ಬಿಲ್ಲವರ ಅಸೋ.ಪಡುಬೆಳ್ಳೆ, ಶಿಕ್ಷಣ ಸಂಸ್ಥೆ: ನೇತ್ರ ತಪಾಸಣಾ ಶಿಬಿರ
Team Udayavani, Feb 23, 2019, 3:50 PM IST
ಮುಂಬಯಿ: ದೂರದೃಷ್ಟಿವುಳ್ಳ ಪಾಲಕರಿಂದ ಮಕ್ಕಳಲ್ಲಿ ಜಾಗೃತಿ ಸಾಧ್ಯವಾಗಿದ್ದು ವಿನಯತೆಯ ಬುದ್ಧಿವಾದ ಮಕ್ಕಳ ಮಾನಸಿಕ ವಿಕಾಸಕ್ಕೆ ಪೂರಕವಾಗಿರುತ್ತದೆ. ಪಾಲಕರು ಜಾಗೃತವಾಗಿದ್ದಾಗಲೇ ಮಕ್ಕಳು ಸಂಸ್ಕಾರಯುತವಾಗಿ ಬೆಳೆಯುತ್ತಾರೆ. ಆದ್ದರಿಂದ ಕಲಿಕೆ ಶಿಕ್ಷಣಕ್ಕಿಂತ ಪಾಲಕರ ನುಡಿನಡೆಗಳಿಂದಲೇ ಮಕ್ಕಳಲ್ಲಿ ಬದಲಾವಣೆ ತರಲು ಸಾಧ್ಯ. ಪಾಲಕರು ಮಕ್ಕಳ ದೇಹದ ಫಿಟ್‌ನೆಸ್ ಜತೆಗೆ ಮಾನಸಿಕ ಸಮತೋಲನವನ್ನು ತಿಳಿದು ಮಕ್ಕಳನ್ನು ಪ್ರೀತ್ಯಾದರಗಳಿಂದ ಬೆಳೆಸುವ ಅಗತ್ಯವಿದೆ. ತಮ್ಮ ದಿನನಿತ್ಯ ಜೀವನದಲ್ಲಿ ಮನೆಯೊಳಗೆ ನಡೆಯುವ ಆಗುಹೋಗುಗಳಲ್ಲಿ, ಬಳಸುವ ಭಾಷೆ ಮತ್ತು ನಡತೆಯಲ್ಲಿ ಹಿತಮಿತವನ್ನು ಕಂಡುಕೊಂಡಾಗ ಮಕ್ಕಳು ಮತ್ತು ಪೋಷಕರಲ್ಲಿ ಸಾಮರಸ್ಯದ ಬಾಳು ಸಾಧ್ಯ ವಾಗುವುದು ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಸಂಪರ್ಕಾಧಿಕಾರಿ ಗೋಪಾ ಲಕೃಷ್ಣ ಕುಂದರ್ ಬಜಪೆ ತಿಳಿಸಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಆಡಳಿತದ ಶ್ರೀ ಗುರು ನಾರಾಯಣ ಶಿಕ್ಷಣ ಸಮೂಹ ಸಂಸ್ಥೆ ಪಡುಬೆಳ್ಳೆ ಕನ್ನಡ ಮಾಧ್ಯಮ ಪ್ರೌಢಶಾಲೆ, ಆಂಗ್ಲ ಮಾಧ್ಯಮ ಪ್ಲೇಸ್ಕೂಲ್, ನರ್ಸರಿ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಭಾಗೃಹದಲ್ಲಿ ಫೆ. 21ರಂದು ನಡೆದ ವಿದ್ಯಾರ್ಥಿಗಳ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ ಶುಭಹಾರೈಸಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿಸಲ್ಪಟ್ಟ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಮಂಗಳೂರುನ ಆರ್ಕಿಟೆಕ್ಟ್ ಪ್ರಮಲ್ ಕುಮಾರ್, ರೋಟರಿ ಕ್ಲಬ್ ಶಿರ್ವ ಅಧ್ಯಕ್ಷ ದಯಾನಂದ ಶೆಟ್ಟಿ ದೆಂದೂರು, ಪ್ರಸಾದ್ ನೇತ್ರಾಲಯ ಉಡುಪಿ ಇದರ ವೈದ್ಯಾಧಿಕಾರಿ ಡಾ| ಕ್ರಿಸ್Õ ಡಿ’ಸೋಜಾ, ಶಾಲಾಡಳಿತ ಮಂಡಳಿ ಸದಸ್ಯರಾದ ಸುಕನ್ಯಾ ಶಿವಾಜಿ ಎಸ್. ಸುವರ್ಣ ವೇದಿಕೆಯಲ್ಲಿದ್ದರು.
ಡಾ| ಕ್ರಿಸ್Õ ಮಾತನಾಡಿ ಕಣ್ಣಿನ ಜೋಪಾಸನೆ ಪ್ರತಿಯೋರ್ವ ಕರ್ತವ್ಯವಾಗಿದೆ. ಕಣ್ಣಿನ ಉತ್ತಮ ಆರೋಗ್ಯ ಮತ್ತು ಕಾರ್ಯ ನಿರ್ವಹಣೆಗೆ ಹಲವು ಪರಿಸರ ಮತ್ತು ವೈಯಕ್ತಿಕ ಕಾರಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಬಾಲ್ಯಾವಸ್ಥೆಯಲ್ಲೇ ನೇತ್ರ ರಕ್ಷಣೆಯನ್ನು ಪ್ರಧಾನವಾಗಿಸಿ ಅವುಗಳ ಪಾಲನೆ ಮಾಡಬೇಕು ಎಂದು ಮಾಹಿತಿಯನ್ನು ಹಂಚಿಕೊಂಡರು.
ದಯಾನಂದ ದೆಂದೂರು ಮಾತನಾಡಿ, ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸುವ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮ ಇದಾಗಿದೆ. ಅಂಧಕಾರಮುಕ್ತ ಬಾಳಿಗೆ
ಇಂತಹ ಕಾರ್ಯಕ್ರಮಗಳು ಪೂರಕ ವಾಗಿದ್ದು, ಪೋಷಕರು ಈ ಬಗ್ಗೆ ಅತ್ಯಂತ ಸೂಕ್ಷ ¾ ವಿಚಾರವಾಗಿ ಪರಿಗಣಿಸಿ ಮಕ್ಕಳ ಕಣ್ಣಿನ ಆರೋಗ್ಯದತ್ತ ಗಮನಿಸಬೇಕು. ದೃಷ್ಟಿ ಸರಿಯಿದ್ದಾಗ ಮಾತ್ರ ಸಮಾಜವನ್ನು ಒಳ್ಳೆಯ ದೃಷ್ಟಿಯಿಂದ ಕಾಣಲು ಸಾಧ್ಯ ಎಂದರು.
ಪ್ರಸಾದ್ ನೇತ್ರಾಲಯ ಉಡುಪಿ ಸಂಸ್ಥೆಯ ಎಸ್. ನವ್ಯಾ, ಕೆ. ಅಮರ್‌ನಾಥ್, ಹರ್ಷಾ ಪೂಜಾರಿ, ಮಧು ವರ್ಗೀಸ್ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ಮಾಡಿದರು. ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅತಿಥಿಗಳನ್ನು ಸ್ಮರಣಿಕೆಯನ್ನಿತ್ತು ಅಭಿ ನಂದಿಸಿದರು. ಚಂದ್ರ ಪೂಜಾರಿ ಶಂಕರಪುರ, ಹೊನ್ನಯ ಶೆಟ್ಟಿ ಮತ್ತಿತರ ಗಣ್ಯರು, ಶಿಕ್ಷಕ-ಶಿಕ್ಷಕೇತರ ಸಿಬಂದಿ, ವಿದ್ಯಾರ್ಥಿಗಳ ನೂರಾರು ಪಾಲಕರು ಉಪಸ್ಥಿತರಿದ್ದರು.
ಕು| ಸುರಭಿ ಜೋಗಿ ಪ್ರಾರ್ಥನೆಗೈದರು. ಶಾಲಾ ಆಡ ಳಿತಾಧಿಕಾರಿ ಜಿನರಾಜ್ ಸಿ. ಸಾಲ್ಯಾನ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಗಳನ್ನಾಡಿದರು.
ಸಂಗೀತಾ ವಿ. ಕೋಟ್ಯಾನ್ ಅತಿಥಿಗಳನ್ನು ಪರಿಚಯಿಸಿ ಕಾರ್ಯ ಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕಿ ಉಷಾ ಸತೀಶ್ ವಂದಿಸಿದರು.
ಮನುಷ್ಯನಲ್ಲಿ ಒಳ್ಳೆಯ ಗುರಿ ಇದ್ದಾಗ ಮಾತ್ರ ಆತನ ಬದುಕು ಸಾರ್ಥಕವಾಗುವುದು. ನಾವು ಎಷ್ಟು ಪ್ರತಿಭಾನ್ವಿತರಾಗಿದ್ದು ಪ್ರಭಾವಿಗಳಾದರೂ ದೃಷ್ಟಿಹೀನರಾಗಿದ್ದರೆ ಬದುಕು ಕತ್ತಲನ್ನಾವರಿಸುತ್ತದೆ. ಇವೆಲ್ಲವನ್ನು ಮನವರಿಸಿ ನಾವು ಇಂತಹ ನೇತ್ರ ತಪಾಸಣಾ ಶಿಬಿರ ಆಯೋಜಿಸಿದ್ದೇವೆ. ಈ ಬಗ್ಗೆ ಶಿಕ್ಷಕರೂ, ಪಾಲಕರೂ ಮಕ್ಕಳಲ್ಲಿ ವಿಶೇಷ ಲಕ್ಷ Â ವಹಿಸಿ ಮಕ್ಕಳ ದೃಷ್ಟಿ ಸೆಳೆಯಬೇಕು. ಮಕ್ಕಳನ್ನು ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಸತ್øಜೆಗಳಾಗುವಂತೆ ಪ್ರೇರಕರಾಗಬೇಕು
– ಚಂದ್ರಶೇಖರ ಎಸ್. ಪೂಜಾರಿ, ಅಧ್ಯಕ್ಷರು , ಬಿಲ್ಲವರ ಅಸೋಸಿಯೇಶನ್ ಮುಂಬಯಿ
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.