ಭಾಗವತ ಅಂದರೆ ಭಗವದ್ಭಕ್ತ ಎಂದರ್ಥ: ಪೊಲ್ಯ ಉಮೇಶ್ ಶೆಟ್ಟಿ
Team Udayavani, Aug 25, 2019, 11:48 AM IST
ಮುಂಬಯಿ, ಆ. 24: ಯಕ್ಷಗಾನ ಜಾಗೃತಿಯ ಜಾನಪದ ಕಲೆಯಾಗಿದೆ. ಭಾರತೀಯ ಜನಜೀವನದ ಜ್ಞಾನ ನಿಷ್ಠೆಯನ್ನು ಜನಮಾನಸದಲ್ಲಿ ಪಸರಿಸುವುದಕ್ಕಾಗಿಯೇ ಈ ಕಲೆ ಆರಾಧನೆಗಾಗಿ ಹುಟ್ಟಿದ್ದು. ನಮ್ಮ ಪೂರ್ವಜರ ಕಲ್ಪನೆಯಂತೆ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಶಕ್ತಿಗಳನ್ನು ನಿರೀಕ್ಷಿಸುವಲ್ಲಿ ಜ್ಞಾನ ನಿರ್ಮಾಣ ಮಾಡುವ ಈ ಕಲೆ ರಾಷ್ಟ್ರದ ಪ್ರತಿಯೊಂದು ಗ್ರಾಮವೂ ಭಾರತೀಯ ಸಂಸ್ಕೃತಿ ಮತ್ತು ಕಲೆಯನ್ನು ರೂಪಿಸುವಂತೆ ಮಾಡುತ್ತಾ ಎಲ್ಲರನ್ನೂ ಕಲಾವಿದರನ್ನಾಗಿಸುವ ಉದ್ದೇಶವಾಗಿ ಹುಟ್ಟುಪಡೆದಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳೈಕೆಯುಳ್ಳ ಈ ಕಲೆ ಚಲಿಸುವ ವಿಶ್ವವಿದ್ಯಾಲಯವಾಗಿ ಸಾಗರ ಲೋಕದ ಸಮೃದ್ಧ ಕಲೆ ಇದಾಗಿದೆ ಎಂದು ಹೊಟೇಲ್ ಉದ್ಯಮಿ ಪೊಲ್ಯ ಉಮೇಶ್ ಶೆಟ್ಟಿ ತಿಳಿಸಿದರು.
ಆ. 23ರಂದು ಸಂಜೆ ಸಾಂತಾಕ್ರೂಜ್ ಪೂರ್ವ ಬಿಲ್ಲವರ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಿರ್ಮಿಸಿರುವ ಸ್ವರ್ಗೀಯ ಸೂರು ಸಿ. ಕರ್ಕೇರ ವೇದಿಕೆಯಲ್ಲಿ ಜಯ ಸಿ. ಸುವರ್ಣ ತನ್ನ ಮಾತೃಶ್ರೀ ದಿ| ಅಚ್ಚು ಸಿ. ಸುವರ್ಣ ಸ್ಮರಣಾರ್ಥ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ವತಿಯಿಂದ ವಾರ್ಷಿಕವಾಗಿ ಕೊಡಮಾಡುವ ’15ನೇ ವಾರ್ಷಿಕ ಯಕ್ಷಗಾನ ಕಲಾ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಭಾಗವತ ಅಂದರೆ ಭಗವದ್ಭಕ್ತ ಎಂದರ್ಥ. ಓದು ಬಾರದ ಮಂದಿಯ ಮುಂದೆ ಮೌಲ್ಯಯುತವಾಗಿ ಮಂಡಿಸುವ ಸಾಧ್ವಿ ಶಿರೋಮಣಿಗಳ ಸಮಸ್ತ ಜೀವನ ಚಿತ್ರಣವನ್ನು ಬಿಡಿಬಿಡಿ, ಎಳೆಎಳೆಯಾಗಿ ಚಿತ್ರಿಸಿ ಜೀವನವನ್ನು ಎತ್ತರಕ್ಕೇರಿಸುವ ಈ ಕಲೆಯನ್ನು ಪ್ರಸ್ತುತ ಪಡಿಸುವಲ್ಲಿ ಭಾಗವತನ ಪಾತ್ರ ಹಿರಿದಾಗಿದೆ. ಭಾಗವತನು ಆಸ್ತಿಕನಾಗಿದ್ದು ಪುರಾತನಗಳ ಜ್ಞಾನವುಳ್ಳವನಾಗಿರಬೇಕು. ಆಗಿದ್ದಾಗ ಮಾತ್ರ ಕಲೆಯು ನಿಜಾರ್ಥದ ಮೌಲ್ಯವನ್ನು ಹೊಂದಿ ಪಾವಿತ್ರ್ಯತೆಯ ಕಲೆಯಾಗಿ ವಿಶ್ವಮಾನ್ಯವಾಗಿ ಬೆಳೆಯಬಲ್ಲದು. ಇದನ್ನು ಕನ್ನಡಿಕಟ್ಟೆ ಕರಗತಗೊಳಿಸಿದ ಕಾರಣ ಇಂತಹ ಪುರಸ್ಕಾರಕ್ಕೆ ಅರ್ಹರು. ಪರಮ ಭಾಗವತನ ಈ ಸಮ್ಮಾನ ಅಭಿನಂದನೀಯವಾಗಿದೆ ಎಂದು ನುಡಿದರು.
ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಗುರುನಾರಾಯಣ ಗುರುಗಳ ಪ್ರೇರಣೆ ಹಾಗೂ ಮುಂಬಯಿಗರ ಸಹಕಾರ ಮತ್ತು ಕಲಾಭಿಮಾನಿಗಳ ಆಶೀರ್ವಾದದಿಂದ ಗುರುನಾರಾಯಣ ಯಕ್ಷಗಾನ ಮಂಡಳಿ ಈ ಮಟ್ಟಕ್ಕೆ ಬೆಳೆದಿದೆ. ಯಕ್ಷರಂಗದಲ್ಲಿ ಇನ್ನೂ ಪಳಗಿ, ಕಲಾಸೇವೆಯೊಂದಿಗೆ ಶತಮಾನಗಳತ್ತ ಸಾಗಲಿ ಎಂದು ಹಾರೈಸಿದರು.
ಪ್ರಶಸ್ತಿಯ ಪ್ರಾಯೋಜಕ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಮಾತನಾಡಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಭಾರತ್ ಬ್ಯಾಂಕಿನ ನಿರ್ದೇಶಕಿ ಶಾರದಾ ಸೂರು ಕರ್ಕೇರ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಕಾರ್ಯಕ್ರಮದ ಪ್ರಾಯೋಜಕ ಕಾಪು ಸದಾ ನಂದ್ ಅಂಚನ್ ಥಾಣೆ, ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ, ಹರೀಶ್ ಜಿ. ಅಮೀನ್, ಶ್ರೀನಿವಾಸ ಆರ್. ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದು, ಗಾನಸುರಭಿ ಬಿರುದಾಂಕಿತ ಯಕ್ಷಗಾನದ ಪ್ರಸಿದ್ಧ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರಿಗೆ ‘ಯಕ್ಷಗಾನ ಕಲಾ ಪ್ರಶಸ್ತಿ-2019’ನ್ನು ಪ್ರದಾನಿಸಿ ಶುಭಹಾರೈಸಿದರು.
ಭಾಗವತ ಮುದ್ದು ಅಂಚನ್ ಅವರು ಭಾಗವತಿಕೆ ಶೈಲಿಯಲ್ಲಿ ಪ್ರಾರ್ಥನೆಗೈದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ್ ಆರ್. ಪೂಜಾರಿ ಸ್ವಾಗತಿಸಿದರು. ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್. ಶಾಂತಿ ಪ್ರಸ್ತಾವನೆಗೈದು ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಬಾಬು ಎಲ್. ಸಾಲ್ಯಾನ್, ವಿನೋದ್ ಅಮೀನ್, ಸದಾನಂದ್ ಅಂಚನ್ ಕಾಪು ಪ್ರಾಯೋಜಕತ್ವದಲ್ಲಿ ಕರ್ನಾಟಕ ಜಾನಪದ, ಯಕ್ಷಗಾನ ಅಕಾಡೆಮಿ ಸಾಹಿತ್ಯ ಪ್ರಶಸ್ತಿ ಹಾಗೂ ಶ್ರೀ ವಿಶ್ವೇಶ್ವರ ತೀರ್ಥ ಪ್ರಶಸ್ತಿ ಪುರಸ್ಕೃತ ಹಾಗೂ ಅತಿಥಿ ಕಲಾವಿದರಿಂದ ‘ಬೌಮಾಸುರ-ರಾಜಾ ಪರೀಕ್ಷಿತ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.