ಭವಾನಿ ಫೌಂಡೇಶನ್ ಮುಂಬಯಿ ತೃತೀಯ ವಾರ್ಷಿಕ ಮಹಾಸಭೆ, ಸ್ನೇಹ ಮಿಲನ
Team Udayavani, Oct 5, 2018, 3:29 PM IST
ಮುಂಬಯಿ: ಭವಾನಿ ಪರಿವಾರದ ಶ್ರಮ ಮತ್ತು ಎಲ್ಲರ ಸಹಯೋಗದಿಂದ ಸಮಾ ಜೋದ್ಧಾರದ ಕನಸು ಫಲಿಸುತ್ತಿದೆ. ಸಾಮಾಜಿಕ ಕಳಕಳಿಯೆ ನಮ್ಮ ಧ್ಯೇಯೋದ್ದೇಶವಾಗಿದ್ದು, ಪ್ರಾಮಾಣಿಕ ಸೇವೆಗೆ ಬದ್ಧರಾಗಿ ಸದ್ಯ ಅಳಿಲ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸವಲತ್ತು ವಂಚಿತರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸೇವಾನಿರತರಾಗಿರುವ ನಾವು ಸೇವಾನಿಷ್ಠೆ ಮೂಲಕ ಅದನ್ನು ಸಾರ್ಥಕವಾಗಿಸುತ್ತಿದ್ದೇವೆ. ಬಹುಪಾಲು ದಾನ ಧರ್ಮವನ್ನು ತಿಳಿಯ ಪಡಿಸದೇ ಮುಂದಣ ಹೆಜ್ಜೆಯನ್ನಿಟ್ಟಿದ್ದೇವೆ. ಭವಾನಿ ಸಮೂಹದ ಉದ್ಯೋಗಸ್ಥ ಸಹೋ ದ್ಯೋಗಿಗಳ ಕೈಯಲ್ಲಾದ ವಂತಿಗೆ ನಮ್ಮ ಸೇವಾವೈಖರಿಗೆ ಮಹತ್ತರವಾದ ಬಲತುಂಬಿದ ಕಾರಣವೇ ಈ ಮಟ್ಟಕ್ಕೆ ಸಂಸ್ಥೆ ಬೆಳೆಯಲು ಸಾಧ್ಯವಾಗಿದೆ ಎಂದು ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕಾಧ್ಯಕ್ಷ ದಡªಂ ಗಡಿ ಚೆಲ್ಲಡ್ಕ ಕೆ. ಡಿ. ಶೆಟ್ಟಿ ಅವರು ನುಡಿದರು.
ಸರ್ವಧರ್ಮ ಸಮಾಭಾವದ ಸೇವೆಯೇ ನಮ್ಮ ಗುರಿಯಾಗಿದೆ. ಜಾತಿ, ಧರ್ಮ ಎನ್ನದೆ ಎಲ್ಲರ ಕಷ್ಟದಲ್ಲಿ ಭಾಗಿಯಾಗುವ ಮನೋ ಭಾವ ನಮ್ಮದಾಗಿದೆ. ಭವಿಷ್ಯತ್ತಿನಲ್ಲೂ ನಮ್ಮ ಸೇವೆಯನ್ನು ದೇಶ ವಿದೇಶಗಳಲ್ಲಿ ವಿಸ್ತರಿಸುವ ಆಶಯ ನಮ್ಮಲ್ಲಿದೆ ಎಂದರು.
ಅ.3 ರಂದು ಕುರ್ಲಾ ಪೂರ್ವ ಬಂಟರ ಸಂಘದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಜರಗಿದ ಭವಾನಿ ಫೌಂಡೇಶನ್ ಮುಂಬಯಿ ಇದರ ತೃತೀಯ ವಾರ್ಷಿಕ ಮಹಾಸಭೆ ಮತ್ತು ಸ್ನೇಹ ಸಮ್ಮಿಲನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯ ಸಮಾಜ ಸೇವೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಫೌಂಡೇಶನ್‌ನ ವಿಶ್ವಸ್ಥ ಸದಸ್ಯರಾದ ಸರಿತಾ ಕುಸುಮೋದರ್ ಶೆಟ್ಟಿ, ಉಪಾಧ್ಯಕ್ಷ ಜೀಕ್ಷಿತ್ ಕುಸುಮೋದರ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ನ್ಯಾಯವಾದಿ ಬಿ. ಮೊಯಿದ್ಧೀನ್ ಮುಂಡ್ಕೂರು, ಧರ್ಮಪಾಲ್ ಯು. ದೇವಾಡಿಗ, ಪಂಡಿತ್ ನವೀನ್‌ಚಂದ್ರ ಆರ್. ಸನೀಲ್, ಚೆಲ್ಲಡ್ಕ ರಾಧಾಕೃಷ್ಣ ಡಿ. ಶೆಟ್ಟಿ, ಚೆಲ್ಲಡ್ಕ ಪ್ರಕಾಶ್ ಡಿ. ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಂಟ್ಸ್ ನ್ಯಾಯ ಮಂಡಳಿ ಗೌರವಾಧ್ಯಕ್ಷ ಎಂ. ಡಿ. ಶೆಟ್ಟಿ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಹಿರಿಯ ಹೊಟೇಲ್ ಉದ್ಯಮಿಗಳಾದ ಸುಬ್ಬಯ್ಯ ವಿ. ಶೆಟ್ಟಿ, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕಡಬದ ಏಮ್ಸ್ ಫಸ್ಟ್ ಗ್ರೇಡ್ ಕಾಲೇಜ್‌ನ ವಿಶ್ವಸ್ಥ ಸದಸ್ಯೆ, ಅಧ್ಯಕ್ಷೆ ಫೌಜಿಯಾ ಬಿ. ಎಸ್., ಹೆಸರಾಂತ ವೈದ್ಯಾಧಿಕಾರಿ ಡಾ| ವಿಜಯ ಶೆಟ್ಟಿ, ಭವಾನಿ ಫೌಂಡೇಶನ್‌ನ ಆಡಳಿತ ಮಂಡಳಿ ಸದಸ್ಯರಾದ ರೋನ್ಸ್ ಬಂಟ್ವಾಳ್, ಪ್ರೇಮನಾಥ ಬಿ. ಶೆಟ್ಟಿ ಮುಂಡ್ಕೂರು, ಗೋಪಾಲಕೃಷ್ಣ ಕುಂದರ್ ಬಜ್ಪೆ, ಶಶಿಕಾಂತ್ ಠಾಕ್ರೆ, ಪಶುìರಾಮ್ ಪುಂಡಲಿಕ್ ತಸೊÕàಡೆ ಅವರನ್ನು ಗಣ್ಯರು ಸಮ್ಮಾನಿಸಿ ಅಭಿನಂದಿಸಿದರು.
ಬಂಟ್ಸ್ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ, ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯ ವಾದಿ ಸುಭಾಷ್ ಬಿ. ಶೆಟ್ಟಿ, ಬಂಟ್ಸ್ ನ್ಯಾಯ ಮಂಡಳಿ ಕಾರ್ಯಧ್ಯಕ್ಷ ರವೀಂದ್ರ ಎಂ. ಅರಸ, ಸಮಾಜ ಸೇವಕರಾದ ಎ. ಬಿ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಸೀತಾರಾಮ ಎಂ. ಶೆಟ್ಟಿ ಕೊಲಬಾ, ಪತ್ರಕರ್ತ ಚಂದ್ರಶೇಖರ್ ಪಾಲೆತ್ತಾಡಿ, ಸುಧಾಕರ್ ಎಸ್. ಹೆಗ್ಡೆ ಅವರು ಸಂದಭೋìಚಿವಾಗಿ ಮಾತನಾಡಿದರು. ಕು| ಫೌಜಿಯಾ, ಡಾ| ವಿಜಯ ಶೆಟ್ಟಿ, ಗೋಪಾಲ ಕೃಷ್ಣ ಕುಂದರ್ ಮತ್ತು ಶಶಿಕಾಂತ್ ಠಾಕ್ರೆ ಸಮ್ಮಾನಕ್ಕೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಹೊಟೇಲ್ ಉದ್ಯಮಿ ರಘುರಾಮ ಕೆ. ಶೆಟ್ಟಿ ಬೋಳ, ಬಂಟ್ಸ್ ಸಂಘ ಮುಂಬಯಿ ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾ ಆರ್. ಶೆಟ್ಟಿ, ಸಮಾಜ ಸೇವಕರಾದ ಪ್ರಭಾಕರ ಎಲ್. ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಶಾಂತರಾಮ ಬಿ. ಶೆಟ್ಟಿ, ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಸಿಎ ಐ. ಆರ್. ಶೆಟ್ಟಿ, ಬಿ. ಆರ್. ಶೆಟ್ಟಿ, ಬೊಳ್ನಾಡು ಚಂದ್ರಹಾಸ ರೈ, ಎಸ್. ಬಿ. ಶೆಟ್ಟಿ ಮುಲುಂಡ್, ಕುತ್ಪಾಡಿ ರಾಮಚಂದ್ರ ಆರ್. ಗಾಣಿಗ, ಚಂದ್ರಶೇಖರ್ ಆರ್. ಬೆಳ್ಚಡ, ದೇವದಾಸ್ ಎಲ್. ಕುಲಾಲ್, ಸಿಎ ಹರೀಶ್ ಶೆಟ್ಟಿ, ನಂದಿಕೂರು ಜಗದೀಶ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಪುಣೆ, ರಾಘು ಪಿ. ಶೆಟ್ಟಿ, ರವಿ ಎಸ್.ದೇವಾಡಿಗ, ಅಶೋಕ್ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಭಾಸ್ಕರ್ ಶೆಟ್ಟಿ ಸಿಬಿಡಿ, ಮನೋರಮಾ ಎನ್. ಬಿ. ಶೆಟ್ಟಿ, ಕಿಶೋರ್‌ಕುಮಾರ್ ಶೆಟ್ಟಿ ಕುತ್ಯಾರು, ತಾಳಿಪಾಡಿಗುತ್ತು ಭಾಸ್ಕರ್ ಶೆಟ್ಟಿ, ದಯಾನಂದ ಶೆಟ್ಟಿ, ಗಿರೀಶ್ ಸಾಲ್ಯಾನ್, ಜಯಂತ್ ಪಕ್ಕಳ, ಎಂ. ಬಿ ವಿಠಲ್ ರೈ, ಇದ್ರಾಳಿ ದಿವಾಕರ ಶೆಟ್ಟಿ, ವಾರಂಗ ಪ್ರವೀಣ್ ಎಸ್. ಶೆಟ್ಟಿ, ಫೌಂಡೇಶನ್‌ನ ಜತೆ ಕೋಶಾಧಿಕಾರಿಗಳಾದ ಅಂಕಿತಾ ಜೆ. ಶೆಟ್ಟಿ ಮತ್ತು ನವೀನ್ ಎಸ್. ಶೆಟ್ಟಿ, ಸದಸ್ಯರಾದ ದಿನೇಶ್ ಎಸ್. ಶೆಟ್ಟಿ ಮಣಿಪುರ ಸಕಾಲ್, ಮುರಳೀಧರ್ ವಿ. ಪಾಲ್ವೆ, ರಾಜಲಕ್ಷಿ¾à ಸುಬ್ರಹ್ಮಣ್ಯಂ, ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉನ್ನತಾಧಿಕಾರಿಗಳು, ವಿಧದ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಮಾತೆ ಕಟಿಲೇಶ್ವರಿಯನ್ನು ಸ್ತುತಿಸಿ, ಸ್ವರ್ಗೀಯ ಚೆಲ್ಲಡ್ಕ ದೇರಣ್ಣ ಶೆಟ್ಟಿ ಮತ್ತು ಭವಾನಿ ಡಿ. ಶೆಟ್ಟಿ ಅವರನ್ನು ಸ್ಮರಿಸಿ ಭಾವಚಿತ್ರಕ್ಕೆ ಪುಷ್ಪಾಂಜಲಿಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹೇಮಲತಾ ಶೆಟ್ಟಿ ಪ್ರಾರ್ಥನೆಗೈದರು. ಉಪಾಧ್ಯಕ್ಷ ಜೀಕ್ಷಿತ್ ಕುಸುಮೋದರ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವ ನೆಗೈದರು. ಸ್ಲೆ$çಡ್ ಶೋ ಮೂಲಕ ಭವಾನಿ ಸಮೂಹದ ಮತ್ತು ಫೌಂಡೇಶನ್‌ನ ಸೇವಾ ಮಾಹಿತಿ ನೀಡಲಾಯಿತು. ಮೊಯಿದ್ಧೀನ್ ಮುಂಡ್ಕೂರು ಮತ್ತು ಧರ್ಮಪಾಲ್ ದೇವಾಡಿಗ ಫೌಂಡೇಶನ್‌ನ ಅನುಪಮ ಸೇವೆ, ಕಾರ್ಯನಿಷ್ಠೆ ಮತ್ತು ಸೇವಾ ವೈಖರಿಯನ್ನು ಸ್ಥೂಲವಾಗಿ ತಿಳಿಸಿದರು.
ಫೌಂಡೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಸೀಮಾ ಪವಾರ್, ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಜತೆ ಕೋಶಾಧಿಕಾರಿ ಚೈತಾಲಿ ಪೂಜಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರಣೀಲ್ ವಿವಾಲೆ ಸಮ್ಮಾನಿತರನ್ನು ಪರಿಚಯಿಸಿದರು. ವಿಶೇಷ ಆಮಂತ್ರಿತರಾಗಿ ಉಪಸ್ಥಿತ ಗಣ್ಯರೆಲ್ಲರನ್ನೂ ಕೆ. ಡಿ. ಶೆಟ್ಟಿ ಮತ್ತು ಟ್ರಸ್ಟಿಗಳು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಪಕ್ಕಳ ಅತಿಥಿ-ಗಣ್ಯರನ್ನು ಪರಿಚಯಿಸಿ ವಂದಿಸಿದರು.
ಕೆ. ಡಿ. ಶೆಟ್ಟಿ ಮತ್ತು ನನ್ನ ಪರಿಚಯ ತುಂಬಾ ಹಳೆಯದ್ದಾಗಿದೆ. ಒಂದು ಸಮಯದಲ್ಲಿ ನಾವಿಬ್ಬರೂ ಜೊತೆಗೆ ಇದ್ದವರು. ಆದರೆ ಇವರು ಎಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂಬುದನ್ನು ಅರಿಯಲಿಲ್ಲ. ನನ್ನ ಹುಡುಗ ಇವತ್ತು ಇಂತಹ ಸಾಧನೆಯ ಶಿಖರವನ್ನೇರಿರು ವುದನ್ನು ಕಂಡು ತುಂಬಾ ಹೆಮ್ಮೆಯಾಗುತ್ತಿದೆ. ಸಂಸ್ಥೆಯು ಇನ್ನಷ್ಟು ಸಾಧನೆಗಳನ್ನು ಮಾಡಿ ದೀನ ದಲಿತರ ಆಶಾಕಿರಣವಾಗಲಿ.
-ಎಂ. ಡಿ. ಶೆಟ್ಟಿ, ಗೌರವಾಧ್ಯಕ್ಷರು,
ಬಂಟ್ಸ್ ನ್ಯಾಯ ಮಂಡಳಿ ಮುಂಬಯಿ
ಕೆ. ಡಿ. ಶೆಟ್ಟಿ ಪರಿವಾರದ ಸಮಾಜ ಸೇವೆ ಅನುಪಮ ಮತ್ತು ಅನುಕರಣೀಯವಾಗಿದೆ. ಇವರ ಸೇವಾ ಮನೋಭಾವದ ಮನಸ್ಸಿನ ಸಂಪತ್ತೆ ಶ್ರೇಷ್ಠವಾದುದು. ನಮ್ಮಲ್ಲಿನ ಪ್ರತಿಯೋರ್ವರು ಹುಟ್ಟೂರಿನಿಂದ ಬದುಕು ಅರಸಿ ಬರಿಗೈಯಲ್ಲಿ ಮುಂಬಯಿಗೆ ಬಂದವರು. ಈ ಮುಂಬಯಿ ಕೂಡ ನಮ್ಮೆಲ್ಲರಿಗೆ ಗೌರವ, ಸಂಪತ್ತು ಮತ್ತು ಅಸ್ತಿತ್ವ ನೀಡಿದೆ. ಎಲ್ಲವುದಕ್ಕೂ ದೇವರ ಅನುಗ್ರಹವೇ ಮೂಲತ್ವವಾಗಿದೆ.
-ಐಕಳ ಹರೀಶ್ ಶೆಟ್ಟಿ,
ಅಧ್ಯಕ್ಷರು,ಜಾಗತಿಕ ಬಂಟರ ಸಂಘಗಳ ಒಕ್ಕೂಟ
ನಮ್ಮ ಪಾಲಿಗೆ ಇಂತಹ ಅಣ್ಣನಿಗಿಂತ ಮಿಗಿಲಾದವರು ಮತ್ತೂಬ್ಬರಿಲ್ಲ. ಅವರೇ ನಮ್ಮೆಲ್ಲರ ಸರ್ವಸ್ವ. ನನ್ನ ಪಾಲಿಗೆ ಏನಾದರೂ ಸಮ್ಮಾನ, ಗೌರವಗಳು ಲಭಿಸಿದ್ದಲ್ಲಿ ಅದು ಅಣ್ಣನ ದಯೆ ಮತ್ತು ಎಲ್ಲವೂ ಅವರಿಗೆ ಸಲ್ಲುತ್ತದೆ. ಅವರ ಹೆಸರಿನಿಂದ ಗುರುತಿಸಲ್ಪಡುವ ನಾವು ಇಂತಹ ಅಣ್ಣನನ್ನು ಪಡೆದ ಭಾಗ್ಯವಂತರು.
-ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ ,ವಿಶ್ವಸ್ತ ಸದಸ್ಯರು,ಭವಾನಿ ಫೌಂಡೇಷನ್ ಮುಂಬಯಿ
ಚಿತ್ರ-ವರದಿ:ರೊನಿಡಾ,ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.