ಸದಸ್ಯರು ಸಕ್ರಿಯರಾದಾಗ ಸಂಘಟನೆ ಸದೃಢ: ಸೂರ್ಯ ಎಸ್‌. ಪೂಜಾರಿ

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ 34ನೇ ವಾರ್ಷಿಕ ಮಹಾಸಭೆ

Team Udayavani, Sep 4, 2022, 12:17 PM IST

tdy-1

ಮುಂಬಯಿ: ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಈ ಸಂಘಟನೆಯನ್ನು ಮುನ್ನೆಡೆಸುವ ಜವಬ್ದಾರಿ ಯುವ ಜನತೆಯ ಮೇಲಿದೆ. ಹೊಸ ಸದಸ್ಯರು ಆಡಳಿತ ಮಂಡಳಿ ಅಥವಾ ಉಪಸಮಿತಿಗೆ ಸೇರಿಕೊಂಡರೆ ನಮ್ಮ ಸಂಘಟನೆಯನ್ನು ಮತ್ತಷ್ಟು ಬಲಪಡಿ ಸಬಹುದು. ಮಹಾನಗರ ಮತ್ತು ಉಪ ನಗರಗಳಲ್ಲಿ ನೆಲೆಸಿರುವ ಕುಂದಾಪುರ ಬಿಲ್ಲವರು ಸದಸ್ಯತ್ವ ಪಡೆಯಬೇಕು. ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ನಮ್ಮ ಮುಂದಿದೆ ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಅಧ್ಯಕ್ಷ ಸೂರ್ಯ ಎಸ್‌. ಪೂಜಾರಿ ಹೇಳಿದರು.

ದಾದರ್‌ ಪೂರ್ವದ ಪ್ರಾಚಾರ್ಯ ಬಿ. ಎನ್‌. ವೈದ್ಯ ಸಭಾಗೃಹದಲ್ಲಿ ಆ. 21ರಂದು ಜರಗಿದ ಸಂಘದ 34ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ ಸಂಸ್ಥೆಗಳ ಕಾರ್ಯಕ್ರಮದಲ್ಲಿ ಭಾಗಿಯಾದಾಗ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳು ತಿಳಿಯುತ್ತದೆ. ಕಳೆದೆರಡು ವರ್ಷ ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಾಗದಿದ್ದರೂ ಸಂಕಷ್ಟಕ್ಕೀಡಾದ ಸದಸ್ಯರಿಗೆ ನೆರವಾಗಿದ್ದೇವೆ. ಕೊರೊನಾ ಸಂದರ್ಭ ಕೆಲವು ಸದಸ್ಯರಿಗೆ ಆರ್ಥಿಕ ನೆರವು ನೀಡುವುದರೊಂದಿಗೆ ದೈನಂದಿನ ಸಾಮಗ್ರಿಗಳನ್ನು ವಿತರಿಸಿದ್ದೇವೆ. ಸಂಘ ಇನ್ನಷ್ಟು ಬಲಗೊಂಡಲ್ಲಿ ಅಸಹಾಯಕ ಸದಸ್ಯರಿಗೆ ಇನ್ನೂ ಹೆಚ್ಚಿನ ನೆರವು ನೀಡಬಹುದು, ಅಸಹಾಯಕ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನದ ಮೊತ್ತ ಇನ್ನು ಹೆಚ್ಚಿಸಬಹುದು. ವಧು-ವರಾನ್ವೇಷಣೆಗೂ ನಮ್ಮ ಸಂಘ ಸಹಕರಿಸುವುದಲ್ಲದೆ, ಸದಸ್ಯರು ಮತ್ತು ಸದಸ್ಯರ ಮಕ್ಕಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿಕೊಡುತ್ತಾ ಬಂದಿದೆ. ಆ ನಿಟ್ಟಿನಲ್ಲಿ ನಮ್ಮ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸಲು ತಾವೆಲ್ಲರೂ ಸಹಕರಿಸಬೇಕು. ಸದಸ್ಯರೆಲ್ಲರು ಸಕ್ರಿಯರಾದರೆ ಸಂಘಟನೆಯ ಅಭಿವೃದ್ಧಿ ನಿಶ್ಚಿತ ಎಂದರು.

ಗತ ಮಹಾಸಭೆಯ ವರದಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್‌ ಎನ್‌. ಪೂಜಾರಿ ಮತ್ತು ಪ್ರಸಕ್ತ ಸಾಲಿನ ವರದಿಯನ್ನು ಜತೆ ಕಾರ್ಯದರ್ಶಿ ಸುಶೀಲಾ ಆರ್‌. ಪೂಜಾರಿ ಮಂಡಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಶ್ರೀಧರ ವಿ. ಪೂಜಾರಿ ಮಂಡಿಸಿದರು. ಆಂತರಿಕ ಲೆಕ್ಕ ಪರಿಶೋಧಕರಾಗಿ ರಾಜೀವ ಎಂ. ಪೂಜಾರಿ, ಲೆಕ್ಕ ಪರಿಶೋಧಕರಾಗಿ ಕೆ. ವಿ. ಜೋ ಆ್ಯಂಡ್‌ ಅಸೋಸಿಯೇಟ್ಸ್‌ ಅವರನ್ನು ಪುನರಾಯ್ಕೆ ಗೊಳಿಸಲು ಮಹಾಸಭೆ ಅನುಮತಿ ನೀಡಿತು. ಮುಂದಿನ ಎರಡು ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ಒಟ್ಟು ಹದಿನಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನವಣಾಧಿಕಾರಿ ರಾಘವೇಂದ್ರ ಎನ್‌. ಬಿಲ್ಲವ ತಿಳಿಸಿದರು.

ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪಾರಾಧನೆ ಮೂಲಕ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿದರು. ಯುವ ಅಭ್ಯುದಯ ಸಮಿತಿಯ ಸದಸ್ಯೆಯರು ಪಾರ್ಥನೆಗೈದರು. ಜತೆ ಕಾರ್ಯದರ್ಶಿ ಸುಶೀಲಾ ಆರ್‌. ಪೂಜಾರಿ ವಂದಿಸಿದರು.

ಸಂಘದ ಪದಾಧಿಕಾರಿಗಳಾದ ಅಧ್ಯಕ್ಷ ಸೂರ್ಯ ಎಸ್‌. ಪೂಜಾರಿ, ಉಪಾಧ್ಯಕ್ಷರಾದ ಎಸ್‌. ಕೆ. ಪೂಜಾರಿ, ಎನ್‌. ಎಂ. ಬಿಲ್ಲವ, ಪ್ರಧಾನ ಕಾರ್ಯದರ್ಶಿ ಅಶೋಕ ಎನ್‌. ಪೂಜಾರಿ, ಕೋಶಾಧಿಕಾರಿ ಶ್ರೀಧರ ವಿ. ಪೂಜಾರಿ, ಜತೆ ಕಾರ್ಯದರ್ಶಿಗಳಾದ ಸುಶೀಲಾ ಆರ್‌. ಪೂಜಾರಿ, ರಂಗ ಎಸ್‌. ಪೂಜಾರಿ, ಜತೆ ಕೋಶಾಧಿಕಾರಿಗಳಾದ ರಮೇಶ ಜಿ. ಬಿಲ್ಲವ, ಆನಂದ ಕೆ. ಪೂಜಾರಿ, ಸಮಿತಿಯ ಸದಸ್ಯರಾದ ಆನಂದ ಎಂ. ಪೂಜಾರಿ, ಎನ್‌. ಜಿ. ಪೂಜಾರಿ, ಸಿ. ಎ. ಪೂಜಾರಿ, ಲಕ್ಷ ¾ಣ ಪೂಜಾರಿ ಕೊಡೇರಿ, ರಾಜಶ್ರೀ ಪಿ. ಸಾಲ್ಯಾನ್‌, ಯಶೋದಾ ಎಸ್‌. ಪೂಜಾರಿ, ಮಲ್ಲಿಕಾ ಎಸ್‌. ಪೂಜಾರಿ, ಜಯಶ್ರೀ ಎ. ಕೋಡಿ, ಹರೀಶ್‌ ಎನ್‌. ಪೂಜಾರಿ, ರತ್ನಾಕರ ಎಸ್‌. ಪೂಜಾರಿ, ಪೂರ್ಣಿಮಾ ಟಿ. ಪೂಜಾರಿ ಉಪಸ್ಥಿತರಿದ್ದರು.

ನೂತನ ಸಮಿತಿಗೆ ಆಯ್ಕೆ  :

ಸೂರ್ಯ ಎಸ್‌. ಪೂಜಾರಿ, ಆನಂದ ಎಂ. ಪೂಜಾರಿ, ನರಸಿಂಹ ಎಂ. ಬಿಲ್ಲವ, ಶ್ರೀಧರ ವಿ. ಪೂಜಾರಿ, ಎನ್‌. ಜಿ. ಪೂಜಾರಿ, ಸಿ. ಎ. ಪೂಜಾರಿ, ಆನಂದ ಕೆ. ಪೂಜಾರಿ, ರಂಗ ಎಸ್‌. ಪೂಜಾರಿ, ರಾಜಶ್ರೀ ಪಿ. ಸಾಲ್ಯಾನ್‌, ಸುಶೀಲಾ ಆರ್‌. ಪೂಜಾರಿ, ಯಶೋದಾ ಎಸ್‌. ಪೂಜಾರಿ, ಮಲ್ಲಿಕಾ ಎಸ್‌. ಪೂಜಾರಿ, ಹರೀಶ್‌ ಎನ್‌. ಪೂಜಾರಿ, ರತ್ನಾಕರ ಎಸ್‌. ಪೂಜಾರಿ, ಪೂರ್ಣಿಮಾ ಟಿ. ಪೂಜಾರಿ ಮತ್ತು ಮನೀಷಾ ಎಂ. ಪೂಜಾರಿ ನೂತನ ಸಮಿತಿಗೆ ಆಯ್ಕೆಯಾದರು.

ಟಾಪ್ ನ್ಯೂಸ್

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Desi Swara: ಕೊಂಚ ಬಿಡುವು ಪಡೆದು ಸುತ್ತಾಡಿ, ಜೀವನವನ್ನು ಅನ್ವೇಷಿಸಿ

Iceland Gerua:ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

Iceland Gerua: ಭಾರತಕ್ಕೂ ಐಸ್‌ಲ್ಯಾಂಡ್‌ಗೂ ಯಾವ ಬಾದರಾಯಣ ಸಂಬಂಧ?!

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

ಕರ್ನಾಟಕ ಸಂಘ ಕತಾರ್‌: ಅಭಿಯಂತರ ದಿನ, ರಜತ ಮಹೋತ್ಸವ ಲಾಂಛನ ಅನಾವರಣ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

Desi Swara: ಅನಿವಾಸಿ ಸಹೋದರಿಯರ ಸತ್ರಿಯಾ ಪ್ರದರ್ಶನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.