ಭಾಯಂದರ್ ಶ್ರೀ ಹನುಮಾನ್ ಭಜನ ಮಂಡಳಿ:ರಕ್ತದಾನ ಶಿಬಿರ
Team Udayavani, Mar 12, 2018, 5:35 PM IST
ಮುಂಬಯಿ: ಜೀವನ ಶೈಲಿಯ ಅಹಾರ ಪದ್ಧತಿಯಿಂದ ಶರೀರವು ದುರ್ಬಲವಾಗುತ್ತದೆ. ಯಾವುದಕ್ಕೂ ಮಣಿಯದ ಕಾಯಿಲೆಗಳು ನಮ್ಮನ್ನು ಆವರಿಸುತ್ತಿದೆ. ಇದನ್ನು ನಿವಾರಿಸಲು ಆಯಾಯ ಋತುಮಾನದ ಹಣ್ಣು, ಹಂಪಲು, ಸೊಪ್ಪು ತರಕಾರಿ, ದವಸ ಧಾನ್ಯಗಳನ್ನು ಬೆಳೆಸಬೇಕು. ಪೂರ್ವಜರ ಔಷಧೀಯ ಗುಣಗಳುಳ್ಳ ವ್ಯವಸಾಯಕ್ಕೆ ಕೈಗೂಡಿಸಿ ಸ್ವಾಸ್ಥÂ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಮಾಜರತ್ನ ವಸಾಯಿ ಲಯನ್ಸ್ ಕ್ಲಬ್‌ನ ಸಂಚಾಲಕ ಲಯನ್ ಡಾ| ಶಂಕರ ಕೆ. ಟಿ. ಇವರು ನುಡಿದರು.
ಮಾ. 11ರಂದು ಭಾಯಂದರ್ ಪೂರ್ವದ ಹನುಮಾನ್ ಭಜನ ಮಂಡಳಿಯ ಆವರಣದಲ್ಲಿ ಇಂಟರ್ ನ್ಯಾಷನಲ್ ಅಸೋಸಿಯೇಶನ್ ಲಯನ್ಸ್ ಕ್ಲಬ್ ಇದರ ವಸಾಯಿ ಲಯನ್ಸ್ ಕ್ಲಬ್ ಮತ್ತು ಹನುಮಾನ್ ಭಜನ ಮಂಡಳಿ ಜಂಟಿಯಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಇವರು, ರಕ್ತ ಪರ್ಯಾಯ ಇಲ್ಲದ ವಸ್ತುವಾಗಿದೆ. ಇದನ್ನು ಯಾವುದೇ ಆಸ್ಪತ್ರೆ ಅಥವಾ ಕಂಪೆನಿಗಳಲ್ಲಿ ನಿರ್ಮಿಸಲು ಅಸಾಧ್ಯ. ನೀವು ಮಾಡುವ ರಕ್ತದಾನಕ್ಕೆ ಜೀವನ ದಾನದ ಶಕ್ತಿಯಿದೆ. ಇನ್ನೊಬ್ಬರ ಬದುಕಿನ ರಕ್ಷಣೆಯ ಉಡುಗೊರೆ ನಿಮ್ಮ ರಕ್ತದಾನದ ಉದ್ಧೇಶವಾಗಲಿ ಎಂದರು.
ಹನುಮಾನ್ ಭಜನ ಮಂಡಳಿಯ ಅಧ್ಯಕ್ಷ ಜಯರಾಮ ಶೆಟ್ಟಿ ಇವರು ಮಾತನಾಡಿ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪರಿಸರದ ಜನತೆಗೆ ಆರ್ಥಿಕ ನೆರವನ್ನು ಇಪ್ಪತ್ತೈದು ವರ್ಷಗಳಿಂದ ನೀಡುತ್ತಿದ್ದೇವೆ. ದುಬಾರಿ ವೆಚ್ಚಗಳ ಕಾಯಿಲೆಗಳ ಪ್ರಾರಂಭಿಕ ಹಂತದ ಪತ್ತೆಗಾಗಿ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ. ನಿರೀಕ್ಷೆಗೂ ಮೀರಿ ಜನರು ಸಹಕರಿಸಿದ್ದಾರೆ ಎನ್ನಲು ಹೆಮ್ಮೆಯಾಗುತ್ತಿದೆ ಎಂದು ನುಡಿದರು.
ವಸಾಯಿ ಮೆಡಿಕಲ್ ಕ್ಯಾಂಪ್‌ನ ಕಾರ್ಯಾಧ್ಯಕ್ಷ ಲಯನ್ ಡಾ| ಅನಿರುಧ್ ಚವಾಣ್, ಆ್ಯಕ್ಷನ್ ಕ್ಲಬ್‌ನ ಲಯನ್ ರಾಜೇಶ್, ಲಯನ್ ಸಂಜಯ್, ಸಮಾಜ ಸೇವಕ ಅರುಣೋದಯ ರೈ, ಹನುಮಾನ್ ಭಜನ ಸಮಿತಿಯ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ಜತೆ ಕಾರ್ಯದರ್ಶಿ ಜಯ ಆರ್. ಪೂಜಾರಿ, ಕೋಶಾಧಿಕಾರಿ ಸುಕುಮಾರ್ ಶೆಟ್ಟಿ, ಜತೆ ಕೋಶಾಧಿಕಾರಿ ಅಶೋಕ್ ಆರ್. ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನೀತಾ ಶೆಟ್ಟಿ, ಕಾರ್ಯದರ್ಶಿ ಲಕ್ಷಿ¾à ಸುವರ್ಣ, ಯುವ ವಿಭಾಗದವರು, ಮಹಿಳಾ ವಿಭಾಗದ ಸದಸ್ಯೆಯರು, ಅಯ್ಯಪ್ಪ ವೃಂದದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ಅಶೋಕ್ ಕೆ. ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ ವಂದಿಸಿದರು. ಸಾವಿರಾರು ಮಂದಿ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ಸುಮಾರು 75 ಕ್ಕೂ ಅಧಿಕ ಯುನಿಟ್ ರಕ್ತವನ್ನು ರಕ್ತದಾನ ಶಿಬಿರದಲ್ಲಿ ಸಂಗ್ರಹಿಸಲಾಯಿತು. ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ: ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.