ಬಿಲ್ಲವ ಭವನದಲ್ಲಿ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ-2016
Team Udayavani, Mar 23, 2017, 4:25 PM IST
ಮುಂಬಯಿ: ಮುಂಬಯಿ ಕನ್ನಡ ಜಗತ್ತು ನನ್ನಲ್ಲಿ ಸಾಹಿತ್ಯಾಸಕ್ತಿಯನ್ನು ಹುಟ್ಟಿಸುವಲ್ಲಿ ಸಹಕಾರಿಯಾಯಿತು. ಇಲ್ಲಿಯ ಪ್ರತಿಯೊಂದು ವಿಷಯ ಗಳಲ್ಲೂ ಒಂದೊಂದು ಹೊಸತನವನ್ನು ಕಂಡಿದ್ದೇನೆ. ಅದುವೇ ಸಾಹಿತ್ಯಕ್ಕೆ ಪ್ರೇರಣೆಯಾಯಿತು. ನಾನು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಮುಂಬಯಿಯ ಅನೇಕ ಹಿರಿಯ ಸಾಹಿತಿಗಳು, ಪತ್ರಕರ್ತ ದಿ| ಕೆ. ಟಿ. ವೇಣುಗೋಪಾಲರಂತಹ ಹಿರಿಯ ಪತ್ರಕರ್ತರು, ಕನ್ನಡಪರ ಸಂಘ- ಸಂಸ್ಥೆಗಳೇ ನನ್ನ ಸಾಹಿತ್ಯ ವಲಯದ ಸ್ನೇಹಿತರು ಕಾರಣಕರ್ತರಾಗಿದ್ದಾರೆ. ಇವರೆಲ್ಲರ ನೆರವು, ಸಹಕಾರವನ್ನು ನಾನು ಸದಾ ಸ್ಮರಿಸುತ್ತೇನೆ ಎಂದು ಪ್ರಸಿದ್ಧ ಸಾಹಿತಿ ಮಿತ್ರಾ ವೆಂಕಟ್ರಾಜ್ ಅವರು ಅಭಿಪ್ರಾಯಿಸಿದರು.
ಮಾ. 21ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರಾಯೋಜಿತ ಅಕ್ಷಯ ಮಾಸಿಕದ ಮಾಜಿ ಗೌರವ ಸಂಪಾದಕ ಎಂ. ಬಿ. ಕುಕ್ಯಾನ್ ಪ್ರಾಯೋಜಿತ 2016ನೇ
ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಬರೆದ ಸಾಹಿತ್ಯ ಇತರರಿಗೆ ಮುಟ್ಟಿಸುವ ಮೊದಲು ನನ್ನ ಅಂತರಂಗದ ವಿಮರ್ಶೆ ಗೊಳಪಟ್ಟು ತೃಪ್ತಿ ಕಂಡು ಅನಂತರವೇ ಅದನ್ನು ಓದುಗರ ಮುಂದೆ ಇಡುತ್ತಿದ್ದೆ. ಓದುಗರು ಅದರ ಬಗ್ಗೆ ಮೆಚ್ಚುಗೆ ಪಡೆದಾಗ ಸಂತೃಪ್ತಿ ನನಗೆ ದೊರೆಯುತ್ತದೆ. ಮಹಾನ್ ಸಮಾಜ ಸುಧಾರಕ, ಶೈಕ್ಷಣಿಕ ಕ್ರಾಂತಿಯ ನಾರಾಯಣ ಗುರುಗಳಂತಹವರ ಹೆಸರಿನಲ್ಲಿರುವ ಈ ಪ್ರಶಸಿ ಸ್ವೀಕರಿಸಲು ಸಂತೋಷವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹಿರಿಯ ಸಾಹಿತಿ, ವಿಮರ್ಶಕ ಡಾ| ವಿಶ್ವನಾಥ ಕಾರ್ನಾಡ್ ಅವರು ಮಾತನಾಡಿ, ಒಬ್ಬ ಸಾಹಿತಿಗೆ ತನ್ನ ಲೇಖನದಿಂದ ಸಮಾಜವನ್ನು ಸುಧಾರಿಸಲು ಸಾಧ್ಯವಿದೆ. ಬಿಲ್ಲವರ ಅಸೋಸಿಯೇಶನ್ ಹೊರತರುವ ಅಕ್ಷಯ ಮಾಸಿಕವು ಇಂತಹ ಕೆಲಸ ಮಾಡುತ್ತಿದ್ದು, ಯುವಕರಿಗೆ ಪ್ರೇರಣೆ ನೀಡುವಲ್ಲಿಯೂ ಯಶಸ್ವಿಯಾಗುತ್ತಿದೆ. ಕರ್ನಾಟಕದ ಪ್ರಶಸ್ತಿಗಳು ಮುಂಬಯಿಗೆ ದೊರೆಯುವುದಿಲ್ಲ. ಮುಂಬಯಿಗರನ್ನು ಹೊರನಾಡ ಕನ್ನಡಿಗರೆಂಬ ಹಣೆಪಟ್ಟಿ ಕಟ್ಟಿ ದೂರ ಇಡುವುದು ವಿಷಾದನೀಯ. ಈ ನಿಟ್ಟಿನಲ್ಲಿ ಅಕ್ಷಯ ಮಾಸಿಕವು ಪ್ರದಾನಿಸುತ್ತಿರುವ ಈ ಪ್ರಶಸ್ತಿಯು ನಮ್ಮೆಲ್ಲರ ಹೆಮ್ಮೆಯ ಪ್ರಶಸ್ತಿಯಾಗಿದೆ ಎಂದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ಸಾಹಿತಿ ಮಿತ್ರಾ ವೆಂಕಟ್ರಾಜ್ ಅವರ ಸಾಹಿತ್ಯವು ಶಾಂತವಾಗಿ ಹರಿಯುವ ನದಿಯಂತೆ ಓದುಗರ ಮನಸ್ಸನ್ನು ತಟ್ಟುವಲ್ಲಿ ಯಶಸ್ವಿಯಾಗಿದೆ. ಅವರೋರ್ವ ಸೃಜನಶೀಲ ಲೇಖಕಿಯಾಗಿದ್ದು, ಈ ಪ್ರಶಸ್ತಿಯು ಅರ್ಥಪೂರ್ಣವಾಗಿದೆ. ಮಹಿಳಾ ಸಾಹಿತಿಗೆ ಈ ಪ್ರಶಸ್ತಿ ದೊರೆತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ಇನ್ನೋರ್ವ ಅತಿಥಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ಮಾತನಾಡಿ, ಅಕ್ಷಯ ಮಾಸಿಕವು ನೀಡುತ್ತಿರುವ ಪ್ರಶಸ್ತಿಯು ಮುಂಬಯಿಯ ಸಾಹಿತಿಗಳಿಗೆ ದೊರೆಯಬೇಕು. ಕರ್ನಾಟಕದಲ್ಲಿ ಬೇರೆ ಬೇರೆ ಪ್ರಶಸ್ತಿಗಳಿದ್ದು, ಮುಂಬಯಿ ಕನ್ನಡಿಗರಿಗೆ ದೊರೆಯುವುದು ಬಹಳ ಕಡಿಮೆ. ಈ ಬಗ್ಗೆ ಪ್ರಾಯೋಜಕರು ಚಿಂತಿಸಬೇಕಾಗಿದೆ ಎಂದು ಹೇಳಿದರು.
ಬಿಲ್ಲವರ ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಪ್ರಾಸ್ತಾವಿಕವಾಗಿ ಮಾತ ನಾಡಿ ಅಸೋಸಿಯೇಶನ್‌ನ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಅಕ್ಷಯದ ಸಂಪಾದಕ ಈಶ್ವರ ಅಲೆವೂರು ಅತಿಥಿಗಳನ್ನು, ಸಮ್ಮಾನಿತರನ್ನು ಪರಿಚಯಿ ಸಿದರು. ಅಕ್ಷಯ ಸಂಪಾದಕ ಬಳಗದ ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಮಿತ್ರಾ ವೆಂಕಟ್ರಾಜ್ ಮತ್ತು ವೆಂಕಟ್ರಾಜ್ ದಂಪತಿಯನ್ನು ಸಮ್ಮಾನ ಪತ್ರ, ನಗದಿನೊಂದಿಗೆ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ-2016ನ್ನು ಪ್ರದಾನಿಸಿ ಶುಭ ಹಾರೈಸಿದರು.
ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರ ಅಧ್ಯಕ್ಷತೆ ವಹಿಸಿದ್ದರು. ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷರಾದ ಡಾ| ಯು. ಧನಂಜಯ ಕುಮಾರ್, ಶಂಕರ ಡಿ. ಪೂಜಾರಿ, ಭಾಸ್ಕರ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಮಹೇಶ್ ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಧರ್ಮೇಶ್ ಸಾಲ್ಯಾನ್ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ರಂಗ ತುಡರ್ ಭಿವಂಡಿ ವತಿಯಿಂದ ಮಾಯಕದ ಮಾಣಿ ನಾಟಕ ಪ್ರದರ್ಶನಗೊಂಡಿತು.
ಅಕ್ಷಯದ ಮಾಜಿ ಗೌರವ ಸಂಪಾದಕ ಎಂ. ಬಿ. ಕುಕ್ಯಾನ್ ಅವರಿಂದ ಅಕ್ಷಯ ಮಾಸಿಕಕ್ಕೆ ಗೌರವ ಬಂದಿದೆ. ಅವರ 25 ವರ್ಷಗಳ ನಿಷ್ಠೆಯ ಸೇವೆಯೇ ಅಕ್ಷಯ ಮಾಸಿಕವು ಯಶಸ್ವಿಯಾಗಲು ಕಾರಣವಾಗಿದೆ. ಆರು ತಿಂಗಳಿಗೋಸ್ಕರ ಅಕ್ಷಯಕ್ಕೆ ಕಾಲಿಟ್ಟ ಅವರು 25 ವರ್ಷಗಳ ಕಾಲ ಪತ್ರಿಕೆಯ ಮೇಲಿನ ಪ್ರೀತಿಯಿಂದ ಕಾರ್ಯ ನಿರ್ವಹಿಸಿದ್ದಾರೆ. ಅವರ ನೇರ ನುಡಿಯ ಸಂಪಾದಕೀಯವು ಎಲ್ಲರ ಮನಸ್ಸನ್ನು ಹಾಗೂ ಹೃದಯವನ್ನು ತಟ್ಟುತ್ತಿತ್ತು. ಇಂದು ಅಕ್ಷಯವು ಇಷ್ಟೊಂದು ಬೆಳವಣಿಗೆಯನ್ನು ಕಂಡಿದ್ದರೆ, ಅದಕ್ಕೆ ಎಂ. ಬಿ. ಕುಕ್ಯಾನ್ ಅವರ ನಿಷ್ಠೆ, ಶ್ರದ್ಧೆಯ ಸೇವೆ ಅನುಪಮವಾಗಿದೆ
– ಜಯ ಸಿ. ಸುವರ್ಣ ,ಕಾರ್ಯಾಧ್ಯಕ್ಷರು ಭಾರತ್ ಬ್ಯಾಂಕ್
ಬಿಲ್ಲವರ ಅಸೋಸಿಯೇಶನ್ ಒಂದು ಜಾತೀಯ ಸಂಸ್ಥೆಯಾದರೂ ಅದು ಜಾತಿ ಮೀರಿ ಕಾರ್ಯ ನಿರ್ವಹಿಸುತ್ತಿದೆ. ಶೈಕ್ಷಣಿಕ, ಬ್ಯಾಂಕಿಂಗ್, ಸಾಮಾಜಿಕ ಕ್ಷೇತ್ರಗಳು ಸೇರಿದಂತೆ ಹಲವು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಇಂದು ನಾರಾಯಣ ಗುರುಗಳ ಹೆಸರಿನಲ್ಲಿ ನೀಡಿರುವ ಈ ಪ್ರಶಸ್ತಿಯು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದವರಿಗೆ ಪ್ರದಾನಿಸಲಾಗುತ್ತದೆ. ಪ್ರತಿ ವರ್ಷ ಯೋಗ್ಯರಿಗೆ ಪ್ರಶಸ್ತಿ ಲಭಿಸುತ್ತಿರುವುದು ಸಂತೋಷದ ಸಂಗತಿ. ಮುಂಬಯಿಯಲ್ಲಿ ಯುವ ಸಾಹಿತಿಗಳು ಮುಂದೆ ಬರಬೇಕು ಎಂಬುದು ನಮ್ಮ ಉದ್ಧೇಶವಾಗಿದೆ.
– ನಿತ್ಯಾನಂದ ಡಿ. ಕೋಟ್ಯಾನ್
ಅಧ್ಯಕ್ಷರು .ಬಿಲ್ಲವರ ಅಸೋಸಿಯೇಶನ್ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.