ಬಿಲ್ಲವ ಜಾಗೃತಿ ಬಳಗ ಮಹಿಳಾ ವಿಭಾಗ: ವಿಶ್ವ ಮಹಿಳಾ ದಿನಾಚರಣೆ
Team Udayavani, Mar 24, 2017, 3:59 PM IST
ಮುಂಬಯಿ: ಬಿಲ್ಲವ ಜಾಗೃತಿ ಬಳಗ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯು ಮಾ. 8 ರಂದು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ವಿರಾರ್ನಲ್ಲಿರುವ ಬಾಬಾ ಭಾಸ್ಕರ್ ಪವರ್ ನಿರ್ಮಿತ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಆಶ್ರಮ ವಾಸಿಗಳಿಗೆ ತಿಂಡಿ, ತಿನಸು, ವಸ್ತ್ರ ಮತ್ತು ದಿನೋಪಯೋಗಿ ವಸ್ತುಗಳನ್ನು ವಿತರಿಸಿ, ಆನಾಥಶ್ರಮದ ಸದಸ್ಯರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ನಿವೃತ್ತ ಸೇನಾಧಿಕಾರಿಯೊಬ್ಬರು ಈ ಅನಾಥಶ್ರಮವನ್ನು ಸ್ಥಾಪಿಸಿ, ಅಸಹಾಯಕರಿಗೆ ನೆರವಾಗಿದ್ದು, ಇದೀಗ ಬಾಬಾ ಭಾಸ್ಕರ್ ಪವರ್ ನಿಧನ ಹೊಂದಿದ್ದು, ಅವರ ಪುತ್ರ ಆಶ್ರಮವನ್ನು ನಡೆಸುತ್ತಿದ್ದಾರೆ.
ವಿರಾರ್ ವೃದ್ಧಾಶ್ರಮದ ಸದಸ್ಯರನ್ನು ಮುಂದಿನ ವರ್ಷ ವನ ವಿಹಾರಕ್ಕೆ ಕರೆದೊಯ್ಯುವ ಸಂಪೂರ್ಣ ವೆಚ್ಚವನ್ನು ಬಿಲ್ಲವ ಜಾಗೃತಿ ಬಳಗದ ಮಹಿಳಾ ವಿಭಾಗದ ಸದಸ್ಯೆಯರು ಭರಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ಕಳೆದ ಡಿಸೆಂಬರ್ನಲ್ಲಿ ಬಿಲ್ಲವ ಜಾಗೃತಿ ಬಳಗದ ಮಹಿಳಾ ವಿಭಾಗದ ಸದಸ್ಯೆಯರು ಪರೇಲ್ನಲ್ಲಿರುವ ನಾನಾ ಪಾಲ್ಕರ್ ಸಮಿತಿ ಸಂಸ್ಥೆಗೆ ಭೇಡಿ ನೀಡಿ ಸಹಕರಿಸಿದ್ದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಕರ್ಕೇರ, ಕಾರ್ಯದರ್ಶಿ ಯಶೋದಾ ಎನ್. ಪೂಜಾರಿ, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯೆಯರು ವೈಯಕ್ತಿಯ ದೇಣಿಗೆ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.