ಭೂಲೋಕದಲ್ಲಿಯ ಅನ್ಯಾಯ ಮಾನವರಿಗೆ ಮಾನವರಿಂದ ಆಗುವ ಅತ್ಯಾಚಾರ ವರ್ಣಭೇದ ಅಂಧಶ್ರದ್ಧೆ ಮೂಢನಂಬಿಕೆಗಳನ್ನು ತೊಡೆದು ಹಾಕಲು ಭೂಲೋಕದಲ್ಲಿ ಮನುಷ್ಯ ರೂಪದಲ್ಲಿ ಆಗಮಿಸಿ ಕ್ರಾಂತಿಯನ್ನು ಮಾಡಿದರು.
ಯಾವ ಧರ್ಮದಲ್ಲಿಯೂ ಆಗದ ಸುಧಾರಣೆಯನ್ನು ಅವರು 12ನೇ ಶತಮಾನದಲ್ಲಿ ಸ್ತ್ರೀ ಸ್ವಾತಂತ್ರ್ಯವನ್ನು ಕೊಟ್ಟು ಸಮಾಜದಲ್ಲಿಯ ಅಂಧ ಶ್ರದ್ಧೆ, ಮೂಡನಂಬಿಕೆ ವರ್ಣ ಭೇದದಂತಹ ಅನಿಷ್ಟ ಪದ್ಧತಿ ಗಳನ್ನು ನಿರ್ಮೂಲನ ಮಾಡಲು ಪ್ರಯತ್ನಿಸಿದರು. ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟಿ ಸಮಾಜದ ಎಲ್ಲಾ ಕೆಳವರ್ಗದ ವರನ್ನು ಒಂದುಗೂಡಿಸಿ ವಚನ ಗಳನ್ನು ರಚಿಸಿದರು. ಇಂದಿಗೂ ಆ ವಚನಗಳು ಮಾನವ ಕಲ್ಯಾಣಕ್ಕೆ ಪ್ರಾಧಾನ್ಯವಾಗಿವೆ ಎಂದರು.
ವಿ. ವಿ. ಬಳಿಗಾರ ಅವರ ಸೇವಾರ್ಥವಾಗಿ ಪ್ರಸಾದದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಮನೋಹರ ಕೋರಿ ಅವರು ಪ್ರಾಯೋಜಕರನ್ನು ಗೌರವಿಸಿದರು. ಆರ್. ಭೀ. ಗೌಡರ್ ಕಾರ್ಯಕ್ರಮ ನಿರ್ವಹಿಸಿದರು.
ಎಂ. ಎ. ಸಿದ್ನಾಳ, ವಿ. ವಿ. ಬಳಿಗಾರ, ಎಂ. ಬಿ. ಬಿರಾದಾರ, ಅಮರೇಶ ಪಾಟೀಲ, ಆಶೋಕ ಕರಜಗಿ , ಎಂ. ಬಿ. ಕೂಪ್ಪ, ಎಂ. ಎಸ್. ಗಾಣಿಗಿ ಶ್ರೀಧರ ಕೋರಿ, ವಿದ್ಯಾ ಕಾಗೆ, ಅರುಂಧತಿ ಕೋರಿ, ಲಲಿತಾ ಅಂಗಡಿ, ಶಾರದಾ ಅಂಬೆಸಂಗೆ, ಜಯಾ ಅಮರಖೇಡ, ಸಂಗಮೇಶ ಉಣಕಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.