ಬಿಲ್ಲವರ ಅಸೋಸಿಯೇಶನ್‌ಲೋನವಾಲ: ಪದಾಧಿಕಾರಿಗಳ ಆಯ್ಕೆ
Team Udayavani, Sep 18, 2018, 1:01 PM IST
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಲೋನವಾಲ ಸ್ಥಳೀಯ ಕಚೇರಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತ್ಯೋತ್ಸವವು ಸೆ. 16 ರಂದು ಲೋನವಾಲದ ಹೊಟೇಲ್ ರೇನ್‌ಬೋ ರಿಟ್ರೀಟ್ ಇದರ ವ್ಹಿವ್ ಪಾಯಿಂಟ್ ಸಭಾಗೃಹದಲ್ಲಿ ಜರಗಿತು. ಲೋನವಾಲ ಸಮಿತಿಯ ಗೌರವ ಕಾರ್ಯಧ್ಯಕ್ಷ ಶ್ರೀಧರ ಎಸ್. ಪೂಜಾರಿ ಮತ್ತು ಸುಕನ್ಯಾ ಶ್ರೀಧರ್, ಗೌರವ ಕಾರ್ಯಧ್ಯಕ್ಷ ಶ್ರೀಧರ ಎಸ್. ಪೂಜಾರಿ ಮತ್ತು ಮೀನಾಕ್ಷಿ ಪೂಜಾರಿ, ಕಾರ್ಯಧ್ಯಕ್ಷ ರವಿ ಎ. ಪೂಜಾರಿ ಮತ್ತು ಆರತಿ ಆರ್. ಪೂಜಾರಿ ದಂಪತಿಗಳು, ಗೌರವ ಕಾರ್ಯದರ್ಶಿ ಸುಜಾತಾ ಸಿ. ಪೂಜಾರಿ ಮತ್ತು ಇನ್ನಿತರ ಪದಾಧಿಕಾರಿಗಳನ್ನು ಒಳಗೊಂಡು ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ 2018- 2021ರ ಸಾಲಿನ ಲೋನವಾಲ ಸ್ಥಳೀಯ ಕಚೇರಿಗೆ ನೂತನ ಪದಾಧಿ ಕಾರಿಗಳನ್ನು ನೇಮಿಸಲಾಯಿತು. ಕಾರ್ಯಾಧ್ಯಕ್ಷರಾಗಿ ಗಣೇಶ್ ಎ. ಪೂಜಾರಿ ಅವರನ್ನು ನೇಮಿಸಲಾಯಿತು. ನೂತನ ಪದಾಧಿಕಾರಿಗಳು, ಕಾರ್ಯ ಕಾರಿ ಸಮಿತಿಯ ಸದಸ್ಯರು ಅಧಿಕಾರ ಸ್ವೀಕರಿಸಿದರು.
ಅಸೋಸಿಯೇಶನ್‌ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್ ಪ್ರಸ್ತಾವನೆಗೈದು ನೂತನ ಪದಾಧಿಕಾರಿಗಳ ಯಾದಿಯನ್ನು ಪ್ರಕಟಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಅಧ್ಯಕ್ಷ ಚಂದ್ರಶೇಖರ ಪೂಜಾರಿ ಪುಷ್ಪಗುತ್ಛವನ್ನಿತ್ತು ಅಧಿಕಾರ ಹಸ್ತಾಂತರಿಸಿದರು.
ಉಪ ಕಾರ್ಯಾಧ್ಯಕ್ಷರಾಗಿ ಶೇಖರ್ ಎ. ಪೂಜಾರಿ, ಗೌರವ ಕಾರ್ಯದರ್ಶಿಯಾಗಿ ರಾಜೇಶ್ ಎಸ್. ಪೂಜಾರಿ, ಗೌರವ ಕೋಶಾಧಿಕಾರಿಯಾಗಿ ಸಂದೀಪ್ ಎಸ್. ಪೂಜಾರಿ, ಜತೆ ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ, ಜತೆ ಕೋಶಾಧಿಕಾರಿಯಾಗಿ ದಯಾನಂದ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶೇಖರ್ ಬಿ. ಪೂಜಾರಿ, ಸುರೇಶ್ ಡಿ. ಪೂಜಾರಿ, ರಾಜೇಶ್ ಎಸ್. ಪೂಜಾರಿ, ಆನಂದ ಬಿ. ಪೂಜಾರಿ, ದಿನೇಶ್ ಹೆಚ್. ಪೂಜಾರಿ, ವಿಲಾಸಿನಿ ಜಿ. ಪೂಜಾರಿ, ಸುಕನ್ಯಾ ಎಸ್. ಪೂಜಾರಿ, ಆಶಾಲತಾ ಎಸ್. ಪೂಜಾರಿ, ಮಹಿಳಾ ವಿಭಾಗದ ಸದಸ್ಯರಾಗಿ ಮೀನಾಕ್ಷಿ ಎಸ್. ಪೂಜಾರಿ, ಪ್ರೀತಿ ಡಿ. ಪೂಜಾರಿ, ಯುವ ವಿಭಾಗದ ಸದಸ್ಯರಾಗಿ ಲೋಹಿತ್ ಪೂಜಾರಿ, ಸಂತೋಷ್ ಪೂಜಾರಿ, ಗಣೇಶ್ ಪೂಜಾರಿ, ಉಮೇಶ್ ಕೋಟ್ಯಾನ್, ಆರತಿ ಆರ್. ಪೂಜಾರಿ, ಸುಜಾತಾ ಪೂಜಾರಿ ಅಧಿಕಾರ ವಹಿಸಿಕೊಂಡರು.
ನನಗೆ ಸಮಾಜ ಸೇವೆಗೈಯಲು ನಿಮ್ಮಿಂದ ಸೌಭಾಗ್ಯ ಸಿಕ್ಕಿದೆ. ಸಮಾಜದ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿ ಸಮಿತಿಯ ಮೂಲಕ ಸಮಾಜವನ್ನು ಬಲಪಡಿಸುವ ಪ್ರಯತ್ನ ನಡೆಸುವೆ ಎಂದು ರವಿ ಪೂಜಾರಿ ತಿಳಿಸಿದರು. ಲೋನಾವಳ ಸ್ಥಳೀಯ ಕಚೇರಿಯ ಸ್ಥಾಪನೆಯ 15 ವರ್ಷಗಳ ಬಳಿಕ ನಾವೆಲ್ಲರೂ ಬಹಳಷ್ಟು ಸಕ್ರೀಯರಾಗಿದ್ದೇವೆ. ಆ ಮೊದಲು ಸಮಾಜ ಬಾಂಧವರ ಒಗ್ಗೂಡುವಿಕೆ ಸಾಧ್ಯವಾಗಿಲ್ಲ. ಆದರೆ ಭವಿಷ್ಯತ್ತಿನಲ್ಲಿ ನಾವೆಲ್ಲರೂ ಏಕಾಗ್ರಸ್ಥರಾಗಿ ಸಮಾಜವನ್ನು ಮುನ್ನಡೆಸುವ ಸ್ಥೈರ್ಯ ನಮ್ಮವರಲ್ಲಿ ಮೊಳಗಿದೆ. ಸಮುದಾಯದ ಜೊತೆಗೆ ಸಹೋದರತ್ವದಿಂದ ಬೆಸೆದು ಬದುಕುವುದೂ ಇಂದಿನ ಅಗತ್ಯವಾಗಿದೆ. ಸಮಾಜದ ಶ್ರೇಯೋಭಿವೃದ್ಧಿಗೂ ಸ್ಪಂದಿಸೋಣ ಎಂದು ಶ್ರೀಧರ ಪೂಜಾರಿ ತಿಳಿಸಿದರು.
ಮಧ್ಯಾಹ್ನ ಬ್ರಹ್ಮಶ್ರೀ ನಾರಾಯಣ ಗುರುವರ್ಯರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಅಸೋಸಿಯೇಶನ್‌ನ ಗೌ| ಜೊತೆ ಕಾರ್ಯದರ್ಶಿ ರವೀಂದ್ರ ಎ. ಅಮೀನ್ ಪೂಜಾಧಿಗಳನ್ನು ನಡೆಸಿ ಪ್ರಸಾದ ವಿತರಿಸಿ ಹರಸಿದರು. ಅಸೋಸಿಯೇಶನ್ ಮುಂಬಯಿ ಸಮಿತಿ ಹಾಗೂ ಸ್ಥಳಿಯ ಸಮಿತಿ ಮಹಿಳಾ ವಿಭಾಗದಿಂದ ಭಜನೆ ನಡೆಯಿತು. ಕಾರ್ಯಕ್ರಮದಲ್ಲಿ ಲೋನಾವಳ ನಗರ ಪರಿಷದ್ ಅಧ್ಯಕ್ಷೆ ಶ್ರದ್ಧಾ ಜಾಧವ್, ನಗರ ಸೇವಕಿ ವೃಂದಾ ಗಣಂತ್ರ, ಲಕ್ಷಿ¾àನಾರಾಯಣ ಶೆಟ್ಟಿ, ಸತೀಶ್ ಸಾಲ್ಯಾನ್, ಸಂಗೀತಾ ಸುವರ್ಣ, ವಿನಯ್‌ಕುಮಾರ್ ಪಿಂಪ್ರಿ, ಮಾಜಿ ನಗರ ಸೇವಕಿ ಸೌಮ್ಯ ಶೆಟ್ಟಿ ಮತ್ತಿತರ ಗಣ್ಯರು ಅತಿಥಿಗಳಾಗಿ ಉಪಸ್ಥಿತರಿದ್ದರು. ಅಸೋಸಿಯೇಶನ್‌ನ ಉಪಾಧ್ಯಕ್ಷ ಶಂಕರ ಡಿ. ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಜೊತೆ ಕೋಶಾಧಿಕಾರಿ ಮೋಹನ್ ಡಿ. ಪೂಜಾರಿ, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎಂ. ಕೋಟ್ಯಾನ್, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್, ಮಾಜಿ ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ಗಣೇಶ್ ಬಂಗೇರ ಮೀರಾರೋಡ್, ಜಗನ್ನಾಥ್ ವಿ. ಅಮೀನ್ ಮೊದಲಾದವರು ಉಪಸ್ಥಿತರಿದ್ದರು. ಧನಂಜಯ ಶಾಂತಿ ಪ್ರಾರ್ಥನೆಗೈದರು. ಯಶವಂತ್ ಎನ್. ಪೂಜಾರಿ ಭಕ್ತಿಗೀತೆಯನ್ನು ಹಾಡಿದರು. ಆಶಾಲತಾ ಎಸ್. ಪೂಜಾರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಲೋನವಾಲದಲ್ಲಿ ಬಿಲ್ಲವರ 60 ಮನೆಗಳಿದ್ದರೂ ಇಷ್ಟೊಂದು ಸಂಖ್ಯೆಯಲ್ಲಿ ಒಗ್ಗೂಡಿದ್ದು ಬಿಲ್ಲವ ಸಮಾಜದ ತಾಕತ್ತು ತೋರುತ್ತದೆ. ಸಂಖ್ಯಾ ಬಲ ಕಡಿಮೆ ಇದ್ದರೂ ಅಖಂಡ ಬಿಲ್ಲವ ಬಾಂಧವರನ್ನು ಒಗ್ಗೂಡಿಸುವ ಕೀರ್ತಿ ಜಯ ಸುವರ್ಣ ಅವರಿಗೆ ಸಲ್ಲುತ್ತದೆ. ಅವರ ದೂರದೃಷ್ಟಿತ್ವ ಮತ್ತು ಶ್ರದ್ಧಾಪೂರ್ವಕ ಕೆಲಸದ ಮೂಲಕ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ನಡೆದಿದೆ. ನಾವೆಲ್ಲರೂ ಸರ್ವರನ್ನು ಸಮಾನತೆ, ಸೌಹಾರ್ದತೆಯಿಂದ ಕಂಡು ಸಮೃದ್ಧಿ, ನೆಮ್ಮದಿಯಿಂದ ಬದುಕುವುದು ಅಗತ್ಯವಿದೆ. ಆ ಮೂಲಕ ಇತರರಿಗೆ ಮಾದರಿ ಆಗೋಣ. ಬಿಲ್ಲವರೆಲ್ಲರೂ ಸಾಂಘಿಕರಾಗಿ, ಸ್ನೇಹಬಾಳ್ವೆಯ ಸಮನ್ವಯಕರಾಗಿ ಬಾಳುತ್ತಾ ಸಮಾಜಕ್ಕೆ ಮಾರ್ಗದರ್ಶರಾಗೋಣ
-ಚಂದ್ರಶೇಖರ್ ಪೂಜಾರಿ,
ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್ ಮುಂಬಯಿ
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.