ಬಿಲ್ಲವ ಸಮಾಜ ಸೇವಾ ಸಂಘ ಪುಣೆ: ಬೆಳ್ಳಿ ಮಹೋತ್ಸವ‌ ಉದ್ಘಾಟನೆ


Team Udayavani, Feb 7, 2018, 4:41 PM IST

0502mum01a.jpg

ಪುಣೆ: ಮನಸ್ಸು ಮನಸ್ಸುಗಳು  ಬೆರೆತು, ಸಾಮರಸ್ಯದಿಂದ ಬದುಕುವ ಕಲೆಯಿಂದ ಯಾವುದೇ ಕಠಿನ ಕಾರ್ಯವು ಸುಲಭವಾಗಿ ಕಾರ್ಯರೂಪಕ್ಕೆ ಬರ‌ಬಹುದು. ಅದಕ್ಕಾಗಿ ನಾವೆಲ್ಲ  ಒಂದೇ ಎಂಬ ಭಾವನೆ ಪ್ರತಿಯೋರ್ವರ ಹೃದಯದಲ್ಲಿರಬೇಕು. ಮನಸ್ಸು ಶುದ್ಧವಾಗಿ, ಕೃತಿ ಕಾರ್ಯಗಳು ನಿಸ್ವಾರ್ಥ ಮನೋಭಾವನೆಯಿಂದ ಕೂಡಿದಾಗ ಅದು ಜನರನ್ನು ತಲುಪಬಹುದು.  ಎಲ್ಲ  ಸಮಾಜದವರೊಂದಿಗೆ ಬೆರೆತು ಬದುಕಬೇಕು. ಆಗ ನಮ್ಮ ಸಂಸ್ಥೆ ಸಂಘಟನೆ ಬೆಳೆದು ನಿಲ್ಲಲು ಸಾಧ್ಯ. ಇದಕ್ಕೆ ಉತ್ತಮ ನಿದರ್ಶನ ಈ ಬಿಲ್ಲವ ಸಮಾಜ ಸೇವಾ ಸಂಘದ  ಈ ಬೆಳ್ಳಿ  ಮಹೋತ್ಸವ ಸಂಭ್ರಮವೇ ಸಾಕ್ಷಿ. ನಮ್ಮ  ತಂದೆ ತಾಯಿಯೇ ದೇವರು. ಗುರುಗಳೇ ದೇವರು ಎಂಬ ಭಾವನೆಯೊಂದಿಗೆ ಅವರ ಮಾರ್ಗದರ್ಶನವೇ ದಾರಿ ದೀಪವೆಂಬಂತೆ ಒಳ್ಳೆಯ ಪಥದಲ್ಲಿ ನಡೆದರೆ ಯಶಸ್ಸು ತನ್ನಿಂತಾನೆ ಒಲಿದು ಬರುತ್ತದೆ. ಅದೇ ರೀತಿಯಾಗಿ ಹಿರಿಯರು ಸ್ಥಾಪಿಸಿದ ಈ ಸಂಸ್ಥೆ   ಸಮಾಜದ ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮನದಲ್ಲಿಟ್ಟು ಕೊಂಡು ಕಾರ್ಯ ಸಾಧನೆಯಿಂದ  ಇಂದು ಈ ಮಟ್ಟಕ್ಕೆ ಏರಿ ನಿಂತಿದೆ.  ಅಂದು ಹಿರಿಯರು ಹಚ್ಚಿದ ದೀಪ ಇಂದು ಪ್ರಕಾಶಮಾನವಾಗಿ ಬೆಳಗುತ್ತಿದೆ. ಇದು ನಿರಂತರವಾಗಿ ಬೆಳಗುತ್ತಿರಲಿ, ಸಮಾಜದ ಅಭಿವೃದ್ಧಿಗೆ ಸಹಾಯಕವಾಗುವಂತೆ ಕಾರ್ಯಗಳನ್ನು ಮಾಡುತ್ತಾ ಮಾದರಿಯಾಗಿ ಬೆಳಗಲಿ. ಹಿರಿಯರು  ಯುವಕರು ಮಹಿಳೆಯರು  ಸೇರಿಕೊಂಡು ಚಿಂತನೆಯ ಮೂಲಕ  ಶ್ರಮವಹಿಸಿ ಮಾಡಿದ ಕಾರ್ಯ ಸಾಧನೆಗೆ ಪ್ರತಿಫ‌ಲ ಸಿಕ್ಕಿಯೇ ಸಿಗುತ್ತದೆ. ಸಣ್ಣವರು ದೊಡ್ಡವರು, ಶ್ರೀಮಂತ ಬಡವ, ಜಾತಿ ಜಾತಿಯ ತಾರತಮ್ಯವನ್ನು ಹೊಡೆದೋಡಿಸಿ ಸಮಾಜವನ್ನು ಕಟ್ಟುವ ಕಾರ್ಯ ಅಗಬೇಕಾಗಿದೆ. ಸಮಾಜಕ್ಕೆ ರಕ್ಷಣೆಯನ್ನು ನಿಡುವ  ಜತೆಯಲ್ಲಿ ಸಂಘಟನೆ ಬೆಳೆಯಲಿ  ಅಧಿವೃದ್ಧಿಯಾಗಲಿ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವ, ಕನ್ನಡ ಚಿತ್ರರಂಗದ ನಟ ಕುಮಾರ ಬಂಗಾರಪ್ಪ  ಹೇಳಿದರು.

ಫೆ. 4ರಂದು ಪುಣೆಯ ಕರ್ವೆ ನಗರದ ದುದಾನೆ ಲಾನ್ಸ್‌ನಲ್ಲಿ ನಡೆದ ಬಿಲ್ಲವ ಸಮಾಜ ಸೇವಾ ಸಂಘ  ಪುಣೆ ಇದರ  25ನೇ ವರ್ಷದ ಆಚರಣೆ ಬೆಳ್ಳಿ ಬೆಳಕು ರಜತ ಮಹೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಧನಾತ್ಮಕ ಚಿಂತನೆಯೊಂದಿಗೆ ನಾವು ಎÇÉೇ ಇದ್ದರು ಮನಸ್ಸು  ಮಾಡಿದ ಕಾರ್ಯಗಳನ್ನು ಸಾಧಿಸಲು ಸಾಧ್ಯ. ನಿಷ್ಠೆಯಿಂದ ಮಾಡಿದ ಸೇವೆಗೆ ದೇವರು ಕೂಡಾ  ಒಲಿದು ಬರುತ್ತಾನೆ. ಆದರೆ ಸೇವೆ ಎಂಬುದು ಸನ್ಮಾರ್ಗದಲ್ಲಿದರಬೇಕು. ಅದು ಸಮಾಜಕ್ಕೆ ಸಹಕಾರಿಯಗಿರಬೇಕು. ಇಂತಹ ಕಾರ್ಯ ಸಾಧನೆಯನ್ನು  ಈ ಬಿಲ್ಲವ ಸಂಘ ಮಾಡುತ್ತಾ ಬಂದಿದೆ. ಜನ್ಮವನ್ನು ನೀಡಿದ ಜನ್ಮಭೂಮಿ ಅನ್ನವನ್ನು ನೀಡಿದ ಕರ್ಮಭೂಮಿ ಎರಡನ್ನೂ ಪ್ರೀತಿಸಿ ಅದರ ಋಣವನ್ನು ತೀರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಶೇಷವಾಗಿ ಕರಾವಳಿ ಕರ್ನಾಟಕದ ಜನರು ಇಂದು ದೇಶದ, ವಿದೇಶದ ಯಾವುದೇ ಪ್ರದೇಶಕ್ಕೆ  ಹೋದರು ಅಭಿವೃದ್ಧಿಯನ್ನು ಹೊಂದಿ   ತಮ್ಮ ಋಣವನ್ನು ಸಂದಾಯಗೊಲಿಸುವ ಪ್ರಮುಖ ಸ್ಥಾನದಲ್ಲಿ¨ªಾರೆ. ಅಲ್ಲದೆ   ಸಮಾಜಕ್ಕೆ, ದೇಶಕ್ಕೆ ಸೇವೆಯನ್ನು ನೀಡುವಲ್ಲಿಯೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಪುಣೆಯ ಈ   ಮಹಾನಗರದಲ್ಲಿಯು ಇಂತಹ ಸಂಘಟನೆಯ ಮೂಲಕ ಸಮಾಜ ಸೇವೆಗೈಯುವ ಬಿಲ್ಲವ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಬೆಳ್ಳಿ ಮಹೋತ್ಸವ ಸಮಾರಂಭದ ಉದ್ಘಾಟನೆಯ ಮೊದಲಿಗೆ ಕುಮಾರ ಬಂಗಾರಪ್ಪ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಕರುಣಾಕರ ಶಾಂತಿ ಅವರು  ಬ್ರಹ್ಮಶ್ರೀ ನಾರಾಯಣ  ಸ್ವಾಮಿ, ಕೋಟಿ ಚೆನ್ನಯರ ಫೋಟೋಗೆ ಪೂಜೆ ಸಲ್ಲಿಸಿ  ಸ್ತೋತ್ರ  ಪಠಿಸಿ  ಆರತಿ ಬೆಳಗಿಸಿದರು. ಅನಂತರ ಕುಮಾರ ಬಂಗಾರಪ್ಪ ಹಾಗೂ ಸಂಘದ ಪದಾಧಿಕಾರಿಗಳು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. 

ಶಂಕರ್‌ ಪೂಜಾರಿ, ಸರೋಜಿನಿ ಬಂಗೇರ ಮತ್ತು ಬಳಗದವರು ಪ್ರಾರ್ಥನೆಗೈದರು.   ವಿಶ್ವನಾಥ್‌ ಪೂಜಾರಿ ಕಡ್ತಲ ಸ್ವಾಗತಿಸಿದರು.

ಅನಂತರ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕುಮಾರ ಬಂಗಾರಪ್ಪ,  ಪುಣೆ ಬಿಲ್ಲವ  ಸಂಘದ   ಸಂಸ್ಥಾಪಕ ಅಧ್ಯಕ್ಷರಾದ ಸುಂದರ್‌ ಪೂಜಾರಿ, ಸಂಘದ  ಅಧ್ಯಕ್ಷರಾದ ಶೇಖರ್‌ ಟಿ. ಪೂಜಾರಿ, ಬೆಳ್ಳಿ ಮಹೋತ್ಸವ ಸಮಿತಿ ಅಧ್ಯಕ್ಷರಾದ ವಿಶ್ವನಾಥ್‌ ಪೂಜಾರಿ ಕಡ್ತಲ, ನಿಕಟ ಪೂರ್ವ ಅಧ್ಯಕ್ಷ  ಸದಾಶಿವ ಎಸ್‌. ಸಾಲ್ಯಾನ್‌, ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೋಕ್ತೆಸರ ಕರುಣಾಕರ ಶಾಂತಿ, ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜಿನಿ ಡಿ. ಬಂಗೇರ, ಬೆಳ್ಳಿ ಮಹೋತ್ಸವ ಸಮಿತಿಯ ಮಹಿಳಾ ಅಧ್ಯಕ್ಷೆ ರೇವತಿ ಪೂಜಾರಿ,  ಮಾಜಿ ಅಧ್ಯಕ್ಷೆ ಪ್ರಿಯಾ ಯು. ಪಣಿಯಾಡಿ ಅವರು ಉಪಸ್ಥಿತರಿದ್ದರು. 

ಸಮಾರಂಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ  ಕುಮಾರ ಬಂಗಾರಪ್ಪ ಅವರನ್ನು ಪುಣೇರಿ ಪೇಟ ತೊಡಿಸಿ, ಫಲಪುಷ್ಪ,  ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಪರಮಾನಂದ ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ

ಟಾಪ್ ನ್ಯೂಸ್

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.