ಬಿಎಂಸಿ ಚುನಾವಣೆಯಲ್ಲಿ ಇಬ್ಬರು ತುಳು-ಕನ್ನಡಿಗರಿಗೆ ಜಯ
Team Udayavani, Feb 24, 2017, 5:09 PM IST
ಮುಂಬಯಿ: ಬೃಹನ್ಮುಂಬಯಿ ಮಹಾ ನಗರ ಪಾಲಿಕೆಯ ಚುನಾವಣ ಫಲಿತಾಂಶ ಪ್ರಕಟಗೊಂಡಿದ್ದು, ಇಬ್ಬರು ತುಳು-ಕನ್ನಡಿಗ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಅಂಧೇರಿ ಪೂರ್ವದ ಚಕಾಲ ಸಹಾರ್‌ರೋಡ್ ಪಾರ್ಸಿವಾಡ ವಾರ್ಡ್ ಸಂಖ್ಯೆ 83 ರಿಂದ ಸ್ಪರ್ಧಿಸಿದ್ದ ವಿನ್ನಿಫ್ರೆಡ್ ಬ್ಯಾಪಿuಸ್ಟ್ ಡಿ’ಸೋಜಾ (ಹಾಲಿ ನಗರ ಸೇವಕಿ) ಮತ್ತೆ ಅತ್ಯಧಿಕ ಮತಗಳಿಂದ ಜಯಭೇರಿಗಳಿಸಿದ್ದಾರೆ.
ಅದೇ ರೀತಿ ಅಂಧೇರಿ ಪೂರ್ವದ ಮರೋಲ್ ಪೈಪ್‌ಲೇನ್ ಇಲ್ಲಿನ ವಾರ್ಡ್ ಸಂಖ್ಯೆ 82 ರಿಂದ ಸ್ಪರ್ಧಿಸಿದ್ದ ಜಗದೀಶ್ ಕುಟ್ಟಿ ಅಮೀನ್ (ಅಣ್ಣಾ) ಅವರು ಜಯಗಳಿಸಿದ್ದಾರೆ. ವಿಜೇತರೀರ್ವರೂ ಕಾಂಗ್ರೆಸ್ (ಐ) ಪಕ್ಷದ ಉಮೇದುವಾರರುಗಳಾಗಿ ಸ್ಪರ್ಧಿಸಿದ್ದರು. ವಿನ್ನಿಫ್ರೆಡ್ ಬಿ. ಡಿ’ಸೋಜಾ ಅವರು ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಲೋರೆಟ್ಟೊ ಮೂಲದವರಾಗಿದ್ದು, ಅವರು ಶಿವಸೇನೆಯ ನಿಧಿ ಸಾವಂತ್ ಅವಗಿಂತ 566 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದೇ ವಾರ್ಡ್‌ನಿಂದ ಎನ್‌ಸಿಪಿಯಿಂದ ನ್ಯಾಯವಾದಿ ಸುಜತಾ ಡಿ.ಅಠವಾಳೆ, ಬಿಜೆಪಿಯಿಂದ ಪೂರ್ಣಿಮಾ ಮಾನೆ ಮತ್ತು ಎಂ.ಎನ್ ಎಸ್, ಅಖೀಲ ಭಾರತೀಯ ಸೇನೆ ಹಾಗೂ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು ಹತ್ತು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಜಗದೀಶ್ ಅಮೀನ್ ಅವರು ಮೂಲತಃ ಕಾರ್ಕಳ ತಾಲೂಕು ನಿಟ್ಟೆಯವರಾಗಿದ್ದು, ಅವರು ಬಿಜೆಪಿಯ ಪ್ರತಿಸ್ಪರ್ಧಿ ಸಂತೋಷ್ ಕೇಳ್ಕರ್ ಅವರಗಿಂತ ಸುಮಾರು 35 ಮತಗಳ ಅಂತರದಿಂದ ವಿಜೇತರೆಣಿಸಿದ್ದಾರೆ. ಈ ವಾರ್ಡ್‌ನಿಂದ ಶಿವಸೇನೆ, ಎನ್‌ಸಿಪಿ, ಸೇರಿದಂತೆ ಒಟ್ಟು ಹತ್ತು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.