ಭಾರತ್‌ ಬ್ಯಾಂಕ್‌ ಭಾಂಡೂಪ್‌ ಪಶ್ಚಿಮ ಸ್ಥಳಾಂತರಿತ ಶಾಖೆ ಶುಭಾರಂಭ

Team Udayavani, Jan 27, 2019, 3:49 PM IST

2501mum09a.jpg

ಮುಂಬಯಿ: ಭಾರತ್‌ ಬ್ಯಾಂಕ್‌ ಆಧುನಿಕ ಮತ್ತು ವೈಜ್ಞಾನಿಕವಾಗಿ ಹಣಕಾಸು ಸ್ಪಂದನೆಗೆ ಶೀಘ್ರಗತಿಯಲ್ಲಿ ಸ್ಪಂದಿಸುತ್ತಿರುವ ಕಾರಣ ಇಷ್ಟೊಂದು ಸೇವಾ ಪ್ರಸಿದ್ಧಿಗೆ ಪಾತ್ರವಾಗಿದೆ. ನನ್ನ ಹಣಕಾಸು ವ್ಯವಹಾರದ ಪಾಲುದಾರ ಭಾರತ್‌ ಬ್ಯಾಂಕ್‌ ಎನ್ನಲು ಹೆಮ್ಮೆಯೆನಿಸುತ್ತದೆ. ನನ್ನನ್ನು ಧನಾತ್ಮಕವಾಗಿ ಬಲಪಡಿಸಿದ ಈ ಬ್ಯಾಂಕ್‌ ಒಂದು ಸಮರ್ಥ ಗ್ರಾಹಕಸ್ನೇಹಿ ಪಥಸಂಸ್ಥೆಯಾಗಿದೆ.  ಗ್ರಾಹಕರ ಸೇವಾತೃಪ್ತಿಯೇ ಇದರ ಉತ್ಕೃಷ್ಟತೆಯಾಗಿದ್ದು,  ಇದಕ್ಕೆ ಸಾಮರ್ಥ್ಯಶಾಲಿ ಜಯ ಸುವರ್ಣರ ಸಾರಥ್ಯವೇ ಕಾರಣ ಎಂದು ಸೆಂಟ್ರಲ್‌ ಹೆಲ್ತ್‌ ಹೋಮ್‌ ಭಾಂಡೂಪ್‌ ಇದರ ಮುಖ್ಯಸ್ಥ ಡಾ| ಕೆ.ರತ್ನಾಕರ್‌ ಶೆಟ್ಟಿ ನುಡಿದರು.

ಜ. 25 ರಂದು ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಇದರ ಭಾಂಡೂಪ್‌ ಪಶ್ಚಿಮದ ಸ್ಥಳಾಂತರಿತ ಶಾಖೆಯನ್ನು ಸ್ಥಳೀಯ ಸುಭಾಷ್‌ ನಗರದಲ್ಲಿನ ಸ್ಕಾಯ್‌ಲೈನ್‌ ಸ್ಪಾರ್ಕಲ್‌ ಕಟ್ಟಡದಲ್ಲಿ  ಉದ್ಘಾಟಿಸಲಾಗಿದ್ದು, ಈ ಸಂದರ್ಭಧಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ  ಹಾಗೂ ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ರಿಬ್ಬನ್‌ ಬಿಡಿಸಿ ಶಾಖೆಯನ್ನು ಸೇವಾರ್ಪಣೆಗೊಳಿಸಿದರು. ಬ್ಯಾಂಕಿನ ಮಾತೃಸಂಸ್ಥೆ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ದೀಪ ಬೆಳಗಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್‌ ಎಟಿಎಂ ಸೇವೆಯನ್ನೂ  ಹಾಗೂ ನಿರ್ದೇಶಕಿ ಶಾರದಾ ಸೂರು ಕರ್ಕೇರ ಭದ್ರತಾ ಕೇಂದ್ರವನ್ನು ಉದ್ಘಾಟಿಸಿದರು.

ವಿಸ್ತೃತ ಜಾಗಕ್ಕೆ ಸ್ಥಳಾಂತರ ಅಂದರೆ ಸಂಸ್ಥೆಯ ಸಮೃದ್ಧಿಯ ಸಂಕೇತ ಎಂದರ್ಥ. ಸದ್ಯ 102 ಶಾಖೆಗಳುಳ್ಳ ಈ ಬ್ಯಾಂಕ್‌ ಶೀಘ್ರವೇ 150 ಶಾಖೆಗಳನ್ನು ಹೊಂದುವಂತಾಗಲಿ. ಗ್ರಾಹಕರ ಆಶಯುತ ಸೇವೆಗೆ ಪಾತ್ರವಾಗಿ ಜನಮನ್ನಣೆಗೆ ಪಾತ್ರವಾಗಿ ಮೆರೆಯಲಿ ಎಂದು ಚಂದ್ರಶೇಖರ ಪೂಜಾರಿ ಅವರು ಆಶಯ ವ್ಯಕ್ತಪಡಿಸಿದರು. ಬ್ಯಾಂಕ್‌ನ ಪ್ರತಿಷ್ಠಿತ ಗ್ರಾಹಕ,  ಉದ್ಯಮಿ ಜನಾರ್ದನ ಕದಂ  ಮಾತನಾಡಿ, ನನ್ನ ಬದುಕಿಗೆ ಪ್ರೇರಣೆ ನೀಡಿದ ಬ್ಯಾಂಕ್‌ ಇದಾಗಿದೆ. ಎಂದಿಗೂ ಹಣಕಾಸು ವ್ಯವಹಾರಕ್ಕೆ ವಿಶ್ವಾಸರ್ಹ ಬ್ಯಾಂಕ್‌. ಈ ಸಂಸ್ಥೆಯಲ್ಲಿ ಎಂದಿಗೂ ರಾಜಕಾರಣ ಕಂಡಿಲ್ಲ ಎಂದರು.

ಉದ್ಯಮಿಗಳಾದ ಧನ್‌ಬದ್ಧೂರ್‌ ಸಿಂಗ್‌, ರಾಜೇಶ್‌ ಅಗರ್ವಾಲ್‌, ಸಿಎ ಕಪಾಡಿಯಾ, ಸಂಗೀತಾ ಪಂಕಜ್‌ ಅಗರ್ವಾಲ್‌,  ರವೀಂದ್ರ ಪೂಜಾರಿ, ಹಿರಿಯ ನಾಗರಿಕ ಪ್ರಭಾಕರ್‌ ವಿನಾಯಕ್‌ ಪ್ರಧಾನ್‌ ಮಾತನಾಡಿ ಭಾರತ್‌ ಬ್ಯಾಂಕ್‌ನಲ್ಲಿ ತಮ್ಮ ವ್ಯವಹಾರ ಅನುಭವಗಳನ್ನು ಹಂಚಿ ಸಿಬಂದಿಗಳ ಸೇವಾವೈಖರಿಯನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ  ಬ್ಯಾಂಕ್‌ನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ, ನಿರ್ದೇಶಕರಾದ ಎಲ್‌. ವಿ. ಅಮೀನ್‌, ಎನ್‌. ಟಿ. ಪೂಜಾರಿ, ಗಂಗಾಧರ್‌ ಜೆ. ಪೂಜಾರಿ, ಜ್ಯೋತಿ ಕೆ. ಸುವರ್ಣ, ಭಾಸ್ಕರ್‌ ಎಂ. ಸಾಲ್ಯಾನ್‌, ಎಂ. ಎನ್‌. ಕರ್ಕೇರ, ಪ್ರೇಮನಾಥ್‌ ಪಿ. ಕೋಟ್ಯಾನ್‌, ಮೋಹನ್‌ದಾಸ್‌ ಎ. ಪೂಜಾರಿ, ಪುರುಷೋತ್ತಮ ಎಸ್‌. ಕೋಟ್ಯಾನ್‌, ಮಾಜಿ ನಿರ್ದೇಶಕರಾದ ಎನ್‌. ಎಂ. ಸನಿಲ್‌, ಎಂ. ಬಿ. ಸನಿಲ್‌, ಬಿಲ್ಲವರ ಧುರೀಣರುಗಳಾದ  ರಾಘವ ಕೆ.ಕುಂದರ್‌, ಶಂಕರ್‌ ಪೂಜಾರಿ, ನಿವೃತ್ತ ಉನ್ನತಾಧಿಕಾರಿಗಳಾದ ಶೋಭಾ ದಯಾನಂದ್‌, ಸದಾನಂದ ಪೂಜಾರಿ, ನವೀನ್‌ಚಂದ್ರ ಬಂಗೇರ, ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಹರೀಶ್‌ ಜಿ. ಅಮೀನ್‌, ಬ್ಯಾಂಕ್‌ನ ಪ್ರಧಾನ ಪ್ರಬಂಧಕ ವಿದ್ಯಾನಂದ ಎಸ್‌. ಕರ್ಕೇರ,  ಉಪ ಪ್ರಧಾನ ಪ್ರಬಂಧಕ ಪ್ರಭಾಕರ್‌ ಜಿ. ಸುವರ್ಣ, ಸತೀಶ್‌ ಎಂ. ಬಂಗೇರ, ಪ್ರಭಾಕರ ಜಿ. ಪೂಜಾರಿ, ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಸುನೀಲ್‌ ಎ.ಗುಜರನ್‌, ವಿಜಯ್‌ ಪಾಲನ್‌, ಭಾರತ್‌ ಬ್ಯಾಂಕ್‌ ಎಂಪ್ಲಾಯಿಸ್‌ ಯೂನಿಯನ್‌ ಕಾರ್ಯದರ್ಶಿ ದಿನೇಶ್‌ ಕೆ. ಸನಿಲ್‌, ವಿವಿಧ ಶಾಖೆಗಳ ಮುಖ್ಯಸ್ಥರು  ಸೇರಿದಂತೆ ಬ್ಯಾಂಕ್‌ನ ನೂರಾರು ಗ್ರಾಹಕರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಶೇಖರ ಶಾಂತಿ ಉಳ್ಳೂರು ಅವರ ಪೌರೋಹಿತ್ಯದಲ್ಲಿ ಗಣಹೋಮ, ಸತ್ಯನಾರಾಯಣ ಮಹಾಪೂಜೆ, ವಾಸ್ತು ಪೂಜೆ, ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಗೋಪಿನಾಥ್‌ ಜಿ. ಅಮೀನ್‌ ಪೂಜಾದಿಗಳಿಗೆ ಸಹಕರಿಸಿದ್ದು, ಜಯಂತ್‌ ಎನ್‌. ಪೂಜಾರಿ ಹಾಗೂ ವಿನಯ್‌ ಸನಿಲ್‌ ಮತ್ತು ಕವಿತಾ ವಿನಯ್‌ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ಬ್ಯಾಂಕ್‌ನ ಪ್ರಧಾನ ಪ್ರಬಂಧಕರೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ದಿನೇಶ್‌ ಬಿ. ಸಾಲ್ಯಾನ್‌ ಸ್ವಾಗತಿಸಿ ಪ್ರಸ್ತಾವನೆಗೈದರು. ಕು| ದೀಪಾಲಿ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿದರು. ಕು| ನೇಹಾ ಅಮೀನ್‌ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಮುಖ್ಯಸ್ಥ ಜಯಂತ್‌ ಎನ್‌.ಪೂಜಾರಿ ವಂದಿಸಿದರು.  

ಚಿತ್ರ – ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Sydney Test: ಕ್ರಿಕೆಟಿಗರನ್ನು ಭೇಟಿಯಾದ ಆಸೀಸ್‌ ಪ್ರಧಾನಿ

Sydney Test: ಕ್ರಿಕೆಟಿಗರನ್ನು ಭೇಟಿಯಾದ ಆಸೀಸ್‌ ಪ್ರಧಾನಿ

World Blitz : ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆರ್‌. ವೈಶಾಲಿಗೆ ಕಂಚು

World Blitz : ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆರ್‌. ವೈಶಾಲಿಗೆ ಕಂಚು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

POlice

Udupi: 9 ಲೀಟರ್ ಗೋವಾ ಮದ್ಯ ವಶಕ್ಕೆ

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.