ಭವಾನಿ ಫೌಂಡೇಶನ್‌ ಮುಂಬಯಿ : ತೃತೀಯ ವಾರ್ಷಿಕ ರಕ್ತದಾನ ಶಿಬಿರ


Team Udayavani, Apr 1, 2018, 3:01 PM IST

3103mum04a.jpg

ಮುಂಬಯಿ: ಭವಾನಿ ಫೌಂಡೇಶನ್‌ ನವಿ ಮುಂಬಯಿ ಸಂಸ್ಥೆಯು ಫೋರ್ಟಿಸ್‌ ಹಾಸ್ಟಿಟಲ್‌ ಮುಂಬಯಿ ಸಹಯೋಗದೊಂದಿಗೆ ತೃತೀಯ ವಾರ್ಷಿಕ ರಕ್ತದಾನ ಶಿಬಿರವು ಮಾ. 31ರಂದು  ಪೂರ್ವಾಹ್ನ ನವಿ ಮುಂಬಯೀ  ಸಿಬಿಡಿ ಬೇಲಾಪುರದ ಟೈಮ್ಸ್‌ ಸ್ಕ್ವೇರ್‌ನ ಸಭಾಗೃಹದಲ್ಲಿ ನಡೆಯಿತು.

ಭವಾನಿ ಶಿಪ್ಪಿಂಗ್‌ ಸರ್ವಿಸಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ‌ ಆಡಳಿತ ನಿರ್ದೇಶಕ ಹಾಗೂ ಭವಾನಿ ಫೌಂಡೇಶನ್‌ನ ಸಂಸ್ಥಾಪಕಾಧ್ಯಕ್ಷ‌ ದಡªಂಗಡಿ ಚೆಲ್ಲಡ್ಕ ಕುಸುಮೋದ‌ರ ದೇರಣ್ಣ ಶೆಟ್ಟಿ (ಕೆ. ಡಿ. ಶೆಟ್ಟಿ) ಅಧ್ಯಕ್ಷತೆಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಎನ್‌. ಎಸ್‌. ಲಾಜಿಸ್ಟಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ‌ ಆಡಳಿತ ನಿರ್ದೇಶಕ ಸಂತೋಷ್‌ ಶೆಟ್ಟಿ ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಅತಿಥಿ-ಗಣ್ಯರುಗಳಾಗಿ ಉದ್ಯಮಿ ರಾಘವ ರೈ, ಸಮಾಜ ಸೇವಕರುಗಳಾದ ಮುರಳೀಧರ್‌ ಪಾಲ್ವೆ ಭಿಲವಲೆ, ಭವಾನಿ ಫೌಂಡೇಶನ್‌ನ ಕಾರ್ಯಕಾರಿ ಸಮಿತಿಯ ಸದಸ್ಯ ಪಂಡಿತ್‌ ನ‌ವೀನ್‌ಚಂದ್ರ ಆರ್‌. ಸನೀಲ್‌, ಫೋರ್ಟಿಸ್‌ ಹಾಸ್ಟಿಟಲ್‌ನ ವೈದ್ಯಾಧಿಕಾರಿ ಡಾ| ಪ್ರದ್ಯಾ ಕರಾಟ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಧುನಿಕ ಯಾಂತ್ರಿಕ ಜೀವನದಲ್ಲಿ ಆರೋಗ್ಯದ ಕಾಳಜಿ ಮರೆಯಾಗುತ್ತಿದೆ. ನಿರ್ಲಕ್ಷ ಮತ್ತು ಅವಸರ ಪವೃತ್ತಿಯ ಜೀವನ ಐಲಿ ಶೈಲಿ ಅನಾರೋಗ್ಯಕ್ಕೆ ಕಾರಣವಾಗಿದೆ. ಆದುದರಿಂದ ಮಾನವನು ಪ್ರಕೃತಿಸಯ್ಯ ಜೀವನಕ್ಕೆ ಸ್ಪಂದಿಸುವ ಅಗತ್ಯವಿದೆ. ನಾವು ಆರೋಗ್ಯ ದಾಯಕರಾಗಿದ್ದರೆ ಮಾತ್ರ ಮತ್ತೂಬ್ಬರಿಗೆ ಜೀವದಾನ ನೀಡಲು ಸಾಧ್ಯ. ಆರೋಗ್ಯವಾಗಿದ್ದರೆ ಮಾತ್ರ ಮತ್ತೂಬ್ಬರ ಜೀವದಾನಕ್ಕೆ ರಕ್ತದಾನ ನೀಡಬಹುದು. ರಕ್ತದಾನ ಶಿಬಿರ ಸ್ವಸ್ಥ ಸಮಾಜಕ್ಕೆ ವರದಾನವಾಗಿದ್ದು, ರಕ್ತದಾನ ಮಾನವ ಪುನರುಜ್ಜೀವನಕ್ಕೆ ಪೂರಕವೂ ಹೌದು. ಇಂತಹ ವಿವಿಧ ಸೇವೆಗಳ ದಾನಕ್ಕೆ ಭವಾನಿ ಫೌಂಡೇಶನ್‌ನ ಸೇವೆ ಅನು ಪಮವೆಣಿಸಿದೆ ಎಂದು ಸಂತೋಷ್‌ ಶೆಟ್ಟಿ ಭವಾನಿ ಫೌಂಡೇ ಶನ್‌ನ ಸ್ವಸ್ಥ ಸಮಾಜದ ಕಾಳಜಿಯನ್ನು ಪ್ರಶಂಸಿಸಿದರು.

ಭವಾನಿ ಫೌಂಡೇಶನ್‌ನ ಸಂಸ್ಥಾಪಕಾಧ್ಯಕ್ಷ‌ ಕೆ. ಡಿ. ಶೆಟ್ಟಿ ಇವರು ಮಾತನಾಡಿ,  ನನ್ನ ಮಾತೆಯ ಅನುಗ್ರಹದಿಂದ ಇಂತಹ ಸಮಾಜ ಸೇವೆ ಸಾಧ್ಯವಾಗುತ್ತಿ¤ದೆ. ಜನನಿದಾತೆಯ ಕನಸು ಸೇವೆಯ ಮೂಲಕ ನನಸಾಗುತ್ತಿದೆ. ಸ್ವಸ್ಥ ಮತ್ತು ಸುಶಿಕ್ಷಿತ ಸಮಾಜದ ಆಶಯ ಭವಾನಿ ಫೌಂಡೇಶನ್‌ ಸಂಸ್ಥೆಯದ್ದಾಗಿದೆ. ಮಾನವ ಜೀವನ ಸಾರ್ಥಕತೆಯ ಸಾಧನಗಳಲ್ಲಿ ದಾನ ಅತಿ ಶ್ರೇಷ್ಠ ಸ್ಥಾನ ಪಡೆದಿದೆ. ಇಂತಹ ದಾನಗಳಿಗೆ ಹಲವು ರೂಪಗಳಿವೆ. ವಿವಿಧ ಪ್ರಕಾರಗಳನ್ನು ದಾನ ರೂಪದಲ್ಲಿ ಕಾಣಬಹುದು.  ನಿರಾಪೇಕ್ಷ ಮನೋ ಬುದ್ಧಿಯಿಂದ ಏನನ್ನಾದರೂ ಕೊಡುವುದೇ ದಾನದ ಗೂಡಾರ್ಥ. ಇದನ್ನೇ ಮಾದರಿಯನ್ನಾಗಿಸಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇವೆ. ಸಮಾಜ ಕಳಕಳಿ ಪ್ರತಿಯೋರ್ವನದ್ದಾಗ‌ಬೇಕು ಎನ್ನುವುದನ್ನು ಮನವರಿಕೆ ಮಾಡಬೇಕು ಅನ್ನುವುದೇ ನಮ್ಮ ಸದಾಶಯ. ಬಂಟ್ಸ್‌ ಸಂಘ ಮುಂಬಯಿ ನನಗೆ ಸೇವೆಗೆ ನೀಡಿದ ಪ್ರೋತ್ಸಾಹ, ಅವಕಾಶದ ಪರಿಣಾಮವಾಗಿ ನಾನು ಇಂತಹ ಸಾಧನೆಯನ್ನು ಯೋಚಿಸಲು ಸಾಧ್ಯವಾಗಿದೆ. ಭವಾನಿ ಪರಿವಾರ, ಪದಾಧಿಕಾರಿ, ಸದಸ್ಯರ ಸಹಯೋಗದಿಂದ ಸಂಸ್ಥೆ ಸೇವೆಗೆ ಮತ್ತಷ್ಟು ಉತ್ಸುಕವಾಗಿದೆ. ಸಾಧು ಸಂತರ ಮರಾಠಿ ಭೂಮಿಯಲ್ಲಿನ ಸೇವೆಯ ಫಲ ಎಂದೂ  ಮರೆಯಲಾಗದು. ಸೇವಾಕರ್ತರಿಗೆ ಸದಾ ಪ್ರತಿಫಲಿಸಬಲ್ಲದು. ಆದ್ದರಿಂದ ಸೇವಾ ಮುನ್ನಡೆಗೆ ಎಲ್ಲರ ಪ್ರೀತಿ ಸದಾ ನಮ್ಮಮೇಲಿದ್ದರೆ ಸಾಕು. ಅವಾಗಲೇ ನಮ್ಮ ಶ್ರಮ ಫಲದಾಯಕವಾಗ ಬಲ್ಲದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಫೋರ್ಟಿಸ್‌ ಹಾಸ್ಟಿಟಲ್‌ನ ರಕ್ತ ಸಂಗಹಣ ವಿಭಾಗೀಯ ಮುಖ್ಯಸ್ಥೆ ಶ್ರದ್ಧಾ ಖುಪ್‌ಕರ್‌, ಸಕಾಲ್‌ ಮೀಡಿಯಾ ಸಮೂಹದ ಉಪ ಮಹಾ ಪ್ರಬಂಧಕ ದಿನೇಶ್‌ ಎಸ್‌. ಶೆಟ್ಟಿ ಪಡುಬಿದ್ರೆ, ಸಮಾಜ ಸೇವಕ ಸಂಜಯ್‌ ಚವ್ಹಾಣ್‌ ಭಿಲವಲೆ, ಫೌಂಡೇಶನ್‌ನ   ವಿಶ್ವಸ್ತ ಸದಸ್ಯರು ಸರಿತಾ ಕುಸುಮೋದರ್‌ ಶೆಟ್ಟಿ, ಅಂಕಿತಾ ಜೆ. ಶೆಟ್ಟಿ, ಕೋಶಾಧಿಕಾರಿ ಚೈತಾಲಿ ಪೂಜಾರಿ,   ಕಾರ್ಯಕಾರಿ ಸಮಿತಿಯ ಸದಸ್ಯ ಪ್ರೇಮನಾಥ ಬಿ. ಶೆಟ್ಟಿ ಮುಂಡ್ಕೂರು ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ಥಾನೀಯ ಅನೇಕ ಸಂಸ್ಥೆಗಳ ಪದಾಧಿಕಾರಿಗಳು, ಭವಾನಿ ಶಿಪ್ಪಿಂಗ್‌ ಸರ್ವಿಸಸ್‌ ಸಂಸ್ಥೆಯ ಉನ್ನತಾಧಿಕಾರಿಗಳು, ಸಿಬ್ಬಂದಿಗಳು, ಶೆಟ್ಟಿ ಪರಿವಾರದ ಬಂಧು-ಮಿತ್ರರು, ಹಿತ ಚಿಂತಕರು ಸಹಿತ ನೂರಾರು ಮಂದಿ ಭಾಗವಹಿಸಿ ರಕ್ತದಾನಗೈದರು. ಫೋರ್ಟಿಸ್‌ ಆಸ್ಪತ್ರೆಯ ಸಂಜಯ್‌ ಚೌವ್ಹಾಣ್‌, ಮುರಳೀಧರ್‌ ಪಾಲ್ವೆ, ಎನ್‌. ಎಲ್‌. ಲಾಜಿಸ್ಟಿಕ್‌ ಕಾರ್ಯಾಧ್ಯಕ್ಷ ಸಂತೋಷ್‌ ಶೆಟ್ಟಿ, ಸುನೀಲ್‌ ಪಾಗೋರೆ, ರಮೇಶ್ವರ ರಾಜ್‌ಪುತ್‌, ಸುಚೀಂತ್ರ ದುರ್ಗುಡೆ, ಜಗಯ್‌ ಪಡ್ವಾಲೆ, ಅಜಯ್‌ ಸೂರಿ, ಎಸ್‌.ರಾಜಶ್ರೀ, ಆರ್‌. ಶಿಲ್ಪಾ, ಕೆ. ಅಶ್ವಿ‌ನಿ ರಕ್ತ ಸಂಗ್ರಹಕ್ಕೆ ಸಹಕರಿಸಿದರು.

ಫೌಂಡೇಶನ್‌ನ ಉಪಾಧ್ಯಕ್ಷ ಜೀಕ್ಷಿತ್‌ ಕುಸುಮೋದರ್‌ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಗೌರವ  ಪ್ರಧಾನ  ಕಾರ್ಯದರ್ಶಿ ರಾಜಲಕ್ಷ್ಮೀ ಸುಬ್ರಹ್ಮಣ್ಯಂ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕೋಶಾಧಿಕಾರಿ ನವೀನ್‌ ಸಂಜೀವ್‌ ಶೆಟ್ಟಿ, ರೊನಾಲ್ಡ್‌ ಥೋಮಸ್‌ ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು  ಗೌರವಿಸಿದರು. ಸೀಮಾ ಪವಾರ್‌ ಇವರು ವೈದ್ಯರ ತಂಡವನ್ನು ಪರಿಚಯಿಸಿ ವಂದಿಸಿದರು. 

ಚಿತ್ರ -ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.