ಬಿಲ್ಲವರ ಅಸೋಸಿಯೇಶನ್‌ ಮುಂಬಯಿ:ಯಕ್ಷಗಾನ ಕಲಾ ಪ್ರಶಸ್ತಿ ಪ್ರದಾನ


Team Udayavani, Aug 29, 2017, 2:42 PM IST

26mum04A.jpg

ಮುಂಬಯಿ: ಜಗತ್ತು ಒಪ್ಪಿಕೊಂಡ ಒಂದು ಶ್ರೇಷ್ಠ ಮತ್ತು ಪರಿಪೂರ್ಣ ರಂಗಕಲೆಯೇ ಯಕ್ಷಗಾನ ಆಗಿದೆ. ತವರೂರಲ್ಲಿ ಇಂತಹ ಕಲೆ ವೈಭವೀಕರಣದಿಂದ ಮೂಲ ಸ್ವರೂಪ ಕಳೆದುಕೊಳ್ಳುತ್ತಿದ್ದರೂ ಮುಂಬಯಿಯಲ್ಲಿ ಇದು ಪಾವಿತ್ರÂತೆಯೊಂದಿಗೆ ಸರ್ವ ಸಮರ್ಪಕವಾಗಿ ಬೆಳೆಯುತ್ತಿದೆ. ಸಾಂಸ್ಕೃತಿಕ ಬೇರುಗಳನ್ನು ಉಳಿಸಿಕೊಳ್ಳಲು ಯಕ್ಷಗಾನ ಪೂರಕವಾಗಿದ್ದು ರಂಗಭೂಮಿಯಲ್ಲಿ ಯಕ್ಷಗಾನದ‌ ಸ್ವರೂಪ ಅದ್ಭುತವಾಗಿ ವಿಸ್ತಾರಗೊಳ್ಳುತ್ತಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಬಿಲ್ಲವರ ಅಸೋಸಿಯೇಶನ್‌ ಅದ್ಭುತ ಪರಂಪರೆ ರೂಪಿಸಿರುವುದು ಸ್ತುತ್ಯರ್ಹ. ಸದ್ಯ ಸುಮಾರು 10,000ಕ್ಕಿಂತ ಅಧಿಕ ಕಲಾವಿದರು ಯಕ್ಷಗಾನದಲ್ಲಿ ಮೆರೆಯುತ್ತಿದ್ದಾರೆ.ವೃತ್ತಿಕಲಾವಿದರುಗಳಿಗಿಂತ ಹವ್ಯಾಸಿ ಕಲಾವಿದರೇ ಯಕ್ಷಗಾನಕ್ಕೆ ಹೆಚ್ಚು ಪ್ರಾಮಾಣಿಕರೂ, ಆಕರ್ಷಣಿಕರೂ ಆಗಿದ್ದಾರೆ. ಪೂರ್ವಜರು ಅಪಾರ ಶ್ರಮದಿಂದ ಕಟ್ಟಿಕೊಂಡ ಕಲೆ ಯಕ್ಷಗಾನವಾಗಿದ್ದು ಇದನ್ನು ಅರ್ಥಪೂರ್ಣವಾಗಿ ಬೆಳೆಸಲು ಕಲಾವಿದರ ಜವಾಬ್ದಾರಿ ಬಹಳಷ್ಟಿದೆ. ಇಂದಿಗೂ ಮಳೆಗಾಲದಲ್ಲಿ ಮುಂಬಯಿ ಕಡೆ ಮುಖ ಮಾಡುತ್ತಿರುವ ಯಕ್ಷಗಾನದಿಂದ ಮುಂಬಯಿಯಲ್ಲಿನ ಪರಂಪರೆಯ ಕಾಳಜಿಗೆ ಸಾಕ್ಷಿಯಾಗಿದೆ. ಕಲೆಗೆ ಕೊಡುವ ಕೆಲಸ ಸಾಂಸ್ಕೃತಿಕ ಜಗತ್ತಿಗೆ ಕೊಡಮಾಡುವ ಪುಣ್ಯಾದಿ ಕಾಯಕವಾಗಿದೆ ಎಂದು ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ಡಾ| ಚಿನ್ನಪ್ಪ ಗೌಡ ಅಭಿಪ್ರಾಯಪ‌ಟ್ಟರು.

ಆ. 26ರಂದು ಸಂಜೆ ಸಾಂತಕ್ರೂಜ್‌ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀನಾರಾಯಣ ಗುರು ಸಭಾಗೃಹದಲ್ಲಿ  ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಂಸ್ಥೆಯು ತನ್ನ ಸಂಚಾಲಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ವತಿಯಿಂದ ವಾರ್ಷಿಕವಾಗಿ ಕೊಡಮಾಡುವ ಜಯ ಸಿ.ಸುವರ್ಣ ಅವರ ಮಾತೃಶ್ರೀ ದಿ| ಅಚ್ಚು ಸಿ.ಸುವರ್ಣ ಸ್ಮರಣಾರ್ಥ 13ನೇ ವಾರ್ಷಿಕ ಯಕ್ಷಗಾನ ಕಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಚಿನ್ನಪ್ಪ ಗೌಡ  ಅವರು ಮಾತನಾಡಿದರು.

ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್‌ ಅಧ್ಯಕ್ಷತೆಯಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರಶಸ್ತಿಯ ಪ್ರಾಯೋಜಕರೂ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಅವರು ಯಕ್ಷಗಾನಚಿತ್ರಣ ಅನಾವರಣಗೊಳಿಸಿ ಉದ್ಘಾಟಿಸಿದರು. ಗೌರವ ಅತಿಥಿಗಳಾಗಿ ಡಾ| ಸುನೀತಾ ಶೆಟ್ಟಿ , ಹಿರಿಯ ಯಕ್ಷಗಾನ ವಿದ್ವಾಂಸ ಮತ್ತು ಸಂಘಟಕ  ಎಚ್‌.ಬಿ.ಎಲ್‌ ರಾವ್‌ ಮತ್ತು ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಸಿ. ಟಿ.ಸಾಲ್ಯಾನ್‌ ಉಪಸ್ಥಿತರಿದ್ದರು.

ಡಾ| ಚಿನ್ನಪ್ಪ ಗೌಡ ಅವರು ನಾಡಿನ ಹಿರಿಯ ಪ್ರಸಿದ್ಧ ಯಕ್ಷಗಾನ ಕಲಾವಿದ, ಪ್ರಸಂಗಕರ್ತ ಎಂ.ಟಿ ಪೂಜಾರಿ ಅವರಿಗೆ (ಪತ್ನಿ ವೇದಾವತಿ ಎಂ.ಪೂಜಾರಿ ಮತ್ತು ಪುತ್ರಿ ಆಶಾ ಎಂ.ಪೂಜಾರಿ ಜೊತೆಗೂಡಿ) ವಾರ್ಷಿಕ ಯಕ್ಷಗಾನ ಕಲಾ ಪ್ರಶಸ್ತಿ-2017ನ್ನು ಪ್ರದಾನಿಸಿ ಅಭಿನಂದಿಸಿದರು.

ಡಾ| ಸುನೀತಾ ಶೆಟ್ಟಿ ಮಾತನಾಡಿ, ಅರ್ಹ ಕಲಾಕಾರರನ್ನು ಗೌರವಿಸಿ ಪ್ರೋತ್ಸಾಹಿಸುವ ಒಳ್ಳೆಯ ಪರಂಪರೆ ಬಿಲ್ಲವರ ಅಸೋಸಿಯೇಶನ್‌ ಮಾಡುತ್ತಿರುವುದು ಅಭಿನಂದನೀಯ. ಇವತ್ತಿನ ಪುರಸ್ಕಾರಕ್ಕೆ ಭಾಜನರಾದ ಕಲಾವಿದ ಪ್ರಸಂಗಕರ್ತನಾಗಿದ್ದು ಯಕ್ಷಸಾಹಿತ್ಯದಲ್ಲೂ  ಪಳಗಿರುವುದು ಸ್ತುತ್ಯರ್ಹ. ಇಂತಹ ಕಲಾವಿದರಿಂದ ಯಕ್ಷಸಾಹಿತ್ಯದ ಮೂಲ ರಚನೆ ಸಾಧ್ಯವಾಗುವುದು. ಯಕ್ಷಗಾನ ಬರೇ ಜಾನಪದಕ್ಕೆ ಸೇರಿದ್ದಲ್ಲ. ಈ ಕಲೆಯಲ್ಲಿ ಸಾಹಿತ್ಯ, ನೀತಿ ಧರ್ಮವಿದೆ. ಆದ್ದ‌ರಿಂದ ಯಕ್ಷಗಾನ ಯಾವುದೇ ಧರ್ಮಕ್ಕೆ ಸೇರಿದ ಕಲೆಯಲ್ಲ. ಬದುಕು ಹೇಗೆ ರೂಪಿಸಬೇಕು ಎನ್ನುವುದನ್ನು ಯಕ್ಷಗಾನ ತೋರುತ್ತದೆ ಎಂದರು.

ಪ್ರಶಸ್ತಿಗೆ ಉತ್ತರಿಸಿ ಎಂ.ಟಿ ಪೂಜಾರಿ ಅವರು, ಕಲೆಯಿಂದ ಒಂದು ಹೊತ್ತಿನ ಊಟದಲ್ಲೂ ಸಂತಸ ಪಟ್ಟವ ನಾನು. ಯಕ್ಷಗಾನದ ಪರಿಕರಗಳ ಪೆಟ್ಟಿಗೆ ಹೊತ್ತು ಅನುಭವವುಳ್ಳವನು. ಇದಕ್ಕೆ ಕಾರಣ ಬಾಲ್ಯದಿಂದಲೇ ಯಕ್ಷಗಾನದ ರುಚಿ ಉಂಡವನಾಗಿದ್ದೇನೆ. ಅಂದಿನ ಆ ಕಲಾ ಭಾವನೆ ನನ್ನನ್ನು ಬೆಳೆಸಿದೆ. ಯಕ್ಷಗಾನ ಎಲ್ಲರಿಗೂ ಹಿಡಿಯುವ ಕಲೆಯಲ್ಲ. ಆದುದರಿಂದ ಪ್ರತಿಷ್ಠೆಗಾಗಿ ಯಕ್ಷಗಾನದ ಸದ್ಬಳಕೆ ಸಲ್ಲದು. ಯಕ್ಷಗಾನದಲ್ಲಿ ಅಭಿರುಚಿ  ಇಲ್ಲದವರಿಗೆ ಪೋಷಣೆ ಅಸಾಧ್ಯ. ನಾನು ಎಪ್ಪತ್ತರ ದಶಕದಿಂದಲೇ ಜಯ ಸುವರ್ಣರಲ್ಲಿನ  ಯಕ್ಷಗಾನ ಪ್ರೋತ್ಸಾಹಕತೆ ತಿಳಿದಿದ್ದೇನೆ. ಮರಾಠಿ ಮಣ್ಣಿನಲ್ಲಿದ್ದು ಯಕ್ಷಗಾನ ಮಂಡಳಿ ನಡೆಸುವ ಬಿಲ್ಲವರ ಅಸೋಸಿಯೇಶನ್‌ ಸಾಧ್ಯವಾದಲ್ಲಿ ಮರಾಠಿ ಯಕ್ಷಗಾನ ಪ್ರೋತ್ಸಾಹಿಸಿದರೆ ಒಳಿತು ಎಂದು  ತಿಳಿಸಿದರು.

ಎಚ್‌.ಬಿ.ಎಲ್‌ ರಾವ್‌ ಅಭಿನಂದನಾ ನುಡಿಗಳನ್ನಾಡಿ, ಇಂದಿನ ಪ್ರಶಸ್ತಿ ಪುರಸ್ಕೃತ ಎಂ.ಟಿ. ಪೂಜಾರಿ ಅವರು ಪೂರ್ಣನಾಮದ ಮುತ್ತಪ್ಪ ಟಿ. ಪೂಜಾರಿ ಆಗಿದ್ದಾರೆ. ಮಾತೃದೇವೋಭವವೋ ಅಂತೆಯೇ ಪಿತೃದೇವೋಭವವೂ ಎನ್ನುವ  ವೇದವಾಕ್ಯವನ್ನು ಪೂರ್ಣಗೊಳಿಸುವಲ್ಲಿ ಜಯ ಸುವರ್ಣ ಅವರು  ಬೇಗನೇ ಪಿತೃಸ್ಮರಣಾರ್ಥದ ಮುಖೇನ ಕಲಾಪೋಷಣೆ ಮಾಡಿಸಿಕೊಂಡು ವೇದವಾಕ್ಯ ಉಳಿಸಬೇಕು. ಪುರಸ್ಕಾರದಿಂದಲೇ ಕಲಾವಿದರಿಗೆ  ಸಮಾಜದಲ್ಲಿ ಹೊಸ ಜೀವನ ಬಂದಿದೆ. ಬಿಲ್ಲವರ ಅಸೋಸಿಯೇಶನ್‌ನಂತಹ ಸಂಸ್ಥೆಗಳ ಪೋಷಣೆಯಿಂದ ಮುಂಬಯಿ ಯಕ್ಷಗಾನಕ್ಕೆ ತವರೂರು ಆಗುವಂತಾಗಲಿ ಎಂದರು.

ಜಯ ಸುವರ್ಣ ಮಾತನಾಡಿ,  ನಾನು ಚಿಕ್ಕನಿರುವಾಗ ನನ್ನ ತಾಯಿಯು ಯಕ್ಷಗಾನಕ್ಕೆ ಕರೆದೊಯ್ದು ಪ್ರೋತ್ಸಾಹಿಸಿದ್ದರು. ಅವರಿಗೆ ಯಕ್ಷಗಾನದಲ್ಲಿ ತುಂಬಾ ಆಸಕ್ತಿ ಇತ್ತು. ಅದೇ ಅಭಿರುಚಿ ನನಗೂ ಪ್ರೇರೇಪಿಸಿತು. ಎಚ್‌.ಬಿ.ಎಲ್‌ ರಾವ್‌ ಅವರ ಪಿತೃಸ್ಮರಣಾರ್ಥದ ಆಶಯ ಪೂರೈಸುವ ಪ್ರಯತ್ನ ಮಾಡುವೆ ಎಂದ‌ು ಭರವಸೆಯಿತ್ತರು.

ನಾವು ಯಕ್ಷಗಾನ ಕಲೆಯನ್ನು ಸಾಂಪ್ರದಾಯಿಕವಾಗಿಯೇ ಈ ತನಕ ನಡೆಸಿ ಆರಾಧನೆಯಾಗಿಸಿಯೇ ಮುನ್ನಡೆಸಿ ಬಂದಿದ್ದೇವೆ. ಪಾರಂಪರಿಕ ಹಿನ್ನೆಲೆಯೊಂದಿಗೆ ಮುನ್ನಡೆಸುವ ಆಶಯಕ್ಕೆ ಬದ್ಧರಾಗಿದ್ದು ಎಲ್ಲಾ ಕಲಾಪೋಷಣೆಯನ್ನು ನಾರಾಯಣ ಗುರುಗಳ ಅನುಗ್ರಹ, ಮಾರ್ಗದರ್ಶನದಿಂದಲೇ ನಡೆಸುತ್ತಿದ್ದೇವೆ. ಶ್ರೀ ಗುರು ನಾರಾಯಣ ಮರಾಠಿ ಯಕ್ಷಗಾನ ಮಂಡಳಿ ರೂಪಿಸುವ ಬಗ್ಗೆ ಪ್ರಯತ್ನಿಸುತ್ತೇವೆ ಎಂದ‌ು ಅಧ್ಯಕ್ಷೀಯ ಭಾಷಣದಲ್ಲಿ ನಿತ್ಯಾನಂದ ಡಿ.ಕೋಟ್ಯಾನ್‌ ತಿಳಿಸಿದರು.
ಇದೇ ವೇಳೆ ವೇದಿಕೆಯಲ್ಲಿ ಆಸೀನರಾಗಿದ್ದ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಡಾ| ಯು.ಧನಂಜಯ ಕುಮಾರ್‌, ಗೌ| ಪ್ರ| ಕೋಶಾಧಿಕಾರಿ ಮಹೇಶ್‌ ಸಿ.ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್‌ ಅವರು ಭಾಗವತ ಮುದ್ದು ಸುವರ್ಣ, ಕೊಲ್ಯಾರು ರಾಜು ಶೆಟ್ಟಿ, ಜಿ.ಟಿ ಆಚಾರ್ಯ ಮತ್ತು ಶ್ರೀನಿವಾಸ ಆರ್‌.ಕರ್ಕೇರ ಅವರಿಗೆ ಪುಷ್ಪಗುತ್ಛ ನೀಡಿ  ಗೌರವಿಸಿದರು.

ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್‌ ಪ್ರಸ್ತಾವನೆಗೈದರು. ಸಾಂಸ್ಕೃತಿಕ  ಉಪಸಮಿತಿ ಕಾರ್ಯಾಧ್ಯಕ್ಷ ದಯಾನಂದ ಆರ್‌. ಪೂಜಾರಿ ಕಲ್ವಾ  ಸ್ವಾಗತಿಸಿದರು. ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ಸಂಪಾದಕ ಹರೀಶ್‌ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿ, ಪ್ರಶಸ್ತಿ ಪುರಸ್ಕೃತರ ಸಮ್ಮಾನಪತ್ರ ವಾಚಿಸಿದರು. ಸಾಂಸ್ಕೃತಿಕ ಸಮಿತಿ ಗೌರವ ಕಾರ್ಯದರ್ಶಿ ಅಶೋಕ್‌ ಕೆ.ಕುಕ್ಯಾನ್‌ ಸಸಿಹಿತ್ಲು ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಮುಖ್ಯಸ್ಥ ಸಿ.ಟಿ ಸಾಲ್ಯಾನ್‌ ಮಾರ್ಗದರ್ಶನದಲ್ಲಿ ಮಂಡಳಿಯ ಕಲಾವಿದರು ಈ ವರ್ಷದ ತಿರುಗಾಟದ ಪ್ರಥಮ ಸೇವೆಯಾಟವಾಗಿ “ಭಾರ್ಗವ ವಿಜಯ’ ತುಳು ಯಕ್ಷಗಾನ ಪ್ರದರ್ಶಿಸಿದರು. ಹೆಚ್‌.ಬಿ.ಎಲ್‌ ರಾವ್‌ ಕಲಾವಿದರಿಗೆ ಗೆಜ್ಜೆಗಳನ್ನಿತ್ತು ತಿರುಗಾಟಕ್ಕೆ ಶುಭಹಾರೈಸಿದರು. 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.