ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಕಚೇರಿ: ಗುರುಜಯಂತಿ ಆಚರಣೆ


Team Udayavani, Sep 11, 2021, 1:00 PM IST

ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಕಚೇರಿ: ಗುರುಜಯಂತಿ ಆಚರಣೆ

ಮೀರಾರೋಡ್: ಮೀರಾರೋಡ್‌ ಪೂರ್ವದ ಶಾಂತಿ ನಗರ ಸೆಕ್ಟರ್‌ 5ರ, ಸಿ-57 ಕವಿತಾ ಕಟ್ಟಡದಲ್ಲಿರುವ ಬಿಲ್ಲವರ ಅಸೋಸಿಯೇಶನ್‌ ಮೀರಾರೋಡ್‌ ಸ್ಥಳೀಯ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾ ಯಣಗುರುಗಳ 167ನೇ ಜಯಂತ್ಯು ತ್ಸವವು ಸೆ. 2ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಕಾರ್ಯಾಧ್ಯಕ್ಷ ವಿಶ್ವನಾಥ ಎಂ. ಸಾಲ್ಯಾನ್‌ ಅವರು ದೀಪ ಪ್ರಜ್ವಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳು ಮಾನವೀಯ ಮೌಲ್ಯಗಳ ಅಡಿಯಲ್ಲಿ ವೈಜ್ಞಾನಿಕ ಆಧ್ಯಾತ್ಮಿಕ ತಳಹದಿಯ ಮೇಲೆ ಮಾನವ ಸಮಾಜವನ್ನು ಉದ್ಧರಿಸಿದವರು. ಅಂದು ಅವರು ಹಚ್ಚಿದ ಹಣತೆಯ ದೀಪ ಇಂದಿಗೂ ಮಾರ್ಗದರ್ಶನ ನೀಡುವ ದಾರಿದೀಪವಾಗಿದೆ. ಮನುಕುಲದ ಶತ್ರುಗಳಾದ ಅಸ್ಪೃಶ್ಯತೆ ವಿರುದ್ಧ ಹೋರಾಡಿ ಶೋಷಿತರ ಬದುಕಿನ ಬವಣೆಯನ್ನು ನೀಗಿಸಿದ ಅವರು ಮಹಾನ್‌ ಜ್ಞಾನ ಜ್ಯೋತಿ ಸ್ವರೂಪರಾಗಿದ್ದಾರೆ. ಅವರ  ಪಾಲನೆಯೊಂದಿಗೆ ನಾವೆಲ್ಲರೂ ಕೂಡಿ ಬಾಳ್ಳೋಣ ಎಂದರು.

ಸಮಿತಿಯ ಪ್ರಧಾನ ಆರ್ಚಕ ಶ್ಯಾಮ್‌ ಅಮೀನ್‌ ಪೌರೋಹಿತ್ಯದಲ್ಲಿ ಮಹಾ ಮಂಗಳಾರತಿ, ತೀರ್ಥ ಪ್ರಸಾದ ನೆರವೇರಿತು. ಸಮಿತಿ ಸದಸ್ಯರಿಂದ ಗುರು ಸ್ತೋತ್ರ, ಭಜನೆ, ಓಂ ನಮೋ ನಾರಾಯಣಾ ನಮಃ ಶಿವಾಯ ಜಪ ಯಜ್ಞ ನಡೆಯಿತು. ಕಾರ್ಯದರ್ಶಿ ಎನ್‌. ಪಿ. ಕೋಟ್ಯಾನ್‌ ಅಸೋಸಿಯೇಶನ್‌ ಕಾರ್ಯಯೋಜನೆ ಬಗ್ಗೆ ವಿವರಿಸಿದರು. ಉಪಕಾರ್ಯಾಧ್ಯಕ್ಷ ಸುಭಾಸ್‌ ಎಂ. ಕರ್ಕೇರ ಸೇವಾರ್ಥಿಗಳ ಯಾದಿ ವಾಚಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಅನ್ನದಾನದ ಸೇವಾರ್ಥಿಗಳಾದ ಸಂಜೀವಿ ಶಂಕರ ಪೂಜಾರಿ ಮತ್ತು ಸುಲೋಚನಾ ವಿಶ್ವನಾಥ್‌ ಮಾಬೀಯಾನ್‌ ಅವರನ್ನು ಮಹಾ ಪ್ರಸಾದವನ್ನಿತ್ತು ಗೌರವಿಸಲಾಯಿತು.

ಇದನ್ನೂ ಓದಿ:ರೈಲ್ವೇ ನಿಲ್ದಾಣದಲ್ಲಿ ಮೀನುಗಳ ಮಸಾಜ್‌ : ಪ್ರಯಾಣಿಕರ ಪಾದಗಳಿಗೆ ಕಚಗುಳಿ!

ಮಂದಿರದ ಹೂವಿನ ಶೃಂಗಾರ, ಶಾಮಿಯಾನ ಮತ್ತು ಧ್ವನಿವರ್ಧಕದ ಸೇವಾರ್ಥಿ ಸುಭಾಶ್ಚಂದ್ರ ಎಂ. ಕರ್ಕೇರ, ತೆಂಗಿನಕಾಯಿ ಮತ್ತು ಕುಡಿಯುವ ನೀರಿನ ಸೇವಾರ್ಥಿ ಕರಾವಳಿ ಸೌಂಡ್‌ನ‌ ಮಾಲಕ ದಿನೇಶ್‌ ಸುವರ್ಣ, ಹಣ್ಣು ಹಂಪಲಿನ ಸೇವಾರ್ಥಿ ಶೇಖರ ಪೂಜಾರಿ, ಡ್ರೈ ಫ್ರೂ ರ್ಟ್ಸ್ ನೀಡಿದ ಸೇವಾರ್ಥಿ ಸುಂದರ ಪೂಜಾರಿ, ಹಿಂಗಾರದ ಸೇವಾರ್ಥಿ ವಿಜಯ ಎನ್‌. ಅಮೀನ್‌, ಪ್ರಸಾದದ ಸೇವಾರ್ಥಿ ಮೀರಾರೋಡು ಗೋಲ್ಡ್ ಕಾಯಿನ್‌ ಹೊಟೇಲ್‌, ಲಡ್ಡುವಿನ ಸೇವಾರ್ಥಿ ಭೋಜ ಬಿ. ಸಾಲ್ಯಾನ್‌, ಹೂವಿನ ಅಲಂಕಾರಗೈದ ಸುರೇಶ್‌ ಕೋಟ್ಯಾನ್‌ ಹಾಗೂ ಬಾಲಾಜಿ ಕ್ಯಾಟರರ್ ಇದರ ಲೀಲಾಧರ ಕೆ. ಪೂಜಾರಿ ಮೊದಲಾದವರನ್ನು ಗುರು ಪ್ರಸಾದದೊಂದಿಗೆ ಗೌರವಿಸಲಾಯಿತು.

ಮೀರಾರೋಡು ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಭೋಜ ಬಿ. ಸಾಲ್ಯಾನ್‌, ಗೌರವ ಕೋಶಾಧಿಕಾರಿ ಎಚ್‌. ಎಂ. ಪೂಜಾರಿ, ಜತೆ ಕೋಶಾಧಿಕಾರಿ ವಿಜಯ ಎನ್‌. ಅಮೀನ್‌, ಸದಸ್ಯರಾದ ಅಶೋಕ್‌ ಆರ್‌. ಸಾಲ್ಯಾನ್‌, ಸುಂದರಿ ಆರ್‌. ಕೋಟ್ಯಾನ್‌, ಲೀಲಾಧರ ಕೆ. ಪೂಜಾರಿ, ಜಿ. ಕೆ. ಕೆಂಚನಕೆರೆ, ದಿನೇಶ್‌ ಸುವರ್ಣ, ದಯಾನಂದ ಅಮೀನ್‌, ವಿಶ್ವನಾಥ ಮಾಬೀಯನ್‌, ಸಂಜೀವಿ ಎಸ್‌. ಪೂಜಾರಿ, ಶೋಭಾ ಎಚ್‌. ಪೂಜಾರಿ, ರಾಧಾ ಎಸ್‌. ಕೋಟ್ಯಾನ್‌, ಶಂಕರ ಎಲ್‌. ಪೂಜಾರಿ, ಇಂದಿರಾ ಸುವರ್ಣ, ಭಾರತಿ ಅಂಚನ್‌, ಶಾಂಭವಿ ಜಿ. ಸಾಲ್ಯಾನ್‌, ರವೀಂದ್ರ ಕರ್ಕೇರ, ಯಶೋದಾ ಎಸ್‌. ಕೋಟ್ಯಾನ್‌, ಲಕ್ಷ್ಮೀ ಕೆ. ಅಮೀನ್‌, ವಿಜೀ ತೆಂದ್ರ ಎ. ಸನಿಲ್‌, ಸದಾನಂದ ಸಾಲ್ಯಾನ್‌, ಲಕ್ಷ್ಮೀಕಾಂತ್‌ ಪೂಜಾರಿ, ಜೀವನ್‌ ಅಮೀನ್‌ ಸಹಕರಿಸಿದರು. ಕೇಂದ್ರ ಕಚೇರಿಯ ಉಪಾಧ್ಯಕ್ಷ ಶ್ರೀನಿವಾಸ ಕರ್ಕೇರ, ಪ್ರತಿನಿಧಿ ಮೋಹನ್‌ ಡಿ. ಪೂಜಾರಿ ಉಪಸ್ಥಿತರಿದ್ದರು.

ಚಿತ್ರ-ವರದಿ: ರಮೇಶ್‌ ಅಮೀನ್‌

ಟಾಪ್ ನ್ಯೂಸ್

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.