ವಾಂಖೆಡೆ ಕ್ರೀಡಾಂಗಣ ಆವರಣವನ್ನು ಹಸ್ತಾಂತರಕ್ಕೆ ಬಿಎಂಸಿ ಸೂಚನೆ

Team Udayavani, May 17, 2020, 6:45 PM IST

ವಾಂಖೆಡೆ ಕ್ರೀಡಾಂಗಣ ಆವರಣವನು ಹಸ್ತಾಂತರಕ್ಕೆ  ಬಿಎಂಸಿ ಸೂಚನೆ

ಮುಂಬಯಿ, ಮೇ 16: ವಾಂಖೆಡೆ ಕ್ರೀಡಾಂಗಣದ ಆವರಣವನ್ನು ನಾಗರಿಕ ಸಂಸ್ಥೆಗೆ ಹಸ್ತಾಂತರಿಸುವಂತೆ ಬೃಹನ್ಮುಂಬಯಿ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಶುಕ್ರವಾರ ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌(ಎಂಸಿಎ)ಗೆ ಸೂಚಿಸಿದೆ.

ಶುಕ್ರವಾರದ ನೋಟಿಸ್‌ಗೆ ಪ್ರತಿಕ್ರಿಯಿಸಿದ ಎಂಸಿಎ ಅಧ್ಯಕ್ಷ ಡಾ| ವಿಜಯ್‌ ಪಾಟೀಲ್‌ ಅವರು, ಕೋವಿಡ್ ವೈರಸ್‌ ಬಿಕ್ಕಟ್ಟಿನ ಸಮಯದಲ್ಲಿ ಮುಂಬಯಿ ಕ್ರಿಕೆಟ್‌ ಅಸೋಸಿಯೇಷನ್‌ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸರಕಾರಿ ಅಧಿಕಾರಿಗಳಿಗೆ ತಮ್ಮಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಕೋವಿಡ್‌ ಹಿನ್ನೆಲೆ ಸಂಭವನೀಯ ಉಲ್ಬಣಕ್ಕೆ ಪೂರ್ವ ಯೋಜನೆಯಾಗಿ ಬಿಎಂಸಿ ಜಿಮ್‌ಗಳು, ಕ್ಲಬ್‌ಗಳು, ಮದುವೆ ಸಭಾಂಗಣಗಳು, ಶಾಲೆಗಳು, ಕಾಲೇಜುಗಳು, ಹೋಟೆಲ್‌ಗ‌ಳು, ವಸತಿ ಗೃಹಗಳು ಮತ್ತು ಮೈದಾನಗಳಲ್ಲಿ ತಾತ್ಕಾಲಿಕವಾಗಿ ಅವುಗಳನ್ನು ಕೋವಿಡ್‌ ಕೇರ್‌ ಕೇಂದ್ರಗಳಾಗಿ ಪರಿವರ್ತಿಸಲು ಸ್ವಾಧೀನಪಡಿಸಿಕೊಳ್ಳುತ್ತಿದೆ. ಮುಂಬಯಿಯ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಮತ್ತು ಕ್ವಾರಂಟೈನ್‌ ನಿರ್ಮಿಸುವ ಉಸ್ತುವಾರಿಯನ್ನು ವಹಿಸಿಕೊಂಡಿರುವ ಬಿಎಂಸಿಯ ಹೆಚ್ಚುವರಿ ಪುರಸಭೆ ಆಯುಕ್ತ ಸಂಜೀವ್‌ ಜೈಸ್ವಾಲ್‌ ಅವರು, ವಾಂಖೆಡೆ ಕ್ರೀಡಾಂಗಣದಂತೆ, ನಾವು ಇತರ ಜಿಮ್ಖಾನಾಗಳಾದ ಪೋಲಿಸ್‌ ಜಿಮ್ಖಾನಾ, ಪಾರ್ಸಿ ಜಿಮ್ಖಾನಾ, ಇಸ್ಲಾಂ ಜಿಮ್ಖಾನಾಗಳನ್ನು ಕೋವಿಡ್ ವೈರಸ್‌ ಆರೈಕೆ ಕೇಂದ್ರಗಳಾಗಿ ಸಿದ್ಧಪಡಿಸುತ್ತಿದ್ದೇವೆ.

ಈ ಸ್ಥಳಗಳಲ್ಲಿನ ಮೈದಾನವು ಕೋವಿಡ್‌ -19 ಪಾಸಿಟಿವ್‌ ರೋಗಿಗಳ ಹೆಚ್ಚಿನ ಅಪಾಯದ ಸಂಪರ್ಕಗಳಿಗೆ ಸೂಕ್ತವಲ್ಲ. ಹೆಚ್ಚಿನ-ಅಪಾಯದ ಸಂಪರ್ಕಗಳನ್ನು ಪ್ರತ್ಯೇಕಿಸಲು ಸ್ವತಂತ್ರ ಕಟ್ಟಡಗಳನ್ನು ಬಳಸುವುದು ಉತ್ತಮ. ಪ್ರತ್ಯೇಕ ಕೊಠಡಿಗಳು ಅಥವಾ ಕ್ಯೂಬಿಕಲ್ಸ್ ಶೌಚಾಲಯ ಸೌಲಭ್ಯಗಳು ಇರಬೇಕು. ಈ ಜಿಮ್‌ಖಾನಗಳಂತಹ ದೊಡ್ಡ ಕೇಂದ್ರಗಳಲ್ಲಿ, ಕ್ಯುಬಿಕಲ್‌ಗ‌ಳನ್ನು ಮಾಡಬೇಕಾಗುತ್ತದೆ. ಅಂತಹ ದೊಡ್ಡ ಸೌಲಭ್ಯಗಳು ಪಾಸಿಟಿವ್‌ ಲಕ್ಷಣರಹಿತ ಮತ್ತು ಸೌಮ್ಯ ರೋಗಲಕ್ಷಣದ ಆರೈಕೆ ಕೇಂದ್ರಗಳಾಗಿ ಮಾಡಿಕೊಳ್ಳಬಹುದು ಎಂದು ಜೈಸ್ವಾಲ್‌ ಅವರು ಹೇಳಿದ್ದಾರೆ.

ವಾಂಖೆಡೆ ಕ್ರೀಡಾಂಗಣದ ಪೆವಿಲಿಯನ್‌ ಅಡಿಯಲ್ಲಿರುವ ಸ್ಥಳಗಳನ್ನು, ಗಾಳಿ ಬೀಸುವ ಮತ್ತು ಸ್ನಾನಗƒಹದ ಸೌಲಭ್ಯಗಳನ್ನು ಹೊಂದಿರುವ ಸ್ಥಳಗಳನ್ನು ಕ್ವಾರಂಟೈನ್‌ ಸೌಲಭ್ಯಗಳಾಗಿ ಪರಿವರ್ತಿಸಲಾಗುತ್ತದೆ. ಬಿಎಂಸಿ ತನ್ನ ಸಂಪರ್ಕ ಪತ್ತೆಹಚ್ಚುವ ಪ್ರಯತ್ನಗಳನ್ನು ಬೆಂಬಲಿಸಲು ಮೇ ಅಂತ್ಯದ ವೇಳೆಗೆ ಅಥವಾ ಜೂನ್‌ ಮೊದಲ ವಾರದ ವೇಳೆಗೆ ಅಸ್ತಿತ್ವದಲ್ಲಿರುವ ಸಿಸಿಸಿ 1 ಸೌಲಭ್ಯಗಳಲ್ಲಿ ಹಾಸಿಗೆಗಳನ್ನು 1,00,000 ಕ್ಕೆ ಏರಿಸಲಾಗುವುದು ಎಂದು ಜೈಸ್ವಾಲ್‌ ಹೇಳಿದ್ದಾರೆ.

ಜೂನ್‌ಗೆ ಈಗಲೇ ತಯಾರಿ: ಜೈಸ್ವಾಲ್‌ ನಾವು ಜೂನ್‌ನಲ್ಲಿ ಬರಲಿರುವ ಪ್ರಕರಣಗಳಿಗೆ ಸಿದ್ಧತೆ ನಡೆಸುತ್ತಿದ್ದೇವೆ. ಜೂನ್‌ನಲ್ಲಿ ಏನು ಬೇಕು ಎಂಬುವುದು ಮೇ ತಿಂಗಳಲ್ಲಿ ಸಿದ್ಧವಾಗಬೇಕಿದೆ. ಪ್ರಕರಣಗಳ ಏರಿಕೆಯ ಪ್ರಕ್ಷೇಪಣಕ್ಕೆ ಅನುಗುಣವಾಗಿ ಬಿಎಂಸಿ ಮೀಸಲಾದ ಕೋವಿಡ್‌ ಆಸ್ಪತ್ರೆಗಳು, ಮೀಸಲಾದ ಕೋವಿಡ್‌ ಆರೋಗ್ಯ ಕೇಂದ್ರಗಳು ಮತ್ತು ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸುತ್ತಿದೆ ಎಂದು ಬಿಎಂಸಿಯ ಹೆಚ್ಚುವರಿ ಪುರಸಭೆ ಆಯುಕ್ತ ಸಂಜೀವ್‌ ಜೈಸ್ವಾಲ್‌ ಹೇಳಿದ್ದಾರೆ.

ಟಾಪ್ ನ್ಯೂಸ್

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.