![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 24, 2021, 2:09 PM IST
ವಸಾಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಂಚಾಲಕತ್ವದ ಭಾರತ್ ಬ್ಯಾಂಕ್ ಕೋ-ಆಪರೇಟಿವ್ ಬ್ಯಾಂಕ್ ಇದರ 43ನೇ ಸಂಸ್ಥಾಪನ ದಿನವನ್ನು ಆ. 21ರಂದು ವಸಾಯಿ ಪಶ್ಚಿಮದ ಅಂಬಾಡಿ ರೋಡ್‌ನಲ್ಲಿರುವ ಬ್ಯಾಂಕ್‌ನ ವಸಾಯಿ ಶಾಖೆಯಲ್ಲಿ ಆಚರಿಸಲಾಯಿತು.
ಬ್ಯಾಂಕ್‌ನ ನಿರ್ದೇಶಕ ಕೆ. ಬಿ. ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಸಾಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಜಿ. ಅಮೀನ್, ಶ್ರೀ ಗುರುನಾರಾಯಣ ಸೇವಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಒ. ಪಿ. ಪೂಜಾರಿ ಇವರು ಬ್ಯಾಂಕ್‌ನ ಗ್ರಾಹಕರು ಹಾಗೂ ಸಿಬಂದಿ ಜತೆಗೂಡಿ ಕೇಕ್ ಕತ್ತರಿಸಿ ಸಂಸ್ಥಾಪನ ದಿನಾಚರಣೆಗೆ ಚಾಲನೆ ನೀಡಿದರು.
ಇದನ್ನೂ ಓದಿ:ಡ್ರಗ್ಸ್ ಪ್ರಕರಣದಲ್ಲಿ ಇನ್ನೂ ದೊಡ್ಡದೊಡ್ಡ ತಿಮಿಂಗಿಲಗಳಿವೆ : ಇಂದ್ರಜಿತ್ ಲಂಕೇಶ್
ವಿರಾರ್-ನಲಸೋಪರ ಕರ್ನಾಟಕ ಸಂಘದ ಗೌರವಾಧ್ಯಕ್ಷ, ದಕ್ಷಿಣ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ವಿರಾರ್ ಶಂಕರ ಬಿ. ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಪಶ್ವಿಮ ವಲಯದ ಸಂಚಾಲಕ ಶಶಿಧರ ಕೆ. ಶೆಟ್ಟಿ ಶುಭ ಹಾರೈಸಿದರು. ಬ್ಯಾಂಕ್‌ನ ಅಧಿಕಾರಿಗಳಾದ ಸ್ವಾತಿ ನಿತೀನ್ ಸುವರ್ಣ, ಸ್ವಪ್ನಾ ಕೋಟ್ಯಾನ್ ಪಾಲ್ಗೊಂಡಿದ್ದರು. ಸಿಬಂದಿ ನಯನಾ ಪೂಜಾರಿ, ಶ್ರುತಿ ಅಂಚನ್, ರಶ್ಮಿ ಕೋಟ್ಯಾನ್, ನಿಧಿ ಅಂಚನ್, ರಾಘವೇಂದ್ರ ಪ್ರಸಾದ್ ಸಾಲ್ಯಾನ್, ರಕ್ಷಣಾ ಸಿಬಂದಿ ಆನಿಲ್ ಮಹಾಜನ್, ಎಸ್‌ಎಂಎಸ್ ಸಿಬಂದಿ ಪ್ರಥಮೇಶ್ ಹಾಗೂ ಬ್ಯಾಂಕ್‌ನ ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದರು. ಶಾಖೆಯ ಪ್ರಬಂಧಕ ದಿನೇಶ್ ಪೂಜಾರಿ ಗಣ್ಯರನ್ನು ಸ್ವಾಗತಿಸಿದರು. ಉಪ ಪ್ರಬಂಧಕ ಸದಾಶಿವ ಎ. ಕರ್ಕೇರ ವಂದಿಸಿದರು.
ಚಿತ್ರ-ವರದಿ: ರೊನಿಡಾ ಮುಂಬಯಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.