ಬೊಯಿಸರ್ ಶ್ರೀ ನಿತ್ಯಾನಂದ ಮಂದಿರ: ಗುರುಪೂರ್ಣಿಮೆ
Team Udayavani, Aug 8, 2018, 1:42 PM IST
ಮುಂಬಯಿ: ನಾಗರಿಕ ಸಮಾಜದಲ್ಲಿ ಮನುಷ್ಯನಲ್ಲಿಯ ಅಪರಾಧಿ ಪ್ರವೃತ್ತಿಯ ಸುಧಾರಣೆ ಆಗಬೇಕು. ಈ ನಿಟ್ಟಿನಲ್ಲಿ ಕಾನೂನು ವ್ಯವಸ್ಥೆಯಡಿ ಏನೆಲ್ಲಾ ಸಾಧ್ಯವೋ ಆ ಪ್ರಯತ್ನಗಳನ್ನು ನಾವು ಮಾಡುತ್ತೇವೆ. ಅದೇ ರೀತಿ ನಿರಪರಾಧಿಗಳಿಗೂ ತೊಂದರೆ ಉಂಟಾಗಬಾರದು ಎಂಬ ಕಾಳಜಿಯೂ ಇರುತ್ತದೆ. ಸ್ವಲ್ಪ ಸಮಯ ವಿರಾರ್‌ನಲ್ಲಿದ್ದು, ಪುನಃ ಈಗ ಬೊಯಿಸರ್‌ಗೆ ವರ್ಗವಾಗಿ ಬಂದಿರುವೆ. ಹಿಂದೆ ಬೊಯಿಸರ್‌ನಲ್ಲಿ ಕರ್ತವ್ಯದಲ್ಲಿರುವಾಗಲೇ ರಾಷ್ಟ್ರಪತಿ ಪದಕದ ಸಮ್ಮಾನ ಪ್ರಾಪ್ತಿಯಾಗಿತ್ತು. ಈಗ ಗುರುಪೂರ್ಣಿಮೆಯಂದು ಸದ್ಗುರುವಿನ ಕೃಪಾಶೀರ್ವಾದ ಹಾಗೂ ನಿಮ್ಮೆಲ್ಲರ ಪ್ರೀತಿ, ಗೌರವ ಲಭಿಸಿದ್ದು ಉತ್ತಮ ಪ್ರೇರಣೆ ನೀಡಿದೆ ಎಂದು 2018 ರ ಗಣರಾಜ್ಯೋತ್ಸವ ರಾಷ್ಟ್ರಪತಿ ಪದಕ ಪುರಸ್ಕೃತ ಬೊಯಿಸರ್‌ನ ಹಿರಿಯ ಪೊಲೀಸ್ ಅಧಿಕಾರಿ ಪಿ. ಎನ್. ಬಿರಾಜದಾರ್ ಅವರು ನುಡಿದರು.
ಬೊಯಿಸರ್ ಪಶ್ಚಿಮದ ಶ್ರೀ ನಿತ್ಯಾನಂದ ಮಂದಿರದಲ್ಲಿ ಜು. 27 ರಂದು ನಡೆದ ಗುರುಪೂರ್ಣಿಮೆ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ತುಳು-ಕನ್ನಡಿಗರ ಅಭಿಮಾನ ಮೆಚ್ಚುವಂಥದ್ದಾಗಿದೆ ಎಂದರು. ಈ ಸಂದರ್ಭದಲ್ಲಿ ಬೊಯಿಸರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಪಿ. ಎನ್. ಬಿರಾಜದಾರ್ ಅವ ರನ್ನು ಸ್ವಾಮಿ ನಿತ್ಯಾನಂದ ಭಕ್ತ ಮಂಡಳಿಯ ಪರವಾಗಿ ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಸಮ್ಮಾನಿಸ ಲಾಯಿತು.
ಕಾರ್ಯಕ್ರಮದಲ್ಲಿ ಮೀರಾ- ಡಹಾಣೂ ಬಂಟ್ಸ್ ಇದರ ಮಾಜಿ ಅಧ್ಯಕ್ಷ ಹಾಗೂ ಪಾಲ^ರ್ ತಾಲೂಕು ಹೊಟೇಲ್ ಓನರ್ಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಕೆ. ಭುಜಂಗ ಶೆಟ್ಟಿ, ಶಿವಸೇನಾ ಪಾಲ^ರ್ ಜಿÇÉಾ ಉಪಾಧ್ಯಕ್ಷ ಸಂತೋಶ್ ಜೆ. ಶೆಟ್ಟಿ, ಪಾಲ^ರ್ ತಾಲೂಕು ಹೊಟೇಲ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ರಘುರಾಮ ರೈ, ಡಹಾಣೂ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಎಸ್. ಶೆಟ್ಟಿ, ಉದ್ಯಮಿಗಳಾದ ಶ್ರೀನಿವಾಸ್ ಕೋಟ್ಯಾನ್, ಭಾಸ್ಕರ ಶೆಟ್ಟಿ, ಸತ್ಯಾ ಕೋಟ್ಯಾನ್, ಮಹಾಬಲ ಶೆಟ್ಟಿ, ರವೀಂದ್ರ ಶೆಟ್ಟಿ, ದಾಮೋದರ ಶೆಟ್ಟಿ ಹಾಗೂ ಪಾಲ^ರ್ ಜಿÇÉೆಯ ವಿವಿಧ ಭಾಗಗಳಿಂದ ಆಗಮಿಸಿದ ಉದ್ಯಮಿಗಳು, ಭಕ್ತಾದಿಗಳು, ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಸಂಜಯ ನಗರ ಶಿವಸೇನಾ ಶಾಖಾ ಪ್ರಮುಖ ಜಗದೀಶ ಮಹಾಬಲ ಶೆಟ್ಟಿಯವರನ್ನು ಕೂಡಾ ಸಮ್ಮಾನಿಸಲಾಯಿತು.
ಚಿತ್ರ-ವರದಿ: ಪಿ. ಆರ್. ರವಿಶಂಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.