![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Jun 11, 2019, 4:46 PM IST
ಮುಂಬಯಿ: ಭಾಯಂದರ್ ಪೂರ್ವದ ಶ್ರೀ ಅಯ್ಯಪ್ಪ ಆರಾಧನಾ ವೃಂದದ ವತಿ ಯಿಂದ ಜೂ. 8ರಂದು ನಡೆದ ವಿಶೇಷ ಶ್ರೀ ಅಯ್ಯಪ್ಪ ಮಹಾಪೂಜೆಯ ಸಂದರ್ಭದಲ್ಲಿ ಸಂಸ್ಥೆಯ ಪೋಷಕ ಹಾಗೂ ಮೀರಾ-ಭಾಯಂದರ್ ಮಹಾನಗರ ಪಾಲಿಕೆಯ ನೂತನ ಸಭಾಪತಿ ವಾರ್ಡ್ ನಂಬರ್ 2ರ ನಗರ
ಸೇವಕ ಗಣೇಶ್ ಗಜಾನನ ಬೋಯಿರ್ ಅವರನ್ನು ಅಯ್ಯಪ್ಪ ಆರಾಧನಾ ವೃಂದ ಹಾಗೂ ಆರಾಧನಾ ಫ್ರೆಂಡ್ಸ್‌ವತಿಯಿಂದ ಶಾಲು ಹೊದೆಸಿ,ಫಲ
ಪುಷ್ಪ, ಪ್ರಸಾದವನ್ನಿತ್ತು ಅಭಿನಂದಿಸಲಾಯಿತು.
ಈ ಸಂದರ್ಭ ಗಣೇಶ್ ಗಜಾನನ ಬೋಯಿರ್ ಅವರು ಸಂಸ್ಥೆಯ ಸಮಾಜ ಸೇವೆ ಹಾಗೂ ಧಾರ್ಮಿಕ ಸೇವೆಯನ್ನು ಶ್ಲಾಘಿಸಿ, ಉತ್ತಮ ಬಾಂಧವ್ಯದೊಂದಿಗೆ ಬೆಳೆಯು ತ್ತಿರುವ ಈ ಸಂಸ್ಥೆಗೆ ನಾನು ಸದಾ ಬೆಂಬಲ ನೀಡಲಿದ್ದು, ಸಂಸ್ಥೆಯ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ನನ್ನ ಪ್ರೋತ್ಸಾಹ, ಸಹಕಾರ ಸದಾಯಿದೆ. ನಿಮ್ಮ ಅಭಿನಂದನೆ ನನ್ನ ಸಮಾಜ ಸೇವೆಗೆ ಸ್ಪೂರ್ತಿ ನೀಡಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಮತ್ತು ಗುರುಸ್ವಾಮಿ ಸುಧಾಕರ ಪೂಜಾರಿ ಸ್ವಾಗತಿಸಿ ದರು. ಅಶೋಕ್ ಶೆಟ್ಟಿ ಅವರು ಸಂಸ್ಥೆಯ
ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಬಿ. ಎಲ್. ಪೂಜಾರಿ ವಂದಿಸಿದರು. ನಾರಾಯಣ ಪೂಜಾರಿ, ಅಕ್ಷಯ್ ಶೆಟ್ಟಿ ಅವರು ಸಂದಭೋìಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಸುಕೇಶ್ ಶೆಟ್ಟಿ ಅವರು ಗಣ್ಯರನ್ನು ಅಭಿನಂದಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಆರಾಧನಾ ಫ್ರೆಂಡ್ಸ್‌ನ
ಕಾರ್ಯಾಧ್ಯಕ್ಷೆ ಪ್ರೇಮಾ ಮಾಧವ್ ಹೆಗ್ಡೆ, ಪದಾಧಿಕಾರಿಗಳು ಹಾಗೂ ಸದಸ್ಯೆ ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಧಾರ್ಮಿಕ ಕಾರ್ಯಕ್ರಮ ವಾಗಿ ಭಜನೆ, ಅಯ್ಯಪ್ಪ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.