ಸಾಯನ್ ಜಿ.ಎಸ್. ಬಿ. ಸೇವಾ ಮಂಡಳದಿಂದ ಇಂದು ರಕ್ತದಾನ ಶಿಬಿರ
Team Udayavani, May 2, 2021, 1:28 PM IST
ಮುಂಬಯಿ: ಜಿ. ಎಸ್.ಬಿ ಸೇವಾ ಮಂಡಲವು ರಕ್ತದಾನ ಶಿಬಿರವನ್ನು ಮೇ 2ರಂದು ಸೇವಾ ಮಂಡಳದ ಶ್ರೀ ಗುರು ಗಣೇಶ ಪ್ರಸಾದ್ ಹಾಲ್‌ನಲ್ಲಿ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಆಯೋಜಿಸಿದೆ. ಕೊರೊನಾ ಲಸಿಕೆ ಪಡೆದುಕೊಂಡ ಬಳಿಕ 28 ದಿನಗಳ ಕಾಲ ರಕ್ತದಾನ ಮಾಡಲು ಸಾಧ್ಯವಿಲ್ಲದ ಹಿನ್ನೆಲೆ ರಕ್ತದ ಕೊರತೆಯಾಗುವ ಸಾಧ್ಯತೆಯಿದ್ದು, ದಾನಿಗಳು ಲಸಿಕೆ ಪಡೆಯುವ ಮೊದಲೇ ರಕ್ತದಾನ ಮಾಡಿ ಜನಹಿತ ಕಾರ್ಯದಲ್ಲಿ ಸಹಕರಿಸುವಂತೆ ಜಿ.ಎಸ್.ಬಿ ಸೇವಾ ಮಂಡಲ ವಿನಂತಿಸಿದೆ.
ಸ್ಥಳದಲ್ಲೇ ನೋಂದಣಿ ಲಭ್ಯವಿದ್ದು, ಗೂಗಲ್ ಲಿಂಕ್ ಮುಖಾಂತರವೂ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ www.facebook.com:gsbsevamandal / www.instragram.com: gsbsevamandal/ website: gsbsevamandal.org ಅಥವಾ 8369943352, 9022339174 ಮತ್ತು 7265894475 ಅನ್ನು ಸಂಪರ್ಕಿಸಬಹುದು. ಸೇವಾ ಮಂಡಲವು ಜನೋಪಯೋಗಿ ಸೇವೆಯಲ್ಲಿ ತತ್ಪರವಾಗಿದ್ದು, ಕಳೆದ ವರ್ಷವೂ ಕೊರೊನಾದಿಂದ ಸಂಕಟದಲ್ಲಿದ್ದವರಿಗೆ ಧನ ಸಹಾಯ , ದಿನಸಿ ವಿತರಣೆ ಹಾಗೂ ಆಹಾರ ಕಿಟ್‌ಗಳನ್ನು ವಿತರಿಸಿದೆ. ಮಂಡಳಿಯು ಕೊರೊನಾ ಸಂಕಟ ಕಾಲದಲ್ಲಿ ಮುಖ್ಯಮಂತ್ರಿ ಸಹಾಯ ನಿಧಿಗೆ ಮತ್ತು ಪ್ರಧಾನ ಮಂತ್ರಿ ಸಹಾಯ ನಿಧಿಗೆ ತನ್ನ ಶಕ್ತಿ ಮೀರಿ ದೇಣಿಗೆ ನೀಡಿದೆ.
ಸೇವಾ ಮಂಡಳವು ಪ್ರತಿ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತಾ ಬಂದಿದೆ. ಕೊರೊನಾ ಸಂಕಟದ ಸಂದರ್ಭದಲ್ಲಿ ಮಹಾಗಣ ಪತಿಯ ಭಕ್ತರು, ಸ್ವಯಂ ಸೇವಕರು ಈ ಕಾರ್ಯದಲ್ಲಿ ಸಹಕರಿಸಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.