ಬಿಎಂಸಿ ಸಾವಿನ ಸಂಖ್ಯೆಯನು ಮರೆಮಾಚಿದೆ: ಆರೋಪ
Team Udayavani, Jun 17, 2020, 10:49 AM IST
ಮುಂಬಯಿ, ಜೂ. 16: ಕೋವಿಡ್ ಸೋಂಕಿಸಿಂದ ಸಾವನ್ನಪ್ಪಿರುವ 950ಕ್ಕೂ ಅಧಿಕ ಸಾವಿನ ಪ್ರಕರಣಗಳನ್ನು ಮುಂಬಯಿ ಮಹಾನಗರ ಪಾಲಿಕೆಯು ಮರೆಮಾಚಿದೆ ಎಂದು ವಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ಆರೋಪಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತದೆಯೇ ಎಂದು ಅವರು ಸಿಎಂ ಉದ್ಧವ್
ಠಾಕ್ರೆ ಅವರನ್ನು ಕೇಳಿದ್ದಾರೆ. ಐಸಿಎಂಆರ್ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬಿಎಂಸಿಯ ಡೆತ್ ಆಡಿಟ್ ಸಮಿತಿಯು 451 ಪ್ರಕರಣಗಳಲ್ಲಿ ಸಾವಿಗೆ ಕಾರಣವನ್ನು ಕೋವಿಡ್ ಅಲ್ಲ ಎಂದು ಬದಲಾಯಿಸಿದೆ ಎಂದು ಫಡ್ನವೀಸ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 500 ಕೋವಿಡ್ ಸಾವುಗಳನ್ನು ಲೆಕ್ಕಪರಿಶೋಧನಾ ಸಮಿತಿಯ ಮುಂದೆ ತರಲಾಗಿಲ್ಲ ಎಂದು ಅವರು ಆಪಾದಿಸಿದ್ದಾರೆ.
ಇದು ತುಂಬಾ ಗಂಭೀರ ಮತ್ತು ಕ್ರಿಮಿನಲ್ ಕೃತ್ಯವಾಗಿದೆ. ಡೆತ್ ಆಡಿಟ್ ಸಮಿತಿಯು ಯಾರ ಒತ್ತಡಕ್ಕೆ ಮಣಿದಿದೆ ಎಂದು ತಿಳಿಯಲು ನಾವು ಬಯಸುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮವನ್ನೂ ನಾವು ತಿಳಿದುಕೊಳ್ಳಬೇಕು ಎಂದು ಫಡ್ನವೀಸ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತನಿಖೆಗೆ ಆಗ್ರಹ ರಾಜ್ಯ ಸರಕಾರವು ಅಕ್ರಮವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಸಿಎಂ ಮತ್ತಷ್ಟು ಆರೋಪಿಸಿದ್ದಾರೆ. ಐಸಿಎಂಆರ್ ಸಹ ಅಕ್ರಮವನ್ನು ಗಮನಸೆಳೆದಿದೆ. ಈ ಸಾವುಗಳಿಗೆ ಕಾರಣವನ್ನು ತತ್‌ಕ್ಷಣವೇ ಅಧಿಕೃತ ಪೋರ್ಟಲ್‌ನಲ್ಲಿ ಕೋವಿಡ್-19 ಎಂದು ವರದಿ ಮಾಡಬೇಕು. 356 ತಿರಸ್ಕರಿಸಿದ ಪ್ರಕರಣಗಳಿದ್ದು, ಇನ್ನುಳಿದ ಪ್ರಕರಣಗಳು ಮಾಹಿತಿ ನೀಡದೆ ಬಾಕಿ ಉಳಿದಿವೆ.
ಐಸಿಎಂಆರ್ ವರ್ಗೀಕರಣಕ್ಕಾಗಿ ಮೂರು ವಿಭಾಗಗಳನ್ನು ಸ್ಪಷ್ಟವಾಗಿ ನೀಡಿದ್ದು, ಈ ಮಧ್ಯೆ ಆಡಿಟ್ ಸಮಿತಿಯು ಕೋವಿಡ್ ಸಾವುಗಳನ್ನು ಮರೆಮಾಚಲು ಸಂಚು ರೂಪಿಸಿದೆ ಎಂದು ತೋರುತ್ತದೆ ಎಂದು ಅವರು ಹೇಳಿದರು. ಇದು ಬಹಳ ಗಂಭೀರವಾದ ವಿಷಯವಾಗಿದ್ದು, ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಫಡ್ನವೀಸ್ ಒತ್ತಾಯಿಸಿದ್ದಾರೆ.
ಈ ಸಾವುಗಳನ್ನು ವರದಿ ಮಾಡಿ ಪ್ರಮಾಣೀಕರಿಸಬೇಕಾಗಿತ್ತು, ಆದರೆ ಕೆಲವರು ಈ 500 ಪ್ರಕರಣಗಳನ್ನು ಮರೆಮಾಚುವ ನಿರ್ಧಾರವನ್ನು ಪ್ರೇರೇಪಿಸಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.