ಭಂಡಾರಿ ಸೇವಾ ಸಮಿತಿಯ 2018ನೇ ವಾರ್ಷಿಕ ಸಮ್ಮಿಲನ
Team Udayavani, Dec 25, 2018, 5:23 PM IST
ಮುಂಬಯಿ: ಆರೂವರೆ ದಶಕದ ಸೇವೆಗೆ ಗುರು ಹಿರಿಯರ ದೂರದೃಷ್ಟಿಯೇ ಕಾರಣ. ಅವರೆಲ್ಲರ ಶ್ರಮದ ಫಲವಾಗಿ ನಾವೆಲ್ಲರೂ ಒಗ್ಗೂಡಿದ್ದೇವೆ. ಬಂಧುಗಳು ಆರೋಗ್ಯ ಬಗ್ಗೆ ಕಾಳಜಿ ವಹಿಸಿ ವಿಮಾ ಯೋಜನೆ ಹಾಗೂ ವಿದ್ಯಾನಿಧಿ ರೂಪಿಸಿ ಸಮಾಜವನ್ನು ಸ್ವಾಸ್ಥÂವಾಗಿಸಬೇಕು. ಸಮಲೋಚಿತ ಸೇವೇಯಿಂದ ಸಮಾಜದ ಉದ್ಧಾರ ಸಾಧ್ಯವಾಗುವುದು ಆದುದರಿಂದ ಸಮುದಾಯದ ಏಳಿಗೆಗೆ ಸಂಸ್ಥೆಗಳು ನಿಸ್ವಾರ್ಥವಾಗಿ ಸೇವಾತತ್ಪರಾಗಬೇಕು. ಭಂಡಾರಿ ಬಂಧುಗಳು ಮಾನವೀಯತೆ ಮೆರೆದು ಸಮುದಾಯವನ್ನು ಬಲಪಡಿಸಬೇಕು ಎಂದು ಕರಾವಳಿ ಇಂಟರ್‌ನೆಟ್ ಸರ್ವೀಸ್ ಆ್ಯಂಡ್ ಕೇಬಲ್ ಟಿವಿ ನೆಟ್‌ವರ್ಕ್‌ನ ಆಡಳಿತ ನಿರ್ದೇಶಕ ಲಕ್ಷ ¾ಣ್ ಕರಾವಳಿ ನುಡಿದರು.
ಭಂಡಾರಿ ಸೇವಾ ಸಮಿತಿ ತನ್ನ 2018ನೇ ವಾರ್ಷಿಕ ಸಮ್ಮಿಲನ 2018 ಅನ್ನು ರವಿವಾರ ಮುಲುಂಡ್ ಪಶ್ಚಿಮದ ಸರಸ್ವತಿವಾಡಿಯಲ್ಲಿನ ಶ್ರೀ ಕುಛ… ದೇಶಿಯಾ ಸರಸ್ವತಿ ಮಹಾ ಸಂಸ್ಥಾನ್ ಟ್ರಸ್ಟ್ ಸಭಾಗೃಹದಲ್ಲಿ ಸಂಭ್ರಮಿಸಿದ್ದು ಸಮ್ಮಿಲನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ದೀಪ ಪ್ರಜಲಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಲಕ್ಷ್ಮಣ್ ಕರಾವಳಿ ಮಾತನಾಡಿದರು. ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭಕ್ಕೆ ಅಖೀಲ ಭಾರತ ತುಳು ಒಕ್ಕೂಟ ಮಂಗಳೂರು ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿ ಶುಭಶಂಸನೆಗೈದರು.
ಗೌರವ ಅತಿಥಿಗಳಾಗಿ ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರು ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್. ಭಂಡಾರಿ, ಭಂಡಾರಿ ಮಹಾ ಮಂಡಲ ಅಧ್ಯಕ್ಷ ಸದಾಶಿವ ಎ. ಭಂಡಾರಿ ಸಕಲೇಶಪುರ, ಶಿವಾಸ್ ಹೇರ್ ಡಿಸೈನರ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಶಿವರಾಮ ಕೆ.ಭಂಡಾರಿ, ತಿರುಮಲ ಸಮೂಹ ಪುಣೆ ಇದರ ಆಡಳಿತ ನಿರ್ದೇಶಕ ಪ್ರಶಾಂತ್ ಕಾರ್ಕಳ್ ಪುಣೆ, ಸಮಾಜ ಸೇವಕರಾದ ಜಯಕೃಷ್ಣ ಎ. ಶೆಟ್ಟಿ, ಇಂದ್ರಾಳಿ ದಿವಾಕರ ಶೆಟ್ಟಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಾಜಿ ಅಧ್ಯಕ್ಷರುಗಳಾದ ಮಾಧವ ಆರ್. ಭಂಡಾರಿ ಮೂಡಬಿದ್ರೆ, ನ್ಯಾ| ಸುಂದರ್ ಜಿ.ಭಂಡಾರಿ, ಬಾಲಕೃಷ್ಣ ಪಿ.ಭಂಡಾರಿ, ನ್ಯಾ| ಶೇಖರ ಎಸ್.ಭಂಡಾರಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಲಲಿತಾ ವಿ.ಭಂಡಾರಿ, ಶೋಭಾ ಸುರೇಶ್ ಭಂಡಾರಿ, ಹಾಲಿ ಕಾರ್ಯಾಧ್ಯಕ್ಷೆ ಶಾಲಿನಿ ಆರ್. ಭಂಡಾರಿ ವೇದಿಕೆಯಲ್ಲಿ ಆಸೀನರಾಗಿದ್ದರು. ಅತಿಥಿಗಳನ್ನೊಳಗೊಂಡು ಅಧ್ಯಕ್ಷರು ವಿದ್ಯಾನಿಧಿ ಮನವಿ ಪತ್ರ ಬಿಡುಗಡೆಗೊಳಿಸಿದರು.
ಅತಿಥಿಗಳು ಸಮಾಜದ ಸಾಧಕರಾದ ವಿಠಲ್ ಕೆ.ಭಂಡಾರಿ ಭಾಂಡೂಪ್ ಮತ್ತು ಪುಷ್ಪಾ ವಿಠಲ್, ಟಿ.ಎಂ ಶೇಖರ್ ಭಂಡಾರಿ ಮುಲುಂಡ್ ಮತ್ತು ಶುಭಾ ಶೇಖರ್ ದಂಪತಿಗಳನ್ನು ಹಾಗೂ ವನಿತಾ ಎಸ್. ಭಂಡಾರಿ ಅವರನ್ನು ಸಮ್ಮಾನಿಸಿ ಅಭಿನಂದಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ಹಾಗೂ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು. ಭಂಡಾರಿ ಸಮಾಜ ಸದ್ಯ ಭಾರೀ ಸಾಂಘಿಕತೆಯಲ್ಲಿ ಸಾಗುತ್ತಿದೆ. ಮುಂಬಯಿವಾಸಿ ಭಂಡಾರಿಗಳು ಏಕತೆಗೆ ಸರ್ವರಿಗೂ ಮಾದರಿ ಆಗಿದ್ದಾರೆ. ಮುಂಬಯಿ ಸಂಘದಿಂದ ಭಂಡಾರಿ ಸಮುದಾಯ ಜಾಗತಿಕವಾಗಿ ಪ್ರಸಿದ್ಧಿಗೆ ಬಂದಿದೆ ಎನ್ನಲು ಅಭಿಮಾನವೆನಿಸುತ್ತಿದೆ. – ಸದಾಶಿವ ಎ. ಭಂಡಾರಿ ಸಕಲೇಶಪುರ, ಅಧ್ಯಕ್ಷರು, ಭಂಡಾರಿ ಮಹಾ ಮಂಡಲ
ತುಳುವರು ಅಂದರೆ ಏಕತೆಗೆ ಮತ್ತು ಸಂಸ್ಕೃತಿಗೆ ಹೊಂದಿಕೊಳ್ಳುವವರು ಎಂದರ್ಥ. ಮುಂಬಯಿಯ ಎಲ್ಲಾ ತುಳು ಕನ್ನಡಿಗರು ಸಂಘಟನಾ ಚತುರರು. ಈ ಮಧ್ಯೆ ನಮ್ಮ ಭಂಡಾರಿ ಸಂಘವು ಒಳಗೊಂಡಿದೆ. ಇಂದಿಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸೇರಿದ ಸ್ವಸಮಾಜದ ಬಂಧುಗಳ ಏಕತೆಯಿಂದ ಸಮುದಾಯದ ಅಭಿವೃದ್ಧಿ ಆಗುವಂತೆ ಭಾಸವಾಗುತ್ತದೆ. ಇಂತಹ ಒಗ್ಗಟ್ಟು ಇನ್ನಷ್ಟು ಬೆಳೆಯಲಿ. – ಸುರೇಶ್ ಭಂಡಾರಿ , ಆಡಳಿತ ಮೊಕ್ತೇಸರರು, ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರುಬೆಳಗ್ಗೆ ಉಪಸ್ಥಿತ ಪದಾಧಿಕಾರಿಗಳನ್ನೊಗೊಂಡು ಅಧ್ಯಕ್ಷರು ದೀಪ ಪ್ರಜ್ವಲಿಸಿ ವಾರ್ಷಿಕ ಸಮ್ಮಿಲನಕ್ಕೆ ಚಾಲನೆ ನೀಡಿದರು. ಬಳಿಕ ರಂಗೋಲಿ, ಚಿತ್ರಕಲಾ ಸ್ಪರ್ಧೆ ನಡೆಸಲ್ಪಟ್ಟಿತು. ಸಂಸ್ಥೆಯ ಸದಸ್ಯರು, ಮಹಿಳೆಯರು ಮತ್ತು ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಹರೀಶ್ ಶೆಟ್ಟಿ ಎರ್ಮಾಳ್ ನಿರ್ದೇಶನದಲ್ಲಿ ಪನ್ವಿ ಕ್ರಿಯೇಷನ್ಸ್ ಸಂಸ್ಥೆ ಸಂಗೀತ, ನೃತ್ಯಗಳ ಮೇಲೈಕೆಯ ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರಸ್ತುತ ಪಡಿಸಿತು.
ಗಾಯತ್ರಿ ನಾರಾಯಣ ಭಂಡಾರಿ ಪ್ರಾರ್ಥನೆ ಗೈದರು. ಗೌರವ ಪ್ರಧಾನ ಕಾರ್ಯದರ್ಶಿ ಶಶಿಧರ ಡಿ. ಭಂಡಾರಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷರುಗಳಾದ ಪ್ರಭಾಕರ್ ಪಿ.ಭಂಡಾರಿ ಮತ್ತು ಪುರುಷೋತ್ತಮ ಜಿ.ಭಂಡಾರಿ, ಕು| ಕ್ಷಮಾ ಆರ್.ಭಂಡಾರಿ ಮತ್ತು ಪಲ್ಲವಿ ಆರ್.ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು. ಗೌರವ ಕೋಶಾಧಿಕಾರಿ ಕರುಣಾಕರ ಎಸ್.ಭಂಡಾರಿ, ಜೊತೆ ಕಾರ್ಯದರ್ಶಿ ನ್ಯಾ| ಶಾಂತರಾಜ್ ಡಿ.ಭಂಡಾರಿ, ಜೊತೆ ಕೋಶಾಧಿಕಾರಿಗಳಾದ ಪ್ರಕಾಶ್ ಕೆ. ಭಂಡಾರಿ ಮತ್ತು ಸುಭಾಶ್ ಜಿ.ಭಂಡಾರಿ, ಮಹಿಳಾ ಕಾರ್ಯಾದರ್ಶಿ ಜಯಸುಧಾ ಟಿ.ಭಂಡಾರಿ ಮತ್ತಿತರ ಪದಾಧಿಕಾರಿಗಳು ಅತಿಥಿಗಳಿಗೆ ಪುಷ್ಪಗುತ್ಛಗಳನ್ನು ನೀಡಿ ಗೌರವಿಸಿದರು. ಜಯಶೀಲ ಭಂಡಾರಿ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ ಮತ್ತು ಸಮ್ಮಾನಿತರನ್ನು ಪರಿಚಯಿಸಿದರು. ಸರಿತಾ ಕೆ.ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಪುರುಷೋತ್ತಮ ಜಿ. ಭಂಡಾರಿ ಸಭಾ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ರಂಜಿತ್ ಎಸ್.ಭಂಡಾರಿ ವಂದನಾರ್ಪಣೆಗೈದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.