ಭವಾನಿ ಫೌಂಡೇಶನ್ ಮುಂಬಯಿ ವಾರ್ಷಿಕ ಮಹಾಸಭೆ
Team Udayavani, Jan 6, 2018, 4:49 PM IST
ಮುಂಬಯಿ: ನಮ್ಮ ಜನ್ಮ ಕರ್ನಾಟಕದಲ್ಲಾ ದರೂ ನಮ್ಮ ಜೀವನ ಮಹಾರಾಷ್ಟ್ರದಲ್ಲಿ ಪಾವನವಾ ಗಿದೆ. ಬರೇ ರೊಟ್ಟಿಯನ್ನೇ ಪ್ರಸಾದವಾಗಿ ತಿಂದು ದೊಡ್ಡವನಾದ ನನಗೆ ಧೈರ್ಯ ತುಂಬಿದವರೇ ನನ್ನ ಜನನಿದಾತೆ. ಸೇವೆಯಿಂದ ಸ್ವರ್ಗ ಕಾಣಲು ಪ್ರೇರೇಪಿಸುತ್ತ ಒಳ್ಳೆಯ ಸಂಸ್ಕಾರ ನೀಡಿದ ಮಾತೆಗೆ ಋಣಿಯಾಗಿ ಅವರನ್ನು ಸದಾ ಸ್ಮರಣೀಯವಾಗಿಸಲು ನಮ್ಮ ಸೇವೆಯನ್ನು ಮಾತೃ ನಾಮದಲ್ಲೇ ಭವಾನಿ ಫೌಂಡೇಶನ್ ಹುಟ್ಟುಹಾಕಿದ್ದೇವೆ. ಸ್ವರ್ಗ ಪ್ರಾಪ್ತಿಗೆ ಜನಸೇವೆಯೇ ಸನ್ಮಾರ್ಗವಾಗಿದೆ ಎನ್ನುವುದು ನನ್ನ ಅಭಿಮತ. ಆದ್ದರಿಂದ ರಾಷ್ಟ್ರಭೂಮಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ಎಂದೂ ತೋರ್ಪಡೆಗೆ ಸೇವೆ ಮಾಡಲಾರದು. ಇದೇನಿದ್ದರೂ ಎಲ್ಲವೂ ಮಾತೆಯ ಕೃಪೆಯಾಗಿದೆ. ಇದು ನಮ್ಮ ಆರಂಭ ಅಷ್ಟೇ. ಮಾಡಬೇಕಾದ ಸೇವೆ ಬಹಳಷ್ಟಿದೆ ಎಂದು ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ದಡªಂಗಡಿ ಚೆಲ್ಲಡ್ಕ ಕುಸುಮೋಧರ ದೇರಣ್ಣ ಶೆಟ್ಟಿ (ಕೆ.ಡಿ. ಶೆಟ್ಟಿ) ನುಡಿದರು.
ಜ. 4ರಂದು ಕುರ್ಲಾ ಪೂರ್ವದ ಬಂಟರ ಸಂಘದ ರಂಜನಿ ಸುಧಾಕರ್ ಎಸ್. ಹೆಗ್ಡೆ ಅನೆಕ್ಸ್ ಕಟ್ಟಡದ ವಿಜಯಲಕ್ಷ್ಮೀ ಮಹೇಶ್ ಶೆಟ್ಟಿ ಬಾಬಾ ಗ್ರೂಪ್ ಕಿರು ಸಭಾಗೃಹದಲ್ಲಿ ನಡೆಸಲ್ಪಟ್ಟ ಫೌಂಡೇಶನ್‌ನ ದ್ವಿತೀಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಸ್ತ ಮಂಡಳಿಯ ಸಹಕಾರ ಅತ್ಯಮೂಲ್ಯವಾಗಿದೆ. ವಿನೂತನ ತಾಕತ್ತು ದುರ್ಬಳಕೆ ಆಗಬಾರದು. ಜೀವಜ್ಞಾನ್ ಮಹಾರಾಷ್ಟ್ರದ್ದು, ತಮ್ಮೆಲ್ಲರ ಸಹಯೋಗ, ಅನುಗ್ರಹ ಬೇಕಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ನನ್ನ ಸೇವೆಗೆ ಮುನ್ನುಡಿಯಾಗಿದೆ. ಲೆಕ್ಕ ಪತ್ರ ಸರಿ ಇದ್ದರೆ ಎಲ್ಲವೂ ಸರಿಯಿದ್ದಂತೆ. ಲೆಕ್ಕವು ಬೆನ್ನುಮೂಳೆಯಿದ್ದಂತೆ. ಆವಾಗಲೇ ಸಂಸ್ಥೆಗಳ ಮುನ್ನಡೆ ಸುಲಲಿತವಾಗುತ್ತದೆ ಎಂದು ನುಡಿದು ತನ್ನನ್ನು ಇಷ್ಟೆತ್ತರಕ್ಕೆ ಬೆಳೆಸಿ ಬಾಳಿಗೆ ಪ್ರೇರಕರಾದ ಶಿಕ್ಷಕರು, ಬಂಧು-ಹಿತೈಷಿಗಳ ಸಹಯೋಗವನ್ನು ಸ್ಮರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಫೌಂಡೇಶನ್‌ನ ವಿಶ್ವಸ್ತ ಸದಸ್ಯರುಗಳಾದ ಸರಿತಾ ಕುಸುಮೋಧರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಪಂಡಿತ್ ನವೀನ್‌ಚಂದ್ರ ಆರ್. ಸನೀಲ್, ಚೆಲ್ಲಡ್ಕ ರಾಧಾಕೃಷ್ಣ ಡಿ. ಶೆಟ್ಟಿ ವೇದಿಕೆಯಲ್ಲಿದ್ದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ದೀಪ ಪ್ರಜ್ವಲಿಸಿ ಸಭೆಗೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಹರೀಶ್ ಮತ್ತು ಸುಪುತ್ರಿ ಸನ್ನಿಧಿ ಶೆಟ್ಟಿ, ಬಂಟ್ಸ್ ನ್ಯಾಯ ಮಂಡಳಿ ಕಾರ್ಯಾಧ್ಯಕ್ಷ ರವೀಂದ್ರ ಎಂ. ಅರಸ, ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಡಾ| ಭಾಸ್ಕರ್ ಶೆಟ್ಟಿ ಮೀರಾರೋಡ್, ಶಿಕ್ಷಕ ದಿನಕರ್ ಜಿ. ಕುಲಕರ್ಣಿ ಮತ್ತು ಶಾರದಾ ದಿನಕರ್ ದಂಪತಿ, ಬಂಟ ಸಮಾಜದ ಹಿರಿಯ ಮುತ್ಸದ್ದಿ ಎಂ. ಡಿ. ಶೆಟ್ಟಿ, ಫೌಂಡೇಶನ್‌ನ ಆಡಳಿತ ಮಂಡಳಿ ಸದಸ್ಯರಾದ ಧರ್ಮಪಾಲ್ ಯು. ದೇವಾಡಿಗ, ನ್ಯಾಯವಾದಿ ಬಿ. ಮೊಯಿದ್ದೀನ್ ಮುಂಡ್ಕೂರು ಮತ್ತು ಮುರಳೀಧರ್ ವಿಠಲ್ ಪಾಲ್ವೆ ಅವರನ್ನು ಸಮ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಬಿಲ್ಲವರ ಅಸೋಸಿಯೇಶನ್
ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು, ಇದೊಂದು ಭಾವನಾತ್ಮಕ ಬೆಸುಗೆಯ ರಚನಾತ್ಮಕ ಸಂಭ್ರಮವಾಗಿದೆ. ಸೇವೆಯ ಮುಖೇನ ಜನಾಕರ್ಷಿಸುವ ಈ ಸಂಸ್ಥೆಗೆ ಸೇವೆಯೇ ಪ್ರಸಿದ್ಧಿಯನ್ನು ನೀಡಿದೆ. ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಭವಾನಿ ಫೌಂಡೇಶನ್ ಮಾದರಿ ಎಂದೆಣಿಸಿದೆ ಎಂದು ನುಡಿದರು.
ಮತ್ತೋರ್ವ ಸಮ್ಮಾನಿತ ಡಾ| ಭಾಸ್ಕರ ಶೆಟ್ಟಿ ಮಾತನಾಡಿ, ನನಗೆ ತುಂಬಾ ಸಮ್ಮಾನಗಳು ಪ್ರಾಪ್ತಿಯಾಗಿವೆ. ಆದರೆ ಸಾಮಾಜಿಕ ಕಳಕಳಿಯುಳ್ಳ ಇಂತಹ ಫೌಂಡೇಶನ್‌ನಿಂದ ಗೌರವಿಸಲ್ಪಡುತ್ತಿರುವುದು ನನ್ನ ಭಾಗ್ಯ. ಸಮಾಜ ಸೇವೆಯು ಮನುಕುಲದ ದೊಡ್ಡ ಕೆಲಸ. ಇದನ್ನು ಕಡುಗ್ರಾಮೀಣ ಪ್ರದೇಶಕ್ಕೆ ತೆರಳಿ ಅದು ಕೂಡಾ ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು ಎಂದರೆ ಇದು ನೈಜ ರಾಷ್ಟ್ರಸೇವೆಯೇ ಸರಿ. ಒಬ್ಬರಿಗೆ ವಿದ್ಯೆ ನೀಡಿದರೆ ಇಡೀ ಸಮಾಜ ಸುಶಿಕ್ಷಿತವಾಗುವುದು ಎಂದರು. ಶಿಕ್ಷಕನಾಗಿ ವಿದ್ಯಾಭ್ಯಾಸ ಕಲಿಸಿದ ನನಗೆ ಗುರು ಸ್ಥಾನದಲ್ಲಿರಿಸಿ ಶಿಷ್ಯನೋರ್ವನಿಂದ ಗೌರವಿಸಲ್ಪಡುವುದು ಅತೀವ ಅಭಿಮಾನ ತಂದಿದೆ. ಇದು ಗುರುಶಿಷ್ಯರ ಮರೆಯಲಾಗದ ಅನುಬಂಧವೇ ಸರಿ. ಇವರೋರ್ವ ಕುತೂಹಲಕಾರಿ ಕಾಯಕವುಳ್ಳವರು. ಸಮಾಜಕ್ಕೆ ಉಪಕಾರವಾಗುವಂಥ ಇಂತಹ ವ್ಯಕ್ತಿಗಳು ಹೆಚ್ಚಾಗಬೇಕು. ಇಂತಹ ವಿದ್ಯಾರ್ಥಿಗಳು ರಾಷ್ಟ್ರಕ್ಕೆ ಮಾದರಿ ಎಂದು ಸಮ್ಮಾನ ಸ್ವೀಕರಿಸಿದ ಶಿಕ್ಷಕ ಡಿ.ಜಿ. ಕಲಕರ್ಣಿ ತಿಳಿಸಿದರು.
ಕೆ.ಡಿ. ಶೆಟ್ಟಿ ಅವರದ್ದು ಬಂಧುತ್ವದ ಪರಿವಾರ. ಮುಂಬಯಿಗರಲ್ಲಿ ದೊಡ್ಡ ಮನಸ್ಸಿದೆ. ಅದರಲ್ಲೂ ಮರಾಠಿಗರು ನೀಡಿದ ಸೇವೆಗೆ ಸದಾ ಪ್ರಸನ್ನರಾಗಿರುತ್ತಾರೆ. ಮಾನವೀಯತೆಯನ್ನೇ ಬಂಡ ವಾಳವಾಗಿರಿಸಿ ಜನಸೇವೆಯಲ್ಲಿ ತೊಡಗಿಸಿರುವ ಕೆ.ಡಿ. ಶೆಟ್ಟಿ ಸಾರಥ್ಯದ ಭವಾನಿ ಫೌಂಡೇಶನ್ ಇನ್ನೂ ಜನಹಿತ ಸೇವೆ ಮಾಡುವ ಭಾಗ್ಯ ಭ್ರಮರಾಂಬಿಕೆ ಕರುಣಿಸಲಿ ಎಂದು ಸಂತೋಷ್ ಶೆಟ್ಟಿ ನೆರೂಲ್ ಶುಭಹಾರೈಸಿದರು.
ಮಹಾರಾಷ್ಟ್ರದ ಜನರ ಮನಸ್ಸು ದೊಡªದು. ಮರಾಠ ನೆಲೆಯಲ್ಲಿ ಕರ್ಮಭೂಮಿಯಾಗಿಸಿದ ಅವರ ಸೇವೆಯಿಂದ ನಮ್ಮವರ ಶ್ರೇಷ್ಠತ್ವ ಸಾಧ್ಯವಾಗಿದೆ. ಸೇವೆ ಎಂದೂ ನಿಸ್ವಾರ್ಥ ಮತ್ತು ನಿಷ್ಪಕ್ಷೀಯವಾಗಿದ್ದಲ್ಲಿ ಫಲದಾಯಕವಾಗುತ್ತದೆ ಎಂದು ಸಂತೋಷ ಶೆಟ್ಟಿ ಪನ್ವೇಲ್ ಅಭಿಪ್ರಾಯಿಸಿದರು.
ಕೆಡಿಎಸ್ ಅವರ ಸಾಮಾಜಿಕ ತುಡಿತ ಅತ್ಯದ್ಭುತ. ಅವರಲ್ಲಿನ ಸಮಾಜ ಉದ್ಧಾರ ಮನೋಭಾವ ನಿತ್ಯ ಕ್ರಿಯೆಯಾಗಿರುವುದು ಅಭಿಮಾನದ ವಿಚಾರ. ಅವರೆಲ್ಲಾ ಆಶಯ ಚಿಂತನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿ ಎಂದು ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ತಿಳಿಸಿದರು.
ಸಮ್ಮಾನಿತರಾದ ಮುರಳೀಧರ್ ವಿಠಲ್ ಪಾಲ್ವೆ, ಶಶಿಕಾಂತ್ ಠಾಕ್ರೆ ಮೊದಲಾದವರು ಮಾತನಾಡಿ ಶುಭಹಾರೈಸಿದರು. ಫೌಂಡೇಶನ್‌ನ ವಿಶ್ವಸ್ಥ ಸದಸ್ಯೆಯರಾದ ಅಂಕಿತಾ ಜೆ. ಶೆಟ್ಟಿ, ಜತೆ ಕೋಶಾಧಿಕಾರಿ ಕು| ಶಿಖಾ ಕುಸುಮೋಧರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಪ್ರೇಮನಾಥ ಬಿ. ಶೆಟ್ಟಿ ಮುಂಡ್ಕೂರು, ನವೀನ್ ಎಸ್. ಶೆಟ್ಟಿ, ತಸೊÏಡೆ ಪರ್ಸುರಾಮ್, ಶಶಿಕಾಂತ್ ಠಾಕ್ರೆ, ಸಿಎ ಎಸ್. ಸುಬ್ರಹ್ಮಣ್ಯಂ, ಫೌಂಡೇಶನ್‌ನ ಮಾತೃ ಸಂಸ್ಥೆಯಾದ ಭವಾನಿ ಶಿಪ್ಪಿಂಗ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉನ್ನತಾಧಿಕಾರಿಗಳು, ಉದ್ಯೋಗಸ್ಥ ಮಂಡಳಿ, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು
ಉಪಸ್ಥಿತರಿದ್ದರು. ಮೊಯಿದ್ದೀನ್ ಮುಂಡ್ಕೂರು ಮತ್ತು ಧರ್ಮಪಾಲ್ ದೇವಾಡಿಗ ಅವರು ಸಂಸ್ಥೆಯ ಕಾರ್ಯನಿಷ್ಠೆ ಮತ್ತು ಸೇವಾ ವೈಖರಿಯನ್ನು ತಿಳಿಸಿದರು. ವಿಶೇಷ ಆಮಂತ್ರಿತರಾಗಿ ಉಪಸ್ಥಿತ ಗಣ್ಯರನ್ನು ಕೆ. ಡಿ. ಶೆಟ್ಟಿ ಮತ್ತು ಟ್ರಸ್ಟಿಗಳು ಪುಷ್ಪಗುತ್ಛವನ್ನಿತ್ತು ಗೌರವಿಸಿದರು.
ಹೇಮಾ ಶೆಟ್ಟಿ ಪ್ರಾರ್ಥನೆಗೈದರು. ಉಪಾಧ್ಯಕ್ಷ ಜೀಕ್ಷಿತ್ ಕುಸುಮೋಧರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಫೌಂಡೇಶನ್‌ನ ಸೇವೆಯ ಸ್ಥೂಲವಾದ ಮಾಹಿತಿಯನ್ನಿತ್ತರು. ಗೌರವ ಪ್ರಧಾನ ಕಾರ್ಯದರ್ಶಿ ರಾಜಲಕ್ಷ್ಮೀ ಸುಬ್ರಹ್ಮಣ್ಯಂ ಗತ ವಾರ್ಷಿಕ ಮಹಾ ಸಭೆಯ ವರದಿ ವಾಚಿಸಿದರು. ಕೋಶಾಧಿಕಾರಿ ಸೀಮಾ ಶುಕ್ಲ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಕರ್ನೂರು ಮೋಹನ್ ರೈ ಸಮ್ಮಾನಿತರನ್ನು ಪರಿಚಯಿಸಿದರು. ರೊನಾಲ್ಡ್ ಥಾಮಸ್ ಉಪಸ್ಥಿತ ಗಣ್ಯರನ್ನು ಪರಿಚಯಿಸಿದರು. ಫೌಂಡೇಶನ್‌ನ ಟ್ರಸ್ಟಿ ಚೆಲ್ಲಡ್ಕ ಪ್ರಕಾಶ್ ಡಿ. ಶೆಟ್ಟಿ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.