ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್ ಜಿ. ಅಮೀನ್
Team Udayavani, Oct 25, 2021, 11:13 AM IST
ಮುಂಬಯಿ: ಬದುಕಿನ ಉನ್ನತ ಮೌಲ್ಯವನ್ನು ಅರ್ಥೈಸಿಕೊಂಡು ತನ್ನ ಜೀವನವನ್ನು ಸಮಾಜಮುಖೀಯಾಗಿ ಸಾರ್ಥಕಗೊಳಿಸಿದ ದಿ| ಜಯ ಸಿ. ಸುವ ರ್ಣರು ಸಮಾಜ ಗುರುತಿಸಿದ ಅಜೇಯ ವ್ಯಕ್ತಿತ್ವದವರು. ಪ್ರಬಲ ಸಂಘಟನೆಯಿಂದ ಬಹುಮುಖ ಪ್ರಗತಿಯ ಸಾಧ್ಯತೆಯನ್ನು ಸಮಾಜಕ್ಕೆ ನೀಡಿದ ಅವರು ಬಿಲ್ಲವರ ಭಾವೈ ಕ್ಯವನ್ನು ಬಯಸಿದರು. ಸಮಹಿತವನ್ನು ಆಶಿಸಿ ಬಂಧುತ್ವದ ಸೇತುವೆ ಕಟ್ಟಲು ಅವಿರತವಾಗಿ ದುಡಿದರು. ಕಡು ಬಡವರನ್ನು, ಮಧ್ಯಮ ವರ್ಗದವರನ್ನು ಹಾಗೂ ಶ್ರೀಮಂತರನ್ನು ಒಂದೇ ಸೂರಿನಲ್ಲಿ ಸಂಘಟಿಸಿ ನಾವೆಲ್ಲ ಒಂದೇ, ನಾವೆಲ್ಲ ಬಂಧು ಎಂಬ ವ್ಯಾಖ್ಯಾನವನ್ನು ಅನುಷ್ಠಾನಗೊಳಿಸಿದ ಮಾನವತಾ ವಾದಿ ಅವರಾಗಿದ್ದರು. ಗೋರೆಗಾಂವ್ ಪೂರ್ವದಲ್ಲಿ ಅನಾವರಣಗೊಂಡ ಜಯ ಸುವರ್ಣ ಮಾರ್ಗ ಅವರ ಸಾಧನೆಯ ಹೆಜ್ಜೆಯ ಗುರುತಾಗಿದೆ ಎಂದು ಮುಂಬಯಿ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ. ಅಮೀನ್ ತಿಳಿಸಿದರು.
ಅ. 21ರಂದು ಸಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಆಯೋಜಿಸಿದ ದಿ| ಜಯ ಸಿ. ಸುವರ್ಣರ ಪ್ರಥಮ ಪುಣ್ಯತಿಥಿಯ ವಿವಿಧ ಕಾರ್ಯಕ್ರಮಗಳ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸತ್ಯಪ್ರಿ ಯರು, ನೇರ ನುಡಿಯ ಜಯ ಸುವರ್ಣರುಮುಂಬಯಿ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷರಾಗಿ, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಬಿಲ್ಲವರ ಮಹಾಮಂ ಡಲದ ಅಧ್ಯಕ್ಷರಾಗಿ, ಕುದ್ರೋಳಿ ದೇವಸ್ಥಾನದ ಅಭಿವೃದ್ಧಿಯ ಹರಿಕಾರರಾಗಿ ದುಡಿದು ಜನ್ಮಭೂಮಿ ಮತ್ತು ಕರ್ಮಭೂಮಿಯಲ್ಲಿ ಅಜರಾಮರಾದರು ಎಂದರು.
ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಕೃಪಾಶಂಕರ್ ಸಿಂಗ್ ಮಾತನಾಡಿ, ಹೃದಯ ಹೃದಯಗಳನ್ನು ಜೋಡಿಸುವ ಚತುರತೆ, ಸಂಘ-ಸಂಸ್ಥೆಗಳನ್ನು ಪರಸ್ಪರ ಬೆಸೆಯುವ ಜಾಣ್ಮೆ ದಿ| ಜಯ ಸಿ. ಸುವರ್ಣರಲ್ಲಿ ರಕ್ತಗತವಾಗಿತ್ತು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಅವರ ದೂರದೃಷ್ಟಿ ಅನನ್ಯವಾದದ್ದು. ನನ್ನ ತಾಯಿಯ ಹೆಸರಿನ ಶಿಕ್ಷಣ ಸಂಸ್ಥೆಯಿಂದ ದಿ| ಜಯ ಸಿ. ಸುವರ್ಣರ ಹೆಸರಿನಲ್ಲಿ ಬಿಲ್ಲವ ಸಮಾಜದ ಅತ್ಯಂತ ಹೆಚ್ಚು ಅಂಕಗಳಿಸಿದ ಓರ್ವ ವೈದ್ಯಕೀಯ ವಿದ್ಯಾರ್ಥಿನಿಯ ಶುಲ್ಕ ಭರಿಸುತ್ತೇನೆ ಎಂಬ ಭರವಸೆ ನೀಡಿ ಪುಷ್ಪ ನಮನ ಸಲ್ಲಿಸಿದರು.
ಪೊವಾಯಿ ಶ್ರೀ ಮಹಾಶೇಷ ರುಂಡ ಮಾಲಿನಿ ದೇವಸ್ಥಾನದ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಮಾತನಾಡಿ, ಸ್ವರ್ಗಸ್ಥ ಜಯ ಸಿ. ಸುವರ್ಣರ ಸಾಧನೆ, ಕ್ರಿಯಾಶೀಲತೆ ಇಚ್ಛಾಶಕ್ತಿಯಿಂದ ಬಿಲ್ಲವರು ವಿಶ್ವದಲ್ಲಿ ಗುರುತಿಸಿಕೊಂಡಿದ್ದಾರೆ. ಧರ್ಮ ಬೀರು, ಶಿಕ್ಷಣ ಪ್ರೇಮಿ ಆಗಿರುವ ಅವರು ಬಿಲ್ಲವ ಸಮಾಜವನ್ನು ಒಗ್ಗೊಡಿಸಿದ ಅಪೂರ್ವ ಸಂಘಟಕರಾಗಿದ್ದಾರೆ ಎಂದರು.
ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಭಾರತ್ ಬ್ಯಾಂಕ್‌ನ ನಿರ್ದೇಶಕ ಭಾಸ್ಕರ ಎಂ. ಸಾಲ್ಯಾನ್, ಬಿಲ್ಲವರ ಅಸೋಸಿಯೇಶನ್ ಬೆಂಗಳೂರು ಅಧ್ಯಕ್ಷ ವೇದಕುಮಾರ್ ಮಾತನಾಡಿದರು.
ಶ್ರೀಕ್ಷೇತ್ರ ಕುದ್ರೋಳಿ ಇದರ ಗೌರವ ಕೋಶಾಧಿಕಾರಿ ಪದ್ಮರಾಜ ರಾಮಯ್ಯ ಮಾತನಾಡಿ, ಮಹಾರಾಷ್ಟ್ರ ನೆಲದಲ್ಲಿ ಅದರಲ್ಲೂ ಮಹಾನಗರ ಗೋರೆಗಾಂವ್ ಪೂರ್ವದ ರೈಲು ನಿಲ್ದಾಣದ ಸಮೀಪ ಜಯ ಸುವರ್ಣ ಮಾರ್ಗ ಅನಾವರಣಗೊಂಡಿರುವುದು ಅವರ ಸಾಮಾಜಿಕ ಕೊಡುಗೆ ಮತ್ತು ಸಾಧನೆಯ ಪ್ರತಿಬಿಂಬವಾಗಿದೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ಪ್ರಸ್ತಾವಿಸಿ, ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಕೇಶವ ಕೆ. ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭ ಉಚಿತ ಆರೋಗ್ಯ ತಪಾಸಣ ಶಿಬಿರವನ್ನು ಆಯೋಜಿಸಲಾ ಗಿತ್ತು. ಗುರು ಪೂಜೆಯ ಬಳಿಕ ಅನ್ನಪ್ರ ಸಾದ ಮತ್ತು ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ ಕಾಂತಬಾರೆ ಬೂದಬಾರೆ ಬಯಲಾಟ ಪ್ರದರ್ಶನಗೊಂಡಿತು.
ಭಾರತ್ ಬ್ಯಾಂಕ್‌ನ ನಿರ್ದೇಶಕ ಸೂರ್ಯಕಾಂತ್ ಜಯ ಸುವರ್ಣ, ಉಪಾಧ್ಯಕ್ಷ ಧರ್ಮಪಾಲ್ ಜಿ. ಅಂಚನ್, ಜಯಂತಿ ಉಳ್ಳಾಲ್, ಕೆ. ಸುರೇಶ್ ಕುಮಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೋಟ್ಯಾನ್ ಮತ್ತಿತರರಿದ್ದರು.
ಸಮಾಜದಲ್ಲಿ ಎಲ್ಲರೂ ವಿದ್ಯಾವಂತರಾಗಬೇಕು, ಸುಂಸ್ಕೃತರಾಗಬೇಕು, ಎಲ್ಲರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕು ಎಂಬ ದಿ| ಜಯ ಸಿ. ಸುವರ್ಣರ ಮನದಾಳದ ಇಚ್ಚೆಯಾಗಿತ್ತು. ನಿರಾಂಡಂಬರ ವ್ಯಕ್ತಿತ್ವದ ಅವರು ಮಾಡಿ ತೋರಿಸುವ ಛಲ, ಸಾಧಿಸುವ ಬಲವುಳ್ಳ ಸಾಮಾನ್ಯ ವ್ಯಕ್ತಿತ್ವದ ಅಸಾಮನ್ಯ ಶಕ್ತಿಯಾಗಿದ್ದರು.-ಡಾ| ರಾಜಶೇಖರ್ ಕೋಟ್ಯಾನ್‌ಅಧ್ಯಕ್ಷ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ
ದಿ| ಜಯ ಸುವರ್ಣರ ಮಾರ್ಗದರ್ಶನದಂತೆ ಉಚಿತ ವಿದ್ಯಾಭ್ಯಾಸ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ತ್ವಗಳ ಪಾಲನೆ ಮೊದಲಾದ ಜನಪರ ಯೋಜನೆಗಳನ್ನು ಒಳಗೊಂಡ ಸಂಸ್ಥೆಯೊಂದನ್ನು ಪುಣೆಯ ಎರಡು ಎಕರೆ ನಿವೇಶನದಲ್ಲಿ ನಿರ್ಮಿಸುವುದು ನಮ್ಮ ಧ್ಯೇಯವಾಗಿದೆ. ಅದಕ್ಕೆ ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ ಸದಾಯಿರಲಿ. -ವಿಶ್ವನಾಥ್ ಪೂಜಾರಿ ಕಡ್ತಲ ಅಧ್ಯಕ್ಷ, ಪುಣೆ ಬಿಲ್ಲವ ಸಂಘ
ದಿ| ಜಯ ಸುವರ್ಣರ ರಚನಾತ್ಮಕ ಬಳಕೆಯಿಂದ ಭಾರತ್ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ಪ್ರಬಲಗೊಂಡಿದೆ. ಶಾಖೆಗಳ ವಿಸ್ತರಣೆಯ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿ¨ªಾರೆ. ಅವರ ಆಶೀರ್ವಾದ ಸದಾ ನಮ್ಮ ಮೇಲಿರಲಿದೆ.-ಯು. ಎಸ್. ಪೂಜಾರಿ ,ಕಾರ್ಯಾಧ್ಯಕ್ಷ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.