ಇಪ್ಪತ್ತು ದಿನಗಳಲ್ಲಿ 9.28 ಕೋಟಿ ರೂ. ದಂಡ ಸಂಗ್ರಹಿಸಿದ ಬಿಎಂಸಿ
ಮಾಸ್ಕ್ ಧರಿಸದೆ ಕೋವಿಡ್ ಬಗ್ಗೆ ನಿರ್ಲಕ್ಷ್ಯ
Team Udayavani, Nov 28, 2020, 10:02 AM IST
ಮುಂಬಯಿ, ನ. 27: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಕಡ್ಡಾಯವಾಗಿದ್ದರೂ ಉಲ್ಲಂಘಿಸುವವರ ಸಂಖ್ಯೆ ಮುಂಬಯಿಯಲ್ಲಿ ಕಡಿಮೆಯಾಗುತ್ತಿಲ್ಲ. ಮುಂಬಯಿ ಮಹಾನಗರ ಪಾಲಿಕೆಯ ಅಂಕಿಅಂಶಗಳ ಪ್ರಕಾರ ನ. 6ರಿಂದ 25ರ ನಡುವೆ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸುವವರ ಸಂಖ್ಯೆ ಬಹುತೇಕ ದ್ವಿಗುಣಗೊಂಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ಕಾರಣಕ್ಕಾಗಿ ಮುಂಬಯಿ ಮಹಾನಗರ ಪಾಲಿಕೆಯು 4,45,000 ಮಂದಿಯನ್ನು ಗುರುತಿಸಿದ್ದು, ನ. 25ರ ವರೆಗೆ 9.28 ಕೋ. ರೂ. ದಂಡ ಸಂಗ್ರಹಿಸಿದೆ ಎಂದು ಬಿಎಂಸಿಯ ಅಂಕಿಂಶ ತಿಳಿಸಿದೆ. ನ. 6ರ ವರೆಗೆ ಸಿಕ್ಕಿಬಿದ್ದ 2,26,000 ಅಪರಾಧಿಗಳಿಗೆ ಹೋಲಿಸಿದರೆ ಉಲ್ಲಂಘಿಸುವವರ ಸಂಖ್ಯೆ ದ್ವಿಗುಣಗೊಂಡಿದ್ದು, ಬಳಿಕದ ದಿನಗಳಲ್ಲಿ 4.79 ಕೋಟಿ ರೂ. ದಂಡವನ್ನು ಸಂಗ್ರಹಿಸಲಾಗಿದೆ.
ಪ್ರತೀದಿನ 20 ಸಾವಿರ ಮಂದಿಗೆ ದಂಡ ವಿಧಿಸಲು ಅಭಿಯಾನ : ಸಾರ್ವಜನಿಕವಾಗಿ ಮಾಸ್ಕ್ ಧರಿಸದ ಪ್ರತಿಯೊಬ್ಬ ವ್ಯಕ್ತಿಯಿಂದ ಬಿಎಂಸಿ 200 ರೂ. ದಂಡ ಸಂಗ್ರಹಿ ಸು ತ್ತಿದ್ದು, ಬಿಎಂಸಿ ಪ್ರಕಾರ ಪ್ರಸ್ತುತ ಒಟ್ಟು 24 ವಾರ್ಡ್ ಗಳಲ್ಲಿ ಪ್ರತಿದಿನ ಸುಮಾರು 500 ನಾಗರಿಕರಿಗೆ ದಂಡ ವಿಧಿಸಲಾಗುತ್ತಿದೆ. ಬಿಎಂಸಿ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಪ್ರತೀ ವಾರ್ಡ್‌ಗಳಿಗೆ ಪ್ರತೀದಿನ ಕನಿಷ್ಠ 1,000 ನಾಗರಿಕರನ್ನು ಕಾಯ್ದಿರಿಸುವ ಗುರಿ ನೀಡಿದ್ದಾರೆ ಎನ್ನಲಾಗಿದೆ. ಅ. 12ರಂದು ಮಾಸ್ಕ್ ಧರಿಸದ ಕಾರಣಕ್ಕಾಗಿ 20,000 ನಾಗರಿಕರಿಗೆ ಪ್ರತೀದಿನ ದಂಡ ವಿಧಿಸಲು ಬಿಎಂಸಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ಆದರೆ ಆ ಗುರಿಯನ್ನು ಇನ್ನೂ ಈಡೇರಿಸಲಾಗಿಲ್ಲ.
ಉಪನಗರಗಳಲ್ಲಿ ಹೆಚ್ಚು ನಿರ್ಲಕ್ಷ್ಯ : ಬಿಎಂಸಿ ಮಾಹಿತಿಯ ಪ್ರಕಾರ ಭಾಂಡೂಪ್, ವಿಕ್ರೋಲಿ, ಪೊವಾಯಿ, ಕುರ್ಲಾ ಮತ್ತು ಸಾಕಿನಾಕಾ ಮೊದಲಾದ ಪ್ರದೇಶಗಳನ್ನು ಒಳಗೊಂಡ ಎಸ್ ಮತ್ತು ಎಲ್ ವಾರ್ಡ್‌ಗಳಲ್ಲಿ ಅತೀ ಹೆಚ್ಚು ದಂಡ ಸಂಗ್ರಹಿಸಲಾಗಿದೆ. ದೀಪಾವಳಿ ಸಂದರ್ಭ ಅನೇಕ ನಾಗರಿ ಕರು ಹೊರಗಡೆಯಿದ್ದರು. ಆ ಅವಧಿಯಲ್ಲಿ ಮಾರ್ಷಲ್‌ಗಳು ಕಾರ್ಯನಿರತರಾಗಿದ್ದರಿಂದ ದಂಡ ಕ್ಕೊಳ ಪಟ್ಟವರ ಸಂಖ್ಯೆ ಹೆಚ್ಚಾಗಿತ್ತು ಎಂದು ದಂಡ ಸಂಗ್ರ ಹಣೆ ಯಲ್ಲಿ ಭಾಗಿಯಾಗಿರುವ ಬಿಎಂಸಿ ಅಧಿಕಾರಿ ಹೇಳಿದ್ದಾರೆ.
ದಂಡ ಪಾವತಿಸದಿದ್ದರೆ ರಸ್ತೆ ಸ್ವಚ್ಛಗೊಳಿಸಿ :
ಮಾಸ್ಕ್ ಧರಿಸದಿದ್ದಕ್ಕಾಗಿ 200 ರೂ.ಗಳ ದಂಡ ಪಾವ ತಿಸಲು ನಿರಾಕರಿಸಿದರೆ, ಅಂಥವರಿಂದ ಒಂದು ಗಂಟೆ ಕಾಲ ರಸ್ತೆಗಳನ್ನು ಗುಡಿಸುವುದು ಅಥವಾ ಸ್ವಚ್ಛಗೊಳಿಸುವಂತಹ ಸಾಮಾಜಿಕ ಸೇವೆ ಗಳನ್ನು ಮಾಡಲು ಬಿಎಂಸಿ ಪ್ರಾರಂಭಿಸಿದೆ. ಈ ಶಿಕ್ಷೆಯನ್ನು ಬಿಎಂಸಿಯ ಘನತ್ಯಾಜ್ಯ ನಿರ್ವಹಣ ಉಪ-ಕಾನೂನುಗಳ ಪ್ರಕಾರ ಜಾರಿಗೊಳಿಸಲಾಗುತ್ತಿದೆ. ಹಲವು ಕಡೆಗಳಲ್ಲಿ ಪೊಲೀಸರು ಮತ್ತು ಬಿಎಂಸಿ ಸಿಬಂದಿ ಮಾಸ್ಕ್ ಧರಿಸದವರಿಗೆ ಬಸ್ಕಿ ಹೊಡೆಸುವ ಶಿಕ್ಷೆಯನ್ನು ನೀಡುತ್ತಿದ್ದಾರೆ.
ಕೋವಿಡ್ ತಡೆಗೆ ಮಾಸ್ಕ್ ಕಡ್ಡಾಯ : ಮಾಸ್ಕ್ ಧರಿಸಿದವರು ಸಾಮಾಜಿಕ ಅಂತರ ವನ್ನು ಕಾಪಾಡಿಕೊಂಡರೆ ಕೋವಿಡ್ -19 ಸೋಂಕಿಗೆ ಒಳಗಾಗುವ ಸಾಧ್ಯತೆ ಶೇ. 10ರಷ್ಟು ಕಡಿಮೆ ಯಿರುತ್ತದೆ. ಆದ್ದರಿಂದ ಮಾಸ್ಕ್ ಧರಿಸುವುದು ನಾವು ಮಾಡಬಹುದಾದ ಕನಿಷ್ಠ ಜಾಗೃತೆಯಾಗಿದೆ. ಇದು ನಮ್ಮ ಬಗ್ಗೆ ಮಾತ್ರ ವಲ್ಲ ಇಡೀ ಸಸಮುದಾಯಕ್ಕೆ ಎಂದು ನಾಗರಿಕರು ಅರ್ಥಮಾಡಿ ಕೊಳ್ಳಬೇಕು. ಈ ಕಾರಣ ದಿಂದಾಗಿ ಮಾಸ್ಕ್ ಧರಿಸುವುದು ಜವಾಬ್ದಾರಿಯಾಗಿದೆ ಎಂದು ಡಾ| ಸಿದ್ದಾರ್ಥ್ ಪಾಲಿವಾಲ್ ಅವರು ಹೇಳಿದ್ದಾರೆ.
ನಿರ್ಲಕ್ಷಿಸಿದರೆ ಲಾಕ್‌ಡೌನ್ ಅನಿವಾರ್ಯ : ಮಾಸ್ಕ್ ಧರಿಸುವ ಮಹತ್ವವನ್ನು ಒತ್ತಿ ಹೇಳಿದ ಮುಂಬಯಿ ಮೇಯರ್ ಕಿಶೋರಿ ಪೆಡ್ನೆಕರ್, ಕೋವಿಡ್-19ಕ್ಕೆ ಲಸಿಕೆ ಇಲ್ಲದಿದ್ದುದರಿಂದ ಮಾಸ್ಕ್ ಮತ್ತು ಸಾಮಾಜಿಕ ಅಂತರ ಮಾತ್ರ ಲಸಿಕೆ ಯಾಗಿದೆ. ಆದ್ದರಿಂದ ಜನರು ಸುರಕ್ಷಾ ಮಾನದಂಡ ಗಳನ್ನು ಅನುಸರಿಸದಿದ್ದರೆ ಮತ್ತೆ ಲಾಕ್ ಡೌನ್ ಘೋಷಿ ಸುವುದು ಅನಿವಾರ್ಯವಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.