ಭಾಯಂದರ್ ಶ್ರೀ ಹನುಮಾನ್ ಭಜನ ಮಂಡಳಿ: ರಜತ ಮಹೋತ್ಸವ
Team Udayavani, Dec 31, 2017, 4:17 PM IST
ಮುಂಬಯಿ: ಭಾಯಂದರ್ ಪೂರ್ವದ ಹನು ಮಾನ್ ನಗರದ ಶ್ರೀ ಹನುಮಾನ್ ಭಜನ ಮಂಡಳಿಯ ರಜತ ಮಹೋತ್ಸವ ಮಂಗಳ್ಳೋತ್ಸವವು ಮಂದಿರದ ಆವರಣದಲ್ಲಿ ಡಿ. 29ರಂದು ಸಂಜೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬ್ರಹ್ಮಶ್ರೀ ಅರುಣ್ ತಂತ್ರಿ ಖಂಡಿಕೆ, ವೇದಮೂರ್ತಿ ಗಣೇಶ ಸರಳಾಯ, ಶಿಬಿರದ ಗುರುಸ್ವಾಮಿ ಸಂತೋಷ್ ಮೂಡುಮಾರ್ನಾಡು ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ದೇವತಾ ಪ್ರಾರ್ಥನೆ, ದ್ವೀಪ ಪ್ರಜ್ವಲನೆ, ಕಲಶ ಪ್ರತಿಷ್ಠೆ ಹಾಗೂ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನೆ ಜರಗಿತು. ದಿನಪೂರ್ತಿ ನಡೆದ ಭಜನ ಮಂಗಲೋತ್ಸವದಲ್ಲಿ ಶ್ರೀ ಲಕ್ಷಿ¾àನಾರಾಯಣ ಭಜನ ಮಂಡಳಿ ಮೀರಾರೋಡ್, ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ ಇಂದ್ರಲೋಕ, ಶ್ರೀ ದುರ್ಗಾ ಭಜನ ಮಂಡಳಿ ಸಿಲ್ವರ್‌ಪಾರ್ಕ್, ಕರ್ನಾಟಕ ಮಹಾಮಂಡಲ ಮೀರಾ-ಭಾಯಂದರ್, ಶ್ರೀ ವಿಠuಲ ಭಜನ ಮಂಡಲಿ ಮೀರಾರೋಡ್, ಕರ್ನಾಟಕ ಸಂಘ ಮೀರಾರೋಡ್, ಶ್ರೀ ಸದ್ಗುರು ಭಜನ ಮಂಡಳಿ ಮೀರಾರೋಡ್ ಸಮಿತಿ, ಮಾನವ ಜಾಗೃತಿ ಕೇಂದ್ರ ವಸಾಯಿ, ಬಂಟ್ಸ್ ಫೋರಂ ಮೀರಾ-ಭಾಯಂದರ್ ತಂಡಗಳು ಪಾಲ್ಗೊಂಡಿದ್ದವು.
ಶ್ರೀ ಹನುಮಾನ್ ಭಜನ ಮಂಡಳಿಯ ಅಧ್ಯಕ್ಷ ಜಯರಾಮ ಶೆಟ್ಟಿ ಅವರು ಮಾತನಾಡಿ, ಭಾಯಂದರ್ ಪರಿಸರದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಯುವಕರ ತಂಡ ಶ್ರೀ ಹನುಮಾನ್ ಭಜನ ಮಂಡಳಿ ಎಂಬ ಸೂರಿನಡಿ ಸಂಘಟಿತರಾಗಿ 25 ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಹಲವಾರು ಸಾಧಕರನ್ನು ಗುರುತಿಸಿ ನಗದು ರೂಪದಲ್ಲಿ ಸಹಕರಿಸಿದೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಿದೆ. ಭಕ್ತಾಭಿಮಾನಿಗಳ ಪ್ರೀತಿ, ವಿಶ್ವಾಸ ಇದೇ ರೀತಿಯಲ್ಲಿ ಸದಾ ಮುಂದುವರಿಯಲಿ ಎಂದು ನುಡಿದು, ಸಹಕರಿಸಿದ ಸದಸ್ಯರಿಗೆ, ಭಜನ ತಂಡದವರಿಗೆ ಕೃತಜ್ಞತೆ ಸಲ್ಲಿಸಿದರು.
ಗೌರವ ಕಾರ್ಯದರ್ಶಿ ಅಶೋಕ್ ಕೋಟ್ಯಾನ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಗೌರವಾಧ್ಯಕ್ಷ ಅರವಿಂದ ಶೆಟ್ಟಿ, ಉಪಾಧ್ಯಕ್ಷ ಸುರೇಶ್ ಶೆಟ್ಟಿ, ಜತೆ ಕಾರ್ಯದರ್ಶಿ ಜಯ ಆರ್. ಪೂಜಾರಿ, ಕೋಶಾಧಿಕಾರಿ ಸುಕುಮಾರ್ ಶೆಟ್ಟಿ ಹಾಗೂ,ಜತೆ ಕೋಶಾಧಿಕಾರಿ ಅಶೋಕ್ ಆರ್. ಅಮೀನ್, ಮಹಿಳಾ ವಿಭಾಗದ ಅಧ್ಯಕ್ಷೆ ಸುನೀತಾ ಎಸ್. ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮೀ ಎಸ್. ಸುವರ್ಣ, ಯುವ ವಿಭಾಗದ ಅಧ್ಯಕ್ಷ ಹಿತೇಶ್ ಡಿ. ಶೆಟ್ಟಿ, ಕಾರ್ಯದರ್ಶಿ ಸುಪ್ರೀತಾ ಜೆ. ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.