ಬಿಲ್ಲವರ ಅಸೋಸಿಯೇಶನ್ ಮಹಿಳಾ ವಿಭಾಗ:ಪದಾಧಿಕಾರಿಗಳ ಪದಗ್ರಹಣ
Team Udayavani, Aug 12, 2018, 4:04 PM IST
ಮುಂಬಯಿ: ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಇದರ ಮಹಿಳಾ ವಿಭಾಗದ ಪದಗ್ರಹಣ ಸಮಾರಂಭವು ಆ. 11 ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ರ ಭವನದ ಕಿರು ಸಭಾಗೃಹದಲ್ಲಿ ನಡೆಯಿತು.
ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇ ಖರ ಎಸ್.ಪೂಜಾರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾರಿಗೂ ಪದಾಧಿಕಾರಿಯಾಗುವ ಅವಕಾಶ ಸಿಕ್ಕಿಲ್ಲ ಎಂದು ಬೇಸರಿಸಬಾರದು. ಅವಕಾಶ ವಂಚಿತರಿಗೆ ಸ್ಥಳಿಯ ಸಮಿತಿಗಳ ಮೂಲಕ ದಕ್ಷ ಸೇವೆ ಸಲ್ಲಿ ಸುವ ಅವಕಾಶ ಒದಗಿಸಲಾಗುವುದು. ಇದು ನಮ್ಮನಿಮ್ಮೆಲ್ಲರ ಸಂಸ್ಥೆಯಾಗಿದ್ದು, ಎಲ್ಲರೂ ಒಗ್ಗೂಡಿ ಸಂಸ್ಥೆಯನ್ನು ಐಕ್ಯಮತದಿಂದ ಬೆಳೆಸಬೇಕಾಗಿದೆ ಎಂದು ನುಡಿದು, ನೂತನ ಪದಾಧಿಕಾರಿಗಳನ್ನು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿ ಶುಭಹಾರೈಸಿದರು.
2018-2021 ರ ಸಾಲಿಗೆ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆಯಾಗಿ ಜಯಂತಿ ವಿ. ಉಳ್ಳಾಲ್ ಅವರು ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, 2003 ರಲ್ಲಿ ಜಯ ಸಿ. ಸುವರ್ಣರ ಸಾರಥ್ಯದಲ್ಲಿ ಸ್ಥಾಪಿತ ಈ ಮಹಿಳಾ ವಿಭಾಗ ಇಂದು ಬಲು ಎತ್ತರಕ್ಕೆ ಸಾಗಿದೆ. ಸಮಾಜದಲ್ಲಿನ ಅನೇಕ ನಾರಿಯರಿಗೆ ಇದೊಂದು ಸೂಕ್ತ ಸಂಸ್ಥೆಯಾಗಿ, ಸಾವಿರಾರು ಪ್ರತಿಭೆಗಳಿಗೆ ವೇದಿಕೆಯಾಗಿದೆ. ಇಲ್ಲಿ ಹುದ್ದೆಕ್ಕಿಂತ ಕೆಲಸವೇ ಪ್ರಧಾನವಾದುದು. ಹಿರಿಯರೊಂದಿಗೆ ಕಿರಿಯರು ಹೊಂದಿಕೊಂಡು ಪರಸ್ಪರ ಗೌರವವನ್ನಿತ್ತು ಸಮಾನರಾಗಿ ಮುನ್ನಡೆಯುವುದು ಅಗತ್ಯವಾಗಿದೆ. ಸಾಂಕವಾಗಿ ಮುನ್ನಡೆದಾಗಲೇ ಸಮಾಜಪರ ಭವಿಷ್ಯ ರೂಪಿಸಲು ಸಾಧ್ಯವಾಗುವುದು. ಅಸೋಸಿಯೇಶನ್‌ನ ಧ್ಯೇಯೋದ್ದೇಶಗಳನ್ನು ಅನುಷ್ಠಾನಗೊಳಿಸಿ ಸಂಸ್ಥೆಯನ್ನು ಇನ್ನಷ್ಟು ಬೆಳೆಸ ಲು ಎಲ್ಲಾ ಮಹಿಳೆಯರು ಪಣತೊಡಬೇಕು ಎಂದು ನುಡಿದು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.
ನೂತನ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯೆಯ ರನ್ನೊಳ ಗೊಂಡು ಅಧಿಕಾರ ಸ್ವೀಕರಿಸಿದರು. ಮಹಿಳಾ ವಿಭಾಗ ನಿರ್ಗಮನ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್ ಪುಷ್ಪಗುಚ್ಚವನ್ನಿತ್ತು ನೂತನ ಅಧ್ಯಕ್ಷೆ ಜಯಂತಿ ಉಳ್ಳಾಲ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಸಮಿತಿಯ ಉಪ ಕಾರ್ಯಾಧ್ಯಕ್ಷೆಯರುಗಳಾಗಿ ಪ್ರಭಾ ಕೆ. ಬಂಗೇರ ಮತ್ತು ಗಿರಿಜಾ ಚಂದ್ರಶೇಖರ್, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸುಮಿತ್ರಾ ಎಸ್. ಬಂಗೇರ, ಜತೆ ಕಾರ್ಯದರ್ಶಿಗಳಾಗಿ ಕುಸುಮಾ ಅಮೀನ್ ಮತ್ತು ಜಯಂತಿ ಎಸ್. ಕೋಟ್ಯಾನ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯೆಯರುಗಳಾಗಿ ವಿಲಾಸಿನಿ ಕೆ. ಸಾಲ್ಯಾನ್, ರೇಖಾ ಸದಾನಂದ್, ಲಕ್ಷಿ¾à ಪೂಜಾರಿ, ರೋಹಿಣಿ ಎಸ್. ಪೂಜಾರಿ, ಪುಷ್ಪಾ ಎಸ್. ಅಮೀನ್, ಲತಾ ವಿ. ಬಂಗೇರ, ಸುಜತಾ ಡಿ. ಪೂಜಾರಿ, ಉಮಾ ಯಾದವ್ ಬಂಗೇರ, ಜಲಜಾಕ್ಷಿ ಎನ್. ಪೂಜಾರಿ, ವಿಶೇಷ ಆಮಂತ್ರಿತರುಗಳಾಗಿ ಬಬಿತಾ ಜೆ. ಕೋಟ್ಯಾನ್, ಯಶೋಧಾ ಎನ್. ಪೂಜಾರಿ, ಪೂಜಾ ಪುರುಷೋತ್ತಮ್ ಕೋಟ್ಯಾನ್, ಮೀರಾ ಡಿ. ಅಮೀನ್, ವನಿತಾ ಎ. ಪೂಜಾರಿ, ಯಶೋಧಾ ಪೂಜಾರಿ, ಸಬಿತಾ ಜಿ. ಪೂಜಾರಿ, ವತ್ಸಲಾ ಕೆ. ಪೂಜಾರಿ, ಪ್ರೇಮಾ ಆರ್. ಕೋಟ್ಯಾನ್, ಭವಾನಿ ಕೋಟ್ಯಾನ್, ಗಿರಿಜಾ ಪೂಜಾರಿ ಅವರು ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ ಡಿ. ಪೂಜಾರಿ, ಹರೀಶ್ ಜಿ. ಅಮೀನ್, ದಯಾನಂದ್ ಆರ್. ಪೂಜಾರಿ ಕಲ್ವಾ, ಶ್ರೀನಿವಾಸ ಆರ್. ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಗೌರವ ಜೊತೆ ಕಾರ್ಯದರ್ಶಿ ಧರ್ಮೇಶ್ ಎಸ್. ಸಾಲ್ಯಾನ್, ಜೊತೆ ಕೋಶಾಧಿ ಕಾರಿಗಳಾದ ಮೋಹನ್ ಡಿ. ಪೂಜಾರಿ, ಸದಾಶಿವ ಎ. ಕರ್ಕೇರ, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎನ್. ಕೋಟ್ಯಾನ್, ಸೇವಾದಳದ ದಳಪತಿ ಗಣೇಶ್ ಜಿ. ಪೂಜಾರಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಧರ್ಮಪಾಲ ಜಿ. ಅಂಚನ್, ಮಹೇಶ್ ಸಿ. ಪೂಜಾರಿ, ನಿಲೇಶ್ ಪೂಜಾರಿ ಪಲಿಮಾರು, ಮಾಜಿ ಅಧ್ಯಕ್ಷರುಗಳಾದ ವರದ ಉಳ್ಳಾಲ್, ಎಲ್. ವಿ. ಅಮೀನ್, ಭಾರತ್ ಬ್ಯಾಂಕ್‌ನ ನಿರ್ದೇಶಕ ಗಂಗಾಧರ್ ಜೆ. ಪೂಜಾರಿ, ರಾಜಾ ವಿ. ಸಾಲ್ಯಾನ್, ಪುರುಷೋತ್ತಮ ಎಸ್. ಕೋಟ್ಯಾನ್, ರವೀಂದ್ರ ಎ. ಅಮೀನ್, ಆನಂದ ಪೂಜಾರಿ, ಹರೀಶ್ ಜಿ. ಕೊಕ್ಕರ್ಣೆ, ವಿಶ್ವನಾಥ ಆರ್. ತೋನ್ಸೆ, ಉಮೇಶ್ ಎನ್. ಕೋಟ್ಯಾನ್, ಸೇರಿದಂತೆ ಹಾಲಿ ಮತ್ತು ನಿರ್ಗಮನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಮಹಳಾ ವಿಭಾಗದ ಅಧ್ಯಕ್ಷೆ ಜಯಂತಿ ವಿ. ಉಳ್ಳಾಲ್ ಸ್ವಾಗತಿಸಿದರು. ಉಮಾ ಯಾದವ್ ಬಂಗೇರ ಪ್ರಾರ್ಥನೆ ಹಾಡಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ವಿಭಾಗದ ಪದಾಧಿಕಾರಿಗಳ ಯಾದಿಯನ್ನು ಪ್ರಕಟಿಸಿ ಪ್ರತಿಜ್ಞಾ ವಿಧಿ-ವಿಧಾನಗಳನ್ನು ಬೋಧಿಸಿದರು. ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್. ಬಂಗೇರ ಗತ ಮೂರು ಅವಧಿಗಳ ವರದಿ ವಾಚಿಸಿ ವಂದಿಸಿದರು.
ಚಿತ್ರ -ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.