ಪುಣೆ ಚಿಂಚ್ವಾಡ್‌: ಭಾರತ್‌ ಬ್ಯಾಂಕಿನ ಸ್ಥಳಾಂತರಿತ ಶಾಖೆ ಉದ್ಘಾಟನೆ


Team Udayavani, Apr 13, 2018, 12:17 PM IST

1204mum06a.jpg

ಪುಣೆ: ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಮತ್ತು ಗುಣಮಟ್ಟದ ಬ್ಯಾಂಕ್‌ ಸೇವೆಗಾಗಿ ದಿ| ಮಹಾರಾಷ್ಟ್ರ ಸ್ಟೇಟ್‌ ಕೋ. ಆಪರೇಟಿವ್‌ ಬ್ಯಾಂಕ್ಸ್‌ ಅಸೋಸಿಯೇಶನ್‌ ಲಿಮಿಟೆಡ್‌ ಮುಂಬಯಿ ಸಂಸ್ಥೆಯ “ಸರ್ವೋತ್ಕೃಷ್ಟ  ಬ್ಯಾಂಕ್‌ ಪುರಸ್ಕಾರ’ಕ್ಕೆ ಪಾತ್ರವಾದ ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಮುಂಬಯಿ ಲಿಮಿಟೆಡ್‌ ಇದರ ಪುಣೆ ಚಿಂಚ್ವಾಡ್‌ನ‌ ಸ್ಥಳಾಂತರಿತ ಶಾಖೆಯ ಉದ್ಘಾಟನ ಸಮಾರಂಭವು ಎ. 12 ರಂದು ಪೂರ್ವಾಹ್ನ ಚಿಂಚಾÌಡ್‌ನ‌  ಎಂಪಾಯರ್‌ ಎಸ್ಟೇಟ್‌ನ ತಳ ಮಹಡಿಯಲ್ಲಿ ನಡೆಯಿತು.

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ರಿಬ್ಬನ್‌ ಬಿಡಿಸಿ ಶಾಖೆಗೆ ಚಾಲನೆ ನೀಡಿದರು. ಬಿಲ್ಲವರ ಅಸೋಸಿಯೇಶನ್‌ ಚಿಂಚಾÌಡ್‌  ಇದರ ಅಧ್ಯಕ್ಷ ಎಸ್‌. ಟಿ.  ಸಾಲ್ಯಾನ್‌ ಮತ್ತು ಬಂಟರ ಸಂಘ ಚಿಂಚಾÌಡ್‌ ಇದರ ಅಧ್ಯಕ್ಷ ಮಹೇಶ್‌ ಹೆಗ್ಡೆ ಕಟ್ಟಿಂಗೇರಿ ದೀಪ ಪ್ರಜ್ವಲಿಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ  ರೋಹಿಣಿ ಜೆ. ಸಾಲ್ಯಾನ್‌ ಎಟಿಎಂ ಸೇವೆ ಯನ್ನೂ, ಬ್ಯಾಂಕಿನ ನಿರ್ದೇಶಕ ಚಂದ್ರಶೇಖರ ಎಸ್‌. ಪೂಜಾರಿ ಸೇಫ್‌ ಲಾಕರ್‌ ಸೇವೆಗಳಿಗೆ ಹಾಗೂ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ.ಆರ್‌.  ಮೂಲ್ಕಿ ಬ್ಯಾಂಕಿನ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಂಗಳೂರು ತಾ.ಪ ಉಪ ಕಾರ್ಯಾಧ್ಯಕ್ಷೆ ಪೂರ್ಣಿಮಾ ಗಣೇಶ್‌ ಪೂಜಾರಿ ಮಾತನಾಡಿ, ಮನುಕುಲದ ಮುನ್ನಡೆಗೆ ಹಿರಿಯರ ಆಶೀರ್ವಾದ ಬೇಕೇ ಬೇಕು. ಜಯ ಸುವರ್ಣ ಅವರಂತಹ ಮಾರ್ಗ ದರ್ಶನ, ಅನುಗ್ರಹದಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಮಗ್ರ ಬಿಲ್ಲವ ಸಮಾಜಕ್ಕೆ ಜಯ ಸುವರ್ಣರು ಕುಲ ಶಕ್ತಿಯಿದ್ದಂತೆ. ಕಾರಣ ಅವರ ಕೊಡುಗೆ ಮಹತ್ವವಾದದ್ದು. ಅವರಂತಹ ಶಕ್ತಿ ದೇವರು ಎಲ್ಲಾ ಸಮಾಜಕ್ಕೂ ಪ್ರಾಪ್ತಿಯಾಗಬೇಕು. ದೇಶ ವಿದೇಶಗಳಲ್ಲಿರುವ ನಮ್ಮವರು ಈ ಬ್ಯಾಂಕಿನೊಂದಿಗೆ ವ್ಯವಹರಿಸಿ ಆ ಮೂಲಕ ಬ್ಯಾಂಕ್‌ ಮಿಲಿಯನ್‌ ಡಾಲರ್‌ ಕ್ಷೇತ್ರದಲ್ಲಿ ವ್ಯವಹಾರಿಸುವಂತಾಗಬೇಕು. ಹಿರಿ ಯರ ಆಶೀರ್ವಾದ ಭಾರತ್‌  ಬ್ಯಾಂಕ್‌ 3000 ಕ್ಕೂ ಮಿಕ್ಕಿದ ಶಾಖೆ ಗಳನ್ನು ತೆರೆಯುವಂತಾಗಲಿ ಎಂದು ಹಾರೈಸಿದರು. ಶಿವಸೇನಾ ಪಕ್ಷದ ನೇತಾರ ಸಂಜಯ್‌ ಸಾಳ್ವಿ, ಸ್ಥಾನೀಯ ಸಮಾಜ ಸೇವಕರುಗಳಾದ ನ್ಯಾಯವಾದಿ ಅಪ್ಪು ಮೂಲ್ಯ, ರವೀಂದ್ರ ಪೂಜಾರಿ, ಕಿರಣ್‌ ಸುವರ್ಣ, ನಾಗಯ್ಯ ವಿ. ಪೂಜಾರಿ, ಅಶೋಕ್‌ ಶೆಟ್ಟಿ, ಸತೀಶ್‌ ರಾಜು ಸಾಲ್ಯಾನ್‌, ಅಯ್ಯಪ್ಪ ಸೇವಾ ಸಮಿತಿಯ ಕಾರ್ಯದರ್ಶಿ ಗಣೇಶ್‌ ಅಂಚನ್‌, ಜಗನ್ನಾಥ ಎಂ. ಅಮೀನ್‌ ಕೊಂಡೆವೂರು, ಉದ್ಯಮಿಗಳಾದ ಇಂದು ರಾವ್‌ ಮೋಹಿತ್‌, ನೀತ್‌ರಾಜ್‌ ಬಾಯ್‌, ಶೇಖರ್‌ ಚಿತ್ರಾಪುರ, ನಿಯಾಜ್‌ ಅಹ್ಮದ್‌ ಸಿದ್ಧಿಕಿ, ಪಂಕಜ್‌ ನಿಖಾಮ್‌, ರವಿ ಕೋಟ್ಯಾನ್‌, ಭಾರತ್‌ ಬ್ಯಾಂಕಿನ ನಿರ್ದೇಶಕರಾದ ನ್ಯಾಯವಾದಿ ಎಸ್‌. ಬಿ. ಅಮೀನ್‌, ರೋಹಿತ್‌ ಎಂ. ಸುವರ್ಣ, ಗಂಗಾಧರ್‌ ಜೆ. ಪೂಜಾರಿ, ಮಾಜಿ ನಿರ್ದೇಶಕ ಎನ್‌. ಎಂ. ಸನೀಲ್‌, ಧಣRವಾಡಿ ಶಾಖೆಯ ರವೀಂದ್ರ ಕೆ. ಕೋಟ್ಯಾನ್‌, ಶಿವಾಜಿ ನಗರ ಶಾಖೆಯ ಪ್ರಬಂಧಕ ಸುಧೀರ್‌ ಎಸ್‌. ಪೂಜಾರಿ ಸೇರಿದಂತೆ ಬ್ಯಾಂಕಿನ ಅನೇಕ ಷೇರುದಾರರು, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಶಾಖೆಯ ಸರ್ವೋನ್ನತಿಗೆ ಹಾರೈಸಿದರು.

ಭಾರತ್‌ ಬ್ಯಾಂಕ್‌ ಸಮಗ್ರ ಜನತೆಯ ಹಣಕಾಸು ವ್ಯವಹಾರಕ್ಕೆ ಸ್ಪಂದಿಸಲಿ. ಅಲ್ಲಹನ ಕೃಪೆಯಿಂದ ಸರ್ವರ ಮನ-ಮನೆಗಳಲ್ಲಿ  ಬ್ಯಾಂಕ್‌ ಜನಮನ್ನಣೆ ಪಡೆಯಲಿ ಎಂದು ಸ್ಥಳೀಯ ಸಮಾಜ ಸೇವಕ ನಿಯಾಜ್‌ ಅಹ್ಮದ್‌ ನುಡಿದರು. 2012ರ ಮಾ. 5 ರಂದು ಭಾರತ್‌ ಬ್ಯಾಂಕ್‌ ತನ್ನ 44ನೇ ಶಾಖೆಯನ್ನಾಗಿಸಿ ಪುಣೆ ಚಿಂಚಾÌಡ್‌ನ‌ಲ್ಲಿನ ಶಾಖೆಯನ್ನು ಆರಂಭಿಸಿತು. ಗತ ಸಾಲಿನಲ್ಲಿ ಈ ಶಾಖೆಯು ಸುಮಾರು 1750 ಖಾತೆಗಳನ್ನು ಹೊಂದಿದ್ದು, ಠೇವಣಿ  36.91 ಕೋ. ರೂ. ಗಳನ್ನು ಹೊಂದಿದೆ. ಅಡ್ವನ್ಸ್‌  31.30  ಕೋ. ರೂ. ಗಳೊಂದಿಗೆ ಒಟ್ಟು ವ್ಯವಹಾರ  68.21 ಕೋ. ರೂ. ಗಳನ್ನು ಸಾಧಿಸಿದೆ. ಇಂದು ಬ್ಯಾಂಕ್‌ ಗ್ರಾಹಕರ ಉತ್ಕೃಷ್ಟ ಸೇವೆಗಾಗಿ ಅತ್ಯಾಧುನಿಕ ಸೌಲತ್ತುಗಳೊಂದಿಗೆ ಸೇವೆಯನ್ನು ನೀಡುತ್ತಿದೆ. ಬ್ಯಾಂಕ್‌ ವಿಶ್ವಾಸನೀಯ ವ್ಯವಹಾರ ನಡೆಸಿ ಸ್ಥಾನೀಯ ಗ್ರಾಹಕರ ಆರ್ಥಿಕ ಸೇವೆಯ  ವಿಶ್ವಾಸಕ್ಕೆ ಪಾತ್ರವಾಗಿದೆ. ಅಂತೆಯೇ ತೃಪ್ತಿದಾಯಕ ಸೇವೆಯಲ್ಲಿ ಕಾರ್ಯನಿರತವಾಗಿ ಸ್ವಂತಿಕೆಯ ಮಾನ್ಯತೆಗೆ ಪಾತ್ರವಾಗಿದೆ ಎಂದು ಬ್ಯಾಂಕಿನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ ಇವರು ಶಾಖೆಯ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆ ನೀಡಿ ಬ್ಯಾಂಕಿನ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಉಳ್ಳೂರು ಶ್ರೀ ಶೇಖರ್‌ ಶಾಂತಿ ಮತ್ತು ಉಳ್ಳೂರು ದಿನೇಶ್‌ ಶಾಂತಿ ಅವರು ವಾಸ್ತುಪೂಜೆ, ಗಣಹೋಮ, ಸತ್ಯನಾರಾಯಣ ಮಹಾಪೂಜೆ, ಲಕ್ಷಿ¾à ಪೂಜೆ, ದ್ವಾರಪೂಜೆ ನೆರವೇರಿಸಿ ಹರಸಿದರು. ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಗಣೇಶ್‌ ಅಂಚನ್‌ ಮತ್ತು ಶಕುಂತಳಾ  ಗಣೇಶ್‌ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಬ್ಯಾಂಕಿನ   ಅಭಿವೃದ್ಧಿ ಇಲಾಖೆಯ ಉನ್ನತಾಧಿಕಾರಿಗಳಾದ ಸುನೀಲ್‌ ಎ. ಗುಜರನ್‌, ವಿಜಯ್‌ ಪಾಲನ್‌, ಬ್ಯಾಂಕ್‌ ಸಿಬಂದಿಗಳಾದ ಅನಿಲ್‌ ವಿ. ಪೂಜಾರಿ, ಸುಧೀರ್‌ ಟಿ. ಕುಮಾರ್‌, ಮೋಹನ್‌ ಕೆ. ಪವಾರ್‌, ಸುಧಾಕರ ಪೂಜಾರಿ, ತನ್ವಿ ಅಂಚನ್‌, ಸೂರಜ್‌ ದೇರRರ್‌, ಅಶ್ವಿ‌ತ್‌ ಪೂಜಾರಿ ಅವರನ್ನು ಬ್ಯಾಂಕಿನ ನಿರ್ದೇಶಕರು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಬ್ಯಾಂಕಿನ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಮೋಹನ್‌ದಾಸ್‌ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕಿನ ಮುಖ್ಯಸ್ಥ ಅನಿಲ್‌ ವಿ. ಪೂಜಾರಿ ಸ್ವಾಗತಿಸಿ ವಂದಿಸಿದರು. 

ಭಾರತ್‌ ಬ್ಯಾಂಕ್‌ 102 ಶಾಖೆ ಹೊಂದಿರುವುದು ತುಂಬಾ ಸಂತೋಷದ ವಿಷಯ. ಇದು ಬಿಲ್ಲವ ಸಮುದಾಯದ ಹೆಗ್ಗಳಿಕೆಯಾಗಿದೆ. ಮುಂದೆಯೂ ಹಲವು ಶಾಖೆಗಳು ತೆರೆಯ ಲ್ಪಟ್ಟು ರಾಷ್ಟ್ರದ ಬಹು ದೊಡ್ಡ ಬ್ಯಾಂಕ್‌ ಆಗಲಿ. ಗ್ರಾಹಕರ ಪ್ರೋತ್ಸಾಹ, ಸಹಕಾರ ಸದಾಯಿರಲಿ 

ಎಸ್‌. ಟಿ. ಸಾಲ್ಯಾನ್‌,ಅಧ್ಯಕ್ಷರು : ಬಿಲ್ಲವರ ಸೇವಾ ಸಂಘ ಚಿಂಚಾÌಡ್‌

ಸಹಕಾರಿ ವಲಯದಲ್ಲಿ ಸರ್ವೋನ್ನತ ಸ್ಥಾನವನ್ನು ಅಲಂಕರಿ ಸುತ್ತಿರುವ ಭಾರತ್‌ ಬ್ಯಾಂಕ್‌ ಇನ್ನಷ್ಟು ಶಾಖೆ ಗಳೊಂದಿಗೆ ವಿರಾಜ ಮಾನವಾಗಲಿ. ಇಲ್ಲಿನ ಮೊದಲ ಶಾಖೆಯೂ ಉತ್ತಮ ವಾಗಿತ್ತು. ಈ ಶಾಖೆ ಯು ವಾಸ್ತುಯುತವಾಗಿ ಇನ್ನಷ್ಟು ಯಶ ಕಾಣಲಿ. 
ಮಹೇಶ್‌ ಹೆಗ್ಡೆ ಕಟ್ಟಿಂಗೇರಿ,ಅಧ್ಯಕ್ಷರು , ಪಿಂಪ್ರಿ-ಚಿಂಚಾÌಡ್‌ ಬಂಟ್ಸ್‌ ಸಂಘ

ನಾನು ಕಳೆದ 37 ವರ್ಷಗಳಿಂದ ಈ ಬ್ಯಾಂಕ್‌ನೊಂದಿಗೆ ವ್ಯವ ಹರಿಸುತ್ತಿದ್ದೇನೆ. ಶಾಖೆಯ ಮೊದಲ ದಿನದಿಂದ ವ್ಯವಹಾರಿಸಿ ಮನ ಮತ್ತು ಹಣ ಸಮೃದ್ಧಿ ಪಡೆದ ಗ್ರಾಹಕನಾಗಿದ್ದೇನೆ. ಬ್ಯಾಂಕಿನ ಸಿಬಂದಿ ಗಳ ಸಹಕಾರ ಮನೋಭಾವ ಇತರರಿಗೆ ಮಾದರಿಯಾಗಿದೆ 
ಇಂದು ರಾವ್‌ ಮೋಹಿತೆ ,
ಸ್ಥಳೀಯ ಉದ್ಯಮಿ

ಗಿಡವಾಗಿದ್ದ ಭಾರತ್‌ ಬ್ಯಾಂಕ್‌ ಸದ್ಯ ಮರವಾಗಿ ಬೆಳೆದಿದೆ. ಗ್ರಾಹಕರಿಗೆ ಫಲದಾಯಕ ಆರ್ಥಿಕ ಸೇವೆ ಯ ನೆರಳನ್ನು ನೀಡಿದ ಕೀರ್ತಿ ಈ ಬ್ಯಾಂಕ್‌ಗೆ ಇದೆ. ಭಾರತ್‌ ಬ್ಯಾಂಕ್‌ ದೇಶವ್ಯಾಪಿಯಾಗಿ ಶಾಖೆಗಳನ್ನು ತೆರೆದು ಪ್ರತಿಷ್ಠಿತ ಬ್ಯಾಂಕ್‌ ಆಗಿ ಕಂಗೊಳಿಸಲಿ   
ಸಂಜಯ್‌,ಶಿವಸೇನಾ ನೇತಾರ

ವರ್ಲ್ಡ್ ಬ್ಯಾಂಕ್‌ ಸದಸ್ಯತ್ವ ಪಡೆಯುವ ಅರ್ಹತೆ ಈ ಬ್ಯಾಂಕ್‌ಗಿದೆ. ಆ ಕನಸು ಶೀಘ್ರದಲ್ಲೇ ನೆರ ವೇರಲಿ. ಸ್ಥಳಾಂತರಿತ ಶಾಖೆಯು ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿಯ ಪಥದತ್ತ ಸಾಗಲಿ 
ನ್ಯಾಯವಾದಿ ಅಪ್ಪು ಮೂಲ್ಯ , 
ಸ್ಥಳೀಯ ಸಮಾಜ ಸೇವಕರು

ಚಿತ್ರ- ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.