ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌& ಇಂಡಸ್ಟ್ರಿ:ಮಾಹಿತಿ ಕಾರ್ಯಾಗಾರ

Team Udayavani, Mar 10, 2019, 12:30 AM IST

0903mum04.jpg

ಮುಂಬಯಿ: ಪ್ರಸ್ತುತ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗಾ ವಕಾಶಗಳು ವಿಫ‌ುಲವಾಗಿದ್ದು ರಾಷ್ಟ್ರದ ಹಣಕಾಸು ವ್ಯವಸ್ಥೆಗೆ ಇದು ಪೂರಕವಾಗಿದೆ. ಜಾಗತಿಕವಾಗಿ ಗುರುತಿಸಿಕೊಂಡ ಭಾರತ ಆರ್ಥಿಕ ಮತ್ತು ಇತರ ಸವಲತ್ತುಗಳನ್ನು ನೀಡಿ ಉದ್ಯಮಿಗಳನ್ನು ಪ್ರೋತ್ಸಾಹಿಸು ತ್ತಿರುವುದು ಸ್ವಾಗತಾರ್ಹ. ಪ್ರಸ್ತುತ ದಿನಗಳಲ್ಲಿ ಮೂಲ ಬಂಡವಾಳ ಇಲ್ಲದೇ ವ್ಯವಹಾರ ನಡೆಸುವುದೂ ಸರಳವಾಗಿದ್ದು, ಆಧುನಿಕ ತಾಂತ್ರಿಕತೆ ಯಿಂದಲೂ ಸೇವಾ ಸವಲತ್ತುಗಳು ಸುಲಭವಾಗಿ ಲಭ್ಯವಾಗುತ್ತಿವೆ.  ರಾಷ್ಟ್ರದ ಶೇ. 70ರಷ್ಟು ಜನತೆ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳನ್ನೇ ಹೊಂದಿ ಜೀವನ ಸಾಗಿಸುತ್ತಿದ್ದಾರೆ. ಇದು ರಾಷ್ಟ್ರದ ಆರ್ಥಿಕ ಉನ್ನತಿಗೂ ಮೂಲ ಕಾರಣವಾಗಿದೆ. ಆದ್ದರಿಂದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದಲೇ ರಾಷ್ಟ್ರ ಸದೃಢವಾಗಿದೆ. ಒಟ್ಟಾರೆ ರಾಷ್ಟ್ರದ ಸರ್ವೋನ್ನತಿಗೆ ಸಣ್ಣ ಕೈಗಾರಿಕೆಗಳು ಪೂರಕವಾಗಿದ್ದು ಇದನ್ನು ಉನ್ನತಿಯತ್ತ ಸಾಗಿಸಲು ಯುವ ಜನಾಂಗಕ್ಕೆ ಸೂಕ್ತ ಪ್ರೋತ್ಸಾಹದ ಅಗತ್ಯವಿದೆ  ಎಂದು ಎಂ.ವಿ. ಕಿಣಿ ಕಂಪೆನಿ ಅಡ್ವೊಕೇಟ್ಸ್‌ ಆ್ಯಂಡ್‌ ಸಾಲಿಸಿಟರ್ಸ್‌  ಸಂಸ್ಥೆಯ ಮುಖ್ಯಸ್ಥ, ಹಿರಿಯ ನ್ಯಾಯವಾದಿ ಎಂ. ವಿ. ಕಿಣಿ ಅವರು ತಿಳಿಸಿದರು.

ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಮಾ. 9ರಂದು ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ವತಿಯಿಂದ ಎಚ್‌ಡಿಎಫ್‌ಸಿ  ಬ್ಯಾಂಕ್‌ ಸಹಯೋಗದಲ್ಲಿ ಬಿಸಿಸಿಐ ಅಧ್ಯಕ್ಷ ಎನ್‌. ಟಿ. ಪೂಜಾರಿ  ಘನಾಧ್ಯಕ್ಷತೆಯಲ್ಲಿ ದಿನಪೂರ್ತಿಯಾಗಿ ಆಯೋಜಿಸಿದ್ದ ಮೈಕ್ರೋ ಸ್ಮಾಲ್‌ ಆ್ಯಂಡ್‌ ಮೀಡಿಯಂ ಎಂಟರ್‌ಪ್ರೈಸಸ್‌  ಕಾಂಕ್ಲೇವ್‌ ವಿಚಾರಿತ   ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಸಿಸಿಐ ಸಂಸ್ಥೆಯ ಇಂತಹ ಕಾರ್ಯಗಾರಗಳ ಮೂಲಕ ಸಮಾಜದ ಯುವಕ ರನ್ನು  ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ. ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಯುವ ಉದ್ಯಮಿಗಳು ಪಡೆದು ಕೊಳ್ಳಬೇಕು ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಉದ್ಯಮಿ ಭಾರತ್‌ ಬ್ಯಾಂಕಿನ ನಿರ್ದೇಶಕ ಎಲ್‌. ವಿ. ಅಮೀನ್‌, ಅತಿಥಿ-ಅಭ್ಯಾಗತರುಗಳಾಗಿ  ಡಿಎಕ್ಸ್‌ಸಿ
ಟೆಕ್ನಾಲಜಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ| ಶ್ರೀಕಾಂತ್‌ ಕೆ. ಅರಿಮನಿಂತ್ತಾಯ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಒಮಾನ್‌ ಇದರ ಉನ್ನತಾಧಿಕಾರಿ ಡಾ| ಕೆ. ರಾಜೇಶ್‌ ನಾಯಕ್‌, ಮಂಗಳೂರಿನ ಲೆಕ್ಕ ಪರಿಶೋಧಕ ಸಿಎ ಎಸ್‌. ಎಸ್‌. ನಾಯಕ್‌, ಎಚ್‌ಡಿಎಫ್‌ಸಿ ಬ್ಯಾಂಕಿನ ಉನ್ನತಾಧಿಕಾರಿ ಆದಿಲೆ ಸುಮರಿವಾಲಾ ಅವರು ಉಪಸ್ಥಿತರಿದ್ದರು.

ಡಾ| ಶ್ರೀಕಾಂತ್‌ ಮಾತನಾಡಿ,  ವ್ಯವಹಾರ ಜ್ಞಾನವುಳ್ಳವರಿಂದ ಉದ್ಯಮ ಶೀಲತೆ ಸಾಧ್ಯವಿದ್ದು, ಆಧುನಿಕ ಉದ್ಯಮಕ್ಕೆ ಸೂಕ್ಷ್ಮತೆ ಮತ್ತು ಚುರುಕುತನ ಮತ್ತು ಅರಿವಿನ ಕೀಲಿಕೈ  ಅತ್ಯವಶ್ಯವಾಗಿದೆ. ಸುಶಿಕ್ಷಿತ ಜನತೆ ಸ್ವ ಉದ್ಯಮಿಗಳಾಗುವುದನ್ನೇ ಬಯಸಬೇಕು. ಆಗ ಭವಿಷ್ಯತ್ತಿನ ರಚನೆಯ ಬಗ್ಗೆ ಯೋಚನೆ ಬರುತ್ತದೆ. ಯುವಕರಲ್ಲಿ ಚುರುಕುತನದ ಉದ್ಯೋಗ ವ್ಯವಸ್ಥೆ ಮತ್ತು ಆಧುನಿಕ ಬದಲಾವಣೆಗಳ ಉದ್ಯಮಗಳ ಬಗ್ಗೆ ಅರಿವು ಮೂಡಿಸಬೇಕು. ಇವೆಲ್ಲವೂ ಇಂತಹ ಮಾಹಿತಿ ಕಾರ್ಯಾಗಾರಗಳಿಂದ ಸಾಧ್ಯ ಎಂದು ನುಡಿದರು.

ಪಿಡಬ್ಲ್ಯುಸಿ ಇಂಡಿಯಾ ಸಂಸ್ಥೆಯ ಅಮಿತ್‌ ಖನ್ನಾ, ವರ್ಲ್ಡ್ವೈಡ್‌ ಬಿಸ್ನೆಸ್‌ ಹೌಸ್‌ ಒಮಾನ್‌ ಇದರ  ಆಡಳಿತ ನಿರ್ದೇಶಕ ಡಾ| ಸಿ. ಕೆ. ಅಂಚನ್‌, ಜಸ್ಟೀಸ್‌ ಕೆ. ಎಸ್‌. ಹೆಗ್ಡೆ  ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥ ಡಾ| ಎ.ಪಿ. ಆಚಾರ್‌, ಡಿಜಿಟಲ್‌ ಟಾಟಾ ಕ್ಯಾಪಿಟಲ್‌ನ ಉಪಾಧ್ಯಕ್ಷ ಕೌಶಿಕ್‌ ಚಕ್ರಬೊರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದು  ತಮ್ಮ ತಮ್ಮ  ಕ್ಷೇತ್ರಗಳ ಬಗ್ಗೆ ಅರಿವು ಮೂಡಿಸಿದರು. ಮಧ್ಯಾಂತರದಲ್ಲಿ ಎನ್‌ಎಸ್‌ಐಸಿ ಮತ್ತು ಎಂಎಸ್‌ಎಂಇ ವಿಭಾಗದಿಂದ ಉದ್ಯಮ ಸಂಬಂಧಿತ ಸಂರಕ್ಷಣಾ ಅಭಿವೃದ್ಧಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಮತ್ತು ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಯಶೋದಾ ಎನ್‌. ಟಿ. ಪೂಜಾರಿ, ಪೂಜಾ ಪುರುಷೋತ್ತಮ್‌, ಬಿಸಿಸಿಐಯ ಉಪ ಕಾರ್ಯಾಧ್ಯಕ್ಷ ಡಿ. ಬಿ. ಅಮೀನ್‌, ಮಹೇಂದ್ರ ಸೂರು ಕರ್ಕೇರ, ನಿರ್ದೇಶಕರಾದ ಚಂದಯ ಬಿ. ಕರ್ಕೇರ, ಹರೀಶ್‌ ಜಿ. ಅಮಿನ್‌, ಪುರುಷೋತ್ತಮ ಎಸ್‌. ಕೋಟ್ಯಾನ್‌, ಅಶ್ಮಿತ್‌ ಬಿ. ಕುಳಾಯಿ, ಗಂಗಾಧರ್‌ ಎನ್‌. ಅಮೀನ್‌ ಕರ್ನಿರೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕು| ನಿಖೀತಾ ಎನ್‌. ಟಿ. ಪೂಜಾರಿ ಮತ್ತು ಕು| ಅಂಕಿತಾ ಎನ್‌. ಟಿ. ಪೂಜಾರಿ ಪ್ರಾರ್ಥನೆಗೈದರು. ಹರೀಶ್‌ ಜಿ. ಅಮೀನ್‌ ಅವರು  ಕಾರ್ಯಾಗಾರದ ಮಾಹಿತಿ ನೀಡಿದರು. ಕು| ದೀಪಾ ರೈ ಕಾರ್ಯಕ್ರಮ ನಿರೂಪಿಸಿದರು. ಬಿಸಿಸಿಐ ಕಾರ್ಯದರ್ಶಿ ನ್ಯಾಯವಾದಿ ಆನಂದ್‌ ಎಂ. ಪೂಜಾರಿ ಸ್ವಾಗತಿಸಿ  ಪ್ರಸ್ತಾವನೆಗೈದ‌‌ು ವಂದಿಸಿದರು. ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.     

ಸದ್ಯ ಉದ್ಯಮಗಳು ಯುವ ಜನತೆಗೆ ಸನ್ನಿತವಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಯುವ ಜನತೆಯಲ್ಲಿ ಆತ್ಮಸ್ಥೈರ್ಯ ತುಂಬಿ ಸೂಕ್ತ ಮಾರ್ಗದರ್ಶನ ನೀಡಿದರೆ ಅವರನ್ನು ಉದ್ಯಮಶೀಲರಾಗಲು ಸಾಧ್ಯ. ವಿದ್ಯಾವಂತರಿಗೆ ಸರಕಾರಿ, ಹಣಕಾಸು ವ್ಯವಸ್ಥೆಯಂತಹ ಯೋಗದಾನದ ಜೊತೆ ಉದ್ಯಮದತ್ತ ಆಕರ್ಷಿಸುವ ಕಾಯಕವನ್ನು ಬಿಸಿಸಿಐ ನಂತಹ ಸಂಸ್ಥೆಗಳು ಮಾಡಬೇಕು. ಈ ಮೂಲಕ ಭವಿಷ್ಯತ್ತಿನಲ್ಲಿ ಯುವಜನತೆ ಸಂಬಳ ಪಡೆಯುವ ಬದಲು ಸಂಬಳ ನೀಡುವಂತವರಾಗಬೇಕು.
– ಎಲ್‌. ವಿ. ಅಮೀನ್‌.
  ಮಾಜಿ ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ   

ಚಿತ್ರ- ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!

Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2

Kasaragod: ಯುವತಿ ನಾಪತ್ತೆ; ದೂರು ದಾಖಲು

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Sheesh Mahal Row: ಶೀಶ್‌ಮಹಲ್‌ ವರ್ಸಸ್‌ ರಾಜ್‌ ಮಹಲ್‌: ದಿಲ್ಲೀಲಿ ಬಿಜೆಪಿ, ಆಪ್‌ ಹೈಡ್ರಾಮ

Andhra-PM

Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ

CONGRESS-OFFICE

Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್‌ ಪ್ರಧಾನ ಕಚೇರಿ ಸ್ಥಳಾಂತರ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌…  ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Mangaluru: ಜ.11, 12ರಂದು ಮಂಗಳೂರು ಲಿಟ್‌ ಫೆಸ್ಟ್‌… ಕಲೆ, ಸಾಹಿತ್ಯ, ಜಾನಪದಗಳ ಸಂಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.