ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ 85ನೇ ವಾರ್ಷಿಕ ಮಹಾಸಭೆ
Team Udayavani, Jun 20, 2017, 3:01 PM IST
ಮುಂಬಯಿ: ಬಿಲ್ಲವರು ನಾವೆಲ್ಲ ಒಂದೇ. ನಾವೆಲ್ಲರೂ ಬಂಧು ಗಳೆಂಬ ಭಾವೈಕ್ಯದೊಂದಿಗೆ ಸಮೃದ್ಧ ಸಮಾಜ ನಿರ್ಮಾಣವೇ ನಮ್ಮ ಉದ್ದೇಶ ವಾಗಿದೆ. ಬಿಲ್ಲವರ ಜಾಗೃತಿ ಬಳಗವು ಬಿಲ್ಲವರ ಅಸೋಸಿಯೇಶನ್‌ನೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆಯು ಒಮ್ಮನ ಸ್ಸಿನಿಂದ ನಡೆಯುತ್ತಿದೆೆ. ಈಗಾಗಲೆ ಗುರುತು ಪತ್ರಿಕೆಯ ಚಂದಾದಾರರಿಗೆ ಅಕ್ಷಯ ಪತ್ರಿಕೆಯನ್ನು ನೀಡಲಾಗುತ್ತಿದೆ. ಬರುವ ವಾರ್ಷಿಕ ಮಹಾಸಭೆಯನ್ನು ಎರಡೂ ಸಂಸ್ಥೆಗಳು ಒಟ್ಟಾಗಿ ನಡೆಸಬೇಕು. ಇದು ನಮಗೆಲ್ಲರಿಗೂ ಸಂತಸದ ವಿಷಯ ವಾಗಿದೆ. ನಮ್ಮ ಸಮಾಜದ ಹಿತಚಿಂತಕರೂ ಮಾರ್ಗದರ್ಶಕರೂ ಆದ ಜಯ ಸಿ. ಸುವರ್ಣ ಅವರ ಮಾರ್ಗದರ್ಶನ ನಮಗೆ ಸದಾ ಇದೆ ಎಂದು ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ಹೇಳಿದರು.
ಜೂ. 18ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ 85ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ನಮ್ಮ ಹಿರಿಯರು ಸಮಾಜದ ಸದುದ್ದೇಶದಿಂದ ಸ್ಥಾಪಿಸಿದ ಈ ಸಂಸ್ಥೆಯನ್ನು ಪ್ರಾಮಾಣಿಕ ಸೇವೆ ಯೊಂದಿಗೆ ಮುನ್ನಡೆಸೋಣ. ನಮ್ಮಿಂದ ತುಂಬಾ ಅಭಿವೃದ್ಧಿಪರ ಕಾರ್ಯಗಳಾಗಿವೆ. ಇನ್ನಷ್ಟು ಆಗಬೇಕಿದೆ. ಅದಕ್ಕಾಗಿ ಎಲ್ಲರ ಸಹಕಾರದ ಅಗತ್ಯವಿದೆ. ಗುರು ನಾರಾಯಣ ರಾತ್ರಿಶಾಲೆಯು ಕಳೆದ ಹಲವಾರು ವರ್ಷಗಳಿಂದ ನಿರಂತರ ಶೇ. 100 ಫಲಿತಾಂಶ ತರುತ್ತಿದ್ದು, ಇದು ನಾವು ಶಿಕ್ಷಣಕ್ಕೆ ನೀಡುವ ಮಹತ್ವವನ್ನು ಬಿಂಬಿಸುತ್ತದೆ ಎಂದು ನುಡಿದರು.
ಕೊನೆಯುಸಿರಿರುವವರೆಗೆ ಸಮಾಜ ಸೇವೆ
ಬಿಲ್ಲವರ ಅಸೋಸಿಯೇಶನ್ ಇದರ ಮಾರ್ಗದರ್ಶಕ ಜಯ ಸಿ. ಸುವರ್ಣ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಕಳೆದ ಹಲವು ವರ್ಷಗಳಿಂದ ಅಸೋಸಿಯೇಶನ್ ನಿರಂತರ ಪ್ರಗತಿಪಥದತ್ತ ಸಾಗುತ್ತಿದೆ. ನಾವು ಯಾವಾಗಲೂ ಒಗ್ಗಟ್ಟನ್ನು ಪ್ರೋತ್ಸಾಹಿ ಸುತ್ತೇವೆ ಮತ್ತು ಬೆಂಬಲಿಸುತ್ತೇವೆ. ಅಸೋಸಿಯೇಶನ್‌ನ ಆರ್ಥಿಕ ಸಂಸ್ಥೆ ಭಾರತ್ ಬ್ಯಾಂಕ್ ನೂರು ಶಾಖೆಗಳನ್ನು ಹೊಂದಿ, 15 ಸಾವಿರ ಕೋ. ರೂ. ವ್ಯವಹಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹಿರಿಯರ ಮಾರ್ಗ ದರ್ಶನವನ್ನು ನಾವೆಂದೂ ಮರೆಯ ಬಾರದು. ಎಲ್ಲರ ಸಹಕಾರದಿಂದ ನನ್ನ ಕೊನೆಯುಸಿರಿರುವವರೆಗೆ ಸಮಾಜ ಸೇವೆ ಯನ್ನು ಮಾಡುತ್ತೇನೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಗುರುನಾರಾಯಣ ಮೂರ್ತಿಗೆ ಜಯ ಸಿ. ಸುವರ್ಣ ಅವರು ಹಾರಾರ್ಪಣೆ ಗೈದರು. ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಅವರು ಪದಾಧಿಕಾರಿಗಳನ್ನು ವೇದಿಕೆಗೆ ಬರಮಾಡಿಕೊಂಡು ಪ್ರಾಸ್ತಾವಿಕ ವಾಗಿ ಮಾತನಾಡಿ, ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು. ಗೌರವ ಜತೆ ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್ ವರದಿ ಮಂಡಿಸಿದರು. ಜತೆ ಕಾರ್ಯದರ್ಶಿ ಆಶಾಲತಾ ಎಸ್. ಕೋಟ್ಯಾನ್ ವಿಶೇಷ ಮಹಾಸಭೆ ವರದಿ ಮಂಡಿಸಿದರು.
ಸಭಿಕರ ಪರವಾಗಿ ಮಾತನಾಡಿದ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್ ಅವರು, ಸಮಾಜದ ಅಭಿವೃದ್ಧಿಯ ಕೆಲಸವಾಗುವಾಗ ಎಲ್ಲರೂ ಒಂದಾಗಿರಬೇಕು. ಅದಕ್ಕಾಗಿ ನಾನು ಮತ್ತು ಇತರ ಗಣ್ಯರು ಕೆಲವು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಅದು ಈಗ ಯಶಸ್ವಿಯಾಗಿದೆ ಎಂಬುದಕ್ಕೆ ಸಂತೋಷವಾಗುತ್ತಿದೆ ಎಂದರು.
ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್. ಟಿ. ಪೂಜಾರಿ ಅವರು ಮಾತನಾಡಿ, ಬಿಲ್ಲವರ ಅಸೋಸಿಯೇಶನ್ ಹಾಗೂ ಬಿಲ್ಲವ ಜಾಗೃತಿ ಬಳಗವು ಒಂದಾಗುವ ಕ್ಷಣ ಇದೀಗ ಒದಗಿ ಬಂದಿದೆ. ಈ ಕಾರ್ಯವು ಸದ್ಯದಲ್ಲಿಯೆ ಪೂರ್ಣಗೊಳ್ಳಲಿದೆ. ಮುಂದಿನ ಮಹಾಸಭೆಯನ್ನು ನಾವು ಒಟ್ಟಾಗಿ ನಡೆಸುವ ಎಂದು ನುಡಿದರು.
ಸಭಿಕರ ಪರವಾಗಿ ಹರಿಶ್ಚಂದ್ರ ಅಮೀನ್, ಶ್ರೀನಿವಾಸ ಪೂಜಾರಿ, ಶ್ರೀದೇವಿ ಮಕ್ಕುಂಜೆ, ಎಚ್. ವಿ. ಸುವರ್ಣ, ಶಂಕರ ಸುವರ್ಣ, ಜಿ. ಎಂ. ಕೋಟ್ಯಾನ್, ಎನ್. ಟಿ. ಪೂಜಾರಿ, ಚಂದ್ರಶೇಖರ ಪೂಜಾರಿ, ಚಂದಯ್ಯ ಪೂಜಾರಿ, ಎಂ. ಎನ್. ಸನಿಲ್, ಜಯಕರ ಡಿ. ಪೂಜಾರಿ, ವರದ ಉಳ್ಳಾಲ್, ಸಂತೋಷ್ ಪೂಜಾರಿ, ಜಯಂತ್ ನಡುಬೈಲು, ರವಿ ಪೂಜಾರಿ ಚಿಲಿಂಬಿ ಮೊದಲಾದವರು ಮಾತನಾಡಿದರು.
ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸಿಇಒ ಸಿ. ಆರ್. ಮೂಲ್ಕಿ, ವಿದ್ಯಾ ಉಪಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್, ಶ್ರೀ ನಾರಾಯಣ ಗುರು ಕೋ. ಆಪರೇಟಿವ್ ಬ್ಯಾಂಕಿನ ಹರಿಶ್ಚಂದ್ರ ಅಮೀನ್, ಸಮಾಜ ಸೇವಕ ಉಮೇಶ್ ಕರ್ಕೇರ ಅವರನ್ನು ಗೌರವಿಸಲಾಯಿತು.
ಗುರುನಾರಾಯಣ ರಾತ್ರಿಶಾಲೆಯಲ್ಲಿ ಶೇ. 91 ಅಂಕಗಳನ್ನು ಪಡೆದು ರಾಜ್ಯದಲ್ಲಿ ರಾತ್ರಿಶಾಲೆಗಳಲ್ಲಿ ಮೊದಲ ಸ್ಥಾನ ಪಡೆದ ಪ್ರೀತಿ ಎಸ್. ಮೂಲ್ಯ, ಅತ್ಯಧಿಕ ಅಂಕಗಳನ್ನು ಪಡೆದ ಶ್ರೀದೇವಿ ಮಂಕುಂಜೆ, ಪ್ರಿಯಾಂಕಾ ಎಸ್. ವಿರಾಂಜ್‌ದಾರ್ ಅವರನ್ನು ಗಣ್ಯರು ಸಮ್ಮಾನಿಸಿದರು.
ವೇದಿಕೆಯಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ಡಾ| ಯು. ಧನಂಜಯ ಕುಮಾರ್, ಶಂಕರ್ ಡಿ. ಪೂಜಾರಿ, ಭಾಸ್ಕರ ವಿ. ಬಂಗೇರ, ರಾಜಾ ವಿ. ಸಾಲ್ಯಾನ್, ಜತೆ ಕಾರ್ಯದರ್ಶಿ ಪ್ರೇಮನಾಥ್ ಜಿ. ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ. ಪೂಜಾರಿ, ಗೌರವ ಜತೆ ಕೋಶಾಧಿಕಾರಿಗಳಾದ ರಾಜೇಶ್ ಕೆ. ಬಂಗೇರ, ಶಿವರಾಮ ಎಸ್. ಪೂಜಾರಿ, ಸದಾಶಿವ ಎ. ಕರ್ಕೇರ, ಮೋಹನ್ ಡಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್, ಸೇವಾದಳದ ದಳಪತಿ ಗಣೇಶ್ ಕೆ. ಪೂಜಾರಿ ಹಾಗೂ ವಿವಿಧ ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳು, ವಿವಿಧ ಸ್ಥಳೀಯ ಸಮಿತಿಗಳ ಕಾರ್ಯಾಧ್ಯಕ್ಷರು ಉಪಸ್ಥಿತರಿದ್ದರು.
ಮಹಾಸಭೆಯಲ್ಲಿ ಲೆಕ್ಕಪರಿಶೋಧಕ ರಾಗಿ ಅಶ್ವಜಿತ್ ಹೆಜಮಾಡಿ ಅವರನ್ನು ನೇಮಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ವಂದಿಸಿದರು. ಸಭೆಯಲ್ಲಿ ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ ದೇಯಿ-ಬೈದೆತಿ ಮೂಲಸ್ಥಾನ ಪುನರುತ್ಥಾದನ ಮನವಿ ಪತ್ರವನ್ನು ಜಯ ಸಿ. ಸುವರ್ಣ ಬಿಡು ಗಡೆಗೊಳಿಸಿದರು.
ಚಿತ್ರ-ವರದಿ : ಸುಭಾಶ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.