ಬಿಲ್ಲವ ಭವನ: ನಾರಾಯಣ ಗುರುಗಳ 164ನೇ ಜಯಂತ್ಯುತ್ಸವ ಸಮಾರೋಪ
Team Udayavani, Aug 29, 2018, 12:45 PM IST
ಮುಂಬಯಿ: ನಾರಾಯಣ ಗುರುಗಳು ಸತ್ಯಾನ್ವೇ ಷಣಾ ಪ್ರತಿಕಾರರು. ಸಮನ್ವತೆಯ ಲೋಕಜ್ಞಾನಿಗಳಾಗಿದ್ದ ಅವರು ಆಧ್ಯಾತ್ಮಿಕ ಮಹಾಪುರುಷರು. ಮಾನ ವತಾವಾದವನ್ನೇ ಪ್ರಧಾನವಾಗಿಸಿ ಸರ್ವಧರ್ಮ ಸಮನ್ವಯಕರಾಗಿ ಶಾಂತಿ ಬಾಳ್ವೆಯ ಜೀವನ ಕರುಣಿಸಿ ಅನುಗ್ರಹಿಸಿದ ನಾರಾಯಣ ಗುರು ಗಳು ದೇವ ಸ್ವರೂಪ ಸಂತರು. ಮನುಕುಲಕ್ಕೆ ಶಾಂತಿ ಪ್ರಾಪ್ತಿಸಿ ಸಮಾನತೆಯ ಬದುಕು ಪ್ರಾಪ್ತಿಸಿದ ದೇವ ಮಾನರಿವರು. ಎಲ್ಲಾ ಸಮಾಜಕ್ಕೆ ನಿಷ್ಠಾವಂತರಾಗಿ, ಸಮಾನತಾ ಜೀವನಕ್ಕೆ ಮಾರ್ಗದರ್ಶಕರೂ, ಪ್ರೇರಕರೂ ಆಗಿ ವಿಶ್ವ ಶಾಂತಿಗಾಗಿ ಬದುಕು ಬೋಧಿಸಿದ ಜಗದ್ಗುರು. ಇಂತಹ ಗುರುಗಳ ಪರಿಪಾಲಕರಾದ ಬಿಲ್ಲವರು ಸ್ವಜಾತೀಯ ಒಗ್ಗಟ್ಟು ತೋರ್ಪಡಿಸಿ ಪ್ರತಿಯೊಬ್ಬರಿಗೆ ಆಧಾರವಾಗಿ ಬಾಳಿರಿ ಎಂದು ಪಂಚ ಕುಟೀರದ ಸುವರ್ಣ ಮಂದಿರ ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನ ಪೊವಾಯಿ ಇದರ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ತಿಳಿಸಿದರು.
ಆ. 27ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತ್ಯುತ್ಸವ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಬಿಲ್ಲವರು ಸದಾ ಸಮಾಜ ಪ್ರಿಯರು, ಬಿಲ್ಲವರ ಬಲಿಷ್ಠ ಶಕ್ತಿಯುಳ್ಳ ಸಮಾಜ ಎಲ್ಲವೂ ಸರಿ. ಆದರೆ ಸಾಂಘಿಕವಾಗಿ ಇನ್ನಷ್ಟು ಬಲಯುತರಾಗು ಆವಶ್ಯಕತೆ ಇದೆ. ಜೀವನ ಅಂದರೆ ಆತ್ಮ ಮತ್ತು ಆತ್ಮವೇ ಪರಮಾತ್ಮ. ಇಂತಹ ಜೀವನ ಪಾವನವಾಗಲು ಜಾತಿಮತ, ಧರ್ಮಭೇದ ಮರೆತು ಬಾಳುತ್ತಾ ಪ್ರತಿಯೊಬ್ಬರನ್ನು ನೆಮ್ಮದಿ ಯಿಂದ ಬಾಳಲು ಬಿಲ್ಲವರು ಪ್ರೇರಕರಾಗಬೇಕು ಎಂದರು.
ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅವರ ಮಾರ್ಗದರ್ಶನ ಹಾಗೂ ಅಸೋಸಿ ಯೇಶನ್ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶಾರದಾ ಭಾಸ್ಕರ್ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಕಲ್ಯಾಣ್ ಇದರ ಅಧ್ಯಕ್ಷ ಎಕ್ಕಾರು ನಡೊÂàಡಿಗುತ್ತು ಭಾಸ್ಕರ್ ಎಸ್. ಶೆಟ್ಟಿ, ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಅವೆನ್ಯೂ ಹೊಟೇಲು ಸಮೂಹದ ನಿರ್ದೇಶಕ ಬೋಳ ರಘುರಾಮ ಕೆ. ಶೆಟ್ಟಿ, ಅಖೀಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ಭಂಡಾರಿ ಮಹಾ ಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್ ಎಲ್. ಬಂಗೇರ, ಭಾರತ್ ಬ್ಯಾಂಕ್ ಲಿಮಿಟೆಡ್‌ನ ನಿರ್ದೇಶಕ ಗಂಗಾಧರ್ ಜೆ. ಪೂಜಾರಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ ಉಪಸ್ಥಿತರಿದ್ದರು.
ಹುಟ್ಟು ಸಾವು ನಮ್ಮ ಕೈಯಲಿಲ್ಲ. ಅದರೆ ಆ ಮಧ್ಯೆಯ ಜೀವನವಂತೂ ಪ್ರತೀಯೋರ್ವರ ಕೈಯಲ್ಲಿದೆ. ಅದನ್ನು ಧರ್ಮ ನಿಷ್ಠುರವಾಗಿ ಬಾಳುವುದೇ ಮಾನವ ಜೀವನ. ಅದಕ್ಕಾಗಿ ದೇವರನ್ನು ಮರೆಯುವ ಈ ಯುಗದ ನವಪೀಲಿಗೆಯಲ್ಲಿ ದೇವರ ಭಕ್ತಿ ಶಕ್ತಿಯ ಕೃಪೆ ಮೂಡಿಸಬೇಕು ಎಂದು ಕೆ. ಎಲ್. ಬಂಗೇರ ಸ್ತೋತ್ರದೊಂದಿಗೆ ಶುಭ ಹಾರೈಸಿದರು.
ಸಮಾಜದಲ್ಲಿ ಸಮಾನವಾಗಿ ಬಾಳಿದಾಗ ಅದೇ ಮೊದಲ ನೆಮ್ಮದಿಯ ಜೀವ. ಬಿಲ್ಲವರಾದ ನಾವೂ ಸುಶಿಕ್ಷತರಾಗಿ ಎಲ್ಲಾ ಸಮುದಾಯಗಳ ಜೊತೆಗೆ ಸಾಮರಸ್ಯವಾಗಿ ಮುನ್ನಡೆಯೋಣ ಎಂದು ಎನ್. ಟಿ. ಪೂಜಾರಿ ತಿಳಿಸಿದರು.
ಅಸೋಸಿಯೇಶನ್‌ನ ಉಪಾಧ್ಯಕ್ಷ ರಾದ ಶಂಕರ ಡಿ. ಪೂಜಾರಿ, ಹರೀಶ್ ಜಿ. ಅಮೀನ್, ದಯಾನಂದ್ ಆರ್. ಪೂಜಾರಿ, ಶ್ರೀನಿವಾಸ ಆರ್. ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎಂ. ಕೋಟ್ಯಾನ್, ಮಾಜಿ ಅಧ್ಯಕ್ಷ ನಿತ್ಯಾನಂದ್ ಡಿ. ಕೋಟ್ಯಾನ್, ಭಾರತ್ ಬ್ಯಾಂಕಿನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ, ಸೇವಾದಳದ ದಳಪತಿ ಗಣೇಶ್ ಜಿ. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧನಂಜಯ ಶಾಂತಿ ಅವರ ಪೌರೋಹಿತ್ಯದಲ್ಲಿ ಕಲಾಶಾಭಿಷೇಕ, ಪೂಜೆ ನಡೆಯಿತು. ರವೀಂದ್ರ ಶಾಂತಿ, ಗಣೇಶ್ ಪೂಜಾರಿ, ಸುಭಾಶ್ಚಂದ್ರ ಮಾಬಿಯಾನ್, ಸಂತೋಷ್ ಕೆ. ಪೂಜಾರಿ ನೆರೆದ ಸದ್ಭಕ್ತರು, ಗುರುಭಕ್ತರಿಗೆ ತೀರ್ಥ ಪ್ರಸಾದ ವಿತರಿಸಿ ಹರಸಿದರು. ಜಗನ್ನಾಥ್ ಅಮೀನ್, ಅಶೋಕ್ ಸಸಿಹಿತ್ಲು, ಸಿ. ಆರ್. ಮೂಲ್ಕಿ, ಜಪಯಜ್ಞ ನಡೆಸಿದ ಪ್ರಭಾಕರ ಸಸಿಹಿತ್ಲು, ವಿವಿಧ ಸೇವೆಗೈದ ಗಣ್ಯರನ್ನು ಗೌರವಿಸಲಾಯಿತು. ಭಾರತ್ ಬ್ಯಾಂಕಿನ ನಿರ್ದೇಶಕರು, ಉನ್ನತಾಧಿಕಾರಿಗಳು, ಅಸೋಸಿ ಯೇಶನ್‌ನ ಎಲ್ಲಾ ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿ, ಸದಸ್ಯರು ಸೇರಿದಂತೆ ಕಿಕ್ಕಿರಿದು ನೆರೆದ ಗುರುಭಕ್ತರು ಉಪಸ್ಥಿತರಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಸಮಿತಿಯ ಕಾರ್ಯಧ್ಯಕ್ಷ ಮೋಹನ್‌ದಾಸ್ ಜಿ. ಪೂಜಾರಿ ಸ್ವಾಗತಿಸಿದರು. ಅಸೋಸಿಯೇಶನ್‌ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್ ಪ್ರಸ್ತಾವನೆಗೈದು ಅತಿಥಿಗಳು ಮತ್ತು ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.
ಹರೀಶ್ ಜಿ. ಸಾಲ್ಯಾನ್, ಧರ್ಮೇಶ್ ಸಾಲ್ಯಾನ್, ಕೇಶವ ಕೆ. ಕೋಟ್ಯಾನ್ ಅತಿಥಿಗಳನ್ನು ಪರಿಚಯಿಸಿದರು. ಧಾರ್ಮಿಕ ಸಮಿತಿಯ ಕಾರ್ಯದರ್ಶಿ ರವೀಂದ್ರ ಎ. ಅಮೀನ್ ವಂದಿಸಿದರು.
ಜಯ ಸಿ. ಸುವರ್ಣರು ನಮಗೆಲ್ಲಾ ಗುರು ಸಮಾನರು. ಅವರು ನಮ್ಮೆಲ್ಲರ ಬದುಕಿನ ಪರಿವರ್ತನೆಯ ಹರಿಕಾರರು. ಬಾಂಧವ್ಯದ ಸಮನ್ವಯಕರಾಗಿ ನಮ್ಮೆಲ್ಲರನ್ನು ಈ ಮಟ್ಟಕ್ಕೆ ಬೆಳೆಸಿದವರು. ನಾರಾಯಣ ಗುರುಗಳ ಅಂತಹ ತತ್ವಾದರ್ಶಗಳನ್ನು ನಾವೂ ಪಾಲಿಸಿ ಮುಂದಿನ ಬಾಳನ್ನು ಹಸನ್ಮುಖಗೊಳಿಸೋಣ.
-ಚಂದ್ರಹಾಸ ಶೆಟ್ಟಿ, ಉಪಾಧ್ಯಕ್ಷರು,
ಬಂಟರ ಸಂಘ ಮುಂಬಯಿ
ಜಯ ಸುವರ್ಣ ಸಂಘಟನಾ ಚಾತುರ್ಯತೆ ಎಲ್ಲರಿಗೂ ಮಾದರಿ. ಸುವರ್ಣರು ಮತ್ತು ಚಂದ್ರಶೇಖರ ಪೂಜಾರಿ ಅವರು ನಮ್ಮನ್ನು ಶಿವಗಿರಿಗೆ ಕರೆದೊಯ್ದ ನಾರಾಯಣ ಗುರುಗಳ ಅನುಗ್ರಹಕ್ಕೆ ಪ್ರೇರೆಪಿಸಿದವರು. ಗುರುಗಳ ಆಶಯದಂತೆ ನಾವಿಂದು ಹಲವು ತಾಯಿಯ ಮಕ್ಕಳು ಈ ವೇದಿಕೆಯನ್ನು ಅಲಂಕರಿಸುವಂತಾಗಿದೆ. ಇದು ಸಾಮರಸ್ಯ ಸಾರುವ ಸಹೋದರತ್ವದ ವೇದಿಕೆಯೇ ಸರಿ.
– ಭಾಸ್ಕರ ಶೆಟ್ಟಿ ಕಲ್ಯಾಣ್, ಸಮಾಜ ಸೇವಕ
ಗುರು ನಾರಾಯಣರು ಜ್ಞಾನದ ದಾರಿದೀಪವಾಗಿದ್ದು ಅವರ ತತ್ವಾದರ್ಶಗಳನ್ನು ಮೈಗೂಡಿಸಿ ಮುನ್ನಡೆಯುವ ಬಿಲ್ಲವರು ಸದಾ ಭಜನೆಯೊಂದಿಗೆ ಗುರುಗಳ ಸ್ಮರಣೆಗೈದು ಈ ಮಹಾನಗರಕ್ಕೆ ಒಳಿತಾಗುವಂತೆ ಮಾಡುತ್ತಿದ್ದಾರೆ. ಗುರುಬಲ ಮತ್ತು ದೆ„ವ-ದೇವರಬಲ ವಿನಃ ಎಲ್ಲವೂ ಅಸಾಧ್ಯ. ಆದುದರಿಂದ ಜೀವನಕ್ಕೆ ಗುರುಬಲವೇ ಧೀಶಕ್ತಿ ಆಗಿರುತ್ತದೆ. ಇದನ್ನೆಲ್ಲಾ ನಾವು ರೂಢಿಸಿ ಮುನ್ನಡೆದಾಗ ಬಾಳು ಹಸನಾಗುವುದು.
– ಕಡಂದಲೆ ಸುರೇಶ್ ಭಂಡಾರಿ, ಸ್ಥಾಪಕಾಧ್ಯಕ್ಷರು, ಭಂಡಾರಿ ಮಹಾ ಮಂಡಲ
ಬಾಂಧವ್ಯತ್ವದ ಬಾಳಿಗೆ ಬಿಲ್ಲವರು ಪ್ರೇರಕರು. ಸರ್ವರಲ್ಲೂ ಪ್ರೀತಿ ಭಾಂದವ್ಯವನ್ನು ಬೆಳೆಸಿ ಉಳಿಸಿ ಮುನ್ನಡೆಗೆ ಸರ್ವರಿಗೂ ಆದರಣೀಯರು. ಭಜನೆಯಿಂದ ದೇವಶಕ್ತಿ ಉದ್ಭವಿಸುತ್ತದೆ. ಇಂತಹ ಭಕ್ತಿ ಪ್ರಧಾನ ಭಜನೆಯ ನ್ನು ದಿನಾ ಬಿಲ್ಲವರ ಭವನದಲ್ಲಿ ನಡೆಸಿ ಸಮಗ್ರ ಸಮಾಜಕ್ಕೆ ಆರೋಗ್ಯ, ನೆಮ್ಮದಿಯ ಜೀವನ ದಯಪಾಲಿಸುವ ನಿಮ್ಮಿಂದ ಇನ್ನಷ್ಟು ಸಮಾಜ ಸೇವೆ ನಡೆಯಲಿ.
– ಧರ್ಮಪಾಲ್ ದೇವಾಡಿಗ, ಮಾಜಿ ಅಧ್ಯಕ್ಷರು, ದೇವಾಡಿಗ ಸಂಘ ಮುಂಬಯಿ
ವರದಿ-ಚಿತ್ರ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.