ಪುಣೆಯಲ್ಲಿ ಗಣರಾಜ್ಯ ದಿನದಂದು ಅಂಧ ಪುರುಷ-ಮಹಿಳೆಯರ ಸಮಾವೇಶ
Team Udayavani, Feb 1, 2018, 10:38 AM IST
ಪುಣೆ: ರಾಷ್ಟ್ರೀಯ ದೃಷ್ಟಿಹೀನ ಸಂಘ ಮಹಾರಾಷ್ಟ್ರ ಇದರ ಪುಣೆ ವಿಭಾಗದ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯ ದಿನಾಚರಣೆಯ ಅಂಗವಾಗಿ ಅಂಧ ಪುರುಷ-ಮಹಿಳೆಯರ ಸಮಾವೇಶವು ಗಣೇಶ ಕಲಾ ಕ್ರೀಡಾ ಮಂದಿರದಲ್ಲಿ ಜ. 26ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪುಣೆ ರಾಷ್ಟ್ರೀಯ ದೃಷ್ಟಿಹೀನ ಸಂಘ ಮಹಾರಾಷ್ಟ್ರ ಇದರ ಪುಣೆ ವಿಭಾಗದ ಅಧ್ಯಕ್ಷ ಶಿವಾನಂದ ನಂದಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಪಂಚಮಿ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಪುರಂದರ ಪೂಜಾರಿ ಪಂಚಮಿ ಅವರು ಪುಣೆಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಸಂಚಾಲಕಿ ಸ್ಮಿತಾ ಕುಲಕರ್ಣಿ ಹಾಗು ಅಪರ್ಣಾ ಸರ್ನಿಸ್, ಸಮಾಜ ಸೇವಕರಾದ ಸದಾನಂದ ಕೆಂಗೇ, ಸಂಘದ ಮಾಜಿ ಅಧ್ಯಕ್ಷ ಬಾಬಾ ರಾವುತ್ ಮೊದಲಾದವರು ಉಪಸ್ಥಿತರಿದ್ದರು.
ಪುರಂದರ ಪೂಜಾರಿ ಮತ್ತು ವೇದಿಕೆಯ ಲ್ಲಿದ್ದ ಗಣ್ಯರು ಹಾಗು ಸಮಿತಿ ಸದಸ್ಯರು ದ್ವಜಾರೋಹಣಗೈದು ಧ್ವಜವಂದನೆ ಸ್ವೀಕರಿಸಿ ದರು. ಈ ಸಂದರ್ಭದಲ್ಲಿ ಮಾತನಾಡಿದ ಪುರಂದರ ಪೂಜಾರಿ ಅವರು, ಅಂಧರ ಹಿತದೃಷ್ಟಿಯಿಂದ ನಮ್ಮ ಪಂಚಮಿ ಚಾರಿಟೇಬಲ್ ಮುಖಾಂತರ ಅಂಧ ಮಹಿಳೆಯರಿಗೆ ಮತ್ತು ಪುರುಷರಿಗೆ ಉಪಯೊವಾಗುವಂತಹ ಪರಿಕರಗಳನ್ನು, ವಸ್ತ್ರಗಳನ್ನು ಈ ಮೊದಲು ಹಲವಾರು ಬಾರಿ ನೀಡುತ್ತಾ ಬಂದಿದೆ. ಅಲ್ಲದೆ ವೈದ್ಯಕೀಯ ತಪಾಸಣ ಶಿಬಿರಗಳನ್ನು ಅಯೋಜಿಸಿದೆ. ಅಗತ್ಯವಿರುವರಿಗೆ ಕನ್ನಡಕಗಳನ್ನು ನೀಡಲಾಗಿದೆ. ಅಲ್ಲದೆ ಅತಿ ಅಗತ್ಯವಿರುವವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಧನಸಹಾಯವನ್ನು ನೀಡುತ್ತಾ ಬರುತ್ತಿದೆ. ಟ್ರಸ್ಟ್‌ನ ಮೂಲಕ ಅಂಧರ ಇನ್ನಷ್ಟು ಸೇವೆಗಳನ್ನೂ ಮಾಡಲು ಉತ್ಸುಕವಾಗಿದ್ದು ಅದರ ಪ್ರಯೋಜನವನ್ನು ರಾಷ್ಟ್ರೀಯ ಅಂಧರ ಸಂಘವು ಪಡೆಯಬಹುದಾಗಿದೆ ಎಂದು ನುಡಿದು, ಸುಮಾರು 100 ಅಂಧರಿಗೆ ವಸ್ತ್ರಗಳನ್ನು ವಿತರಿಸಿ ಶುಭಹಾರೈಸಿದರು.
ಈ ಮೊದಲು ರಾಷ್ಟ್ರೀಯ ಅಂಧರ ಸಭಾ, ಮಹಾರಾಷ್ಟ್ರ ಅಂಧರ ಸಂಘ ಮತ್ತು ಪುಣೆ ವಿಭಾಗದ ಸಹಯೋಗದೊಂದಿಗೆ ಟ್ರಸ್ಟ್ ಮುಖಾಂತರ ಮಹಿಳಾ ದಿನಾಚರಣೆಯಂದು ಸೀರೆ ವಿತರಣೆ, ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ವೈದ್ಯಕೀಯ ತಪಾಸಣ ಶಿಬಿರವನ್ನು ಆಯೋಜಿಸಲಾಗಿತ್ತು.
ಪಂಚಮಿ ಚಾರಿಟೆಬಲ್ ಟ್ರಸ್ಟ್
ಪುಣೆಯ ಉದ್ಯಮಿ ಪುರಂದರ ಪೂಜಾರಿ ಅವರು ಸಂಸ್ಥಾಪಕರಾಗಿ ಸುಮಾರು 16 ವರ್ಷಗಳ ಹಿಂದೆ ಸ್ಥಾಪನೆಗೊಂಡ ಪಂಚಮಿ ಚಾರಿಟೆಬಲ್ ಟ್ರಸ್ಟ್ ಉಡುಪಿ ಜಿÇÉೆಯ ಕಾರ್ಕಳ ಹಾಗೂ ಪುಣೆಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಾಜ ಸೇವಾ ಕಾರ್ಯಗೈಯುತ್ತಿದೆ.
ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ, ದತ್ತು ಸ್ವೀಕಾರ ಮತ್ತು ಮುಖ್ಯವಾಗಿ ಅಂಧರು, ಬುದ್ಧಿಮಾಂ ದ್ಯರು ಹಾಗೂ ಅನಾಥ ಮಕ್ಕಳ ಸೇವೆಗಳಲ್ಲಿ ತೊಡಗಿಸಿಕೊಂಡಿದೆ.
ಉಚಿತ ಶಸ್ತ್ರಚಿಕಿತ್ಸೆ, ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ
ಉಡುಪಿ ಜಿÇÉೆಯಲ್ಲಿ ಸುಮಾರು 65ಕ್ಕೂ ಅಧಿಕ ಅಂಧರ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಟ್ರಸ್ಟ್ ಮುಖಾಂತರ ಮಾಡಲಾಗಿದೆ. ಕಾರ್ಕಳ ತಾಲೂಕಿನಾದ್ಯಂತ 250ಕ್ಕೂ ಮಿಕ್ಕಿದ ಮಕ್ಕಳನ್ನು ಈ ಟ್ರಸ್ಟ್ ಮುಖಾಂತರ ಶೈಕ್ಷಣಿಕ ದತ್ತು ಸ್ವೀಕರಿಸಲಾಗಿದೆ. ಕಾರ್ಕಳ ತಾಲೂಕಿನ ಒಂದು ಶಾಲೆಯನ್ನು ದತ್ತು ಪಡೆದು ಅ ಶಾಲೆಯ ಎÇÉಾ ವಿದ್ಯಾರ್ಥಿಗಳಿಗೆ 7ನೇ ತರಗತಿವರೆಗೆ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಈ ಟ್ರಸ್ಟ್ ಮುಖಾಂತರ ಮಾಡಲಾಗಿದೆ.
ವರದಿ:ಹರೀಶ್ ಮೂಡಬಿದ್ರೆ ಪುಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.