ಬಿಲ್ಲವ ಛೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ:ಪುರಸ್ಕಾರ ಪ್ರದಾನ
Team Udayavani, Mar 20, 2018, 5:01 PM IST
ಮುಂಬಯಿ: ನಾನೂ ಓರ್ವ ಬಿಲ್ಲವ ಪರಿವಾರದ ಸದಸ್ಯ ಎಂದೇಳಲು ಅಭಿಮಾನ ಆಗುತ್ತದೆ. ಬಿಲ್ಲವರು ಮುಂಬಯಿ ಕರ್ನಾಟಕದ ಮಧ್ಯೆ ಬಲಿಷ್ಠ ಸೇತುವೆ ನಿರ್ಮಿಸಿದ ಸಹೃದಯಿ ಸಮುದಾಯವಾಗಿದೆ. ಮಾತ್ರವಲ್ಲದೆ ಮರಾಠ-ಕನ್ನಡಿಗರ ಏಕೀಕರಣಕ್ಕೆ ವೇದಿಕೆ ನಿರ್ಮಿಸಿದೆ. ನಾವೂ ಕೂಡಾ ಶತಮಾನದ ಹಿಂದೆ ಗುಜರಾತಿನಿಂದ ವಲಸೆ ಬಂದವರು. ತಾವೂ ಅಷ್ಟೇ. ಆದರೆ ನಾವೆಲ್ಲರೂ ಒಂದಾದಾಗ ನಾವು ಮುಂಬಯಿಗರು ಎನ್ನುವ ಭಾವನೆ ನಮ್ಮೆಲ್ಲರ ಅಭಿಮಾನ ಮತ್ತು ಸೌಭಾಗ್ಯವಾಗಿದೆ. ಆದ್ದರಿಂದ ರಾಷ್ಟ್ರದ ಪ್ರತೀಯೋರ್ವರ ವಿಕಾಸ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಬೇಕು. ನಮ್ಮ ಪ್ರಗತಿಯ ಜೊತೆ ಜೊತೆಗೆ ನಮ್ಮ ನಾಡು, ರಾಷ್ಟ್ರದ ಏಳಿಗೆಯ ಬಗ್ಗೆ ಚಿಂತಿಸಿ ಸಮಾಜವನ್ನು ಮುನ್ನಡೆಸೋಣ ಎಂದು ರಾಜ್ಯ ವಸತಿ ಮತ್ತು ಕಾರ್ಮಿಕ ಸಚಿವ ಪ್ರಕಾಶ್ ಮೆಹ್ತಾ ತಿಳಿಸಿದರು.
ಮಾ. 17 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಸಂಸ್ಥೆ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಚಾಲನೆ ನೀಡಿ ಸಾಧಕ ಉದ್ಯಮಿಗಳಿಗೆ ಬಿಸಿಸಿಐ ವಾರ್ಷಿಕ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿ ಶುಭ ಹಾರೈಸಿದರು.
ಬಿಸಿಸಿಐ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿದ ಭವ್ಯ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಉದ್ಯಮಿಗಳಾದ ಲಕ್ಷ ¾ಣ್ ಬಿ. ಅಮೀನ್, ಗಣೇಶ್ ಆರ್. ಪೂಜಾರಿ, ಉದಯ ಡಿ. ಸುವರ್ಣ ಉಪಸ್ಥಿತರಿದ್ದರು. ಉದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆಗೈದ ಸಾಧಕರುಗಳಾದ ಮಹೇಶ್ ಲಂಚ್ ಹೋಮ್ ಹೊಟೇಲ್ ಸಮೂಹದ ಕಾರ್ಯಾಧ್ಯಕ್ಷ ಸೂರು ಸಿ. ಕರ್ಕೇರ ಪರವಾಗಿ ಶಾರದಾ ಸೂರು ಕರ್ಕೇರ, ಸುಖ್‌ಸಾಗರ್ ಹೊಟೇಲ್ ಸಮೂಹದ ಕಾರ್ಯಧ್ಯಕ್ಷ ಸುರೇಶ್ ಎಸ್.ಪೂಜಾರಿ ದಂಪತಿ, ಏಯನ್ ಆರ್ಟ್ ಇನ್‌ಸ್ಟಿಟ್ಯೂಟ್‌ನ ಹೃದಯತಜ್ಞ ಡಾ| ತಿಲಕ್ ಟಿ. ಸುವರ್ಣ, ಪ್ರಸಿದ್ಧ ಶಿಕ್ಷಣ ತಜ್ಞ ಪಿ. ಸಾಧು ಪೂಜಾರಿ ಇವರಿಗೆ ಬಿಸಿಸಿಐ ಪ್ರಶಸ್ತಿ-2018ನ್ನು ಗಣ್ಯರು ಪ್ರದಾನಿಸಿ ಅಭಿನಂದಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುರೇಶ್ ಪೂಜಾರಿ ಇವರು, ವಿಧೇಯರಾಗಿ ಬಾಳಿದಾಗ ಮನುಷ್ಯ ಶ್ರೇಷ್ಠನಾಗುವನು. ಆದ್ದರಿಂದ ನಾವೂ ಸದಾ ನಿಷ್ಠಾವಂತ, ವಿಧೇಯರಾಗಿ ಬಾಳಿದಾಗ ನಮ್ಮ ಮತ್ತು ಸಮಾಜದ ಉನ್ನತಿ ಸಾಧ್ಯವಾಗುವುದು. ಅದಕ್ಕೂ ಮಿಗಿ ಲಾಗಿ ಜೀವನದಲ್ಲಿ ತಿಳುವಳಿಕೆಯನ್ನು ಮೈಗೂಡಿಸಿ ದಾಗ ಮಾತ್ರ ಸಮಾನತೆಯ ಬದುಕು ಫಲಪ್ರದ ವಾಗುವುದು. ಈ ಮೂಲಕ ಜೀವನವನು ಆನಂದದಾಯಕವಾಗಿ ಬಾಳಬೇಕು ಎಂದರು.
ನನ್ನ ಸೇವೆಯನ್ನು ಮನವರಿಸಿ ಸ್ವಸಮಾಜದ ಪ್ರತಿuತ ಗೌರವವನ್ನಿತ್ತು ಗೌರವಿಸಿರುವುದಕ್ಕಾಗಿ ಅಭಿವಂದನೆಗಳು. ಭವಿಷ್ಯತ್ತಿನಲ್ಲಿ ಈ ಸಂಸ್ಥೆ ಇನ್ನಷ್ಟು ಯೋಜನೆಗಳನ್ನು ರೂಪಿಸಿ ಸಮುದಾಯದ ಪಾಲಿನ ಆಶಾಕಿರಣವಾಗಲಿ ಎಂದು ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಡಾ| ತಿಲಕ್ ಸುವರ್ಣ ಇವರು ಆಶಯ ವ್ಯಕ್ತಪಡಿಸಿದರು.
ಉದ್ಯಮ, ವ್ಯವಹಾರದಲ್ಲಿ ಹೇಗೆ ಯಶಸ್ವಿಯಾಗಬಹುದು ಎನ್ನುವುದರ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತ ಬಿಸಿಸಿಐ ಉಪ ಕಾರ್ಯಾಧ್ಯಕ್ಷ ಎಂ.ಸುಸಿರ್ ಕುಮಾರ್ ಇವರು, ಶಿಸ್ತುಬದ್ಧತೆಯಿಂದ ಮಾತ್ರ ಉದ್ಯಮ ಕ್ಷೇತ್ರದ ಸಾರ್ಥಕತೆ ಸಾಧ್ಯ. ಚಿಕ್ಕದಾದ ವ್ಯಾಪಾರ, ಉದ್ಯಮ ಆರಂಭಿಸಿದರೂ ಅದನ್ನು ಲಾಭದ ಜೊತೆಗೆ ಸಮಾಜವು ಸದ್ಭಳಕೆ ಮಾಡುವ ರೀತಿಯಲ್ಲಿರಬೇಕು. ಇದಕ್ಕೆಲ್ಲಾ ವ್ಯವಹಾರಜ್ಞಾನ ಮೈಗೂಡಿಸಿ ಉದ್ಯಮಶೀಲತೆಯನ್ನು ರೂಢಿಸಿಕೊಳ್ಳಿರಿ ಎಂದು ಯುವ ಜನತೆಗೆ ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಸಿಸಿಐ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ ಮಾತನಾಡಿ, ಉದ್ಯಮ ಶೀಲರ ಏಕತೆ ಅವಶ್ಯಕತೆಗೆ ಸ್ಪಂದನೆ ನಮ್ಮ ಉದ್ದೇಶವಾಗಿದೆ. ಸದ್ಯ ಬಿಸಿಸಿಐ ಯಶಸ್ವಿತ್ತ ಹೆಜ್ಜೆಯನ್ನಿರಿಸಿ ಸುದೃಢ ಸಂಸ್ಥೆಯಾಗಿ ಮುನ್ನಡೆಯುತ್ತಿದೆ. ಒಟ್ಟಾರೆ ಬಿಲ್ಲವರಲ್ಲಿ ಸಾಧಕ ಉದ್ಯಮಿಗಳನ್ನು ಸೃಷ್ಟಿಸುವಲ್ಲಿ ಸಫಲತೆಯತ್ತ ಸಾಗುತ್ತಿದೆ.
ಕಾರಣಾಂತರವಾಗಿ ಅನುಪಸ್ಥಿತರಿದ್ದ ದುಬೈ ಅನಿವಾಸಿ ಭಾರತೀಯ ಉದ್ಯಮಿ ಪದ್ಮಶ್ರೀ ಡಾ| ಬಿ. ಆರ್. ಶೆಟ್ಟಿ ಅವರ ಸಂದೇಶವನ್ನು ವಿಡಿಯೋ ಕಾನ್ಪರೇನ್ಸ್ ಮುಖಾಂತರ ಭಿತ್ತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂಕಿತಾ ನಾಯ್ಕ ಮತ್ತು ಸೌಜನ್ಯಾ ಬಿಲ್ಲವ ತಂಡವು “ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶಿಸಿದರು. ರವಿ ಜುಲೆಸ್ ಸಮೂಹ ಬಾಲಿವುಡ್ ಸಂಗೀತ ರಸಮಂಜರಿ ಹಾಗೂ ನಾಗೇಶ್ ಕುಮಾರ್ ಬಾಲಿವುಡ್ ಕಲಾವಿದರ ವಿಡಂಬನೆಯನ್ನು ಪ್ರದರ್ಶಿಸಿದರು.
ಉಪ ಕಾರ್ಯಾಧ್ಯಕ್ಷರುಗಳಾದ ಡಿ. ಎನ್. ಸುವರ್ಣ, ನಿರ್ದೇಶಕರುಗಳಾದ ಹರೀಶ್ ಜಿ. ಅಮೀನ್, ಪುರುಷೋತ್ತಮ ಎಸ್. ಕೋಟ್ಯಾನ್, ಭರತ್ ಎಸ್. ಪೂಜಾರಿ, ಗಂಗಾಧರ್ ಅಮೀನ್ ಕರ್ನಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಶೋಧಾ ಎನ್. ಟಿ. ಪೂಜಾರಿ ಬಳಗವು ಸ್ವಾಗತಗೀತೆಯನ್ನಾಡಿದರು. ನಿಖೀತಾ ಎನ್. ಪೂಜಾರಿ ಮತ್ತು ಅಂಕಿತಾ ಎನ್. ಪೂಜಾರಿ ಪ್ರಾರ್ಥನೆಗೈದರು. ಬಿಸಿಸಿಐ ಕಾರ್ಯದರ್ಶಿ ನ್ಯಾಯವಾದಿ ಆನಂದ್ ಎಂ. ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಬಿಸಿಸಿಐನ ಉಪ ಕಾರ್ಯಾಧ್ಯಕ್ಷರುಗಳಾದ ಡಿ. ಬಿ. ಅಮೀನ್, ಮಹೇಂದ್ರ ಸೂರು ಕರ್ಕೇರ, ನಿರ್ದೇಶಕರುಗಳಾದ ಅಶ್ಮಿತ್ ಬಿ. ಕುಳಾಯಿ, ಚಂದಯ ಬಿ. ಕರ್ಕೇರ ಅತಿಥಿಗಳನ್ನು ಹಾಗೂ ಪುರಸ್ಕೃತರನ್ನು ಪರಿಚಯಿಸಿದರು. ಎನ್. ಟಿ. ಪೂಜಾರಿ ಸಚಿವರನ್ನು ಮತ್ತು ಅತಿಥಿಗಳನ್ನು ಗೌರವಿಸಿದರು. ಸಲೀಲ್ ಝವೀರ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಹರೀಶ್ ಜಿ. ಅಮೀನ್ ವಂದಿಸಿದರು.
ಬಿಲ್ಲವರ ಸಾಧನೆಯನ್ನು ಅವಲೋಕನ ಮಾಡುವ ಸಮಾರಂಭ ಇದಾಗಿದೆ. ವಚನಬದ್ಧ ಹಾಗೂ ನೈತಿಕ ಬಲವುಳ್ಳ ಬಿಸಿಸಿಐ ಮಂಡಳಿಯು ಸ್ವಸಮಾಜದ ಸ್ವಂತಿಕೆಯನ್ನು ಯೋಚಿಸಿ ಸ್ವಉದ್ಯಮಿಗಳಾಗುವಲ್ಲಿ ಯುವಜನತೆ ಪ್ರೇರೆಪಿಸುತ್ತಿದ್ದಾರೆ. ಸೇವೆಗಿಂತ ಸ್ವಯಂ ಉದ್ಯಮಿಗಳಾಗಿ ಮಾಲಕರಾಗುವಲ್ಲಿ ನಮ್ಮ ಯುವಜನತೆ ಉತ್ಸಾಹ ತೋರಬೇಕು. ಉದ್ಯೋಗಕ್ಕಿಂತ ಉದ್ಯಮಿಗಳಾಗುವತ್ತ ಕಾರ್ಯ ಪ್ರವೃತ್ತರಾಗಬೇಕು. ಅದಕ್ಕಾಗಿ ಹೊಸ ಯೋಜನೆಗಳನ್ನು ಮೈಗೂಡಿಸಿ ಉತ್ಸುಕರಾಗಬೇಕು
– ನಿತ್ಯಾನಂದ ಡಿ. ಕೋಟ್ಯಾನ್ (ಅಧ್ಯಕ್ಷರು : ಬಿಲ್ಲವರ ಅಸೋಸಿಯೇಶನ್ ಮುಂಬಯಿ).
ಈ ಸಂಭ್ರಮವು ಸಮಾಜಮುಖೀ ಚಿಂತನೆಯುಳ್ಳದ್ದಾಗಿದೆ. ಇದು ಪ್ರಸಕ್ತ ಪೀಳಿಗೆಗೆ ಅನುಕರಣೀಯ. ಕಷ್ಟ ಪಟ್ಟರೆ ಸಾಧನೆ ಕಟ್ಟಿಟ್ಟ ಬುತ್ತಿ ಆಗುತ್ತದೆ. ಅದರ ಫಲ ಇಂತಹ ಪುರಸ್ಕಾರಗಳಾಗಿವೆ. ಇದರಿಂದ ಸ್ವಸಮುದಾಯದ ಜನತೆಯ ಪ್ರೀತಿ, ಗೌರವಕ್ಕೆ ಪಾತ್ರರಾಗಬಹುದು
– ಉದಯ ಸುವರ್ಣ (ಉದ್ಯಮಿ, ಸಮಾಜ ಸೇವಕರು).
ಮುಂಬಯಿಯಲ್ಲಿನ ನಮ್ಮೂರ ಜನರು ಸದಾ ಪ್ರೋತ್ಸಾಹಕರು ಎನ್ನುವುದೇ ನಮ್ಮ ಅಭಿಮಾನ. ಸ್ವವ್ಯವಹಾರದಲ್ಲಿ ಮಗ್ನರಾದರೆ ಸಮುದಾಯದ ಉನ್ನತಿ ಸಾಧ್ಯವಾಗುವುದು. ಇದಕ್ಕಾಗಿ ಹಿರಿಯರ ಅನುಭವ, ಸಲಹೆ ಪಡೆದು ಸ್ವಂತಿಕೆಯ ಉದ್ಯಮ ಸ್ಥಾಪಿಸುವ ನಿಟ್ಟಿನಲ್ಲಿ ಬಿಸಿಸಿಐ ಮತ್ತಷ್ಟು ಪ್ರೇರಿಪಿಸುವ ಅಗತ್ಯವಿದೆ. ಇದರಿಂದ ನಮ್ಮವರಲ್ಲಿನ ಸಾಧಕರ ಸಾಧನೆ ಫಲವತ್ತಾಗುವುದು
– ಲಕ್ಷ್ಮಣ್ ಅಮೀನ್ (ಉದ್ಯಮಿ, ಸಮಾಜ ಸೇವಕರು).
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.