ಬಿಲ್ಲವರ ಅಸೋಸಿಯೇಶನ್: “ಕೋಟಿ-ಚೆನ್ನಯ’ ಕ್ರೀಡೋತ್ಸವ
Team Udayavani, Dec 28, 2017, 4:48 PM IST
ಮುಂಬಯಿ: ನನಗೆ ಜಯ ಸುವರ್ಣರ ನಡೆನುಡಿ ಪ್ರೇರಣೆಯಾಗಿದೆ. ಹಾಗಾಗಿ ನಾನು ಬಿಲ್ಲವರ ಪರಿವಾರ ಸ್ನೇಹಿತನಾಗಿರುವೆ. ಸೃಜನಶೀಲ ಚಟುವಟಿಕೆಗೆ ಕ್ರೀಡೆ ಮುಖ್ಯ ಸಾಧನವಾಗಿದೆ. ಇಂತಹ ಕ್ರೀಡಾಕೂಟದಿಂದ ನನಗೂ ಕ್ರೀಡಾಸ್ಫೂರ್ತಿ ತುಂಬಿದೆ. ನಮ್ಮ ಬರೋಡಾದ ಸಂಘದಲ್ಲೂ ಕ್ರೀಡಾ ಕೂಟ ಆಯೋಜಿಸಿ ತುಳು- ಕನ್ನಡಿಗರನ್ನು ಪ್ರೋತ್ಸಾಹಿಸುವ ಪ್ರಯತ್ನ ಮಾಡುವೆ. ಮಹಿಳೆಯರಿಗೆ ತ್ರೋಬಾಲ್‌ನಂತಹ ಸ್ಪರ್ಧೆ ನಡೆಸಲು ನಿಮ್ಮ ಕ್ರೀಡಾಕೂಟ ಪ್ರೇರಣೆ ಒದಗಿಸಿದೆ ಎಂದು ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಬಿ. ಶೆಟ್ಟಿ ಗುರುವಾಯನಕೆರೆ ಹೇಳಿದರು.
ಮರೀನ್‌ಲೈನ್ಸ್ ಮುಂಬಯಿ ಯುನಿವರ್ಸಿಟಿ ಮೈದಾನದಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್ ಯುವಾಭ್ಯುದಯ ಸಮಿತಿಯ ವಾರ್ಷಿಕ “ಕೋಟಿ-ಚೆನ್ನಯ’ ಕ್ರೀಡಾಕೂಟದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಇವರು, ನಾರಾಯಣ ಗುರುಗಳ ತತ್ವಾ ದರ್ಶಗಳೊಂದಿಗೆ ಎಲ್ಲ ಜಾತಿ- ಬಾಂಧವರನ್ನು ಜತೆ ಗೂಡಿಸಿ ಕ್ರೀಡೋತ್ಸವ ಆಯೋಜಿಸಿ ರುವುದು ಸ್ತುತ್ಯರ್ಹ. ಇದು ಎಲ್ಲರಿಗೂ ಮಾದರಿ ಯಾಗಲಿ. ಸಂಘಟನೆಯ ಮುಖೇನ ಅಲ್ಲಲ್ಲಿ ಹಿಂದೂ ಸಮಾಜೋತ್ಸವದ ಕಾರ್ಯಗಳೂ ಬಿಲ್ಲವ ಸಮಾಜದಿಂದ ಆಗುತ್ತಿರಲಿ. ನಾವೆಲ್ಲಾ ಜಾತಿ ಭೇದವಿಲ್ಲದೆ ಸೌಹಾರ್ದತೆಯಿಂದ ಬಾಳ್ಳೋಣ ಎಂದರು.
ದಿ| ಗಿರಿಯ ಟಿ. ಪೂಜಾರಿ ಮತ್ತು ದಿ| ಯೋಗೇಶ್ ಸೂರು ಪೂಜಾರಿ ವೇದಿಕೆಯಲ್ಲಿ ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆ ಹಾಗೂ ಅಸೋಸಿಯೇಶನ್‌ನ ಮಾರ್ಗದರ್ಶಕ ಜಯ ಸಿ. ಸುವರ್ಣ ಉಪಸ್ಥಿತಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾರತ್ ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್, ಗುಜರಾತ್ ಬಿಲ್ಲವ ಸಂಘದ ಗೌ| ಪ್ರ| ಕಾರ್ಯದರ್ಶಿ ವಾಸು ವಿ. ಸುವರ್ಣ, ಗುಜರಾತ್ ಬಿಲ್ಲವ ಸಂಘದ ಸೂರತ್ ಘಟಕ ಅಧ್ಯಕ್ಷ ವಿಶ್ವನಾಥ ಜಿ. ಪೂಜಾರಿ, ಸಮಾಜ ಸೇವಕ ಉದಯ ಶೆಟ್ಟಿ ಮುನಿಯಾಲ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಆಹಾರ್ ವಲಯ-1ರ ಉಪಾಧ್ಯಕ್ಷ ಮಹೇಂದ್ರ ಸೂರು ಕರ್ಕೇರ, ಸಮಾಜ ಸೇವಕ ರಮಾನಾಥ್ ಪೈ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ರಾಜ ವಿ. ಸಾಲ್ಯಾನ್, ಭಾಸ್ಕರ ವಿ. ಬಂಗೇರ, ಶಂಕರ ಡಿ. ಪೂಜಾರಿ, ಡಾ| ಯು. ಧನಂಜಯ ಕುಮಾರ್ ವಿಜೇತರಿಗೆ ಪಾರಿತೋಷಕಗಳನ್ನು ಪ್ರದಾನಿಸಿ ಶುಭಹಾರೈಸಿದರು.
ಕ್ರೀಡೋತ್ಸವದ ಪ್ರೋತ್ಸಾಹಕರು, ಪ್ರಾಯೋಜಕರಾದ ದೀಪಕ್ ಕೋಟ್ಯಾನ್ ಇನ್ನಾ, ಹೊಟೇಲ್ ಉದ್ಯಮಿ ಹರೀಶ್ ಸೂರು ಪೂಜಾರಿ ವಡಾಲ, ದಯಾನಂದ್ ಕುಮಾರ್ ಮತ್ತು ಶೋಭಾ ದಯಾನಂದ್, ಕ್ರೀಡಾ ಪ್ರಧಾನ ಸಂಯೋಜಕ ರವಿ ಎಸ್. ಸನಿಲ್, ಕುಶ ಆರ್. ಸನಿಲ್, ಕು| ರಿಖೀತಾ ಆರ್. ಸನಿಲ್ ಮೊದಲಾದವರನ್ನು ಗೌರವಿಸಲಾಯಿತು. ಗೌರವ ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್, ಭಾರತ್ ಬ್ಯಾಂಕ್‌ನ ನಿರ್ದೇಶಕರುಗಳಾದ ಯು. ಎಸ್. ಪೂಜಾರಿ, ಭಾಸ್ಕರ್ ಎಂ. ಸಾಲ್ಯಾನ್, ಕೆ. ಬಿ. ಪೂಜಾರಿ, ಗಂಗಾಧರ್ ಜೆ. ಪೂಜಾರಿ, ಸೂರ್ಯಕಾಂತ್ ಜೆ. ಸುವರ್ಣ, ಅಸೋಸಿಯೇಶನ್‌ನ ಪ್ರಬಂಧಕ ಭಾಸ್ಕರ್ ಟಿ. ಪೂಜಾರಿ, ಶ್ರೀನಿವಾಸ ಆರ್. ಕರ್ಕೇರ, ಸ್ಥಳೀಯ, ಸಮನ್ವಯ ಸಮಿತಿಗಳ ಮುಖ್ಯಸ್ಥರು ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.
ದಯಾನಂದ್ ಕುಮಾರ್ ಮತ್ತು ತಂಡವು ಸ್ಪರ್ಧೆಗಳನ್ನು ನಿರ್ವಹಿಸಿದರು. ಅನುಷಾ ಪೂಜಾರಿ ಗೋರೆಗಾಂವ್, ರಿಖೀತಾ ಆರ್. ಸನಿಲ್, ಶ್ವೇತಾ ಸುವರ್ಣ, ಅನುಷಾ ಪೂಜಾರಿ ವಿಕ್ರೋಲಿ ಕ್ರೀಡಾ ನಿರೂಪಣೆಗೈದರು. ಯುವಾಭ್ಯು ದಯ ಸಮಿತಿಯ ನಿಲೇಶ್ ಪೂಜಾರಿ ಪಲಿಮಾರ್ ಸ್ವಾಗತಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಯುವಾಭ್ಯುದಯದ ಗೌರವ ಕಾರ್ಯದರ್ಶಿ ಉಮೇಶ್ ಎನ್. ಕೋಟ್ಯಾನ್ ವಂದಿಸಿದರು.
ಸೇವಾದಳದ ಸೇನಾಪತಿ ಗಣೇಶ್ ಕೆ. ಪೂಜಾರಿ, ಗೌ| ಜೊತೆ ಕಾರ್ಯದರ್ಶಿಗಳಾದ ಹರೀಶ್ ಜಿ. ಸಾಲ್ಯಾನ್, ಪ್ರೇಮನಾಥ ಪಿ. ಕೋಟ್ಯಾನ್, ಆಶಾಲತಾ ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿಗಳಾದ ರಾಜೇಶ್ ಜೆ. ಬಂಗೇರ, ಸದಾಶಿವ ಎ. ಕರ್ಕೇರ, ನಾಗೇಶ್ ಎಂ. ಕೋಟ್ಯಾನ್, ರಜಿತ್ ಎಲ್. ಸುವರ್ಣ, ಅಶೋಕ್ ಕುಕ್ಯಾನ್, ನಾಗೇಶ್ ಎಸ್. ಕೋಟ್ಯಾನ್, ಅಕ್ಷಯ್ ಪೂಜಾರಿ, ಗಣೇಶ್ ಎಚ್. ಅಂಚನ್ ಮತ್ತಿತರರು ಸಹಕರಿಸಿದರು. 2017 ರ ವಾರ್ಷಿಕ “ಕೋಟಿ-ಚೆನ್ನಯ’ಕ್ರೀಡಾಕೂಟದ ಚಾಂಪಿಯನ್‌ಶಿಪ್ ಪ್ರಥಮ ಟ್ರೋಫಿಯನ್ನು ವಸಾಯಿ ಸಮಿತಿಯು ತನ್ನದಾಗಿಸಿಕೊಂಡರೆ, ಬೊರಿವಿಲಿ ಸಮಿತಿಯು ದ್ವಿತೀಯ ಸ್ಥಾನಕ್ಕೆ ಪಾತ್ರವಾಯಿತು.
ಬಂಟರು ಮತ್ತು ಬಿಲ್ಲವರು ಅವಿನಾಭಾವ ಸಂಬಂಧವುಳ್ಳವರು. ಆದರೆ ಕೆಲವೊಂದು ಶಕ್ತಿಗಳು ಜಾತಿಯನ್ನು ಹಿಡಿದಿಟ್ಟುಕೊಂಡು ಸಾಮರಸ್ಯದ ವ್ಯವಸ್ಥೆ ಹಾಳು ಮಾಡುತ್ತಿರುವುದು ಖೇದಕರ. ನಮ್ಮತನವನ್ನು ಮೆಲುಕು ಹಾಕಲು ಇಂತಹ ಕ್ರೀಡೋತ್ಸವಗಳು ಮಾದರಿ. ನಮ್ಮ ಸೇವೆ ಮನಸ್ಸಿನ ಮಾತಾಗಿ ನುಡಿದಂತೆ ನಡೆಯುವಂತಿರಬೇಕು. ಅದಕ್ಕೆ ಗುರುನಾರಾಯಣ ತತ್ವಾದರ್ಶಗಳು ಅನುಕರಣೀಯವಾಗಲಿ
– ಉದಯ ಶೆಟ್ಟಿ ಮುನಿಯಾಲ್ (ಸಮಾಜ ಸೇವಕರು).
ಪ್ರತಿಯೊಬ್ಬರಲ್ಲೂ ಆಡುವ ಕ್ರೀಡಾಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಆಟದ ಮೂಲಕ ಪ್ರದರ್ಶಿಸಿದಾಗಲೇ ಪ್ರತಿಭಾವನ್ವಿತರಾಗಿ ಬೆಳಗಲು ಸಾಧ್ಯ. ಅಸೋಸಿಯೇಶನ್ ಈ ನಿಟ್ಟಿನಲ್ಲಿ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ
– ವಿಶ್ವನಾಥ ಜಿ. ಪೂಜಾರಿ (ಅಧ್ಯಕ್ಷರು : ಗುಜರಾತ್ ಬಿಲ್ಲವ ಸಂಘದ ಸೂರತ್ ಘಟಕ).
ಸಂಘಟಿತರಾಗಿ ಸ್ಪರ್ಧೆಗಳನ್ನು ಎದುರಿಸಿದಾಗ ಜಯ ಸುಲಭ ಸಾಧ್ಯವಾಗುವುದು. ಮಕ್ಕಳಿಗೆ ಕೋಟಿ-ಚೆನ್ನಯರು ಯಾರೆಂದು ತಿಳಿಪಡಿಸಲು ಅವರ ನಾಮದಲ್ಲಿ ಈ ಕ್ರೀಡೋತ್ಸವ ವರ್ಷಂಪ್ರತಿ ಆಚರಿಸುತ್ತಿದ್ದೇವೆ. ಶೀಘ್ರವೇ ನಿರ್ಮಿಸಲು ಉದ್ದೇಶಿಸಿದ ಎಂಜಿನೀಯರ್ ಕಾಲೇಜ್‌ಗೆ ಸಹಾಯ ಸರಕಾರವಿತ್ತು ಎಲ್ಲರು ಪ್ರೋತ್ಸಾಹಿಸಬೇಕು
– ಜಯ ಸಿ. ಸುವರ್ಣ (ಕಾರ್ಯಾಧ್ಯಕ್ಷರು : ಭಾರತ್ ಬ್ಯಾಂಕ್).
ಕೋಟಿ-ಚೆನ್ನಯರ ತತ್ವದರ್ಶ ಮೂಲಕ ಸತ್ಯಧರ್ಮದಲ್ಲಿ ಮುನ್ನಡೆಯಬೇಕೆಂಬ ಆಶಯ ನಮ್ಮದಾಗಿದೆ. ಯುವಪೀಳಿಗೆ ಅವಕಾಶಗಳನ್ನಿತ್ತು ಪ್ರೇರೇಪಿಸುವುದೇ ನಮ್ಮ ಉದ್ದೇಶವಾಗಿದೆ. ನಮ್ಮಲ್ಲಿನ ಯುವ ಸಂಘಟಕರ ಅವಿರತ ಶ್ರಮದಿಂದ ಈ ಕ್ರೀಡೋತ್ಸವ ಸಾಧ್ಯವಾಗುತ್ತಿದ್ದು, ಸಮಾಜ ಬಂಧುಗಳು ಇದರ ಸದುಪಯೋಗ ಪಡೆಯಬೇಕು
– ನಿತ್ಯಾನಂದ ಕೋಟ್ಯಾನ್ (ಆಧ್ಯಕ್ಷರು : ಬಿಲ್ಲವರ ಅಸೋಸಿಯೇಶನ್ ಮುಂಬಯಿ).
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.