ಭಗವನಾಮ ಸಂಕೀರ್ತನೆಯಿಂದ ಮಾನಸಿಕ ನೆಮ್ಮದಿ
Team Udayavani, Jan 28, 2021, 6:54 PM IST
ಮೀರಾರೋಡ್: ಇಲ್ಲಿನ ಪಲಿಮಾರು ಮಠದ ಬಾಲಾಜಿ ಸನ್ನಿಧಿಯಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರ ತನಕ ವಾರ್ಷಿಕ ಭಜನ ಮಹೋತ್ಸವವನ್ನು ಅಖಂಡ ಭಜ ನಾವಳಿಗಳೊಂದಿಗೆ ಪರಿಸರದ ಹಲವಾರು ಭಜನ ಮಂಡಳಿಗಳಿಂದ ಭಕ್ತಿ -ಶ್ರದ್ಧೆಯಿಂದ ನೆರವೇರಿಸಲಾಯಿತು.
ಪಲಿಮಾರು ಮಠದ ಸ್ವಾಮೀಜಿ ಶ್ರೀ ವಿದ್ಯಾ ಧೀಶ ಸ್ವಾಮೀಜಿಯವರ ಅಪೇಕ್ಷೆ ಹಾಗೂ ಆಶೀರ್ವಾದದೊಂದಿಗೆ ನಡೆದ ಈ ಭಕ್ತಿ ಸಂಪ್ರ ದಾಯಕ್ಕೆ ಮಠದ ಟ್ರಸ್ಟಿ ಸಚ್ಚಿದಾನಂದ ರಾವ್ ಮಾರ್ಗದರ್ಶನದಲ್ಲಿ ಹಾಗೂ ಪ್ರಶಾಂತ್ ಭಟ್, ಗೋಪಾಲ ಭಟ್ ಮತ್ತು ಕೃಷ್ಣ ಮೂರ್ತಿ ಉಪಾಧ್ಯಾಯ ಅವರಿಂದ ಪೂಜಾ ವಿಧಿ ವಿಧಾ ನಗಳೊಂದಿಗೆ ಚಾಲನೆ ನೀಡಲಾಯಿತು.
ಪ್ರಧಾನ ಅರ್ಚಕ ವಾಸುದೇವ ಎಸ್. ಉಪಾಧ್ಯಾಯರು ಮಾತನಾಡಿ, ಪ್ರತೀ ವರ್ಷದಂತೆ ನಡೆಯುವ ಈ ಭಜನ ಮಹೋತ್ಸವದಲ್ಲಿ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಸುಲಭವಾದ ಮಾರ್ಗ ಎಂದರೆ ಭಗವನ್ನಾಮ ಸಂಕೀರ್ತನೆ. ಸಾಮಾನ್ಯ ಮಾನವನಿಗೆ ಭಗವಂತನ ವಿವಿಧ ಲೀಲಾವಿನೋದಗಳನ್ನು ಸಂಕೀರ್ತನ ರೂಪ ದಲ್ಲಿ ಸೃಜಿಸಿ ಭಗವಂತನ ಸಾನ್ನಿಧ್ಯದ ಪರಮಾ ನಂದವನ್ನು ಪಡೆಯುವ ಏಕೈಕ ಮಾರ್ಗ ಪ್ರಾಪ್ತಿ ಆಗುವುದು ಭಜನೆಯಿಂದ ಮಾತ್ರ.
ಭಗವಂತನ ನಾಮ ಸ್ಮರಣೆ, ನಾಮೋಚ್ಛಾರಣೆ ಮಾಡುತ್ತಾ ಕೈತಾಳ ಹಾಕಿದರೆ ಪಾಪವೆಂಬ ಹಕ್ಕಿ ಹಾರಿ ಹೋಗುತ್ತದೆ. ಇದರಿಂದಾಗಿ ಮಾನಸಿಕ ಸ್ಥೈರ್ಯ
ಪ್ರಬಲವಾಗಿ, ಆಕಸ್ಮಿಕವಾಗಿ ಬಂದೊದಗುವ ತೊಂದರೆ, ರೋಗಾಧಿಗಳು ದೂರವಾಗಿ ಮನುಷ್ಯನಲ್ಲಿ ಶಾಂತಿ-ನೆಮ್ಮದಿ ನೆಲೆಯಾಗುತ್ತ ದೆ ಎಂದು ಭಕ್ತರೆಲ್ಲರನ್ನು ಹರಸಿದರು.
ಇದನ್ನೂ ಓದಿ:“ಮಕ್ಕಳಿಗ್ಯಾಕವ್ವ ಮದುವೆ’ ಬೀದಿ ನಾಟಕ ಪ್ರದರ್ಶನ
ಭಜನೆಯಲ್ಲಿ ಬಾಲಾಜಿ ಭಜನ ಮಂಡಳಿ, ಕಟೀಲೇಶ್ವರಿ ಭಜನ ಮಂಡಳಿ ಭಾಯಂದರ್, ಹನುಮಾನ್ ಭಜನ ಮಂಡಳಿ ದಹಿಸರ್, ಕರ್ನಾಟಕ ಮಹಾಮಂಡಲ ಭಾಯಂದರ್, ಶ್ರೀ ರಜಕ ಭಜನ ಮಂಡಳಿ, ವಿಟuಲ ಭಜನ ಮಂಡಳಿ ಭಾರತಿ ಪಾರ್ಕ್ ಇನ್ನಿತರ ಭಜನ ಮಂಡಳಿಗಳು ಭಜನೆಯಲ್ಲಿ ಪಾಲ್ಗೊಂಡಿದ್ದವು.
ನೂರಾರು ಸಂಖ್ಯೆಯ ಭಕ್ತರು ಹಾಜರಿದ್ದರು. ಬಾಲಾಜಿ ಭಜನ ಮಂಡಳಿಯವರು ಇತರ ಭಜನ ಮಂಡಳಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಕರಮಚಂದ ಗೌಡ ಅವರು ಸಹಕರಿಸಿದರು. ರಾತ್ರಿ ಮಹಾ ಮಂಗಳಾರತಿಯೊಂದಿಗೆ ಭಜನ ಮಹೋತ್ಸವ ಮುಕ್ತಾ ಯಗೊಂಡ ಬಳಿಕ ಸನ್ನಿಧಿಯಲ್ಲಿ ಮಹಾಪೂಜೆ, ಹಾಗೂ ಪ್ರಸಾದ ವಿತರಣೆ ನಡೆಯಿತು.
ಚಿತ್ರ–ವರದಿ: ವೈ. ಟಿ. ಶೆಟ್ಟಿ ಹೆಜಮಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.