ಭಾರತ್ ಬ್ಯಾಂಕ್ ಸ್ಟಾಫ್ ವೆಲ್ಫೇರ್ ಕ್ಲಬ್:ಸ್ನೇಹ ಸಮ್ಮಿಲನ
Team Udayavani, Jan 19, 2018, 2:53 PM IST
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಭಾರತ್ ಕೋ- ಆಪರೇಟಿವ್ ಬ್ಯಾಂಕ್ ಮುಂಬಯಿ ಇದರ ಬೆಂಗಳೂರು ಸ್ಟಾಫ್ ವೆಲ್ಫೇರ್ ಕ್ಲಬ್ ವತಿಯಿಂದ ಜ. 13 ಮತ್ತು ಜ. 14ರಂದು ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು ಕ್ರೀಡೋತ್ಸವವನ್ನು ಆಯೋಜಿಸಲಾಗಿತ್ತು.
ಸಿಲಿಕಾನ್ ಸಿಟಿಯ ಗೇಟ್‌ವೇ ರೆಸೋರ್ಟ್‌ನಲ್ಲಿ ನಡೆದ ಈ ಕಾರ್ಯಕ್ರಮವು ಸ್ಟಾಫ್ ವೆಲ್ಫೆàರ್ ಕ್ಲಬ್ ಸದಸ್ಯರಾದ ಚೇತನ್ ಕುಮಾರ್, ನಾಗರಾಜ್ ಸುವರ್ಣ, ಚೇತಲಿ ಸುವರ್ಣ ಇವರ ಮುಂದಾಳತ್ವದಲ್ಲಿ ಹಾಗೂ ಹಿರಿಯ ಪ್ರಬಂಧಕರಾದ ಸತೀಶ್ ಪಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು. ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಬೆಂಗಳೂರಿನ ಸುರೇಖಾ ಡಿ. ಪೂಜಾರಿ, ನಾಗರಾಜ್ ಸುವರ್ಣ, ರವೀಂದ್ರ ಕುಂದರ್, ಗೋಪಾಲ್ ಪೂಜಾರಿ, ಕಿರಣ್ ಬಿ. ಹಾಗೂ ಶಾಖಾ ಪ್ರಮುಖರಾದ ಎವರೆಲಾ ಅಶಿಂ ಅವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಬೇಬಿ ಲಾಶಿಯಾ ನಾಗರಾಜ್ ಅವರು ಪ್ರಾರ್ಥನೆಗೈದರು. ವೀಣಾ ಕಿರಣ್ ಕುಮಾರ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪುಟಾಣಿಗಳಿಂನ ನೃತ್ಯ ವೈವಿಧ್ಯ, ಕ್ರಿಕೆಟ್, ತ್ರೋಬಾಲ್ ಇನ್ನಿತರ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಸತೀಶ್ ಪೂಜಾರಿ ಅವರು ಮಾತನಾಡಿ, ಭಾರತ್ ಬ್ಯಾಂಕ್ ನಮ್ಮಗೆಲ್ಲ ಒಂದು ರೀತಿಯಲ್ಲಿ ಕಲ್ಪವೃಕ್ಷ ಇದ್ದಂತೆ. ನಾವೆಲ್ಲರೂ ಶ್ರಮಪಟ್ಟು ದುಡಿಯಬೇಕು. ಇದರಿಂದ ನಮ್ಮ ಪ್ರಗತಿ ಖಂಡಿತಾ ಆಗುತ್ತದೆ. ನಮ್ಮ ಬ್ಯಾಂಕಿನ ನಿರ್ದೇಶಕ ಮಂಡಳಿಗೆ ನಾವೆಲ್ಲರೂ ಚಿರಋಣಿಗಳು ಎಂದು ನುಡಿದು ಎಲ್ಲರಿಗೂ ಶುಭಹಾರೈಸಿದರು. ಸತೀಶ್ ಎಲ್. ಸುವರ್ಣ, ಭಾಸ್ಕರ್ ಸರಪಾಡಿ, ಸದಾನಂದ ಕಾರ್ಕಳ, ಆಕಾಶ್ ಭಾಸ್ಕರ್ ಪೂಜಾರಿ, ಚೇತನ್ ಕುಮಾರ್ ಹಾಗೂ ಎಲ್ಲ ಸಿಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಪ್ರತೀ ವರ್ಷ ಸಹಕರಿಸುತ್ತಿರುವ ವಜೀರ ಕುಮಾರ್ ಪಿ. ಜೈನ್ ಅವರನ್ನು ಸಮ್ಮಾನಿಸಲಾಯಿತು. ಕೊನೆಗೆ ಗೋಪಾಲ್ ಪೂಜಾರಿ ಅವರು ವಂದಿಸಿದರು. ಸದಸ್ಯ ಬಾಂಧವರು, ಅವರ ಪರಿವಾರದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.