ಬಿಲ್ಲವರ ಅಸೋ.ಮುಂಬಯಿ ಮಹಿಳಾ ವಿಭಾಗ: ಮಕರ ಸಂಕ್ರಾಂತಿ 


Team Udayavani, Jan 16, 2019, 12:13 PM IST

1000.jpg

ಮುಂಬಯಿ: ಸ್ವಜಾತಿಯ ಸಂಘಟನೆಗೈದು ಭವನ ರಚಿಸಿ ಸಮಾಜವನ್ನು ಒಗ್ಗೂಡಿಸಿ ಮಹಿಳೆಯನ್ನೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರಮಿಸಿದ ಜಯ ಸಿ. ಸುವರ್ಣರ ಸೇವೆ ಅನನ್ಯ. ಮಹಿಳೆ ಯರು ಸುಸಂಸ್ಕೃತ  ವಿಚಾರ ಧಾರೆಯುಳ್ಳವರಾಗಿ  ಸಂಸಾರ ಮತ್ತು ಸಮಾಜವನ್ನು ಸುಗಮವಾಗಿ ಸಾಗಿಸಬೇಕು. ಆವಾಗಲೇ ಮಹಿಳೆಯ  ಜೀವನ ಸಾರ್ಥಕವಾಗುತ್ತದೆ. ಭೂ ಲೋಕದಲ್ಲಿ ಪ್ರತ್ಯಕ್ಷವಾಗಿ ಕಾಣುವ ದೇವರೇ ಸೂರ್ಯ. ಜಾತಿ ಭೇದ ತೋರದೆ ಭೂಮಿಗೆ ಪ್ರಕಾಶಮಾನ ವಾಗಿ ಜೀವ ಸಂಕುಲವನ್ನು ಬೆಳಗಿಸುವ ಸೂರ್ಯ ದೇವರೇ ನಮ್ಮ ಬದುಕಿನ ಕಣ್ಣಾಗಿದ್ದಾರೆ. ಧನುರಾಶಿಯಿಂದ ಮಕರ ರಾಶಿಯತ್ತ ಪಯಣಿಸುವ ಕಾಲಘಟ್ಟದ ಸಂಭ್ರಮಯುತ ಸಂಕ್ರಾಂತಿ ಪುಣ್ಯಾಧಿಯಾಗಿದ್ದು ಇದು ಉತ್ತರೋತ್ತರ ಆಭಿವೃದ್ಧಿಯ ಸಂಕೇತ ವಾಗಿದೆ. ಆದ್ದರಿಂದಲೇ ಮಕರ ಸಂಕ್ರಮಣ ಪವಿತ್ರ ಕಾಲವಾಗಿ ಶಾಸ್ತ್ರಾನು ಸಾರ ಪುಣ್ಯಾಧಿಯಾಗಿದೆ ಎಂದು ರಕ್ಷಣಾ ಇಲಾಖೆಯ ನಿವೃತ್ತ ಅಧಿಕಾರಿ, ಸಮಾಜ ಸೇವಕಿ ನಳಿನಾ ಎಸ್‌. ಸಾಲ್ಯಾನ್‌ ನುಡಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ಜ. 14 ರಂದು  ಸಂಜೆ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ವಾರ್ಷಿಕ ಮಕರ ಸಂಕ್ರಮಣ ಮತ್ತು ಅರಸಿನ ಕುಂಕುಮ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ವಿಭಾಗಕ್ಕೆ ಶುಭಹಾರೈಸಿದರು.

ಬಿಲ್ಲವರ ಅಸೋಸಿಯೇಶನ್‌  ಮುಂಬಯಿ ಅಧ್ಯಕ್ಷ ಚಂದ್ರಶೇಖರ್‌ ಎಸ್‌. ಪೂಜಾರಿ ಅವರ  ಅಧ್ಯಕ್ಷತೆಯಲ್ಲಿ ಜರಗಿದ ಭವ್ಯ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಸಮಾಜ ಸೇವಕಿ ಜಯಲಕ್ಷಿ¾à ಚಂದ್ರಶೇಖರ್‌ ಪೂಜಾರಿ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆಯರಾದ ಪ್ರಭಾ ಕೆ. ಬಂಗೇರ ಮತ್ತು ಗಿರಿಜಾ ಚಂದ್ರಶೇಖರ್‌  ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಪದಾಧಿಕಾರಿಗಳು, ಅತಿಥಿಗಳನ್ನೊಳಗೊಂಡು ಕಾರ್ಯಾ ಧ್ಯಕ್ಷೆ  ಜಯಂತಿ ವಿ. ಉಳ್ಳಾಲ್‌ ಭವ ನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ನೆರವೇರಿಸಿ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಯಂತಿ ವಿ. ಉಳ್ಳಾಲ್‌ ಸ್ವಾಗತಿಸಿದರು.  ಗೌರವ  ಪ್ರಧಾನ  ಕಾರ್ಯದರ್ಶಿ ಸುಮಿತ್ರಾ ಎಸ್‌. ಬಂಗೇರ ಅತಿಥಿಗಳನ್ನು ಪರಿಚ ಯಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಜೊತೆ ಕಾರ್ಯದರ್ಶಿ ಜಯಂತಿ ಎಸ್‌. ಕೋಟ್ಯಾನ್‌ ವಂದಿಸಿದರು.

ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಕುಸುಮಾ ಅಮೀನ್‌, ಸದಸ್ಯೆಯರುಗಳಾದ  ವಿಲಾಸಿನಿ ಕೆ. ಸಾಲ್ಯಾನ್‌, ರೇಖಾ ಸದಾನಂದ್‌, ಲಕ್ಷಿ¾à ಪೂಜಾರಿ, ರೋಹಿಣಿ ಎಸ್‌. ಪೂಜಾರಿ, ಪುಷ್ಪಾ ಎಸ್‌. ಅಮೀನ್‌, ಸುಜಾತಾ ಡಿ. ಪೂಜಾರಿ, ಜಲಜಾಕ್ಷಿ ಎನ್‌. ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯೆಯರಾದ ಬಬಿತಾ ಜೆ. ಕೋಟ್ಯಾನ್‌, ಯಶೋದಾ ಎನ್‌. ಟಿ ಪೂಜಾರಿ, ಪೂಜಾ ಪುರುಷೋತ್ತಮ ಕೋಟ್ಯಾನ್‌, ಮೀರಾ ಡಿ. ಅಮೀನ್‌, ವನಿತಾ ಪೂಜಾರಿ, ವತ್ಸಲಾ ಕೆ. ಪೂಜಾರಿ, ಪ್ರೇಮಾ ಆರ್‌. ಕೋಟ್ಯಾನ್‌, ಭವಾನಿ ಸಿ. ಕೋಟ್ಯಾನ್‌, ಗಿರಿಜಾ ಬಿ. ಪೂಜಾರಿ, ಶಾಂತಾ ಬಿ. ಪೂಜಾರಿ, ಸುಮಲತಾ ವಿ. ಅಮೀನ್‌ ಸೇರಿದಂತೆ ಕೃಪಾ ಭೋಜ್‌ರಾಜ್‌ ಕುಳಾಯಿ, ಶ್ರೀಮಂತಿ  ಎಸ್‌. ಪೂಜಾರಿ, ಲಕ್ಷ್ಮೀ ಎನ್‌. ಕೋಟ್ಯಾನ್‌, ಡಾ| ಗೀತಾಂಜಲಿ ಎಲ್‌. ಸಾಲ್ಯಾನ್‌, ಪ್ರಭಾ ಎನ್‌.ಪಿ. ಸುವರ್ಣ, ಮೋಹಿನಿ ವಿ. ಆರ್‌. ಕೋಟ್ಯಾನ್‌, ಸುಧಾ ಎಲ್‌. ಅಮೀನ್‌, ನೂರಾರು ಮಹಿಳೆಯರು ಉಪಸ್ಥಿತರಿದ್ದು, ಅರಸಿನ ಕುಂಕುಮ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

ಮಹಿಳೆಯರು ನಕ್ಕರೆ ಸಮಾಜವೇ ಸಮಾಧಾನ ಪಡುತ್ತದೆ. ಆದ್ದರಿಂದ ಮಕರ ಸಂಕ್ರಾಂತಿ ಪರ್ವಕಾಲದಲ್ಲಿ ಮಹಿಳೆಯರ ಮುಖದಲ್ಲಿ ನಗು ಕಾಣಬೇಕು. ಅದೇ ನಮ್ಮ ಧ್ಯೇಯೋದ್ದೇಶದಲ್ಲಿ ಒಂದಾಗಿದೆ. ಮಹಿಳಾ ಪ್ರಧಾನ ಸಮಾಜದಲ್ಲಿ ಮಹಿಳೆಯ ನಗು ಸಮಾಜವನ್ನು ಜೀವಂತವಾಗಿಸುತ್ತದೆ. ಇಂತಹ ಆನಂದದಾಯಕ ಸಡಗರದಲ್ಲಿ ಸಂತೋಷ ಹೊರ ಚಿಮ್ಮಿಸಿದಾಗ ನೆಮ್ಮದಿ ತನ್ನಿಂದ ತಾನೇ ಫಲಿಸಿ ಮಾಡಿದ ಕೆಲಸವೂ ಫಲವತ್ತಾಗುವುದು. ಕವಿತೆಯಿಂದ ಭಾಷೆಯ ಸೊಬಗು ಹೆಚ್ಚುತ್ತದೆ. ಕವನ ಜೀವನವಾದಾಗ ಸಮೃದ್ಧಿಯ ಬದುಕು ಪ್ರಾಪ್ತಿಸುವುದು. ಆದ್ದರಿಂದ  ಜೀವನವನ್ನು ಕವಿತೆಯಾಗಿಸಿಕೊಂಡು ಬದುಕನ್ನು ಸಾರ್ಥಕಗೊಳಿಸೋಣ.
 ಚಂದ್ರಶೇಖರ್‌ ಪೂಜಾರಿ,  ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ

ವರದಿ-ಚಿತ್ರ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.