ಕೋವಿಡ್ ಹಾಟ್ ಸ್ಪಾಟ್ ಆಗುತ್ತಿರುವ ಭಿವಂಡಿ
Team Udayavani, Jun 24, 2020, 1:00 PM IST
ಥಾಣೆ, ಜೂ. 23: ಧಾರಾವಿಯ ಬಳಿಕ ಈಗ ಭಿವಂಡಿ ಕೋವಿಡ್ ಹಾಟ್‌ಸ್ಪಾಟ್ ಆಗುತ್ತಿದೆಯೇ ಎಂಬ ಅನುಮಾನ ಮೂಡಲು ಪ್ರಾರಂಭಿಸಿದೆ. ಭಿವಂಡಿಯ ಹಲವು ಪ್ರದೇಶಗಳಲ್ಲಿ ಸೋಂಕು ವೇಗವಾಗಿ ಹಬ್ಬುತ್ತಿದೆ. ಇದ್ಗಾ ನಗರ, ಮಿಲ್ಟಾನಗರ, ನಾಡಿನಾಕಾ, ಪದ್ಮನಗರ ಮತ್ತು ಕಾಮತ್‌ಘರ್ ಆರೋಗ್ಯ ಕೇಂದ್ರಗಳು ಸೋಂಕಿನ ತಾಣಗಳಾಗಿದ್ದು, ಕಳೆದ 3 ದಿನಗಳಲ್ಲಿ 423 ಹೊಸ ಸೋಂಕಿತರು ಪತ್ತೆಯಾಗಿದ್ದು, 13 ಮಂದಿ ಸಾಲನ್ನಪ್ಪಿದ್ದಾರೆ. ಸೋಮವಾರ ಬಿವಂಡಿಯಲ್ಲಿ 209 ಸೋಂಕಿತರ ಪತ್ತೆ ಬಳಿಕ ಒಟ್ಟು ಸೋಂಕಿತರ ಸಂಖ್ಯೆ 1,472ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 170 ಮಂದಿ ಮಹಾನಗರ ಪ್ರದೇಶದವರಾಗಿದ್ದರೆ, 39ಮಂದಿ ಗ್ರಾಮೀಣ ಪ್ರದೇಶದವರು. ಮೆಟ್ರೋಪಾಲಿಟನ್ ಪ್ರದೇಶದಲ್ಲಿ ರವಿವಾರ ಐದು ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 71ಕ್ಕೆ ಏರಿಕೆಯಾಗಿದೆ.
ಭಿವಂಡಿ ಮಹಾನಗರ ಪ್ರದೇಶದಲ್ಲಿ ರವಿವಾರ 170 ಕೋವಿಡ್ ಸೋಂಕಿತ ಹೊಸ ರೋಗಿಗಳು ಪತ್ತೆಯಾಗಿದ್ದರಿಂದ ರೋಗಿಗಳ ಸಂಖ್ಯೆ 1,045ಕ್ಕೆ ಏರಿಕೆಯಾಗಿದೆ. ಈ ಪೈಕಿ 450 ಸೋಂಕಿತರು ಗುಣ ಮುಖರಾಗಿದ್ದರೆ, 71 ಮಂದಿ ಸಾವನ್ನಪ್ಪಿದ್ದಾರೆ. ನಾಡಿನಾಕಾ ಆರೋಗ್ಯ ಕೇಂದ್ರದಲ್ಲಿ ರವಿವಾರ ಮಹಾನಗರದ 15 ಆರೋಗ್ಯ ಕೇಂದ್ರಗಳಲ್ಲಿ ಗರಿಷ್ಠ ಸೋಂಕಿತರು, ಅಂಜುರ್ಫಾಟಾ ಆರೋಗ್ಯ ಕೇಂದ್ರದಲ್ಲಿ 28 ಹೊಸ ರೋಗಿಗಳು, ಕಾಮತ್‌ಘರ್ ಆರೋಗ್ಯ ಕೇಂದ್ರದಲ್ಲಿ 21 ಹೊಸ ರೋಗಿಗಳು, ಇದ್ಗಾ ಆರೋಗ್ಯ ಕೇಂದ್ರದಲ್ಲಿ 19 ಹೊಸ ರೋಗಿಗಳು ಮತ್ತು ಪದ್ಮನಗರ ಆರೋಗ್ಯ ಕೇಂದ್ರದಲ್ಲಿ 17 ಹೊಸ ರೋಗಿಗಳು ಪತ್ತೆಯಾಗಿದ್ದಾರೆ. 170 ಸೋಂಕಿತರಲ್ಲಿ 57 ಮಂದಿ ಮಹಿಳೆಯರು ಮತ್ತು 104 ಮಂದಿ ಪುರುಷರಿದ್ದಾರೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 9 ಮಂದಿ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಮೆಟ್ರೋಪಾಲಿಟನ್ ಪ್ರದೇಶದಂತೆಯೇ ಸೋಂಕಿತರ ಸಂಖ್ಯೆಯು ಗ್ರಾಮೀಣ ಪ್ರದೇಶಗಳಲ್ಲಿ ವೇಗವಾಗಿ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಭಾನುವಾರ 39 ರೋಗಿಗಳು ಕಂಡುಬಂದಿದ್ದರಿಂದ ರೋಗಿಗಳ ಸಂಖ್ಯೆ 427ಕ್ಕೆ ಏರಿದೆ. ಈ ಪೈಕಿ 147 ಮಂದಿ ಸೋಂಕುಮುಕ್ತವಾಗಿದ್ದು. ಎಂಟು ಮಂದಿ ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.