ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗ: ಅರಸಿನ ಕುಂಕುಮ
Team Udayavani, Jan 31, 2018, 1:44 PM IST
ಮುಂಬಯಿ: ಇದೊಂದು ಮಂಗಳದಾಯಕ ಕಾರ್ಯಕ್ರಮ. ಇಂತಹ ಆಚರಣೆಯಿಂದ ಯೋಗಕ್ಷೇಮ ಸುಗಮವಾಗುತ್ತದೆ. ಮನುಷ್ಯನಿಗೆ ಸಮಾಜ ಸೇವೆಯ ತೃಪ್ತಿಯೇ ನೆಮ್ಮದಿದಾಯಕವಾಗಿದೆ. ಇಂದು ಗೃಹಿಣಿಯರು ಅಡುಗೆ ಕೋಣೆಯಿಂದ ಹೊರಬಂದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಮುಖ್ಯ ಕಾರಣವಾಗಿವೆ. ಆದ್ದರಿಂದಲೇ ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಸ್ತ್ರೀಯರಿಗೆ ಪುರುಷರ ಸಹಯೋಗ ಧಕ್ಕಿದ ಕಾರಣ ಇದೆಲ್ಲಾ ಸಾಧ್ಯವಾಗಿದೆ. ಆದ್ದರಿಂದ ತಮ್ಮ ಮನೆ ಕರ್ತವ್ಯವನ್ನು ಎಲ್ಲಕ್ಕಿಂತ ಮುಖ್ಯವಾಗಿ ನಿಭಾಯಿಸಿ, ಮನೆಮಂದಿಯಿಂದ ಸಮಾಜ ಬಂಧುಗಳಲ್ಲಿ ಸಂಬಂಧವನ್ನು ಭದ್ರಪಡಿಸಿಕೊಳ್ಳಿರಿ ಎಂದು ಬಂಟ್ಸ್ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಪ್ರಭಾಕರ್ ಶೆಟ್ಟಿ ತಿಳಿಸಿದರು.
ಜ. 28 ರಂದು ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಘಾಟ್ಕೊàಪರ್ ಪಶ್ಚಿಮದ ಅಸಲ್ಫಾದ ಶ್ರೀ ಗೀತಾಂಬಿಕಾ ದೇವಸ್ಥಾನದ ಸಭಾಗೃಹದಲ್ಲಿ ಆಯೋಜಿಸಿದ್ದ ವಾರ್ಷಿಕ ಮಕರ ಸಂಕ್ರಮಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ಮಹಿಳೆಯರೇ ಜಾತಿಭೇದವನ್ನು ದೂರವಾಗಿಸಿ ಮಾನವೀಯ ಸದ್ಗುಣ ಮೈಗೂಡಿಸಿ ಭವಿಷ್ಯತ್ತಿನ ಪೀಳಿಗೆಯು ಸಾಮರಸ್ಯದ ಸಮಾಜಕ್ಕೆ ಬದ್ಧಾರಾಗಬೇಕು ಎಂದರು.
ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಲತಾ ಶೆಟ್ಟಿ ಅವರ ಸದ್ಗುಣವಂತಿಕೆ ನಮ್ಮಲ್ಲೂ ರೂಢಿಸಿ ಕೊಳ್ಳುವಂತಹದ್ದು. ನಮ್ಮ ಸಮಾಜದ ಬಗ್ಗೆ ಅವರ ಹೊಗಳುವಿಕೆ ನಮ್ಮಲ್ಲಿನ ಒಲವಿನ ದ್ಯೋತಕವಾಗಿದೆ. ಹಳದಿ-ಕುಂಕುಮ ಕಾರ್ಯ ಕ್ರಮ ಮರಾಠಿ ನೆಲದ ಸಂಪ್ರದಾಯವಾಗಿದ್ದರೂ, ಈ ಮರಾಠಿ ನೆಲದಲ್ಲಿ ನೆಲೆಸಿ ಬಾಳುವ ನಾವುಗಳು ಇಲ್ಲಿನ ಸಂಸ್ಕೃತಿಯನ್ನು ಮೈಗೂಡಿಸಿ ಅನ್ನನೀಡಿದ ಭೂಮಿಯ ಸಂಸ್ಕೃತಿಯನ್ನು ಪಾಲಿಸಿಕೊಂಡು ಭಗವಂತನ ಕೃಪೆಗೆ ಮತ್ತಷ್ಟು ನಿಕಟರಾಗಲು ಸಾಧ್ಯ. ಗೃಹಿಣಿಯಾದವಳು ಅರಸಿನ ಕುಂಕುಮದಿಂದ ತನ್ನ ಸಾಂಸರಿಕ ಜವಾಬ್ದಾರಿ ತಿಳಿಯಬಲ್ಲಳು ಎಂದು ತಿಳಿಸಿದ್ದಳು.
ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಶಿವಾಸ್ ಹೇರ್ ಡಿಝೈನರ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಅನುಶ್ರೀ ಶಿವರಾಮ ಭಂಡಾರಿ, ಮಹಿಳಾ ಉಪ ಕಾರ್ಯಾಧ್ಯಕ್ಷೆ ಪಲ್ಲವಿ ರಂಜಿತ್ ಭಂಡಾರಿ, ಮಹಿಳಾ ಕಾರ್ಯದರ್ಶಿ ರೇಖಾ ಎ. ಭಂಡಾರಿ, ಮಾಜಿ ಮಹಿಳಾ ವಿಭಾಗಧ್ಯಕ್ಷೆ ಲಲಿತಾ ವಿಶ್ವನಾಥ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳನ್ನು ಸಮ್ಮಾನಿಸಿ ಅಭಿನಂದಿಸಿದರು.
ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್. ಭಂಡಾರಿ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಕಾರ್ಯ ಕ್ರಮದಲ್ಲಿ ಪೂರ್ವಾಹ್ನ ಪದಾಧಿಕಾರಿ ಗಳು, ಶೋಭಾ ಸುರೇಶ್ ಭಂಡಾರಿ ಮತ್ತು ಮಹಿಳಾ ಸದಸ್ಯೆಯರು ಕುಲದೇವರಾದ ಶ್ರೀ ಕಚ್ಚಾರು ನಾಗೇಶ್ವರ ದೇವರು ಮತ್ತು ಶ್ರೀ ಗೀತಾಂಬಿಕಾ ಮಾತೆಗೆ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಹಿಳಾ ವಿಭಾಗದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಿತು. ಭಾಂಡೂಪ್‌ನ ಬ್ರಹ್ಮಲಿಂಗೇಶ್ವರಿ ಭಜನಾ ಮಂಡಳಿ ಮತ್ತು ಅಸಲ್ಫಾದ ಶ್ರೀ ಗೀತಾಂಬಿಕಾ ಭಜನಾ ಮಂಡಳಿಗಳು ಭಜನೆಗೈದರು. ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ರಘುಪತಿ ಭಟ್ ಪೂಜೆ ನೆರವೇರಿಸಿ ಹರಸಿದರು.
ಕಾರ್ಯಕ್ರಮದಲ್ಲಿ ಶ್ರೀ ಗೀತಾಂಬಿಕಾ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಭಂಡಾರಿ ಮಹಾ ಮಂಡಲದ ಸಂಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಎಸ್. ಭಂಡಾರಿ, ಸಮಿತಿಯ ಉಪಾಧ್ಯಕ್ಷರುಗಳಾದ ನ್ಯಾಯವಾದಿ ರಾಮಣ್ಣ ಎಂ. ಭಂಡಾರಿ ಮತ್ತು ಪ್ರಭಾಕರ್ ಪಿ. ಭಂಡಾರಿ ಥಾಣೆ, ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್. ಭಂಡಾರಿ, ಗೌ| ಕೋಶಾಧಿಕಾರಿ ಕರುಣಾಕರ ಜಿ. ಭಂಡಾರಿ, ಜೊತೆ ಕಾರ್ಯದರ್ಶಿ ಪುರುಷೋತ್ತಮ ಜಿ. ಭಂಡಾರಿ, ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ನಾರಾಯಣ ಭಂಡಾರಿ, ಕೇಶವ ಭಂಡಾರಿ, ಕರುಣಾಕರ ಭಂಡಾರಿ ಡೊಂಬಿವಿಲಿ, ಜಯಶೀಲ ಯು.ಭಂಡಾರಿ, ಗುಲಾಬಿ ಕೃಷ್ಣ ಭಂಡಾರಿ, ಶಿವಾಸ್ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ. ಭಂಡಾರಿ, ತುಳು ಚಿತ್ರರಂಗದ ನಟ, ಶ್ರೀ ಗೀತಾಂಬಿಕಾ ಸೇವಾ ಸಮಿತಿಯ ಕಾರ್ಯದರ್ಶಿ ಧರ್ಮ ಪಾಲ್ ಪಿ. ಕೋಟ್ಯಾನ್, ಕೋಶಾಧಿ ಕಾರಿ ವಿಕ್ರಮ್ ಸುವರ್ಣ, ಸಂಚಾಲಕ ನಾಗೇಶ್ ಎಸ್. ಸುವರ್ಣ, ಕಾರ್ಯನಿರತ ಅಧ್ಯಕ್ಷ ಸುರೇಶ್ ಪಿ. ಕೋಟ್ಯಾನ್, ಜೊತೆ ಕಾರ್ಯದರ್ಶಿ ಸುಧಾಕರ ಶೆಟ್ಟಿ, ಸುರೇಶ್ ಶೆಟ್ಟಿ ಕಣಂಜಾರ್, ನಿತಿನ್ ಸಾಲ್ಯಾನ್, ಪ್ರಶಾಂತ್ ಪುತ್ರನ್, ಚಂದ್ರಶೇಖರ್ ಶೆಟ್ಟಿ, ತೌಳವ ಸೂಪರ್‌ಸ್ಟಾರ್ ಸೌರಭ್ ಸುರೇಶ್ ಭಂಡಾರಿ, ವಿಶ್ವನಾಥ್ ಭಂಡಾರಿ ಮಲಾಡ್, ಮೇಘಾ ಭಂಡಾರಿ, ವಿವಿಧ ಸಂಸ್ಥೆಗಳ ಪ್ರತಿನಿಧಿಗಳಾದ ಅನಿತಾ ಭಂಡಾರಿ, ವಿಮಲಾ ವಿ. ಭಂಡಾರಿ, ಜಯ ಶೆಟ್ಟಿ, ಉದಯ ಶೆಟ್ಟಿ, ಗೀತಾ ಮೆಂಡನ್, ಪೂರ್ಣಿಮಾ ಶೆಟ್ಟಿ ಸೇರಿದಂತೆ ನೂರಾರು ಮಂದಿ ಸಮಾಜ ಬಾಂಧವರು ಉಪಸ್ಥಿತರಿದ್ದರು. ರೀಯಾ ರಂಜಿತ್ ಭಂಡಾರಿ ಪ್ರಾರ್ಥನೆಗೈದರು. ಸಮಿತಿಯ ಜೊತೆ ಕಾರ್ಯದರ್ಶಿ ಶಶಿಧರ್ ಡಿ. ಭಂಡಾರಿ ಸ್ವಾಗತಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯೆ ಶಾಲಿನಿ ರಮೇಶ್ ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು. ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಸರಿತಾ ಬಂಗೇರ ಸಭಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ-ವರದಿ:ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.